Cardekho.com
  • Maruti Brezza
    + 10ಬಣ್ಣಗಳು
  • Maruti Brezza
    + 35ಚಿತ್ರಗಳು
  • Maruti Brezza
  • 1 shorts
    shorts
  • Maruti Brezza
    ವೀಡಿಯೋಸ್

ಮಾರುತಿ ಬ್ರೆಝಾ

Rs.8.69 - 14.14 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ನೋಡಿ ಏಪ್ರಿಲ್ offer

ಮಾರುತಿ ಬ್ರೆಝಾ ನ ಪ್ರಮುಖ ಸ್ಪೆಕ್ಸ್

ಇಂಜಿನ್1462 ಸಿಸಿ
ground clearance198 mm
ಪವರ್86.63 - 101.64 ಬಿಹೆಚ್ ಪಿ
ಟಾರ್ಕ್‌121.5 Nm - 136.8 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • ಪ್ರಮುಖ ವಿಶೇಷಣಗಳು
  • ಪ್ರಮುಖ ಫೀಚರ್‌ಗಳು

ಬ್ರೆಝಾ ಇತ್ತೀಚಿನ ಅಪ್ಡೇಟ್

  • ಮಾರ್ಚ್ 10, 2025: 2025ರ ಫೆಬ್ರವರಿಯಲ್ಲಿ ಮಾರುತಿಯು ಬ್ರೆಝಾದ 15,000 ಯೂನಿಟ್‌ಗಳನ್ನು ಮಾರಾಟ ಮಾಡಿತು, ಇದು ತಿಂಗಳಿನಿಂದ ತಿಂಗಳಿಗೆ ಸುಮಾರು ಶೇಕಡಾ 4.5 ರಷ್ಟು ಬೆಳವಣಿಗೆಯನ್ನು ಕಂಡಿತು.

  • ಮಾರ್ಚ್ 06, 2025: ಮಾರುತಿ ಈ ತಿಂಗಳಿನಲ್ಲಿ ಬ್ರೆಝಾ ಮೇಲೆ 35,000 ರೂ.ಗಳವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

  • ಫೆಬ್ರವರಿ 14, 2025: ಮಾರುತಿ ಬ್ರೆಝಾವನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು ಲಭ್ಯವಿರುವಂತೆ ಅಪ್‌ಡೇಟ್‌ ಮಾಡಿದೆ. 

  • ಜನವರಿ 18, 2025: ಮಾರುತಿ ಬ್ರೆಝಾ ಪವರ್‌ಪ್ಲೇ ಕಾನ್ಸೆಪ್ಟ್‌ ಅನ್ನು 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು.

  • ಎಲ್ಲಾ
  • ಪೆಟ್ರೋಲ್
  • ಸಿಎನ್‌ಜಿ
ಬ್ರೆಝಾ ಎಲ್‌ಎಕ್ಸೈ(ಬೇಸ್ ಮಾಡೆಲ್)1462 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17.38 ಕೆಎಂಪಿಎಲ್1 ತಿಂಗಳು ವೈಟಿಂಗ್‌8.69 ಲಕ್ಷ*ನೋಡಿ ಏಪ್ರಿಲ್ offer
ಬ್ರೆಝಾ ಎಲ್‌ಎಕ್ಸ್‌ಐ ಸಿಎನ್‌ಜಿ1462 ಸಿಸಿ, ಮ್ಯಾನುಯಲ್‌, ಸಿಎನ್‌ಜಿ, 25.51 ಕಿಮೀ / ಕೆಜಿ1 ತಿಂಗಳು ವೈಟಿಂಗ್‌9.64 ಲಕ್ಷ*ನೋಡಿ ಏಪ್ರಿಲ್ offer
ಬ್ರೆಝಾ ವಿಎಕ್ಸೈ1462 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17.38 ಕೆಎಂಪಿಎಲ್1 ತಿಂಗಳು ವೈಟಿಂಗ್‌9.75 ಲಕ್ಷ*ನೋಡಿ ಏಪ್ರಿಲ್ offer
ಬ್ರೆಝಾ ವಿಎಕ್ಸೈ ಸಿಎನ್ಜಿ1462 ಸಿಸಿ, ಮ್ಯಾನುಯಲ್‌, ಸಿಎನ್‌ಜಿ, 25.51 ಕಿಮೀ / ಕೆಜಿ1 ತಿಂಗಳು ವೈಟಿಂಗ್‌10.70 ಲಕ್ಷ*ನೋಡಿ ಏಪ್ರಿಲ್ offer
ಬ್ರೆಝಾ ವಿಎಕ್ಸೈ ಎಟಿ1462 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 19.8 ಕೆಎಂಪಿಎಲ್1 ತಿಂಗಳು ವೈಟಿಂಗ್‌11.15 ಲಕ್ಷ*ನೋಡಿ ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಬ್ರೆಝಾ ವಿಮರ್ಶೆ

Overview

ಮಾರುತಿ ಸುಜುಕಿ ಬ್ರೆಝಾ ತನ್ನ ಹೆಸರಿನಿಂದ ವಿಟಾರಾವನ್ನು ಕೈಬಿಟ್ಟು ತಂತ್ರಜ್ಞ ಫಾರ್ಮುಲಾವನ್ನು ತೆಗೆದುಕೊಂಡಿದೆ ಅದಕ್ಕಿಂತ ಇದು ಇನ್ನೂ ಅರ್ಥಪೂರ್ಣವಾಗಿದೆ ಎಂದು ನಿಮಗೆ ಅನ್ನಿಸುತ್ತದೆಯೇ?

ಮಾರುತಿ ಸುಜುಕಿಯು ಸಬ್ ಕಾಂಪ್ಯಾಕ್ಟ್ ವಿಭಾಗಕ್ಕೆ ಅತ್ಯಂತ ಸ್ಫೋಟಕವಾದಂತಹ ಪ್ರವೇಶವನ್ನು ಮಾಡಲಿಲ್ಲ. ವಿಟಾರಾ ಬ್ರೆಝಾ ಭಾರತದ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಖಂಡಿತಾವಾಗಿಯೂ ಒಂದಾಗಿದೆ. ಆದರೆ ಅದು ಆಮೂಲಾಗ್ರವಾಗಿ ವಿಭಿನ್ನವಾದದ್ದನ್ನು ಮಾಡಿಲ್ಲ. ಇದು ಸೂಕ್ತ ಪ್ರಮಾಣದ ವೈಶಿಷ್ಟ್ಯಗಳನ್ನು ಹೊಂದಿತ್ತಲ್ಲದೇ ಕುಟುಂಬದಲ್ಲಿ ಎಲ್ಲರೂ ಒಪ್ಪಿಕೊಳ್ಳುವಷ್ಟು ಚೆನ್ನಾಗಿ ಮತ್ತು ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿತ್ತು.

