Login or Register ಅತ್ಯುತ್ತಮ CarDekho experience ಗೆ
Login

ESC ಯನ್ನು ಪ್ರಮಾಣಿತವಾಗಿ ಪಡೆದಿವೆ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಈ 10 ಕಾರುಗಳು

published on ಫೆಬ್ರವಾರಿ 23, 2023 02:57 pm by shreyash for ರೆನಾಲ್ಟ್ ಕ್ವಿಡ್

ಈ ಪಟ್ಟಿಯಲ್ಲಿನ ಹೆಚ್ಚಿನ ಕಾರುಗಳು ರೆನಾಲ್ಟ್ ಮತ್ತು ಮಾರುತಿಯದ್ದಾಗಿದ್ದು ಹ್ಯುಂಡೈನ ಯಾವುದೂ ಇಲ್ಲ

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಆಟೋಮೇಟಿವ್ ಸ್ಪೇಸ್‌ನಲ್ಲಿ ಸುರಕ್ಷತೆಯ ಮೇಲೆ ಹೆಚ್ಚಿನ ಗಮನಹರಿಸುವುದರೊಂದಿಗೆ, ಕಾರು ತಯಾರಕರು ತಮ್ಮ ಉತ್ಪನ್ನಗಳ ಮೇಲೆ ನೀಡಲಾಗುವ ಪ್ರಮಾಣಿತ ಸಾಧನಗಳನ್ನು ನವೀಕರಿಸಬೇಕಾಗುತ್ತದೆ ಮತ್ತು ವಿಸ್ತರಿಸಬೇಕಾಗುತ್ತದೆ. ಮುಂದಿನ ಸುರಕ್ಷತಾ ಫೀಚರ್ ಆಗಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಕಡ್ಡಾಯ ಮಾಡುವ ನಿರೀಕ್ಷೆಯಿದೆ. ನವೀಕೃತ ಗ್ಲೋಬಲ್ NCAP ಟೆಸ್ಟ್‌ಗಳಲ್ಲಿ ಕಾರಿಗೆ ಡೀಸೆಂಟ್ ಸ್ಕೋರ್ ಪಡೆಯಲು ಇದು ಈಗಾಗಲೇ ಮೂಲಭೂತ ಅವಶ್ಯಕತೆಯಾಗಿದೆ.

ESC ಒಂದು ಸಕ್ರಿಯ ಸುರಕ್ಷತಾ ಫೀಚರ್ ಆಗಿದ್ದು, ಹಠಾತ್ ಬ್ರೇಕಿಂಗ್ ಮತ್ತು ಹಠಾತ್ ಸ್ಟಿಯರಿಂಗ್ ಕಾರ್ಯಾಚರಣೆಯ ಸಮಯದಲ್ಲಿ ನಿಯಂತ್ರಣ ಕಳೆದುಕೊಳ್ಳುವುದನ್ನು ತಪ್ಪಿಸುವ ಮೂಲಕ ವಾಹನಗಳು ನಿಯಂತ್ರಣ ಕಳೆದುಕೊಳ್ಳುವುದನ್ನು ತಡೆಯುತ್ತವೆ. ಕಾರು ತಯಾರಕರು ಈ ಫೀಚರ್‌ನೊಂದಿಗೆ ತಮ್ಮ ಪೋರ್ಟ್‌ಫೋಲಿಯೊವನ್ನು ನವೀಕರಸಲು ಪ್ರಾರಂಭಿಸಿರುವುದರಿಂದ, ESC ಅನ್ನು ಪ್ರಮಾಣಿತವಾಗಿ ನೀಡಲಾಗುವ ರೂ. 10 ಲಕ್ಷದೊಳಗಿನ (ಎಕ್ಸ್-ಶೋರೂಮ್) ಬೆಲೆಯ 10 ಕಾರುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ರೆನಾಲ್ಟ್ ಕ್ವಿಡ್

