• English
  • Login / Register

ವೇಗದಲ್ಲಿ ಸಾಗುತ್ತಿದೆ Tata Curvvನ ಟೆಸ್ಟಿಂಗ್, ಈ ಬಾರಿ ಪನೋರಮಿಕ್ ಸನ್‌ರೂಫ್‌ನ ಮಾಹಿತಿ ಬಹಿರಂಗ

published on ಜೂನ್ 27, 2024 06:30 pm by shreyash for ಟಾಟಾ ಕರ್ವ್‌

  • 59 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಕರ್ವ್ ಕೂಪ್ ತರಹದ ಡಿಸೈನ್ ನ ಎಸ್‌ಯುವಿ ಆಗಿದ್ದು, ಇದು ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್ ನಲ್ಲಿ ಸ್ಪರ್ಧಿಸಲಿದೆ

Tata Curvv With Panoramic Sunroof

  • ಹೊರಭಾಗದಲ್ಲಿ ಕನೆಕ್ಟೆಡ್ LED DRL ಗಳು, ಕನೆಕ್ಟೆಡ್ LED ಟೈಲ್ ಲೈಟ್ ಗಳು ಮತ್ತು ಕೂಪ್-ಶೈಲಿಯ ರೂಫ್ಲೈನ್ ​​ಅನ್ನು ಒಳಗೊಂಡಿದೆ.
  • 125 PS 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಮತ್ತು 115 PS 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಯಿದೆ.
  • ಪನರೋಮಿಕ್ ಸನ್‌ರೂಫ್‌ನ ಹೊರತಾಗಿ, ಇದು 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಕೂಡ ಪಡೆಯಬಹುದು.
  • ಸುರಕ್ಷತೆಯ ವಿಷಯದಲ್ಲಿ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳ (ADAS) ಸಂಪೂರ್ಣ ಸೂಟ್ ಅನ್ನು ಒಳಗೊಂಡಿರಬಹುದು.
  • 2024 ರ ಎರಡನೇ ಭಾಗದಲ್ಲಿ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ, ಇದರ ಬೆಲೆಯು ರೂ.10.50 ಲಕ್ಷವಿರಬಹುದು (ಎಕ್ಸ್ ಶೋರೂಂ)

ಟಾಟಾ ಕರ್ವ್, ಅದರ ಕೂಪ್ ಶೈಲಿಯ ಡಿಸೈನ್ ನೊಂದಿಗೆ, 2024 ರ ಎರಡನೇ ಭಾಗದಲ್ಲಿ ಭಾರತದ ಕಾಂಪ್ಯಾಕ್ಟ್ SUV ಮಾರುಕಟ್ಟೆಗೆ ಬರಲಿದೆ. ಟಾಟಾ ಕರ್ವ್ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರೊಡಕ್ಷನ್ ನಲ್ಲಿ ಇತ್ತು ಮತ್ತು ಹಲವಾರು ಬಾರಿ ಯಾವುದಾದರೂ ಒಂದು ಹೊಸ ಫೀಚರ್ ಗಳನ್ನು ತೋರಿಸುವ ಮೂಲಕ ಟೆಸ್ಟಿಂಗ್ ನಲ್ಲಿ ಸ್ಪಾಟ್ ಆಗುತಿತ್ತು. ಇತ್ತೀಚೆಗೆ, ಭಾರತೀಯ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯವಾಗಿರುವ ಫೀಚರ್ ನೊಂದಿಗೆ ಕರ್ವ್ ಅನ್ನು ಮತ್ತೆ ನೋಡಲಾಗಿದೆ.

 ಪನೋರಮಿಕ್ ಸನ್‌ರೂಫ್ ಬರುವುದು ಖಚಿತ

Tata Curvv Spotted Again, This Time Featuring A Panoramic Sunroof

ಇತ್ತೀಚಿನ ಸ್ಪೈ ಶಾಟ್‌ಗಳು ಕರ್ವ್ ನಲ್ಲಿ ಪನೋರಮಿಕ್ ಸನ್‌ರೂಫ್ ಇರುವುದನ್ನು ಖಚಿತಪಡಿಸುತ್ತದೆ. ಇದು ಸಂಪೂರ್ಣವಾಗಿ ಕೆಮಫ್ಲೇಜ್ ಆಗಿದ್ದರೂ ಕೂಡ, ರೂಫ್ ಮೇಲೆ ಗ್ಲಾಸ್ ಪ್ಯಾನೆಲ್ ಅದರ ಸೈಜ್ ನ ಬಗ್ಗೆ ನಮಗೆ ಸುಳಿವು ನೀಡುತ್ತದೆ.

 ನಿರೀಕ್ಷಿಸಲಾಗಿರುವ ಪವರ್‌ಟ್ರೇನ್

 ಟಾಟಾ ತನ್ನ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಟಾಟಾ ಕರ್ವ್‌ನಲ್ಲಿ ಪರಿಚಯಿಸುವ ನಿರೀಕ್ಷೆಯಿದೆ, ಜೊತೆಗೆ ಟಾಟಾ ನೆಕ್ಸಾನ್‌ನಲ್ಲಿರುವ ಡೀಸೆಲ್ ಎಂಜಿನ್ ಅನ್ನು ಬಳಸಬಹುದು.