ಇದು ಗುರುತಿಸಲ್ಪಡುವ ಫಾರ್ಮುಲಾವಾಗಿದೆಯಲ್ಲದೇ 2016 ರಿಂದ 7.5 ಲಕ್ಷ ಖರೀದಿದಾರರು ಒಪ್ಪಿಕೊಳ್ಳುತ್ತಾರೆ. ಆದರೆ ಈಗಿರುವ ಕಠಿಣ ಸ್ಪರ್ಧೆಯಿಂದಾಗಿ ಇದು ಬದಲಾಗುವ ಸಮಯವಾಗಿತ್ತು.  ಹೊಸ ಮತ್ತು ತಂತ್ರಜ್ಞ ಬ್ರೆಝಾ ಜೊತೆಗಿನ ಅನುಭವ ಹೇಗಿದೆ ಎಂಬುದು ಇಲ್ಲಿದೆ.

ಮತ್ತಷ್ಟು ಓದು

ಎಕ್ಸ್‌ಟೀರಿಯರ್

ಬ್ಯಾಲೆನ್ಸ್ ಆಗಿದೆ, ಇದು ಹೊಸ ಬ್ರೆಜ್ಜಾದ ವಿನ್ಯಾಸವನ್ನು ಒಂದು ಪದದಲ್ಲಿ ಹೇಳುವುದಾದರೆ. ಹಿಂದಿನ ಆವೃತ್ತಿಗಳ ನೋಟವು ತಟಸ್ಥವಾಗಿದೆ ಎಂದು ಪರಿಗಣಿಸಿ ಕೆಲವರು ಇದರ ಕುರಿತು ಸ್ವಲ್ಪ ನಿರಾಸಾಕ್ತಿ ತೋರಿಸಬಹುದು. ಆದರೆ ಲುಕ್‌ ಮಾತ್ರ ದೊಡ್ಡದಾಗಿ ಸಾರ್ವತ್ರಿಕವಾಗಿದೆ. ಇದರ ಆಯಾಮಗಳು ಬದಲಾಗಿಲ್ಲ ಮತ್ತು ಇದು ಸಂಪೂರ್ಣವಾಗಿ ಹೊಸ ಬ್ರೆಝಾ ಆಗಿದ್ದರೂ, ಇದು ಇನ್ನೂ ಮೊದಲಿನಂತೆಯೇ ಅದೇ TECT ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಇದನ್ನೂ ಓದಿ: ತನ್ನ ಎಲ್ಲಾ ಆವೃತ್ತಿಗಳಲ್ಲಿ ಪ್ರಬಲ ಹೈಬ್ರಿಡ್ ಟೆಕ್ ಅನ್ನು ಪರಿಚಯಿಸಲಿರುವ ಮಾರುತಿ

ವಿಶೇಷವಾಗಿ ಮುಂಭಾಗ ಅಥವಾ ಹಿಂಭಾಗದಿಂದ ನೋಡಿದಾಗ, ಹೊಸ ವಿನ್ಯಾಸದ ಪ್ರಮುಖ ಹೈಲೈಟ್‌ ಎಂದರೆ ಕಾರನ್ನು ಅಗಲವಾಗಿ ಕಾಣುವಂತೆ ಮಾಡುತ್ತದೆ. ಹೊಸ ವಿನ್ಯಾಸದಲ್ಲಿ ಮೂಗಿನ ಭಾಗವು ಚಪ್ಪಟೆಯಾಗಿದೆ, ಹೊಸ ಗ್ರಿಲ್ ಹೆಚ್ಚು ಆಕರ್ಷಣೆಯನ್ನು ಹೊಂದಿದೆ ಮತ್ತು L ಮತ್ತು V ವೇರಿಯೆಂಟ್‌ಗಳು ಮೊದಲಿನಂತೆ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಪಡೆದರೆ, Z ಮತ್ತು Z+ ಹೊಸ LED ಪ್ರೊಜೆಕ್ಟರ್‌ಗಳನ್ನು ಪಡೆಯುತ್ತವೆ. ಅವುಗಳನ್ನು ಹೊಸ LED DRL ಗಳಿಂದ ಅಲಂಕರಿಸಲಾಗಿದೆ (Z/Z+) ಮತ್ತು ಇದರೊಂದಿಗೆ LED ಫಾಗ್‌ ಲೈಟ್‌ಗಳು (Z+) ಜೊತೆಗೂಡಿವೆ.

ಸೈಡ್‌ನಿಂದ ಗಮನಿಸುವಾಗ, ನೀವು 16-ಇಂಚಿನ ಡೈಮಂಡ್-ಕಟ್ ಅಲಾಯ್‌ ವೀಲ್‌ಗಳ ಹೊಸ ಸೆಟ್ ಮತ್ತು ಹಿಂದಿನ ಕಾರಿಗೆ ಹೋಲಿಸಿದರೆ ಇದು 2 ಪಟ್ಟು ಹೆಚ್ಚು ಬಾಡಿ ಕ್ಲಾಡಿಂಗ್ ಅನ್ನು ಗುರುತಿಸುತ್ತೀರಿ.  ಹಿಂಭಾಗದ ಲುಕ್‌ ನಮಗೆ ಹೊಸ ಬ್ರೆಜ್ಜಾದ ಅತ್ಯುತ್ತಮ ಆಂಗಲ್‌ ಆಗಿದೆ. ಟೈಲ್ ಲೈಟ್‌ಗಳು ಕಾರನ್ನು ಇನ್ನು ಅಗಲವಾಗಿ ಕಾಣುವಂತೆ ಮಾಡುತ್ತದೆ ಮತ್ತು ಒಳಗೆ ದೊಡ್ಡದಾದ, ಹೆಚ್ಚು ವಿಭಿನ್ನವಾದ ಲೈಟಿಂಗ್‌ ವೈಶಿಷ್ಟ್ಯವನ್ನು ಹೊಂದಿರುತ್ತದೆ.

ಮತ್ತಷ್ಟು ಓದು

ಇಂಟೀರಿಯರ್

ಹೊಸ ಡ್ಯಾಶ್‌ಬೋರ್ಡ್, ಹೊಸ ಸ್ಟೀರಿಂಗ್ ವೀಲ್ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಹೊಸ ಫ್ಯಾಬ್ರಿಕ್‌ಗಳನ್ನು ಬಳಸುವುದರೊಂದಿಗೆ ಇಂಟಿರೀಯರ್‌ನ ವಿನ್ಯಾಸವು ವಿಭಿನ್ನವಾಗಿದೆ. Z/Z+ ವೇರಿಯೆಂಟ್‌ಗಳಲ್ಲಿ, 2022ರ ಬ್ರೆಝಾ ಚಾಕೊಲೇಟ್ ಬ್ರೌನ್‌ ಮತ್ತು ಬ್ಲ್ಯಾಕ್‌ ಕಲರ್‌ನೊಂದಿಗೆ ಡ್ಯುಯಲ್‌-ಟೋನ್‌ನ ಇಂಟಿರೀಯರ್‌ನ್ನು ಪಡೆಯುತ್ತದೆ, ಅದು ಚೆನ್ನಾಗಿ ಕಾಣುತ್ತದೆ ಮತ್ತು ಡ್ಯಾಶ್‌ಟಾಪ್ ಮತ್ತು ಹೊಸ AC ಕನ್ಸೋಲ್‌ನಂತಹ ಬಿಟ್‌ಗಳು ಹೆಚ್ಚು ಪ್ರೀಮಿಯಂ ಅದ ಅನುಭವವನ್ನು ನೀಡುತ್ತದೆ.