ಬೆಲೆ ರೇಂಜ್: ರೂ. 4.70 ಲಕ್ಷದಿಂದ ರೂ. 6.33 ಲಕ್ಷ

ಕ್ವಿಡ್ ಪಟ್ಟಿಯಲ್ಲಿ ಬರುವ ESC ಅನ್ನು ಪ್ರಮಾಣಿತವಾಗಿ ಹೊಂದಿರುವ ಅತ್ಯಂತ ಕೈಗೆಟಕುವ ವಾಹನದ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿದೆ. ಸರಿಸುಮಾರು 2023 ರ ಪ್ರಾರಂಭದಲ್ಲಿ ರೆನಾಲ್ಟ್‌ನ ಲೈನ್‌ಅಪ್‌ನಾದ್ಯಂತ ಆದ ನವೀಕರಣವಾಗಿದೆ. ಇದರ ಸುರಕ್ಷತಾ ಕಿಟ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್ ಸ್ಟಾರ್ಟ್ ಅಸಿಸ್ಟ್ (HSA), ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.

ಇದನ್ನೂ ಓದಿ: ರೆನಾಲ್ಟ್ ಟ್ರೈಬರ್‌ಗಿಂತ ಸಂಪೂರ್ಣ ಭಿನ್ನವಾಗಿ ಗೋಚರಿಸುವ ನಿಸಾನ್‌ನ ಮುಂಬರುವ MPV

ರೆನಾಲ್ಟ್ ಟ್ರೈಬರ್

ಬೆಲೆ ರೇಂಜ್: ರೂ. 6.33 ಲಕ್ಷದಿಂದ ರೂ 8.97 ಲಕ್ಷ

ರೆನಾಲ್ಟ್ ಟ್ರೈಬರ್ ಭಾರತದ ಪ್ರವೇಶ ಮಟ್ಟದ ಕಾಂಪ್ಯಾಕ್ಟ್ MPV ಕ್ರಾಸ್‌ಓವರ್ ಆಗಿದ್ದು, ಎಲ್ಲಾ ವೇರಿಯೆಂಟ್‌ಗಳಲ್ಲೂ ESC ಅನ್ನು ಪ್ರಮಾಣಿತವಾಗಿ ಪಡೆದಿದೆ. ಇದರಲ್ಲಿ ಲಭ್ಯವಿರುವ ಇನ್ನಷ್ಟು ಸುರಕ್ಷತಾ ಸಾಧನಗಳೆಂದರೆ, EBD ಜೊತೆಗೆ ABS, ಹಿಲ್ ಸ್ಟಾರ್ಟ್ ಅಸಿಸ್ಟ್ (HSA), ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS).

ಇದನ್ನೂ ಓದಿ: ಭಾರತಕ್ಕೆ ನಿಸಾನ್ ಮತ್ತು ರೆನಾಲ್ಟ್ ಆರು ಹೊಸ ಮಾಡೆಲ್‌ಗಳನ್ನು ಪರಿಚಯಿಸುತ್ತಿವೆ - 4 SUVಗಳು ಮತ್ತು 2 EVಗಳು

ಮಾರುತಿ ಸ್ವಿಫ್ಟ್

ಬೆಲೆ ರೇಂಜ್: ರೂ. 6 ಲಕ್ಷದಿಂದ ರೂ. 8.98 ಲಕ್ಷ

ಮಾರುತಿಯ ಅತ್ಯಂತ ಪ್ರಸಿದ್ಧ ಹ್ಯಾಚ್‌ಬ್ಯಾಕ್, ಸ್ವಿಫ್ಟ್, ಈಗ ESC ಅನ್ನು ಪ್ರಮಾಣಿತವಾಗಿ ಪಡೆದಿದೆ. ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್-ಹೋಲ್ಡ್ ಕಂಟ್ರೋಲ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆದಿದೆ.

