Toyota Taisor ವರ್ಸಸ್ Maruti Fronx: ಬೆಲೆಗಳ ಹೋಲಿಕೆ
ಟೊಯೊಟಾ ಟೈಸರ್‌ನ ಮಿಡ್-ಸ್ಪೆಕ್ ವೇರಿಯೆಂಟ್‌ಗಳು 25,000 ರೂ.ನಷ್ಟು ಹೆಚ್ಚುವರಿ ಬೆಲೆಯನ್ನು ಹೊಂದಿದ್ದು, ಟಾಪ್-ಸ್ಪೆಕ್ ಟರ್ಬೊ-ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಯು ಮಾರುತಿ ಫ್ರಾಂಕ್ಸ್‌ನ ಬೆಲೆಗೆ ಸಮನಾಗಿವೆ.
ಟೊಯೋಟಾದ ಇತ್ತೀಚಿನ ಸಬ್-4ಮೀ ಕೊಡುಗೆಯಾದ ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಟೈಸರ್, ಮಾರುತಿ ಫ್ರಾಂಕ್ಸ್‌ನ ಮರುಬ್ಯಾಡ್ಜ್ ಮಾಡಲಾದ ಆವೃತ್ತಿಯಾಗಿದ್ದು, ಮಾರುತಿ ಮತ್ತು ಟೊಯೋಟಾ ನಡುವಿನ ಆರನೇ ಹಂಚಿಕೆಯ ಉತ್ಪನ್ನವಾಗಿದೆ. ಟೈಸರ್ ಬಾಹ್ಯ ಬದಲಾವಣೆಗಳೊಂದಿಗೆ ವಿಶುವಲ್ ವ್ಯತ್ಯಾಸಗಳನ್ನು ಪಡೆಯುತ್ತದೆ, ಆದರೆ ಇಂಟಿರೀಯರ್ ಮತ್ತು ಪವರ್‌ಟ್ರೇನ್‌ಗಳು ಫ್ರಾಂಕ್ಸ್‌ಗೆ ಹೋಲುತ್ತವೆ. ಈ ಸಬ್‌ಕಾಂಪ್ಯಾಕ್ಟ್ ಕ್ರಾಸ್‌ಒವರ್ ಎಸ್‌ಯುವಿಯ ಕೊಡುಗೆಗಳು ಬೆಲೆಯ ವಿಷಯದಲ್ಲಿ ಪರಸ್ಪರ ಹೇಗೆ ಹೋಲಿಕೆ ಆಗುತ್ತದೆ ಎಂಬುದನ್ನು ನೋಡೋಣ.
ಪೆಟ್ರೋಲ್ ಮ್ಯಾನ್ಯುಯಲ್
ಟೊಯೋಟಾ ಟೈಸರ್ |
ಮಾರುತಿ ಫ್ರಾಂಕ್ಸ್ |
ಇ - 7.74 ಲಕ್ಷ ರೂ. |
ಸಿಗ್ಮಾ - 7.52 ಲಕ್ಷ ರೂ |
ಎಸ್ - 8.60 ಲಕ್ಷ ರೂ. |
ಡೆಲ್ಟಾ - 8.38 ಲಕ್ಷ ರೂ |
ಎಸ್ ಪ್ಲಸ್ - 9 ಲಕ್ಷ ರೂ. |
ಡೆಲ್ಟಾ ಪ್ಲಸ್ - 8.78 ಲಕ್ಷ ರೂ |
|
ಡೆಲ್ಟಾ ಪ್ಲಸ್ ಟರ್ಬೊ - 9.73 ಲಕ್ಷ ರೂ |
ಜಿ ಟರ್ಬೊ - 10.56 ಲಕ್ಷ ರೂ. |
ಝೀಟಾ ಟರ್ಬೊ - 10.56 ಲಕ್ಷ ರೂ |
ವಿ ಟರ್ಬೊ - 11.48 ಲಕ್ಷ ರೂ. |
ಆಲ್ಫಾ ಟರ್ಬೋ - 11.48 ಲಕ್ಷ ರೂ |
-
ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್ 1.2-ಲೀಟರ್ ನ್ಯಾಚುರಲಿ-ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಆಯ್ಕೆಯನ್ನು ಪಡೆಯುತ್ತವೆ, ಇವೆರಡೂ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲ್ಪಟ್ಟಿವೆ.
-
1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟೈಸರ್‌ನ ಪ್ರತಿಯೊಂದು ಆವೃತ್ತಿಯು ಅದೇ ಎಂಜಿನ್ ಹೊಂದಿರುವ ಮಾರುತಿ ಫ್ರಾಂಕ್ಸ್‌ನ ಹೋಲಿಸಬಹುದಾದ ಆವೃತ್ತಿಗಳಿಗಿಂತ 22,000 ರೂ.ಗಳಷ್ಟು ದುಬಾರಿಯಾಗಿದೆ.