ಆದಾಗಿಯೂ, ವಿಶಾಲವಾಗಿ ಹೇಳುವುದಾದರೆ ಇಂಟಿರೀಯರ್‌ನ ಗುಣಮಟ್ಟವು ಯಾವುದೇ ಬೆಂಚ್‌ಮಾರ್ಕ್‌ನ್ನು ಸೆಟ್‌ ಮಾಡಿಲ್ಲ. ಕ್ರ್ಯಾಶ್ ಪ್ಯಾಡ್ ಪ್ಲ್ಯಾಸ್ಟಿಕ್‌ಗಳು ಸ್ಕ್ರಾಚಿಯಾಗಿವೆ, ಗ್ಲೋವ್‌ಬಾಕ್ಸ್ ನಮ್ಮ ಎರಡೂ ಪರೀಕ್ಷಾ ಕಾರುಗಳಲ್ಲಿ ಅಷ್ಟೇನು ಉತ್ತಮವಾಗಿರಲಿಲ್ಲ ಮತ್ತು ಸನ್‌ರೂಫ್ ನೆರಳು ಕೂಡ ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಈ ಸೆಗ್ಮೆಂಟ್‌ನಲ್ಲಿ ಈಗ ಬ್ರೆಝಾ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವುದನ್ನು ಗಮನಿಸುವಾಗ, ಕ್ಯಾಬಿನ್ ನನ್ನು ಇನ್ನಷ್ಟು ಶ್ರೀಮಂತಗೊಳಿಸಬಹುದಿತ್ತು.  ದುಃಖಕರವೆಂದರೆ, ಇದರ ಅಂಶಗಳನ್ನು ಕಿಯಾ ಸೋನೆಟ್‌ಗೆ ಹೋಲಿಸಿದರೆ, ಇದರಲ್ಲಿ ಹಲವು ವೈಶಿಷ್ಟ್ಯಗಳ ಕೊರತೆ ಎದ್ದು ಕಾಣುತ್ತದೆ.

ವೈಶಿಷ್ಟ್ಯಗಳು

ಹೊಸ ಬ್ರೆಜ್ಜಾದ ಪ್ರಮುಖ ಅಂಶವೆಂದರೆ ಅದರ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದ ಪ್ಯಾಕೇಜ್. ಹೊಸ ವೈಶಿಷ್ಟ್ಯಗಳು 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದ್ದು ಅದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ* ಗೆ ಸಪೋರ್ಟ್‌ ಆಗುತ್ತದೆ. ಸ್ಕ್ರೀನ್‌ ಲೇಔಟ್ ಹಲವು ಡೇಟಾಗಳನ್ನು ಒಳಗೊಂಡಿರುತ್ತದೆ ಮತ್ತು ಆದರೆ ದೊಡ್ಡ ಫಾಂಟ್‌ಗಳು ಮತ್ತು ವಿಜೆಟ್ ಗಾತ್ರಗಳೊಂದಿಗೆ ನ್ಯಾವಿಗೇಟ್ ಮಾಡಲು ತುಂಬಾ ಸುಲಭವಾಗಿದೆ. ಪ್ರದರ್ಶಿಸಲಾದ ಡೇಟಾವನ್ನು ನಿಮ್ಮ ಆದ್ಯತೆಗೆ ಅನುಗುಣವಾಗಿ ತಿರುಗಿಸಬಹುದು ಮತ್ತು ಸಿಸ್ಟಮ್ ಸ್ಪಂದಿಸುವ ರೀತಿ ಬಳಸಲು ತುಂಬಾ ನಯವಾಗಿದೆ.

*ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್ಪ್ಲೇ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಪ್ರಸ್ತುತ ಅದನ್ನು ಸಕ್ರಿಯಗೊಳಿಸಲಾಗಿಲ್ಲ. 

ಬಲೆನೋದಂತೆ, ಬ್ರೆಜ್ಜಾ ಸಹ ನಿಮಗೆ ಡಿಜಿಟಲ್ ಸ್ಪೀಡೋಮೀಟರ್, ಟ್ಯಾಕೋಮೀಟರ್, ಗೇರ್ ಇಂಡಿಕೇಟರ್, ಕ್ರೂಸ್ ಕಂಟ್ರೋಲ್ ಡಿಸ್ಪ್ಲೇ ಮತ್ತು ಡೋರ್ ಅಜರ್ ವಾರ್ನಿಂಗ್‌ನಂತಹ ಕಾರ್ ಆಲರ್ಟ್‌ಗಳ ಮಾಹಿತಿಯನ್ನು ನೀಡುವ ಹೆಡ್ಸ್-ಅಪ್ ಡಿಸ್ಪ್ಲೇಯನ್ನು ಪಡೆಯುತ್ತದೆ.

ಇತರ ವೈಶಿಷ್ಟ್ಯಗಳೆಂದರೆ ಕಲರ್ MID (ಮಲ್ಟಿ-ಇಂಫೊರ್ಮೆಶನ್‌ ಡಿಸ್‌ಪ್ಲೇ), ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್‌ನಲ್ಲಿ ಎತ್ತರ ಮತ್ತು ಹತ್ತಿರ ಹೊಂದಾಣಿಕೆ, ನೀಲಿ ಆಂಬಿಯೆಂಟ್ ಲೈಟಿಂಗ್, ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ ಸ್ಮಾರ್ಟ್-ಕೀ ಮತ್ತು ಮಾರುತಿ ಸುಜುಕಿಯಲ್ಲಿ ಮೊದಲನೆಯ ಬಾರಿಗೆ ಇದರಲ್ಲಿ ಸನ್‌ರೂಫ್‌ನ್ನು ನೀಡಲಾಗುತ್ತಿದೆ. ಅಂತಿಮವಾಗಿ, ರಿಮೋಟ್ AC ಕಂಟ್ರೋಲ್ (ಆಟೋಮ್ಯಾಟಿಕ್‌), ಅಪಾಯದ ಬೆಳಕಿನ ಕಂಟ್ರೋಲ್‌, ಕಾರ್ ಟ್ರ್ಯಾಕಿಂಗ್, ಜಿಯೋ-ಫೆನ್ಸಿಂಗ್ ಮತ್ತು ಹೆಚ್ಚಿನದಕ್ಕೆ ಸಪೋರ್ಟ್‌ ಆಗುವ ಕನೆಕ್ಟೆಡ್‌ ಕಾರ್ ಟೆಕ್ ಸೂಟ್ ಇದೆ. ಬ್ರೆಝಾವು ಕಿಯಾ ಸೋನೆಟ್‌ನಂತಹ ವೆಂಟಿಲೇಟೆಡ್‌ ಸೀಟ್‌ಗಳನ್ನು ಪಡೆಯುವುದಿಲ್ಲ ಮತ್ತು ಲೆಥೆರೆಟ್ ಸೀಟ್ ಅಪ್ಹೋಲ್‌ಸ್ಟರಿಯನ್ನು ಸಹ ಇದರಲ್ಲಿ ಮಿಸ್‌ ಆಗಿದೆ. 