 ಇಂಜಿನ್

 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್)

 1.5-ಲೀಟರ್ ಡೀಸೆಲ್

 ಪವರ್

125 PS

115 PS

 ಟಾರ್ಕ್

225 Nm

260 Nm

ಟ್ರಾನ್ಸ್‌ಮಿಷನ್

 6-ಸ್ಪೀಡ್ MT, 7-ಸ್ಪೀಡ್ DCT* (ನಿರೀಕ್ಷಿಸಲಾಗಿದೆ)

 6-ಸ್ಪೀಡ್ MT

 DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

 ಟಾಟಾ ಕರ್ವ್ ಡಿಸೈನ್ ಬಗ್ಗೆ ಮಾಹಿತಿ

Tata Curvv

 ಈ ಹಿಂದೆ ನೋಡಲಾದ ಟೆಸ್ಟ್ ಮಾಡೆಲ್ ಗಳನ್ನು ಗಮನಿಸಿದರೆ, ಟಾಟಾ ಕರ್ವ್ ಗೆ ಫೇಸ್‌ಲಿಫ್ಟ್ ಆಗಿರುವ ಟಾಟಾ ನೆಕ್ಸಾನ್, ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಯಲ್ಲಿ ಕಂಡುಬರುವ ಡಿಸೈನ್ ಅಂಶಗಳನ್ನು ನೀಡಿರಬಹುದು. ಮುಂಭಾಗದಲ್ಲಿ ಇದು ಕನೆಕ್ಟೆಡ್ LED DRL ಅನ್ನು ಹೊಂದಿರುತ್ತದೆ, ಮುಂಭಾಗದ ಬಂಪರ್‌ನಲ್ಲಿ ಹೆಡ್‌ಲೈಟ್‌ಗಳನ್ನು ಇರಿಸಲಾಗಿದೆ. ಹಿಂಭಾಗದಲ್ಲಿ, ಇದು ಕನೆಕ್ಟೆಡ್ LED ಟೈಲ್ ಲೈಟ್‌ಗಳನ್ನು ಹೊಂದಿರುತ್ತದೆ. ಇದು ಕೂಪ್-ಶೈಲಿಯ ರೂಫ್ ಅನ್ನು ಪಡೆಯುವ ಕಾರಣ ಸಿಟ್ರೊಯೆನ್ ಬಸಾಲ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

 ಒಳಭಾಗ ಮತ್ತು ನಿರೀಕ್ಷಿಸಲಾಗಿರುವ ಫೀಚರ್ ಗಳು

Tata Curvv production-ready cabin spied

 ಈ ಹಿಂದಿನ ಸ್ಪೈ ಶಾಟ್ ಪ್ರಕಾರ, ಟಾಟಾ ಕರ್ವ್ ಟಾಟಾ ನೆಕ್ಸಾನ್‌ನಲ್ಲಿರುವ ಡ್ಯಾಶ್‌ಬೋರ್ಡ್ ಅನ್ನು ಪಡೆಯಬಹುದು. ಆದರೆ, ಸ್ಟೀರಿಂಗ್ ವೀಲ್ 4-ಸ್ಪೋಕ್ ಯುನಿಟ್ ಆಗಿರುತ್ತದೆ ಮತ್ತು ಇದು ಇಲ್ಯೂಮಿನೇಟ್ ಆಗುವ 'ಟಾಟಾ' ಲೋಗೋವನ್ನು ಕೂಡ ಹೊಂದಿರುತ್ತದೆ.

 ಫೀಚರ್ ಗಳ ವಿಷಯದಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳನ್ನು ಪಡೆಯುವ ಸಾಧ್ಯತೆಯಿದೆ. ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಪಡೆಯಬಹುದು. ಲೇನ್ ಕೀಪ್ ಅಸಿಸ್ಟ್, ಆಟೊನೊಮಸ್ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಲೆವೆಲ್ 2 ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಕರ್ವ್ ಪಡೆಯುವ ನಿರೀಕ್ಷೆಯಿದೆ.

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಟಾಟಾ ಕರ್ವ್ 2024 ರ ಎರಡನೇ ಭಾಗದಲ್ಲಿ ಮಾರುಕಟ್ಟೆಗೆ ಬರಲಿದ್ದು, ಬೆಲೆಯು ರೂ 10.50 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಲಿದೆ. ಇದು ಸಿಟ್ರೊಯೆನ್ ಬಸಾಲ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ಗಳಿಗೆ ಕೂಡ ಸ್ಪರ್ಧೆಯನ್ನು ನೀಡಬಹುದು.

 ಚಿತ್ರದ ಮೂಲ

 ಟಾಟಾ ಕರ್ವ್ ಕುರಿತು ಇನ್ನಷ್ಟು ತಿಳಿಯಲು, ಕಾರ್ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಕರ್ವ್‌

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience