ಸುಧಾರಿತ ಟಾಟಾ ಸಫಾರಿಯ ಇಂಟೀರಿಯರ್ ನ ಸ್ಪೈ ಚಿತ್ರಗಳು
ಟಾಟಾ ಸಫಾರಿ ಗಾಗಿ shreyash ಮೂಲಕ ಜುಲೈ 29, 2023 07:47 am ರಂದು ಪ್ರಕಟಿಸಲಾಗಿದೆ
- 34 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಸಫಾರಿ ಫೇಸ್‌ಲಿಫ್ಟ್‌ನ ಕ್ಯಾಬಿನ್ ಅಪ್‌ಡೇಟ್ ಮಾಡಲಾದ ಸೆಂಟರ್ ಕನ್ಸೋಲ್ ಮತ್ತು ಟಾಟಾ ಆವಿನ್ಯ-ಪ್ರೇರಿತ ಮಧ್ಯದಲ್ಲಿ ಡಿಸ್‌ಪ್ಲೇ ಹೊಂದಿದ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಪಡೆದಿದೆ.
-
ಹೊಸ ಸೆಂಟರ್ ಕನ್ಸೋಲ್‌ನ ಭಾಗವಾಗಿ 2024ರ ಟಾಟಾ ಸಫಾರಿ ಟಚ್‌ಸ್ಕ್ರೀನ್ ಹೌಸಿಂಗ್ ಅನ್ನು ಪರಿಷ್ಕರಿಸಿರುವ ನಿರೀಕ್ಷೆ ಇದೆ.
-
ಈ SUV ವಾತಾಯನದ ಮುಂಭಾಗದ ಸೀಟುಗಳು, 10.25-ಇಂಚು ಟಚ್‌ಸ್ಕ್ರೀನ್ ಮತ್ತು ವಿಹಂಗಮ ಸನ್‌ರೂಫ್ ಹೊಂದಿರುವ ನಿರೀಕ್ಷೆ ಇದೆ.
-
ಇದರ ಸುರಕ್ಷತಾ ಕಿಟ್ ಅನ್ನು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಒದಗಿಸುವ ಮೂಲಕ ಅಪ್‌ಡೇಟ್ ಮಾಡಿರುವ ಸಾಧ್ಯತೆ ಇದೆ.
-
ಇದು ಪ್ರಸ್ತುತ ಸಫಾರಿಯಲ್ಲಿರುವ 2-ಲೀಟರ್ ಡೀಸೆಲ್ ಇಂಜಿನ್ ಅನ್ನೇ ಉಳಿಸಿಕೊಂಡಿದೆ.
-
ಈ 2024ರ ಟಾಟಾ ಸಫಾರಿಯು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನೂ ಪಡೆಯಬಹುದು.
-
ಮುಂದಿನ ವರ್ಷ ಮಾರಾಟಕ್ಕೆ ಬರಲಿದ್ದು, ಬೆಲೆಗಳು ರೂ 16 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.
ಈ ನವೀಕೃತ ಟಾಟಾ ಸಫಾರಿ ಅನ್ನು 2024ರ ಪ್ರಾರಂಭದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಯಿದ್ದು, ಅದಕ್ಕೂ ಮುಂಚಿತವಾಗಿ ಅನೇಕ ಬಾರಿ ಅದರ ಸಾಮರ್ಥ್ಯವನ್ನು ಪ್ರದರ್ಶಿಸಲಾಗುತ್ತಿದೆ. ಇದರ ಅಪ್‌ಡೇಟ್ ಮಾಡಲಾದ ಇಂಟೀರಿಯರ್ ಅನ್ನು ಈಗಾಗಲೇ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಇದರ ಇತ್ತೀಚಿನ ಸ್ಪೈಶಾಟ್‌ಗಳು ಯಾವುದೇ ಮರೆಮಾಚುವಿಕೆ ಇಲ್ಲದೆಯೇ ಇದನ್ನು ಪ್ರದರ್ಶಿಸಿದ್ದು, ಇದು ಹೊಸ ಸೆಂಟರ್ ಕನ್ಸೋಲ್ ಮತ್ತು ಸ್ಟೀರಿಂಗ್ ವ್ಹೀಲ್ ಡಿಸೈನ್‌ನ ಸ್ಪಷ್ಟ ನೋಟವನ್ನು ನೀಡುತ್ತದೆ.
