Login or Register ಅತ್ಯುತ್ತಮ CarDekho experience ಗೆ
Login

ಭಾರೀ ಮರೆಮಾಚುವಿಕೆಯೊಂದಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದ ಟಾಟಾ ಕರ್ವ್

published on ಜುಲೈ 13, 2023 10:39 pm by ansh for ಟಾಟಾ ಕರ್ವ್‌

ಈ ಎಸ್‌ಯುವಿ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಮೊದಲಿಗೆ ಎಲೆಕ್ಟ್ರಿಕ್ ಅವತಾರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ

ಟಾಟಾ ಕರ್ವ್ ಎಂಬ ಮುಂಬರುವ ಕೂಪ್-ಎಸ್‌ಯುವಿಯನ್ನು ಭಾರತೀಯ ರಸ್ತೆಗಳಲ್ಲಿ ಮೊದಲ ಬಾರಿಗೆ ಸ್ಪೈಡ್ ಟೆಸ್ಟಿಂಗ್ ಮಾಡಲಾಗಿದೆ. ಆಟೋ ಎಕ್ಸ್‌ಪೋ 2023 ರ ಸಮಯದಲ್ಲಿ ಕಂಪನಿಯು ಈ ವಾಹನದ ಉತ್ಪಾದನಾ ಸಿದ್ಧ ಆವೃತ್ತಿಯನ್ನು ಅನಾವರಣಗೊಳಿಸಿತ್ತು ಮತ್ತು ಈಗ ಈ ವಾಹನದ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ. ಈ ಬಾರಿ ಮುಚ್ಚಿದ ಪಾರ್ಕಿಂಗ್ ಪ್ರದೇಶದಲ್ಲಿ ಇತರ ಪರೀಕ್ಷಾ ಕಾರುಗಳಿಂದ ಸುತ್ತುವರಿಯಲ್ಪಟ್ಟ ಟಾಟಾ ಕರ್ವ್ ಅನ್ನು ಗುರುತಿಸಲಾಗಿದೆ.

ಸ್ಪೈ ಶಾಟ್‌ಗಳಿಂದ ತಿಳಿದುಬರುವುದೇನು?

ಸ್ಪೈ ಶಾಟ್‌ಗಳಲ್ಲಿ ಮಾಡೆಲ್‌ನ ಮುಂಭಾಗ ಮತ್ತು ಬದಿಯ ಪ್ರೊಫೈಲ್ ನೋಟವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಮುಂಭಾಗದಲ್ಲಿ, ನಾವು ಹೆಡ್‌ಲ್ಯಾಂಪ್‌ನ ಸ್ಥಾನ, DRL ಸ್ಟ್ರಿಪ್‌ನ ಸಿಲೂಯೆಟ್ ಮತ್ತು ಮಧ್ಯದಲ್ಲಿ ಟಾಟಾ ಲೋಗೋದ ಸ್ಥಾನವನ್ನು ಮಾತ್ರ ಗಮನಿಸಬಹುದು. ಗ್ರಿಲ್‌ನ ಸ್ಥಾನವು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಯುನಿಟ್‌ನಂತೆಯೇ ಕಂಡುಬರುತ್ತದೆ.

ಇದನ್ನೂ ನೋಡಿ: ತನ್ನ ಬೂಟ್ ಸ್ಪೇಸ್ ಅನ್ನು ಏರ್ಪೋರ್ಟ್ ಕನ್ವೇಯರ್ ಬೆಲ್ಟ್‌ನಲ್ಲಿ ಪ್ರದರ್ಶಿಸಿದ ಟಾಟಾ ಆಲ್ಟ್ರೋಜ್ ​​i-ಸಿಎನ್‌ಜಿ

ಸೈಡ್ ಪ್ರೊಫೈಲ್‌ನಲ್ಲಿ, ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಮಾಡೆಲ್‌ಗೆ ಹೋಲಿಸಿದರೆ ಇದು ಹೊಸ ವಿನ್ಯಾಸದ ಅಲಾಯ್ ವ್ಹೀಲ್‌ಗಳನ್ನು ಪಡೆಯುತ್ತದೆ. ಕಾರಿನ ಪೂರ್ಣ ಉದ್ದ, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಸ್ಲಿಮ್ ಕಿಟಕಿಗಳು ಈ ಕೋನದಿಂದ ಸುಲಭವಾಗಿ ಗೋಚರಿಸುತ್ತವೆ. ಅಲ್ಲದೇ ಚಿತ್ರಗಳನ್ನು ನೋಡಿದಾಗ, ಹೆಚ್ಚುವರಿ ಬಾಕ್ಸ್ ಮರೆಮಾಚುವಿಕೆಯನ್ನು ಸೇರಿಸುವ ಮೂಲಕ ಕರ್ವ್ ವಿನ್ಯಾಸದ ಪ್ರಮುಖ ಅಂಶವಾಗಿರುವ ಪ್ರೊಡಕ್ಷನ್-ಸ್ಪೆಕ್ ಮಾಡೆಲ್‌ನ ಸ್ಲೋಪ್ಡ್ ರಿಯರ್ ಎಂಡ್ ಸ್ಟೈಲಿಂಗ್ ಅನ್ನು ಮರೆಮಾಡಲು ಕಾರು ತಯಾರಕರು ಪ್ರಯತ್ನಿಸಿದಂತೆ ತೋರುತ್ತದೆ.