ಹಿಂದಿನ ಸೀಟ್

ಬ್ರೆಜ್ಜಾದ ಶ್ಲಾಘನೀಯ ಸಂಗತಿಗಳೆಂದರೆ, ಆಗತ್ಯವಾಗಿ ಬೇಕಾಗುವ ಅಂಶಗಳನ್ನು ಉಳಿಸಿಕೊಳ್ಳಲಾಗಿದೆ ಮತ್ತು ಸುಧಾರಿಸಲಾಗಿದೆ. 6 ಅಡಿ ಎತ್ತರದ ಡ್ರೈವರ್‌ಗಳಿಗೂ ಸಾಕಾಗುವಷ್ಟು ಮೊಣಕಾಲು ಕೊಠಡಿಯನ್ನು ನೀಡಲಾಗುತ್ತಿದೆ ಮತ್ತು ಹೆಡ್‌ರೂಮ್ ಅದಕ್ಕಿಂತ ಎತ್ತರದ ವ್ಯಕ್ತಿಗೂ ಸಾಕು. ಸರಾಸರಿ ದೇಹಗಾತ್ರ ಹೊಂದಿರುವ ಪ್ರಯಾಣಿಕರಿಗೆ ಇದು ಯಾವಾಗಲೂ ಉತ್ತಮ 5-ಸೀಟರ್‌ ಕಾರು ಆಗಿತ್ತು, ಮತ್ತು ಈಗ ಇನ್ನೂ ಉತ್ತಮವಾಗಿದೆ. ಹಿಂಬದಿಯ ಬ್ಯಾಕ್‌ರೆಸ್ಟ್‌ ಅಗಲವಿರುವುದರಿಂದ ಪ್ರಯಾಣಿಕರಿಗೆ ಆರಾಮವಾಗಿದೆ.

ಹಿಂಬದಿ ಸೀಟಿನ ಪ್ರಯಾಣಿಕರಿಗೆ ಈಗ ಮೊದಲಿಗಿಂತಲೂ ಹೆಚ್ಚಿನ ಸೌಲಭ್ಯಗಳು ಸಿಗುತ್ತವೆ. ಮುಂಬದಿಯ ಎರಡೂ ಸೀಟ್‌ಬ್ಯಾಕ್‌ಗಳಲ್ಲಿ ಪಾಕೆಟ್‌ಗಳು, ಹಿಂಭಾಗದ ಆರ್ಮ್‌ರೆಸ್ಟ್ ನಲ್ಲಿ ಎರಡು ಕಪ್ ಹೋಲ್ಡರ್‌ಗಳು, ಹಿಂಭಾಗದ AC ವೆಂಟ್‌ಗಳು, ಎರಡು ಅಡ್ಜಸ್ಟ್‌ ಮಾಡಬಹುದಾದ ಹಿಂಬದಿ ಹೆಡ್‌ರೆಸ್ಟ್‌ಗಳು (ಮಧ್ಯದ ಪ್ರಯಾಣಿಕರು ಇದನ್ನು ಪಡೆಯುವುದಿಲ್ಲ) ಮತ್ತು ಎರಡು USB ಫಾಸ್ಟ್ ಚಾರ್ಜರ್‌ಗಳನ್ನು (ಟೈಪ್ A + ಟೈಪ್ C) ನೀಡಲಾಗುತ್ತಿದೆ.

ಪ್ರಾಯೋಗಿಕತೆ

ಡೋರ್ ಪಾಕೆಟ್‌ಗಳಲ್ಲಿ 1-ಲೀಟರ್ ಬಾಟಲಿಗಳು ಮತ್ತು ಕೆಲವು ವಿವಿಧ ವಸ್ತುಗಳನ್ನು ಇಡುವಷ್ಟು ಜಾಗವನ್ನು ಹೊಂದಿದೆ. ಹಾಗೆಯೇ Z+ ವೇರಿಯೆಂಟ್‌ನಲ್ಲಿ ಗ್ಲೋವ್‌ಬಾಕ್ಸ್ ಅನ್ನು ತಂಪಾಗಿಸಲಾಗುತ್ತದೆ ಮತ್ತು ಕಾರ್ ಡಾಕ್ಯುಮೆಂಟ್‌ಗಳು, ಒದ್ದೆಯಾಗಿರುವ ಒರೆಸುವ ಬಟ್ಟೆಗಳು ಮತ್ತು ನೀವು ತಂಪಾಗಿರಲು ಅಗತ್ಯವಿರುವ ಯಾವುದೇ ಔಷಧಿಗಳನ್ನು ಇಟ್ಟುಕೊಳ್ಳಬಹುದು. ಮುಂಭಾಗದ ಆರ್ಮ್‌ರೆಸ್ಟ್‌ನ ಒಳಗೆ ಸ್ಟೋರೆಜ್‌ಗೆ ಸ್ಥಳವಿದೆ, ಆದರೆ ಈ ಸ್ಲೈಡಿಂಗ್ ಆರ್ಮ್‌ರೆಸ್ಟ್ ಅನ್ನು ಟಾಪ್-ಎಂಡ್‌ ಮೊಡೆಲ್‌ ಆಗಿರುವ Z+ ವೆರಿಯೆಂಟ್‌ನಲ್ಲಿ ಮಾತ್ರ ನೀಡಲಾಗುತ್ತದೆ.

ಮತ್ತಷ್ಟು ಓದು

ಸುರಕ್ಷತೆ

ಸುಜುಕಿಯ ಜಾಗತಿಕ TECT ಪ್ಲಾಟ್‌ಫಾರ್ಮ್ ( ಹಾರ್ಟ್‌ಟೆಕ್‌ ಅಲ್ಲ) ಆಧರಿಸಿ, ಜಾಗತಿಕ NCAP 4-ಸ್ಟಾರ್ (ಮಕ್ಕಳ ರಕ್ಷಣೆಗಾಗಿ 5 ಸ್ಟಾರ್) ರೇಟಿಂಗ್‌ ಸಿಕ್ಕಿದ ಕಾರು ಬ್ರೆಝಾ, ಈಗ ಮೊದಲಿಗಿಂತ ಹೆಚ್ಚು ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿದೆ. ಎದುರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ISOFIX, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ESP ಮತ್ತು ಹಿಲ್-ಹೋಲ್ಡ್ ಸ್ಟ್ಯಾಂಡರ್ಡ್‌ ಆಗಿ ಬರುತ್ತವೆ. ಬ್ರೆಝಾದ ಟಾಪ್‌ ಎಂಡ್‌ ಮೊಡೆಲ್‌ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಆಟೋ-ಡಿಮ್ಮಿಂಗ್‌ IRVM ಅನ್ನು ಪಡೆಯುತ್ತದೆ.