-
ಟೈಸರ್ ಟರ್ಬೊ-ಪೆಟ್ರೋಲ್ ಆಯ್ಕೆಯನ್ನು ಅದರ ಟಾಪ್ ಎರಡು ಆವೃತ್ತಿಗಳಾದ G ಮತ್ತು V ಯಲ್ಲಿ ನೀಡುತ್ತದೆ, ಆದರೆ ಫ್ರಾಂಕ್ಸ್ ಮಿಡ್-ಸ್ಪೆಕ್ ಡೆಲ್ಟಾ ಪ್ಲಸ್ ಟ್ರಿಮ್‌ನಿಂದ ಅದೇ ಎಂಜಿನ್ ಅನ್ನು ನೀಡಲಾಗುತ್ತದೆ, ಫ್ರಾಂಕ್ಸ್‌ನಲ್ಲಿ ಟರ್ಬೊವು ಟೈಸರ್‌ಗಿಂತ 83,000 ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ನೀಡುತ್ತದೆ.
-
ಟೈಸರ್ ಮತ್ತು ಫ್ರಾಂಕ್ಸ್ ಎರಡರ ಟಾಪ್ ಎರಡು ವೇರಿಯೆಂಟ್‌ಗಳು ಸಮಾನವಾದ ಬೆಲೆಯನ್ನು ಹೊಂದಿವೆ, ಟೊಯೋಟಾದ ಕ್ರಾಸ್ಒವರ್ ಎಸ್‌ಯುವಿಯು ಟಾಪ್-ಸ್ಪೆಕ್ ವಿ ಆವೃತ್ತಿಯಲ್ಲಿ ಡ್ಯುಯಲ್-ಟೋನ್ ಆಯ್ಕೆಗಾಗಿ ಹೆಚ್ಚುವರಿ 16,000 ರೂ ವನ್ನು ನೀಡಬೇಕಾಗುತ್ತದೆ.
ಇದನ್ನು ಸಹ ಓದಿ: ಭಾರತದಲ್ಲಿ ಪುನರಾಗಮನವನ್ನು ಮಾಡುತ್ತಿರುವ Skoda Superb, 54 ಲಕ್ಷ ರೂ.ಗೆ ಬಿಡುಗಡೆ
ಪೆಟ್ರೋಲ್ ಸಿಎನ್‌ಜಿ
ಟೊಯೋಟಾ ಟೈಸರ್ |
ಮಾರುತಿ ಫ್ರಾಂಕ್ಸ್ |
ಇ - 8.72 ಲಕ್ಷ ರೂ |
ಸಿಗ್ಮಾ - 8.47 ಲಕ್ಷ ರೂ |
|
ಡೆಲ್ಟಾ - 9.33 ಲಕ್ಷ ರೂ |
-
ಟೈಸರ್ ಮತ್ತು ಫ್ರಾಂಕ್ಸ್ ಸಿಎನ್‌ಜಿ ಎರಡೂ 1.2-ಲೀಟರ್ ಪೆಟ್ರೋಲ್-ಸಿಎನ್‌ಜಿ ಪವರ್‌ಟ್ರೇನ್ (77.5 PS / 98.5 Nm) ಜೊತೆಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತವೆ.
-
ಟೊಯೋಟಾ ಸಿಎನ್‌ಜಿ ಆಯ್ಕೆಯೊಂದಿಗೆ ಟೈಸರ್‌ನ ಬೇಸ್-ಸ್ಪೆಕ್ ವೇರಿಯೆಂಟ್ ಅನ್ನು ಮಾತ್ರ ನೀಡುತ್ತದೆ, ಹಾಗೆಯೇ, ಫ್ರಾಂಕ್ಸ್‌ನೊಂದಿಗೆ, ಹೆಚ್ಚುವರಿ ಮಿಡ್-ಸ್ಪೆಕ್ ಡೆಲ್ಟಾ ಆವೃತ್ತಿಯು ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ.
-
ಫ್ರಾಂಕ್ಸ್ ಸಿಎನ್‌ಜಿಯ ಆರಂಭಿಕ ಬೆಲೆಯು ಟೈಸರ್ ಸಿಎನ್‌ಜಿಯ ಆರಂಭಿಕ ಬೆಲೆಗಿಂತ 25,000 ರೂ.ನಷ್ಟು ಕಡಿಮೆ ಇದೆ.