ಪವರ್‌ಟ್ರೇನ್

ಟಾಟಾ ಕರ್ವ್ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಅದು 125PS ಪವರ್ ಮತ್ತು 225 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟ್ರಾನ್ಸ್‌ಮಿಷನ್ ಆಯ್ಕೆಗಳ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲವಾದರೂ, ಅವುಗಳಲ್ಲಿ ಒಂದು ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (DCT) ಗೇರ್‌ಬಾಕ್ಸ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಇದರಲ್ಲಿ ಲಭ್ಯವಿರುವ ಇತರ ಎಂಜಿನ್ ಆಯ್ಕೆಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

ಕಂಪನಿಯು ಟಾಟಾದ Gen2 ಪ್ಲಾಟ್‌ಫಾರ್ಮ್ ಆಧಾರಿತ ಕರ್ವ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡುತ್ತದೆ. ಕರ್ವ್ ಎಲೆಕ್ಟ್ರಿಕ್ 500 ಕಿ.ಮೀ ವರೆಗೆ ಮೈಲೇಜ್ ಅನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಟಾಟಾದ ಉತ್ಪನ್ನ ಯೋಜಕರ ಪ್ರಕಾರ, ಅದರ ಎಲೆಕ್ಟ್ರಿಕ್ ಆವೃತ್ತಿಯು ICE ಮಾಡೆಲ್ (ಪೆಟ್ರೋಲ್-ಡೀಸೆಲ್ ಮಾಡೆಲ್) ಗಿಂತ ಮೊದಲು ಆಗಮಿಸುವ ನಿರೀಕ್ಷೆಯಿದೆ.

ಫೀಚರ್‌ಗಳು ಮತ್ತು ಸುರಕ್ಷತೆ

2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಮಾಡೆಲ್ ಅನ್ನು ಅವಲಂಬಿಸಿ, ಸಂಪರ್ಕಿತ ಕಾರು ತಂತ್ರಜ್ಞಾನದೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಟಚ್ ಪ್ಯಾನೆಲ್‌ನೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಇದು ಪಡೆಯಬಹುದು. ಇದು ಮಧ್ಯಭಾಗದಲ್ಲಿ ಡಿಜಿಟಲ್ ಡಿಸ್‌ಪ್ಲೇ ಇರುವ ಟಾಟಾದ ಹೊಸ ಸ್ಟೀರಿಂಗ್ ವೀಲ್ ಅನ್ನು ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: EVಗಳಿಗೆ ಆದ್ಯತೆ ನೀಡುತ್ತೇವೆ ಆದರೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಕಡೆಗಣಿಸುವುದಿಲ್ಲ: ಟಾಟಾ

ಸುರಕ್ಷತೆಗಾಗಿ, ಎಸ್‌ಯುವಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ಒದಗಿಸುತ್ತದೆ. ಇದು ಟಾಟಾ ಹ್ಯಾರಿಯರ್‌ನಲ್ಲಿ ನೀಡಲಾದ ಕೆಲವು ADAS ಫೀಚರ್‌ಗಳನ್ನು ಕೂಡ ಹೊಂದಿರಬಹುದು.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಮುಂದಿನ ವರ್ಷದ ವೇಳೆಗೆ ಟಾಟಾ ಕರ್ವ್ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಎಲೆಕ್ಟ್ರಿಕ್ ಆವೃತ್ತಿಯ ಬೆಲೆಗಳು ರೂ. 20 ಲಕ್ಷದಿಂದ ಪ್ರಾರಂಭವಾಗಬಹುದು, ಆದರೆ ಪೆಟ್ರೋಲ್-ಡೀಸೆಲ್ ಆವೃತ್ತಿಯ (ICE) ಬೆಲೆ ರೂ. 10.5 ಲಕ್ಷ (ಎಕ್ಸ್ ಶೋರೂಂ) ಆಗಿರಬಹುದು. ಬಿಡುಗಡೆಯ ಬಳಿಕ, ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್ ಮತ್ತು MG ಆಸ್ಟರ್‌ ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳೊಂದಿಗೆ ಸ್ಪರ್ಧಿಸಲಿದೆ. ಹಾಗೆಯೇ, ಕರ್ವ್ ಇವಿ ಯು ಎಂಜಿ ZS ಇವಿ ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ ಗಳೊಂದಿಗೆ ಸ್ಪರ್ಧಿಸುತ್ತದೆ.

ಚಿತ್ರಕೃಪೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 26 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಕರ್ವ್‌

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