Login or Register ಅತ್ಯುತ್ತಮ CarDekho experience ಗೆ
Login

ಯಾವಾಗ ಸಿಗಲಿದೆ Tata Curvv? ಬುಕಿಂಗ್ ಮತ್ತು ಡೆಲಿವರಿ ದಿನಾಂಕಗಳ ವಿವರ ಇಲ್ಲಿದೆ

published on ಸೆಪ್ಟೆಂಬರ್ 03, 2024 03:40 pm by anonymous for ಟಾಟಾ ಕರ್ವ್‌

ನಾಲ್ಕು ವಿವಿಧ ಟ್ರಿಮ್‌ಗಳಲ್ಲಿ ನೀಡಲಾಗುವ ಕರ್ವ್ ಎಸ್‌ಯುವಿ-ಕೂಪ್ ಅನ್ನು ರೂ 10 ಲಕ್ಷ ಬೆಲೆಗೆ (ಎಕ್ಸ್ ಶೋರೂಂ) ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ

  • ಟಾಟಾ ಕರ್ವ್ SUV-ಕೂಪ್ ಬುಕಿಂಗ್ ಇಂದಿನಿಂದ ಪ್ರಾರಂಭವಾಗಿದೆ.

  • ಕರ್ವ್ ಡೆಲಿವೆರಿಗಳು ಸೆಪ್ಟೆಂಬರ್ 12 ರಿಂದ ಶುರುವಾಗಲಿದೆ.

  • ಇದನ್ನು ನಾಲ್ಕು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಅಕೊಂಪ್ಲಿಶ್ಡ್.

  • ಇದು ಎರಡು ಟರ್ಬೊ-ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ.

  • ಅಕ್ಟೋಬರ್ 31 ರೊಳಗೆ ಮಾಡಿದ ಬುಕಿಂಗ್‌ಗಳಿಗೆ ಪರಿಚಯಾತ್ಮಕ ಬೆಲೆಯು ರೂ. 10 ಲಕ್ಷಗಳಿಂದ ಪ್ರಾರಂಭವಾಗುತ್ತವೆ.

ಟಾಟಾ ಮೋಟಾರ್ಸ್ ತನ್ನ ಕರ್ವ್ SUV-ಕೂಪ್ ಅನ್ನು ರೂ 10 ಲಕ್ಷಗಳ ಆರಂಭಿಕ ಬೆಲೆಗೆ ಲಾಂಚ್ ಮಾಡಿದೆ (ಪರಿಚಯಾತ್ಮಕ, ಎಕ್ಸ್ ಶೋರೂಂ). SUV-ಕೂಪ್ ಅನ್ನು ನಾಲ್ಕು ವಿವಿಧ ಟ್ರಿಮ್‌ಗಳಲ್ಲಿ ಮತ್ತು ಮೂರು ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಗ್ರಾಹಕರು ಇವತ್ತಿನಿಂದ ಟಾಟಾ ಕರ್ವ್ ಅನ್ನು ಬುಕ್ ಮಾಡಲು ಪ್ರಾರಂಭಿಸಬಹುದು ಮತ್ತು ಡೆಲಿವರಿಗಳು ಸೆಪ್ಟೆಂಬರ್ 12 ರಂದು ಪ್ರಾರಂಭವಾಗುತ್ತವೆ. ಟಾಟಾ ಕರ್ವ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಗ್ಮೆಂಟ್ ಆಗಿರುವ ಕಾಂಪ್ಯಾಕ್ಟ್ SUV ಸೆಗ್ಮೆಂಟ್ ನ ಒಂದು ಸ್ಟೈಲಿಶ್ ಆಗಿರುವ SUV ಆಗಿದೆ. ಇದರ ಪರಿಚಯಾತ್ಮಕ ಬೆಲೆಯ ಕೊಡುಗೆಯು ಅಕ್ಟೋಬರ್ 31 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

2024 ರ ಟಾಟಾ ಕರ್ವ್ ಬುಕಿಂಗ್ ಮಾಡುವ ಮೊದಲು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿದೆ.