ಮರುವಿನ್ಯಾಸಗೊಳಿಸಿದ ಸೆಂಟರ್ ಕನ್ಸೋಲ್
ಈ ಚಿತ್ರವು ಸೆಂಟರ್ ಕನ್ಸೋಲ್‌ನಲ್ಲಿ ಮರುಶೈಲೀಕರಿಸಿದ ಸೆಂಟರ್ AC ಮತ್ತು ಅದೇ 10.25-ಇಂಚು ಟಚ್‌ಸ್ಕ್ರೀನ್ ಯೂನಿಟ್‌ಗೆ ಪರಿಷ್ಕೃತ ಹೌಂಸಿಂಗ್ ಒಳಗೊಂಡಂತೆ ಗಮನಾರ್ಹ ಅಪ್‌ಡೇಟ್‌ಗಳನ್ನು ಬಹಿರಂಗಪಡಿಸುತ್ತದೆ. ಇದರ ಕೆಳಗೆ ಹೊಸ ಕ್ಲೈಮೇಟ್ ಕಂಟ್ರೋಲ್ ಸೆಟಪ್ ಇದ್ದು, ಕೆಲವು ಹ್ಯಾಪ್ಟಿಕ್ ಕಂಟ್ರೋಲ್‌ಗಳನ್ನು ಹೊಂದಿರುವ ಸಾಧ್ಯತೆ ಇದೆ.
ಇನ್ನೊಂದು ಗಮನಾರ್ಹ ಫೀಚರ್ ಎಂದರೆ ಟಾಟಾದ ಆವಿನ್ಯಾ ಪರಿಕಲ್ಪನೆಯಿಂದ ಪ್ರೇರಿತವಾದ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್. ಇದು ಮಧ್ಯದಲ್ಲಿ ಡಿಸ್‌ಪ್ಲೇ ಅನ್ನು ಸಂಯೋಜಿಸುತ್ತದೆ ಮತ್ತು ಪ್ರಾಯಶಃ ಪ್ರಕಾಶಿತ ಟಾಟಾ ಲೋಗೋ ಮತ್ತು ಹೆಚ್ಚುವರಿ ಡ್ರೈವಿಂಗ್ ಮಾಹಿತಿಯನ್ನು ಹೊಂದಿರುವ ಸಾಧ್ಯತೆ ಇದೆ. ಅನೇಕ ಸ್ಪೈ ಚಿತ್ರಗಳಲ್ಲಿ ಕಾಣುವಂತೆ, ಇದು ಕೂಡಾ ಹೊಸ ಡ್ರೈವ್ ಮೋಡ್ ಸೆಲೆಕ್ಟರ್ ಅನ್ನು ಪಡೆದಿದ್ದು ಟಾಟಾ ನೆಕ್ಸಾನ್ EV ಮ್ಯಾಕ್ಸ್‌ನಲ್ಲಿ ಇರುವಂತೆ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಹಿಂದಿರುವ ಹೊಸ ಗೇರ್ ಸೆಲೆಕ್ಟರ್ ಅನ್ನು ಕಾಣಬಹುದಾಗಿದೆ.