ಇದನ್ನೂ ಓದಿ: ಗೊಂದಲಕ್ಕೀಡಾಗಬೇಡಿ! ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಟೊಯೋಟಾದ 2022 ರ ಮಾರುತಿ ಬ್ರೆಜ್ಜಾದ ಆವೃತ್ತಿಯಲ್ಲ 

ವೈಶಿಷ್ಟ್ಯಗಳ ಪಟ್ಟಿಯು ಪ್ರಬಲವಾಗಿದ್ದರೂ, ಕಾರ್ಯಗತಗೊಳಿಸುವಿಕೆಯು ಸರಿಯಾಗಿದೆ ಎಂದು ವರದಿ ಮಾಡಲು ನಮಗೆ ಸಂತೋಷವಾಗುತ್ತದೆ. ಉದಾಹರಣೆಗೆ, ಪಾರ್ಕಿಂಗ್ ಕ್ಯಾಮೆರಾ ಡೈನಾಮಿಕ್ ಮಾರ್ಗಸೂಚಿಗಳನ್ನು ಪಡೆಯುತ್ತದೆ ಮತ್ತು ರೆಸಲ್ಯೂಶನ್ ತೀಕ್ಷ್ಣವಾಗಿರುತ್ತದೆ.

ಮತ್ತಷ್ಟು ಓದು

ಬೂಟ್‌ನ ಸಾಮರ್ಥ್ಯ

ಇದು 328 ಲೀಟರ್‌ನಷ್ಟು ಬೂಟ್‌ ಸ್ಪೇಸ್‌ನ್ನು ಹೊಂದಿದ್ದು, ಈ ಸಂಖ್ಯೆ ನಿಮಗೆ ಬಹಳ ದೊಡ್ಡದು ಅನಿಸದಿರಬಹುದು, ಆದರೆ ಇದರ ಚೌಕಾಕಾರದ ಆಕಾರವು ದೊಡ್ಡ ಸೂಟ್‌ಕೇಸ್‌ಗಳನ್ನು ಇಡಲು ಸಹಾಯ ಮಾಡುತ್ತದೆ. ಸ್ವಚ್ಛಗೊಳಿಸುವ ಬಟ್ಟೆ ಅಥವಾ ಟೈರ್ ರಿಪೇರಿ ಕಿಟ್ ನಂತಹ ಸಣ್ಣ ವಸ್ತುಗಳನ್ನು ಇಡಲು ಬದಿಯಲ್ಲಿ ಸಣ್ಣ ಪಾಕೆಟ್‌ ಇದೆ. ಅದರೆ ಇದರಲ್ಲಿ ಟೈರ್‌ಗೆ ಗಾಳಿ ತುಂಬಿಸುವಂತಹ ಮೆಷಿನ್‌ಗಳನ್ನು ಇಡಲು ಇಲ್ಲಿ ಸಾಧ್ಯವಿಲ್ಲ. ಇದಕ್ಕೆ ಹೆಚ್ಚಿನ ಜಾಗವನ್ನು ಸೇರಿಸಲು ಹಿಂಬದಿಯ ಸೀಟ್‌ಗಳನ್ನು ಎರಡು ಮಾಡಬಹುದು ಅಥವಾ ಒಮ್ಮೆ ನೀವು ಸೀಟ್ ಬೇಸ್ ಅನ್ನು ಮೇಲಕ್ಕೆ ತಿರುಗಿಸಿ ಮತ್ತು ಬ್ಯಾಕ್‌ರೆಸ್ಟ್ ಅನ್ನು ಕೆಳಕ್ಕೆ ಇಳಿಸಿದಾಗ ಸೀಟನ್ನು 60:40 ಅನುಪಾತದಲ್ಲಿ ಮಡಚಬಹುದು.

ಮತ್ತಷ್ಟು ಓದು

ಕಾರ್ಯಕ್ಷಮತೆ

ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ. ಇದು 1.5-ಲೀಟರ್‌, ನಾಲ್ಕು-ಸಿಲಿಂಡರ್ ನ್ಯಾಚುರಲಿ-ಅಸ್ಪಿರೆಟೆಡ್‌ ಎಂಜಿನ್‌ (K15C) ಆಗಿದ್ದು, ಮೈಲ್ಡ್‌-ಹೈಬ್ರಿಡ್ ಸಿಸ್ಟಮ್‌ನಿಂದ ಸಹಾಯ ಮಾಡುತ್ತದೆ. 103PS ಮತ್ತು 137Nm ನಷ್ಟು ಶಕ್ತಿಯನ್ನು ಹೊರಹಾಕಲಿದ್ದು, ಬ್ರೌಷರ್‌ನಲ್ಲಿ ನೀಡಿರುವ ಅದರ ಔಟ್‌ಪುಟ್ ಕೋರ್ಸ್‌ಗೆ ಇದು ಸಮನಾಗಿರುತ್ತದೆ ಮತ್ತು ಇದು ಆನ್‌ ರೋಡ್‌ನ ಕಾರ್ಯಕ್ಷಮತೆಯಲ್ಲೂ ಪ್ರತಿಫಲಿಸುತ್ತದೆ.

ಎಂಜಿನ್  1.5-ಲೀಟರ್, 4 ಸಿಲಿಂಡರ್ ಪೆಟ್ರೋಲ್ ನೊಂದಿಗೆ ಮೈಲ್ಡ್‌ ಹೈಬ್ರಿಡ್‌
ಪವರ್  103 ಪಿಎಸ್‌
ಟಾರ್ಕ್‌  137 ಎನ್‌ಎಮ್‌
ಟ್ರಾನ್ಸ್‌ಮಿಶನ್‌ 5-ಸ್ಪೀಡ್ ಮಾನ್ಯುಯಲ್ | 6-ಸ್ಪೀಡ್ ಆಟೋಮ್ಯಾಟಿಕ್‌
ಘೋಷಿಸಿರುವ ಇಂಧನ-ದಕ್ಷತೆ  ಪ್ರತಿ ಲೀ.ಗೆ 19.89-20.15 ಕಿ.ಮೀ (ಮ್ಯಾನುಯಲ್‌) | ಪ್ರತಿ ಲೀ.ಗೆ 19.80 ಕಿ.ಮೀ (ಆಟೋಮ್ಯಾಟಿಕ್‌)
ಡ್ರೈವ್  ಫ್ರಂಟ್ ವೀಲ್ ಡ್ರೈವ್ 