ಟಾಟಾ ಕರ್ವ್: ಡಿಸೈನ್

ಟಾಟಾ ಕರ್ವ್ ನ ಅತ್ಯಂತ ಪ್ರಮುಖ ಹೈಲೈಟ್ ಅದರ ಡಿಸೈನ್ ಆಗಿದೆ. ಸ್ಲೋಪಿಂಗ್ ರೂಫ್ ಲೈನ್ ನೊಂದಿಗೆ ಅದರ SUV-ಕೂಪ್ ಆಕಾರದಿಂದಾಗಿ ಇದು ಎದ್ದು ಕಾಣುತ್ತದೆ ಮತ್ತು ಇದರ ಇತರ ಪ್ರತಿಸ್ಪರ್ಧಿ SUV ಗಳಿಂದ ಭಿನ್ನವಾಗಿದೆ. ಇತರ ಹೈಲೈಟ್ ಗಳಲ್ಲಿ ಹ್ಯಾರಿಯರ್ ತರಹದ ಗ್ರಿಲ್ ಡಿಸೈನ್, ಮುಂಭಾಗ ಮತ್ತು ಹಿಂಭಾಗದಲ್ಲಿ ಕನೆಕ್ಟೆಡ್ LED ಲೈಟಿಂಗ್ ಎಲಿಮೆಂಟ್ ಗಳು ಮತ್ತು 18-ಇಂಚಿನ ಪೆಟಲ್ ನಂತಹ ಡ್ಯುಯಲ್-ಟೋನ್ ಅಲೊಯ್ ಗಳು ಸೇರಿವೆ. ಕರ್ವ್ ಲೈಟ್‌ಗಳೊಂದಿಗೆ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಪಡೆಯುತ್ತದೆ ಮತ್ತು ಇದನ್ನು ಟಾಟಾ ಕಾರಿನಲ್ಲಿ ಮೊದಲ ಬಾರಿಗೆ ನೀಡಲಾಗಿದೆ

ಟಾಟಾ ಕರ್ವ್: ಇಂಟೀರಿಯರ್ ಮತ್ತು ಫೀಚರ್ ಗಳು

ಟಾಟಾ ಕರ್ವ್ ನ ಡ್ಯಾಶ್‌ಬೋರ್ಡ್ ನೆಕ್ಸಾನ್‌ನಲ್ಲಿರುವಂತೆಯೇ ಇದೆ. ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಗಾಗಿ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಟಚ್-ಆಧಾರಿತ ಕಂಟ್ರೋಲ್ ಗಳೊಂದಿಗೆ ಈ ಡಿಸೈನ್ ಆಧುನಿಕವಾಗಿ ಕಾಣುತ್ತದೆ. 4 ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೆಚ್ಚು ಪ್ರೀಮಿಯಂ ಆಗಿರುವ ಹ್ಯಾರಿಯರ್ ಮತ್ತು ಸಫಾರಿ ಮಾಡೆಲ್ ಗಳಿಂದ ಪಡೆಯಲಾಗಿದೆ.

ಫೀಚರ್ ಗಳ ವಿಷಯದಲ್ಲಿ ಕರ್ವ್ ಗೆ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್ ಕಾರ್ ಟೆಕ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ವೈರ್‌ಲೆಸ್ ಫೋನ್ ಚಾರ್ಜರ್, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಡ್ರೈವರ್‌ಗಾಗಿ ಪವರ್ ಅಡ್ಜಸ್ಟ್ ಮಾಡುವ ಫೀಚರ್ ನೊಂದಿಗೆ ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಮತ್ತು ಗೆಸ್ಚರ್ ಕಂಟ್ರೋಲ್‌ನೊಂದಿಗೆ ಪವರ್ಡ್ ಟೈಲ್‌ಗೇಟ್ ಅನ್ನು ನೀಡಲಾಗಿದೆ.

ಸುರಕ್ಷತೆಯ ವಿಭಾಗದಲ್ಲಿ ಟಾಟಾ ಕರ್ವ್, ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಲೆವೆಲ್-2 ADAS ಅನ್ನು ಪಡೆಯುತ್ತದೆ

ಇದನ್ನು ಕೂಡ ಓದಿ: ಸಿಟ್ರೊಯೆನ್ ಬಸಾಲ್ಟ್ ಯು ವರ್ಸಸ್ ಟಾಟಾ ಕರ್ವಿವ್ ಸ್ಮಾರ್ಟ್: ಯಾವ ಬೇಸ್ ವೇರಿಯಂಟ್ SUV-ಕೂಪ್ ಅನ್ನು ಆಯ್ಕೆ ಮಾಡಬೇಕು? ಇಲ್ಲಿದೆ ವಿವರಗಳು

ಟಾಟಾ ಕರ್ವ್: ಎಂಜಿನ್ ಆಯ್ಕೆಗಳು

ಟಾಟಾ ಕರ್ವ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: ಎರಡು ಟರ್ಬೊ-ಪೆಟ್ರೋಲ್ ಮತ್ತು ಒಂದು ಡೀಸೆಲ್. ಎಲ್ಲಾ ಮೂರು ಆಯ್ಕೆಗಳ ವಿವರವಾದ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ.