ಈ ಹಿಂದೆ, ಅಗತ್ಯ ಸುರಕ್ಷತಾ ಕ್ರಮದ ಕೊರತೆಯಿಂದಾಗಿ ನವೀಕೃತ ಗ್ಲೋಬಲ್ NCAP ಪ್ರೋಟೋಕಾಲ್ ಆಧರಿಸಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಸ್ವಿಫ್ಟ್ ಕೇವಲ ಒಂದು ಸ್ಟಾರ್ ಅನ್ನು ಮಾತ್ರ ಪಡೆದಿತ್ತು. ಮತ್ತೊಮ್ಮೆ ಕ್ರ್ಯಾಶ್-ಟೆಸ್ಟ್ ನಡೆಸಿದರೆ, ನವೀಕೃತ ಪ್ರಮಾಣಿತ ಸುರಕ್ಷತಾ ಕಿಟ್‌ನೊಂದಿಗೆ ಈ ಕಾರಿಗೆ ಸುಧಾರಿತ ಸುರಕ್ಷತಾ ರೇಟಿಂಗ್ ಅನ್ನು ನಾವು ನಿರೀಕ್ಷಿಸಬಹುದು.

ಇದನ್ನೂ ಓದಿ: ಮಾರುತಿ: ಗ್ರ್ಯಾಂಡ್ ವಿಟಾರಾ ಬುಕಿಂಗ್‌ಗಳ ಕಾಲುಭಾಗಕ್ಕಿಂತ ಹೆಚ್ಚು ಪ್ರಬಲ ಹೈಬ್ರಿಡ್ ಖಾತೆ

ಮಾರುತಿ ಡಿಝೈರ್

ಬೆಲೆ ರೇಂಜ್: ರೂ. 6.44 ಲಕ್ಷದಿಂದ ರೂ. 9.31 ಲಕ್ಷ

ಡಿಝೈರ್ ತನ್ನ ವಿಭಾಗದಲ್ಲಿ ESC ಅನ್ನು ಪ್ರಮಾಣಿತವಾಗಿ ನೀಡಲಾಗುವ ಏಕೈಕ ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಈ ಸೆಡಾನ್ ಅಲ್ಲಿ ನೀಡಲಾದ ಇತರ ಸುರಕ್ಷತಾ ಫೀಚರ್‌ಗಳೆಂದರೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್-ಸೀಟ್ ಆ್ಯಂಕರ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು.

ಮಾರುತಿ ಬಲೆನೊ

ಬೆಲೆ ರೇಂಜ್: ರೂ. 6.56 ಲಕ್ಷದಿಂದ ರೂ. 9.83 ಲಕ್ಷ

ಬಲೆನೊ, ಮಾರುತಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು, ಇತ್ತೀಚೆಗೆ ESC ಪ್ರಮಾಣೀಕರಣ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಹೆಚ್ಚುವರಿ ಸಂಪರ್ಕ ಮತ್ತು ಸುರಕ್ಷತಾ ಫೀಚರ್‌ಗಳಿಂದ ನವೀಕರಿಸಲಾಗಿದೆ. ಇದಲ್ಲದೇ, ಇದು ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮರಾವನ್ನು ಹೊಂದಿದೆ.

ಗಮನಿಸಿ: ಬಲೆನೊದ ಕ್ರಾಸ್-ಬ್ರ್ಯಾಡ್ಜ್ ಆವೃತ್ತಿಯಾಗಿರುವ ಟೊಯೋಟಾ ಗ್ಲಾನ್ಝಾ ESC ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಪ್ರಮಾಣಿತವಾಗಿ ಪಡೆದಿದ್ದು, ರೂ. 6.66 ಲಕ್ಷದಿಂದ ರೂ. 9.99 ಲಕ್ಷದವರೆಗೆ ಬೆಲೆಯನ್ನು ಹೊಂದಿದೆ.