ಈ ಎಂಜಿನ್ ಬಳಸಲು ತುಂಬಾ ಮೃದುವಾಗಿರುತ್ತದೆ ಮತ್ತು ವೇಗವು ಹೆಚ್ಚಾದಂತೆ ಕಾರ್ಯಕ್ಷಮತೆಯನ್ನು ಹಂತಹಂತವಾಗಿ ಹೆಚ್ಚಿಸಲಾಗುತ್ತದೆ. ಇದು ಸುಲಭವಾಗಿ 60-80kmph ವೇಗವನ್ನು ಪಡೆಯುತ್ತದೆ ಮತ್ತು ಇದು ಶಾಂತವಾದ ಡ್ರೈವಿಂಗ್‌ ಆಗಿರಲಿದೆ. ಸೌಮ್ಯ-ಹೈಬ್ರಿಡ್ ಸಹಾಯದಿಂದಾಗಿ, ನಿಧಾನದ ಡ್ರೈವಿಂಗ್‌ನ ಕಾರ್ಯಕ್ಷಮತೆಯು ಪ್ರಬಲವಾಗಿದೆ. ಇದು ನಗರದಲ್ಲಿನ ಟ್ರಾಫಿಕ್‌ನಲ್ಲಿ ಡ್ರೈವ್‌ ಮಾಡಲು ಅನುಕೂಲಕರವಾಗಿದೆ. ಆದಾಗಿಯೂ, ಅದರ ಟರ್ಬೊ-ಪೆಟ್ರೋಲ್ ಎಂಜಿನ್‌ನ ಜೊತೆಗೆ ಇದನ್ನು ಹೋಲಿಸಿದರೆ, ಈ ಎಂಜಿನ್‌ನ ಕಾರ್ಯಕ್ಷಮತೆಯ ಬಗ್ಗೆ ಅಷ್ಟೇನು ಕುತೂಹಲಕಾರಿ ಅಂಶಗಳಿಲ್ಲ. ಹೈ-ಸ್ಪೀಡ್‌ನ ವೇಗದ ಓವರ್‌ಟೇಕ್‌ಗಳಿಗೆ ಮೊದಲೇ ಯೋಜನೆ ಮಾಡುವ ಅಗತ್ಯವಿರುತ್ತದೆ ಮತ್ತು ಸಾಮಾನ್ಯವಾಗಿ ಗೇರ್‌ನ್ನು ಡೌನ್‌ಶಿಫ್ಟ್ ಮಾಡುವುದು ಸಹ ಅಗತ್ಯವಿರುತ್ತದೆ, ವಿಶೇಷವಾಗಿ ನೀವು ಪ್ರಯಾಣಿಕರನ್ನು ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದರೆ.

ಸ್ಟ್ಯಾಂಡರ್ಡ್ ಆಗಿರುವ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊರತಾಗಿ, ಬ್ರೆಝಾ ಈಗ ಪ್ಯಾಡಲ್-ಶಿಫ್ಟರ್‌ಗಳೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ್ನು ಸಹ ಪಡೆಯುತ್ತದೆ. ಈ ಟ್ರಾನ್ಸ್‌ಮಿಷನ್‌ ಬಳಸಲು ತುಂಬಾ ಅರ್ಥಗರ್ಭಿತವಾಗಿದೆ ಮತ್ತು ನಗರದ ಟ್ರಾಫಿಕ್‌ನಲ್ಲಿ ಅಥವಾ ರಾಷ್ಟ್ರಿಯ ಹೆದ್ದಾರಿಯಲ್ಲಿ ಡ್ರೈವ್‌ ಮಾಡುವಾಗ ಮನೆಯ ಅನುಭವವಾಗುತ್ತದೆ. ಕುತೂಹಲಕಾರಿಯಾಗಿ, ಇದು ಮ್ಯಾನುಯಲ್‌ನಲ್ಲಿ ನೀವು ಇರುವುದಕ್ಕಿಂತ ಹೆಚ್ಚು ಕಾಲ ಗೇರ್‌ಗಳನ್ನು ಹಿಡಿದಿಟ್ಟುಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ ಮತ್ತು ಸ್ಪಂದಿಸುವಿಕೆಯ ಕೊರತೆಯನ್ನು ಅನುಭವಿಸುವುದಿಲ್ಲ. ಇದು ಟ್ವಿನ್-ಕ್ಲಚ್/ಡಿಸಿಟಿಯಂತೆ ತ್ವರಿತವಾಗಿಲ್ಲ, ಆದರೆ ದೂರು ನೀಡಲು ನಿಮಗೆ ಕಾರಣವನ್ನು ನೀಡುವುದಿಲ್ಲ. ಅಗತ್ಯವಿದ್ದರೆ ಇದು ಒಂದೇ ಸಮಯದಲ್ಲಿ ಎರಡು ಗೇರ್‌ಗಳನ್ನು ಬಿಡುತ್ತದೆ ಮತ್ತು ಅದನ್ನು ಮಾಡುವಾಗ ಶಿಫ್ಟ್-ಶಾಕ್ ಅನ್ನು ಚೆನ್ನಾಗಿ ನಿಯಂತ್ರಿಸುತ್ತದೆ.

ಗೇರ್ ಲಿವರ್‌ನೊಂದಿಗೆ ಯಾವುದೇ ಮಾನ್ಯುಯಲ್/ಟಿಪ್ಟ್ರಾನಿಕ್-ಶೈಲಿಯ ಶಿಫ್ಟಿಂಗ್ ಇಲ್ಲದಿರುವುದರಿಂದ ಪ್ಯಾಡಲ್-ಶಿಫ್ಟರ್‌ಗಳು ನೀವು ಹೊಂದಿರುವ ಏಕೈಕ ಮ್ಯಾನುಯಲ್‌ ಕಂಟ್ರೋಲ್‌ ಆಗಿದೆ. ಪ್ಯಾಡಲ್‌ನೊಂದಿಗೆ ಡೌನ್‌ಶಿಫ್ಟ್ ಮಾಡಿ, ಥ್ರೊಟಲ್‌ಗೆ ಹೆಚ್ಚಿನ ಕೆಲಸವನ್ನು ಕೊಟ್ಟಾಗ ಇದು ಗೇರ್‌ನಲ್ಲಿ ಉಳಿಯುತ್ತದೆ. ನೀವು ಗೇರ್‌ ಲಿವರ್ ಅನ್ನು ಮ್ಯಾನುಯಲ್‌ ಮೋಡ್‌ಗೆ ಸ್ಲಾಟ್ ಮಾಡಬಹುದು, ಅಲ್ಲಿ ಗೇರ್‌ ಎಂದಿಗೂ ಆಟೋಮ್ಯಾಟಿಕ್‌ ಆಗಿ ಮೇಲಕ್ಕೆ ಹೋಗುವುದಿಲ್ಲ, ಇದು ವಿಶೇಷವಾಗಿ ಎತ್ತರವನ್ನು ಹತ್ತುವ ಸಮಯದಲ್ಲಿ ಸೂಕ್ತವಾಗಿ ಬಳಕೆಯಾಗುತ್ತದೆ.

ಎರಡೂ ಟ್ರಾನ್ಸ್‌ಮಿಶನ್‌ಗೆ ಪ್ರತಿ ಲೀ.ಗೆ ಸರಿಸುಮಾರು 20 ಕಿ.ಮೀ ನಷ್ಟು ARAI (ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ)- ರೇಟೆಡ್ ಇಂಧನ ದಕ್ಷತೆಯ ಅಂಕಿಅಂಶಗಳು ಆಕರ್ಷಕವಾಗಿವೆ. ಹೆದ್ದಾರಿಯಲ್ಲಿ, ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಚಾಲನಾ ವೆಚ್ಚವು ಗಮನಾರ್ಹವಾಗಿ ಕಡಿಮೆ ಇರುತ್ತದೆ ಎಂದು ಸಾಬೀತುಪಡಿಸಬೇಕಾಗಿದೆ. ಮ್ಯಾನ್ಯುವಲ್ ಟಾಪ್ ಗೇರ್‌ನಲ್ಲಿ 100kmph ವೇಗದಲ್ಲಿ ಸಾಗುವಾಗ rpm ಸುಮಾರು 3000 ದಷ್ಟಿರುತ್ತದೆ. ಈ ಗೇರ್‌ ಮತ್ತು ವೇಗವನ್ನು ಗಮನಿಸುವಾಗ ಇದು ಸ್ವಲ್ಪ ಹೆಚ್ಚು ಎನ್ನಬಹುದು. ಆದರೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಈ ವೇಗವು 2000rpm ಗಿಂತಲೂ ಕಡಿಮೆಯಿರುತ್ತದೆ. ನೀವು ನಗರ ಮತ್ತು ಇಂಟರ್-ಸಿಟಿ ಡ್ರೈವ್‌ಗಳಿಗಾಗಿ ಉತ್ತಮ ಆಲ್‌ರೌಂಡರ್‌ಗಳನ್ನು ನೋಡುತ್ತಿದ್ದರೆ, ನಾವು ಆಟೋಮ್ಯಾಟಿಕ್‌ ನ್ನು ನಿಮಗೆ ಸಲಹೆ ನೀಡುತ್ತೇವೆ.