-
ನೀವು ಸಿಎನ್‌ಜಿ-ಚಾಲಿತ ಸಬ್-4ಮೀಟರ್ ಕ್ರಾಸ್‌ಒವರ್ ಎಸ್‌ಯುವಿನಲ್ಲಿ ನಿರ್ದಿಷ್ಟವಾಗಿ ಆಸಕ್ತಿ ಹೊಂದಿದ್ದರೆ, ಫ್ರಾಂಕ್ಸ್ ಡೆಲ್ಟಾ ಸಿಎನ್‌ಜಿಯು ಇಲ್ಲಿ ಹೆಚ್ಚು ವೈಶಿಷ್ಟ್ಯಪೂರ್ಣವಾದ ಆಯ್ಕೆಯಾಗಿದೆ. ಇದು ವೈಶಿಷ್ಟ್ಯಗಳ ಪಟ್ಟಿಯಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು, ಮತ್ತು ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳನ್ನು (ಔಟ್‌ಸೈಡ್ ರಿಯರ್ ವ್ಯೂ ಮಿರರ್‌ಗಳು) ಅನ್ನು ಪ್ಯಾಕ್ ಮಾಡುತ್ತದೆ. ಆದಾಗಿಯೂ, ಫ್ರಾಂಕ್ಸ್ ಡೆಲ್ಟಾ ಸಿಎನ್‌ಜಿ ಆವೃತ್ತಿಯು ಟೈಸರ್ ಇ ಸಿಎನ್‌ಜಿಗಿಂತ 61,000 ರೂ.ನಷ್ಟು ದುಬಾರಿಯಾಗಿದೆ.
ಪೆಟ್ರೋಲ್ ಆಟೋಮ್ಯಾಟಿಕ್
ಟೊಯೋಟಾ ಟೈಸರ್ |
ಮಾರುತಿ ಫ್ರಾಂಕ್ಸ್ |
ಎಸ್ ಎಎಂಟಿ - 9.13 ಲಕ್ಷ ರೂ. |
ಡೆಲ್ಟಾ ಎಎಂಟಿ - 8.88 ಲಕ್ಷ ರೂ. |
ಎಸ್ ಪ್ಲಸ್ ಎಎಂಟಿ - 9.53 ಲಕ್ಷ ರೂ. |
ಡೆಲ್ಟಾ ಪ್ಲಸ್ ಎಎಂಟಿ - 9.28 ಲಕ್ಷ ರೂ. |
ಜಿ ಟರ್ಬೊ ಆಟೋಮ್ಯಾಟಿಕ್ - 11.96 ಲಕ್ಷ ರೂ. |
ಝೀಟಾ ಟರ್ಬೊ ಆಟೋಮ್ಯಾಟಿಕ್ - 11.96 ಲಕ್ಷ ರೂ. |
ವಿ ಟರ್ಬೊ ಆಟೋಮ್ಯಾಟಿಕ್ - 12.88 ಲಕ್ಷ ರೂ. |
ಆಲ್ಫಾ ಟರ್ಬೊ ಆಟೋಮ್ಯಾಟಿಕ್ - 12.88 ಲಕ್ಷ ರೂ. |
-
ಮಾರುತಿ ಫ್ರಾಂಕ್ಸ್‌ನಂತೆಯೇ, ಟೈಸರ್‌ನ 1.2-ಲೀಟರ್ ಆವೃತ್ತಿಗಳನ್ನು 5-ಸ್ಪೀಡ್ ಎಎಮ್‌ಟಿ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ; ಹಾಗೆಯೇ, 1-ಲೀಟರ್ ಟರ್ಬೊ-ಪೆಟ್ರೋಲ್ ಆವೃತ್ತಿಗಳು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ನೊಂದಿಗೆ ಲಭ್ಯವಿದೆ. -
ಟೊಯೊಟಾ ಟೈಸರ್‌ನ ಪ್ರತಿ 1.2-ಲೀಟರ್ ಎಎಮ್‌ಟಿ ಆವೃತ್ತಿಯು ಫ್ರಾಂಕ್ಸ್‌ನ ಸಮಾನ ಆವೃತ್ತಿಗಳಿಗಿಂತ 25,000 ರೂ.ನಷ್ಟು ದುಬಾರಿಯಾಗಿದೆ. ಹಾಗೆಯೇ, ಟೈಸರ್‌ನ ಎರಡು ಟಾಪ್ ಟರ್ಬೊ-ಪೆಟ್ರೋಲ್ ಆವೃತ್ತಿಗಳ ಬೆಲೆಗಳು ಫ್ರಾಂಕ್ಸ್ ಟರ್ಬೊ ಆಟೋಮ್ಯಾಟಿಕ್ ಆವೃತ್ತಿಗಳಂತೆಯೇ ಇರುತ್ತವೆ.