ನಿರೀಕ್ಷಿಸಬಹುದಾದ ಫೀಚರ್‌ಗಳು
2024ರ ಟಾಟಾ ಸಫಾರಿ ತನ್ನ ಪ್ರಸ್ತುತ ಆವೃತ್ತಿಯಿಂದ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಆ್ಯಂಬಿಯೆಂ ಲೈಟಿಂಗ್ ಜೊತೆಗೆ ವಿಹಂಗಮ ಸನ್‌ರೂಫ್ 6-ವಿಧದಲ್ಲಿ ಹೊಂದಿಸಬಲ್ಲ ಪವರ್ ಡ್ರೈವರ್ ಸೀಟು ಮತ್ತು ವಾತಾಯನದ ಮುಂಭಾಗ ಹಾಗೂ ಮಧ್ಯದ ಸಾಲಿನ ಸೀಟುಗಳು (ಹಿಂದಿನದು 6-ಸೀಟರ್ ಕಾನ್ಫಿಗರೇಶನ್‌ನೊಂದಿಗೆ ಮಾತ್ರ ಲಭ್ಯ) ಒಳಗೊಂಡಂತೆ ಅನೇಕ ಫೀಚರ್‌ಗಳನ್ನು ಪಡೆದಿದೆ.
ಪ್ರಸ್ತುತ ಸಫಾರಿಯು ಈಗಾಗಲೇ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳೊಂದಿಗೆ (ADAS) ಸಜ್ಜುಗೊಂಡಿದ್ದು, ಫಾರ್ವರ್ಡ್-ಕೊಲಿಶನ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಹಾಗೂ ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮುಂತಾದ ಫೀಚರ್‌ಗಳನ್ನು ಪಡೆದಿದೆ. ಈ ನವೀಕರಣದೊಂದಿಗೆ, ಸಫಾರಿಯು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿರುವ ಸಾಧ್ಯತೆ ಇದೆ. ಉಳಿಸಿಕೊಂಡಿರಬಹುದಾದ ಇತರ ಸುರಕ್ಷತಾ ಫೀಚರ್‌ಗಳೆಂದರೆ, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್(TPMS) ಮತ್ತು 360-ಡಿಗ್ರಿ ಕ್ಯಾಮರಾ.
ಇದನ್ನೂ ಓದಿ: ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಪರೀಕ್ಷಾರ್ಥ ಕಾರು ಮತ್ತೊಮ್ಮೆ ಕಾಡಿನಲ್ಲಿ ಕಂಡುಬಂದಿದೆ
ಪವರ್‌ಟ್ರೇನ್‌ಗಳ ಪರಿಶೀಲನೆ
ಈ ನವೀಕೃತ SUV ಪ್ರಸ್ತುತ ಮಾಡೆಲ್‌ನಿಂದ 2-ಲೀಟರ್ ಡೀಸೆಲ್ ಇಂಜಿನ್ (170PS ಮತ್ತು 350Nm) ಅನ್ನು ಉಳಿಸಿಕೊಂಡಿರುವ ಸಾಧ್ಯತೆ ಇದೆ. ಈ ಯೂನಿಟ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನೊಂದಿಗೆ ಜೋಡಿಸಲಾಗಿದೆ.
ಟಾಟಾ ಈ ಅಪ್‌ಡೇಟ್ ಮಾಡಲಾದ ಸಫಾರಿಯನ್ನು 2023 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಹೊಸ 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ನೊಂದಿಗೆ ನೀಡಬಹುದು. ಈ ಇಂಜಿನ್ 170PS ಮತ್ತು 280Nm ಅನ್ನು ಉತ್ಪಾದಿಸುತ್ತದೆ ಹಾಗೂ DCT ಟ್ರಾನ್ಸ್‌ಮಿಶನ್‌ನೊಂದಿಗೆ ಜೋಡಿಸಿರುವ ಸಾಧ್ಯತೆ ಇರುತ್ತದೆ.
ನೀರಿಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಈ ನವೀಕೃತ ಟಾಟಾ ಸಫಾರಿಯು ರೂ 16 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರುವ ನಿರೀಕ್ಷೆ ಇದೆ. ಇದು MG ಹೆಕ್ಟರ್ ಪ್ಲಸ್, ಮಹೀಂದ್ರಾ XUV700, ಮತ್ತು ಹ್ಯುಂಡೈ ಅಲ್ಕಾಝಾರ್‌ನೊಂದಿಗೆ ಪ್ರತಿಸ್ಪರ್ಧೆಯನ್ನು ಮುಂದುವರಿಸಿದೆ.
0 out of 0 found this helpful