ಮತ್ತಷ್ಟು ಓದು

ರೈಡ್ ಅಂಡ್ ಹ್ಯಾಂಡಲಿಂಗ್

ಬ್ರೆಝಾವು ಸವಾರಿಯ ಗುಣಮಟ್ಟ ಮತ್ತು ನಿರ್ವಹಣೆಯ ಉತ್ತಮ ಸಮತೋಲನವನ್ನು ನೀಡುತ್ತದೆ. ಎದುರು ಸೀಟಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತೀಕ್ಷ್ಣವಾದ ಉಬ್ಬುಗಳಲ್ಲಿ ಯಾವುದೇ ರೀತಿಯ ಅನುಭವವಾಗುವುದಿಲ್ಲ. ಹಾಗೆಯೇ ಕಾರು ಏರಿಳಿತದ ರಸ್ತೆಗಳಲ್ಲಿಯೂ ಸಹ ಶಾಂತತೆಯನ್ನು ಕಾಯ್ದುಕೊಳ್ಳುತ್ತದೆ ಮತ್ತು ಇದು 100kmph ವೇಗದಲ್ಲಿಯೂ ಸ್ಥಿರವಾಗಿರುತ್ತದೆ. ವಿಟಾರಾ ಬ್ರೆಜ್ಜಾದ ರೈಡ್ ನ ಗುಣಮಟ್ಟವನ್ನು ಆರಂಭದಲ್ಲಿ ಸ್ಪೋರ್ಟಿಯರ್/ಗಟ್ಟಿಯಾಗಿ ನೀಡಲಾಗಿದ್ದರೂ, ಅದು ಈಗ ಹೆಚ್ಚು ಬ್ಯಾಲೆನ್ಸ್‌ ಆಗಿದೆ. 80-100kmph ವೇಗದಲ್ಲಿ ಸಾಗುವಾಗ ಕೆಲವೊಮ್ಮೆ ನಿಮಗೆ ಗಾಳಿಯ ಶಬ್ದವು ಕೇಳಬಹುದು. ಅದರೆ ಬ್ರೆಝಾ ಮೊದಲಿಗಿಂತ ಸ್ವಲ್ಪ ಹೆಚ್ಚು ಶಬ್ದ ನಿರೋಧನವನ್ನು ಹೊಂದಿದೆ.

ಮತ್ತಷ್ಟು ಓದು

ರೂಪಾಂತರಗಳು

 2022 ಮಾರುತಿ ಸುಜುಕಿ ಬ್ರೆಝಾವು LXi, VXi, ZXi ಮತ್ತು ZXi+ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ  ಲಭ್ಯವಿದೆ. ಬೇಸ್‌ ವೇರಿಯೆಂಟ್‌ ಆಗಿರುವ LXi ಯನ್ನು ಹೊರತುಪಡಿಸಿ, ಉಳಿದ ಎಲ್ಲಾ ವೇರಿಯೆಂಟ್‌ಗಳು ಒಪ್ಷನಲ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ನೊಂದಿಗೆ ಲಭ್ಯವಿದೆ. ಯಾವ  ವೇರಿಯೆಂಟ್‌ ನಿಮಗೆ ಸೂಕ್ತವಾಗಿದೆ ಮತ್ತು ಯಾಕೆ ಎಂಬುದರ ಕುರಿತು ವಿವರವಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಓದು

ವರ್ಡಿಕ್ಟ್

ಮಾರುತಿ ಸುಜುಕಿ ಬ್ರೆಝಾ, ಪ್ರಾಯೋಗಿಕತೆ ಮತ್ತು ಸೌಕರ್ಯಗಳ ಬಲವಾದ ಮೂಲಭೂತ ಅಂಶಗಳನ್ನು ನಿರ್ವಹಿಸುತ್ತದೆ. ಆದರೆ ಈಗ ಬಲವಾದ ಟೆಕ್ ಪ್ಯಾಕೇಜ್, ಹೆಚ್ಚಿನ ಸುರಕ್ಷತೆ ವೈಶಿಷ್ಟ್ಯಗಳು ಮತ್ತಷ್ಟು ಉತ್ತಮ ಸ್ವಯಂಚಾಲಿತ ಪ್ರಸರಣವನ್ನು ಹೊಂದಿರಲಿದೆ.ಝೆಡ್ ಮತ್ತು ಝೆಡ್ ಪ್ಲಸ್  ರೂಪಾಂತರಗಳಲ್ಲಿ ಪ್ಯಾಕೇಜಿಂಗ್ ಪ್ರಬಲವಾಗಿದ್ದರೂ, ಇದು ಎಲ್  ಮತ್ತು ವಿ ನಲ್ಲಿಯೂ ಯೋಗ್ಯವಾದ ಮೌಲ್ಯವನ್ನು ನೀಡುತ್ತದೆ. ಆದರೆ ನೀವು ಹೆಚ್ಚಿನ ಬೆಲೆಯನ್ನು ಪರಿಗಣಿಸಿದಾಗ ಅದರಲ್ಲೂ ವಿಶೇಷವಾಗಿ ಉನ್ನತ ರೂಪಾಂತರಗಳಲ್ಲಿ ಪ್ರಮುಖವಾಗಿ ಅದರ ಪ್ರತಿಸ್ಪರ್ಧಿಗಳು ಕಡಿಮೆ ಹಣಕ್ಕೆ  ಪೆಟ್ರೋಲ್ ಮತ್ತು ಡೀಸೆಲ್‌ ಟರ್ಬೋಗಳನ್ನು ವಿತರಿಸಿದಾಗ ಬ್ರೆಝಾ ಉತ್ತಮವಾದ ಆಂತರಿಕ ಗುಣಮಟ್ಟ ಮತ್ತು ಹೆಚ್ಚು ಉತ್ತೇಜಕ ಡ್ರೈವ್ ಆಯ್ಕೆಗಳನ್ನು ನೀಡಬೇಕು. 