ನಿಸಾನ್ ಮ್ಯಾಗ್ನೈಟ್

ಬೆಲೆ ರೇಂಜ್: ರೂ. 6 ಲಕ್ಷದಿಂದ ರೂ. 10.94 ಲಕ್ಷ

ನಿಸಾನ್‌ನ ರೆನಾಲ್ಟ್ ಕೈಗರ್ ಆವೃತ್ತಿಯಾಗಿರುವ, ಈ ಮ್ಯಾಗ್ನೈಟ್, ಸಹ ಎಲ್ಲಾ ವೇರಿಯೆಂಟ್‌ಗಳಲ್ಲಿ ESC ಅನ್ನು ಪ್ರಮಾಣಿತ ಪಡೆದಿದ್ದು, ಇತ್ತೀಚಿನ ಅಪ್‌ಡೇಟ್‌ಗೆ ಧನ್ಯವಾದಗಳನ್ನು ಹೇಳಬೇಕಾಗಿದೆ. ಇದರಲ್ಲಿನ ಇತರ ಸುರಕ್ಷತಾ ಸಾಧನಗಳೆಂದರೆ 360-ಡಿಗ್ರಿ ಕ್ಯಾಮರಾ, ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS).

ರೆನಾಲ್ಟ್ ಕೈಗರ್

ಬೆಲೆ ರೇಂಜ್: ರೂ. 6.50 ಲಕ್ಷದಿಂದ ರೂ. 11.23 ಲಕ್ಷ

ಕೈಗರ್ ರೆನಾಲ್ಟ್‌ನ ಸಬ್‌ಕಾಂಪ್ಯಾಕ್ಟ್ SUV ಆಗಿದ್ದು, ಎಲ್ಲಾ ರೇಂಜ್‌ಗಳಲ್ಲೂ ESC ಅನ್ನು ಪ್ರಮಾಣಿತವಾಗಿ ಪಡೆದಿದೆ. ಇಷ್ಟೇ ಅಲ್ಲದೇ, ಆರು ಏರ್‌ಬ್ಯಾಗ್‌ಗಳು, EBD ಜೊತೆ ABS, ಹಿಲ್ ಸ್ಟಾರ್ಟ್ ಅಸಿಸ್ಟ್ (HSA), ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಟೈರ್ ಪ್ರೇಷರ್ ಮಾನಿಟರಿಂಗ್ ಸಿಸ್ಟಮ್ (TPMS), ಸ್ಪೀಡ್-ಸೆನ್ಸಿಂಗ್ ಲಾಕ್‌ಗಳು, ರಿಯರ್-ವ್ಯೂ ಕ್ಯಾಮರಾ ಮತ್ತು ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆದಿದೆ.

ಟಾಟಾ ನೆಕ್ಸಾನ್

ಬೆಲೆ ರೇಂಜ್: ರೂ. 7.80 ಲಕ್ಷದಿಂದ ರೂ. 14.30 ಲಕ್ಷ

ನೆಕ್ಸಾನ್ ಸಹ ಎಲ್ಲಾ ವೇರಿಯೆಂಟ್‌ಗಳಲ್ಲಿ ESC ಅನ್ನು ಪ್ರಮಾಣಿತ ಸುರಕ್ಷಾ ಸಾಧನವಾಗಿ ಹೊಂದಿದೆ. ಗ್ಲೋಬಲ್ NCAP ಇಂದ ಐದು ಸುರಕ್ಷತಾ ರೇಟಿಂಗ್ ಪಡೆದ ಮೊದಲ ಭಾರತೀಯ ಕಾರುಗಳಲ್ಲಿ ಒಂದಾದ ನೆಕ್ಸಾನ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ISOFIX ಚೈಲ್ಡ್-ಸೀಟ್ ಆ್ಯಂಕರ್‌ಗಳನ್ನು ಸುರಕ್ಷತಾ ಕಿಟ್‌ಗಳಲ್ಲಿ ಪಡೆದಿದೆ.