ಇದನ್ನು ಸಹ ಪರಿಶೀಲಿಸಿ: ದಕ್ಷಿಣ ಕೊರಿಯಾದಲ್ಲಿ Hyundai Alcazar Faceliftನ ಸ್ಪೈ ಟೆಸ್ಟಿಂಗ್, ಈ ವರ್ಷ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆ
ವೈಶಿಷ್ಟ್ಯದಲ್ಲಿನ ವ್ಯತ್ಯಾಸಗಳು
ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್ ವೈಶಿಷ್ಟ್ಯಗಳ ವಿಷಯದಲ್ಲಿ ಒಂದೇ ರೀತಿಯ ಕೊಡುಗೆಗಳನ್ನು ಪ್ಯಾಕ್ ಮಾಡಿದೆ. ಎರಡೂ ಸಬ್‌ಕಾಂಪ್ಯಾಕ್ಟ್ ಕೊಡುಗೆಗಳ ಟಾಪ್-ಸ್ಪೆಕ್ ಆವೃತ್ತಿಗಳು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇಯೊಂದಿಗೆ ಅಳವಡಿಸಲ್ಪಟ್ಟಿವೆ. ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಹಿಲ್ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳಿಂದ ನೋಡಿಕೊಳ್ಳಲಾಗುತ್ತದೆ. ಅವುಗಳ ಹೋಲಿಸಬಹುದಾದ ಆವೃತ್ತಿಗಳ ವೈಶಿಷ್ಟ್ಯ-ವಿತರಣೆ ಕೂಡ ಒಂದೇ ಆಗಿರುತ್ತದೆ.
ಗಮನಿಸಿದ ಪ್ರಮುಖ ಅಂಶಗಳು
ಈ ಎಲ್ಲಾ ಸಾಮ್ಯತೆಗಳ ಹೊರತಾಗಿಯೂ, ಟೈಸರ್‌ನ 1.2-ಲೀಟರ್ ಪೆಟ್ರೋಲ್ ಆವೃತ್ತಿಗಳು ಅದೇ ಎಂಜಿನ್‌ನೊಂದಿಗೆ ಫ್ರಾಂಕ್ಸ್ ಆವೃತ್ತಿಗಳಿಗಿಂತ ರೂ 25,000 ವರೆಗೆ ದುಬಾರಿ ಬೆಲೆಯನ್ನು ಹೊಂದಿದೆ. ಮತ್ತೊಂದೆಡೆ, ಫ್ರಾಂಕ್ಸ್ ತನ್ನ ಟೊಯೋಟಾ ಕೌಂಟರ್‌ಪಾರ್ಟ್‌ಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಟರ್ಬೊ-ಪೆಟ್ರೋಲ್ ಆವೃತ್ತಿಯನ್ನು ನೀಡುವುದಲ್ಲದೆ, ಹೆಚ್ಚು ವೈಶಿಷ್ಟ್ಯ-ಭರಿತ ಸಿಎನ್‌ಜಿ ಟ್ರಿಮ್ ಅನ್ನು ಸಹ ನೀಡುತ್ತದೆ.
ಟೊಯೋಟಾ ಸ್ವಲ್ಪ ಹೆಚ್ಚುವರಿ ಬೆಲೆಯನ್ನು ಹೊಂದಲು ಪ್ರಮುಖ ಕಾರಣವೆಂದರೆ, ಬಾಹ್ಯ ಶೈಲಿಯ ಬದಲಾವಣೆಗಳ ಜೊತೆಗೆ, ಇದು ಸ್ಟ್ಯಾಂಡರ್ಡ್ ವ್ಯಾರಂಟಿ ಕವರೇಜ್ ಆಗಿರುತ್ತದೆ. ಫ್ರಾಂಕ್ಸ್ 2-ವರ್ಷ/40,000ಕಿ.ಮೀ ವಾರಂಟಿಯನ್ನು ಸ್ಟ್ಯಾಂಡರ್ಡ್ ಆಗಿ ಪಡೆದರೆ, ಟೊಯೋಟಾ ಟೈಸರ್ ಅನ್ನು 3-ವರ್ಷಗಳು/1 ಲಕ್ಷ ಕಿಮೀ ಸ್ಟ್ಯಾಂಡರ್ಡ್ ಕವರೇಜ್ ಜೊತೆಗೆ 5 ವರ್ಷಗಳವರೆಗೆ ಕಾಂಪ್ಲಿಮೆಂಟರಿ RSA (ರೋಡ್‌ಸೈಡ್ ಅಸಿಸ್ಟೆನ್ಸ್) ಅನ್ನು ನೀಡುತ್ತದೆ.
ಇನ್ನಷ್ಟು ಓದಿ: ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಎಎಮ್‌ಟಿ