ಆದರೆ ಒಟ್ಟಾರೆಯಾಗಿ ಬ್ರೆಝಾ ಈಗ ಒಂದು ಕಾರು ಆಗಿದ್ದು ಅದು ಕುಟುಂಬದಲ್ಲಿ ವಯಸ್ಕರು ಮತ್ತು ಮಕ್ಕಳು ಇಬ್ಬರನ್ನೂ ತೃಪ್ತಿಪಡಿಸುತ್ತದೆ. 

ಮತ್ತಷ್ಟು ಓದು

ಮಾರುತಿ ಬ್ರೆಝಾ

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಅಗಲವಾದ ಹಿಂಭಾಗದ ಸೀಟ್‌ನೊಂದಿಗೆ ವಿಶಾಲವಾದ ಒಳ ವಿನ್ಯಾಸ. ಉತ್ತಮ 5-ಆಸನಗಳು.
  • ಆರಾಮದಾಯಕ ಸವಾರಿ ಗುಣಮಟ್ಟ
  • ಕಾಂಪ್ಯಾಕ್ಟ್ ಆಯಾಮಗಳು ಮತ್ತು ಬೆಳಕಿನ ನಿಯಂತ್ರಣಗಳು ಇದನ್ನು ಉತ್ತಮ ಸಿಟಿ ಕಾರ್ ಅಂತಾ ಹೇಳುತ್ತದೆ.
ಮಾರುತಿ ಬ್ರೆಝಾ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಮಾರುತಿ ಬ್ರೆಝಾ comparison with similar cars

ಮಾರುತಿ ಬ್ರೆಝಾ
Rs.8.69 - 14.14 ಲಕ್ಷ*
ಮಾರುತಿ ಗ್ರಾಂಡ್ ವಿಟರಾ
Rs.11.42 - 20.68 ಲಕ್ಷ*
ಮಾರುತಿ ಫ್ರಾಂಕ್ಸ್‌
Rs.7.52 - 13.04 ಲಕ್ಷ*
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
ಹುಂಡೈ ವೆನ್ಯೂ
Rs.7.94 - 13.62 ಲಕ್ಷ*
ಹುಂಡೈ ಕ್ರೆಟಾ
Rs.11.11 - 20.50 ಲಕ್ಷ*
ಸ್ಕೋಡಾ ಕೈಲಾಕ್‌
Rs.7.89 - 14.40 ಲಕ್ಷ*
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
Rs.7.99 - 15.56 ಲಕ್ಷ*
Rating4.5722 ವಿರ್ಮಶೆಗಳುRating4.5562 ವಿರ್ಮಶೆಗಳುRating4.5599 ವಿರ್ಮಶೆಗಳುRating4.6695 ವಿರ್ಮಶೆಗಳುRating4.4431 ವಿರ್ಮಶೆಗಳುRating4.6387 ವಿರ್ಮಶೆಗಳುRating4.7240 ವಿರ್ಮಶೆಗಳುRating4.5277 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1462 ccEngine1462 cc - 1490 ccEngine998 cc - 1197 ccEngine1199 cc - 1497 ccEngine998 cc - 1493 ccEngine1482 cc - 1497 ccEngine999 ccEngine1197 cc - 1498 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power86.63 - 101.64 ಬಿಹೆಚ್ ಪಿPower87 - 101.64 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower99 - 118.27 ಬಿಹೆಚ್ ಪಿPower82 - 118 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower114 ಬಿಹೆಚ್ ಪಿPower109.96 - 128.73 ಬಿಹೆಚ್ ಪಿ
Mileage17.38 ಗೆ 19.89 ಕೆಎಂಪಿಎಲ್Mileage19.38 ಗೆ 27.97 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage24.2 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage20.6 ಕೆಎಂಪಿಎಲ್
Airbags6Airbags2-6Airbags2-6Airbags6Airbags6Airbags6Airbags6Airbags6
GNCAP Safety Ratings4 Star GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings5 Star
Currently Viewingಬ್ರೆಝಾ vs ಗ್ರಾಂಡ್ ವಿಟರಾಬ್ರೆಝಾ vs ಫ್ರಾಂಕ್ಸ್‌ಬ್ರೆಝಾ vs ನೆಕ್ಸಾನ್‌ಬ್ರೆಝಾ vs ವೆನ್ಯೂಬ್ರೆಝಾ vs ಕ್ರೆಟಾಬ್ರೆಝಾ vs ಕೈಲಾಕ್‌ಬ್ರೆಝಾ vs ಎಕ್ಸ್ ಯುವಿ 3ಎಕ್ಸ್ ಒ
ಇಎಮ್‌ಐ ಆರಂಭ
Your monthly EMI
22,509Edit EMI
48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
View EMI Offers

ಮಾರುತಿ ಬ್ರೆಝಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್

ಮಾರುತಿ ಬ್ರೆಝಾ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (722)
  • Looks (223)
  • Comfort (290)
  • Mileage (233)
  • Engine (100)
  • Interior (110)
  • Space (84)
  • Price (140)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical

ಮಾರುತಿ ಬ್ರೆಝಾ ಮೈಲೇಜ್

ಪೆಟ್ರೋಲ್ ಮೊಡೆಲ್‌ಗಳು 17.38 ಕೆಎಂಪಿಎಲ್ ಗೆ 19.89 ಕೆಎಂಪಿಎಲ್ with manual/automatic ನಡುವೆ ಮೈಲೇಜ್ ರೇಂಜ್‌ ಅನ್ನು ಹೊಂದಿವೆ. ಸಿಎನ್‌ಜಿ ಮೊಡೆಲ್‌ 25.51 ಕಿಮೀ / ಕೆಜಿ ಮೈಲೇಜ್ ಹೊಂದಿದೆ.

ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ ಮೈಲೇಜ್
ಪೆಟ್ರೋಲ್ಮ್ಯಾನುಯಲ್‌19.89 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌19.8 ಕೆಎಂಪಿಎಲ್
ಸಿಎನ್‌ಜಿಮ್ಯಾನುಯಲ್‌25.51 ಕಿಮೀ / ಕೆಜಿ

ಮಾರುತಿ ಬ್ರೆಝಾ ವೀಡಿಯೊಗಳು

ಮಾರುತಿ ಬ್ರೆಝಾ ಬಣ್ಣಗಳು

ಮಾರುತಿ ಬ್ರೆಝಾ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

ಮಾರುತಿ ಬ್ರೆಝಾ ಚಿತ್ರಗಳು

ನಮ್ಮಲ್ಲಿ 35 ಮಾರುತಿ ಬ್ರೆಝಾ ನ ಚಿತ್ರಗಳಿವೆ, ಬ್ರೆಝಾ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

360º ನೋಡಿ of ಮಾರುತಿ ಬ್ರೆಝಾ

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

DevyaniSharma asked on 16 Aug 2024
Q ) How does the Maruti Brezza perform in terms of safety ratings and features?
vikas asked on 10 Jun 2024
Q ) What is the max power of Maruti Brezza?
Anmol asked on 10 Apr 2024
Q ) What is the engine cc of Maruti Brezza?
vikas asked on 24 Mar 2024
Q ) What is the Transmission Type of Maruti Brezza?
Prakash asked on 8 Feb 2024
Q ) What is the max power of Maruti Brezza?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
ನೋಡಿ ಏಪ್ರಿಲ್ offer