ಮಾರುತಿ ಬ್ರೆಝಾ

ಬೆಲೆ ರೇಂಜ್: ರೂ. 8.19 ಲಕ್ಷದಿಂದ 14.04 ಲಕ್ಷ

ಬ್ರೆಝಾ ತನ್ನ ರೇಂಜ್‌ನಾದ್ಯಂತ ಎಲ್ಲಾ ವೇರಿಯೆಂಟ್‌ಗಳಲ್ಲಿ ESC ಅನ್ನು ಪ್ರಮಾಣಿತವಾಗಿ ನೀಡಿದ್ದರೂ, ಅದರ ಮೇಲ್ಮಟ್ಟದ ವೇರಿಯೆಂಟ್‌ಗಳು ರೂ.10 ಲಕ್ಷಕ್ಕಿಂತ ಹೆಚ್ಚಿನ ಬೆಲೆಯನ್ನು ಹೊಂದಿದ್ದು, ಆರು ಏರ್‌ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, EBD ಜೊತೆಗೆ ABS ಮತ್ತು 360-ಡಿಗ್ರಿ ಕ್ಯಾಮರಾವನ್ನು ಹೊಂದಿದೆ.

ಮಾರುತಿ ಎರ್ಟಿಗಾ

ಬೆಲೆ ರೇಂಜ್: ರೂ. 8.35 ಲಕ್ಷದಿಂದ ರೂ. 12.79 ಲಕ್ಷ

ಟ್ರೈಬರ್ ನಂತರ, ESC ಅನ್ನು ಪ್ರಮಾಣಿತವಾಗಿ ಹೊಂದಿರುವ ಏಕೈಕ MPV ಎಂದರೆ ಈ ಎರ್ಟಿಗಾ ಆಗಿದೆ. ಇದರ ದುಬಾರಿ ಟ್ರಿಮ್‌ಗಳು ಸಹ ನಾಲ್ಕು ಏರ್‌ಬ್ಯಾಗ್‌ಗಳು ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಪಡೆದಿವೆ.

ಈ 10 ಕಾರುಗಳು ESC ಅನ್ನು ಪ್ರಮಾಣಿತವಾಗಿ ಪಡೆದಿರುವ ಜೊತೆಗೆ ಕೈಗೆಟಕುವ ಬೆಲೆಯ ವಾಹನಗಳಾಗಿವೆ. ಆದಾಗ್ಯೂ, ಎಲ್ಲಾ ಕಾರುಗಳು ಆರು ಏರ್‌ಬ್ಯಾಗ್‌ಗಳು ಮತ್ತು ESC ಅನ್ನು ಪ್ರಮಾಣಿತವಾಗಿ ಹೊಂದಿರಬೇಕು ಎಂಬ ಆದೇಶವನ್ನು ಶೀಘ್ರದಲ್ಲೇ ಸರ್ಕಾರವು ಹೊರಡಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಇಲ್ಲಿ ಇನ್ನೂ ಹೆಚ್ಚಿನದನ್ನು ಓದಿ : ಕ್ವಿಡ್ AMT

s
ಅವರಿಂದ ಪ್ರಕಟಿಸಲಾಗಿದೆ

shreyash

  • 54 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Renault ಕ್ವಿಡ್

Read Full News

explore similar ಕಾರುಗಳು

ಟಾಟಾ ನೆಕ್ಸಾನ್‌

ಡೀಸಲ್23.23 ಕೆಎಂಪಿಎಲ್
ಪೆಟ್ರೋಲ್17.44 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಸಪ್ಟೆಂಬರ್ ಕೊಡುಗೆಗಳು

ಮಾರುತಿ ಡಿಜೈರ್

ಪೆಟ್ರೋಲ್22.41 ಕೆಎಂಪಿಎಲ್
ಸಿಎನ್‌ಜಿ31.12 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಸಪ್ಟೆಂಬರ್ ಕೊಡುಗೆಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಸಪ್ಟೆಂಬರ್ ಕೊಡುಗೆಗಳು

ಮಾರುತಿ ಬ್ರೆಜ್ಜಾ

ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಸಪ್ಟೆಂಬರ್ ಕೊಡುಗೆಗಳು

ಮಾರುತಿ ಎರ್ಟಿಗಾ

ಪೆಟ್ರೋಲ್20.51 ಕೆಎಂಪಿಎಲ್
ಸಿಎನ್‌ಜಿ26.11 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಸಪ್ಟೆಂಬರ್ ಕೊಡುಗೆಗಳು

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