ಸ್ಪೆಸಿಫಿಕೇಷನ್

1.5-ಲೀಟರ್ ಡೀಸೆಲ್

1.2-ಲೀಟರ್ T-GDI ಟರ್ಬೊ-ಪೆಟ್ರೋಲ್

1.2-ಲೀಟರ್ ಟರ್ಬೊ-ಪೆಟ್ರೋಲ್

ಪವರ್ (PS)

118 PS

125 PS

120 PS

ರ್ಕ್ (Nm)

260 Nm

225 Nm

170 Nm

ಟ್ರಾನ್ಸ್‌ಮಿಷನ್‌ ಆಯ್ಕೆ

6-ಸ್ಪೀಡ್ MT / 7-ಸ್ಪೀಡ್ DCT*

6-ಸ್ಪೀಡ್ MT / 7-ಸ್ಪೀಡ್ DCT*

6-ಸ್ಪೀಡ್ MT / 7-ಸ್ಪೀಡ್ DCT*

*ಡುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌

ಟಾಟಾ ತನ್ನ ಕರ್ವ್ ನೊಂದಿಗೆ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪರಿಚಯಿಸುತ್ತಿದೆ ಮತ್ತು ನೆಕ್ಸಾನ್‌ನಿಂದ ಪಡೆದ 120PS ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಕೂಡ ನೀಡಲಾಗುತ್ತಿದೆ. ಎಲ್ಲಾ ಇಂಜಿನ್‌ಗಳನ್ನು 6-ಸ್ಪೀಡ್ MT ಅಥವಾ 7-ಸ್ಪೀಡ್ DCT ಗೆ ಜೋಡಿಸಲಾಗಿದೆ.

ಇದನ್ನು ಕೂಡ ಓದಿ: ಸಿಟ್ರೊಯೆನ್ ಬಸಾಲ್ಟ್ ವರ್ಸಸ್ ಟಾಟಾ ಕರ್ವ್: ಸ್ಪೆಸಿಫಿಕೇಷನ್ ಗಳ ಹೋಲಿಕೆ ಇಲ್ಲಿದೆ

ಟಾಟಾ ಕರ್ವ್: ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಟಾಟಾ ಕರ್ವ್ ಬೆಲೆಯು 10 ಲಕ್ಷದಿಂದ ಶುರುವಾಗಿ 17.69 ಲಕ್ಷದವರೆಗೆ ಇದೆ (ಪರಿಚಯಾತ್ಮಕ ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ). ಟಾಟಾ ಇನ್ನೂ ಇದರ ಟಾಪ್-ಎಂಡ್ ಆಟೋಮ್ಯಾಟಿಕ್ ವೇರಿಯಂಟ್ ಬೆಲೆಯನ್ನು ಬಹಿರಂಗಪಡಿಸಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಇದು ಸಿಟ್ರೊಯೆನ್ ಬಸಾಲ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರ್ಡರ್, ಹೋಂಡಾ ಎಲಿವೇಟ್, VW ಟೈಗುನ್, ಸ್ಕೋಡಾ ಕುಶಾಕ್ ಮತ್ತು MG ಆಸ್ಟರ್‌ಗಳಿಗೆ ಹೋಲಿಸಿದರೆ ಸ್ಟೈಲಿಶ್-ಆಗಿ ಕಾಣುವ ಪರ್ಯಾಯ ಆಯ್ಕೆಯಾಗಿದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಿ: ಕರ್ವ್ ಆನ್ ರೋಡ್ ಬೆಲೆ

A
ಅವರಿಂದ ಪ್ರಕಟಿಸಲಾಗಿದೆ

Anonymous

  • 40 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Tata ಕರ್ವ್‌

C
chandan m
Sep 2, 2024, 5:52:40 PM

When is the Tata going to reveal the higher-end automatic variant’s pricing list??

Read Full News

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