Cardekho.com
  • Maruti Grand Vitara
    + 10ಬಣ್ಣಗಳು
  • Maruti Grand Vitara
    + 17ಚಿತ್ರಗಳು
  • Maruti Grand Vitara
  • Maruti Grand Vitara
    ವೀಡಿಯೋಸ್

ಮಾರುತಿ ಗ್ರಾಂಡ್ ವಿಟರಾ

Rs.11.19 - 20.09 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer

ಮಾರುತಿ ಗ್ರಾಂಡ್ ವಿಟರಾ ನ ಪ್ರಮುಖ ಸ್ಪೆಕ್ಸ್

ಇಂಜಿನ್1462 cc - 1490 cc
ground clearance210 mm
ಪವರ್87 - 101.64 ಬಿಹೆಚ್ ಪಿ
torque121.5 Nm - 136.8 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌ / ಎಡಬ್ಲ್ಯುಡಿ
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಗ್ರಾಂಡ್ ವಿಟರಾ ಇತ್ತೀಚಿನ ಅಪ್ಡೇಟ್

  • ಮಾರ್ಚ್ 11, 2025: 2025ರ ಫೆಬ್ರವರಿಯಲ್ಲಿ ಮಾರುತಿಯು ಗ್ರ್ಯಾಂಡ್ ವಿಟಾರಾದ 10,000 ಕ್ಕೂ ಹೆಚ್ಚು ಕಾರುಗಳ ಡೆಲಿವೆರಿಯನ್ನು ನೀಡಿ ಸಾಧನೆ ಮಾಡಿತು. ಆದರೆ, ಜನವರಿಗೆ ಹೋಲಿಸಿದರೆ ಅದರ ತಿಂಗಳಿನಿಂದ ತಿಂಗಳ ಮಾರಾಟವು ಶೇಕಡಾ 32 ರಷ್ಟು ಹಿನ್ನಡೆಯನ್ನು ಕಂಡಿತು.

  • ಮಾರ್ಚ್ 06, 2025: ಮಾರುತಿ ಗ್ರ್ಯಾಂಡ್ ವಿಟಾರಾವು ಮಾರ್ಚ್‌ನಲ್ಲಿ 1.1 ಲಕ್ಷ ರೂ.ಗಳವರೆಗೆ ರಿಯಾಯಿತಿಗಳನ್ನು ಪಡೆಯಿತು. 

  • ಫೆಬ್ರವರಿ 12, 2025: 2025ರ ಜನವರಿಯಲ್ಲಿ 15,000 ಕ್ಕೂ ಹೆಚ್ಚು ಮಾರುತಿ ಗ್ರ್ಯಾಂಡ್ ವಿಟಾರಾ ಮಾರಾಟವಾಗಿದ್ದು, ಜನವರಿಯಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿ ಇದಾಗಿದೆ. 

  • ಜನವರಿ 18, 2025: ಮಾರುತಿ ಕಂಪನಿಯು ಗ್ರ್ಯಾಂಡ್ ವಿಟಾರಾದ ಅಡ್ವೆಂಚರ್ ಕಾನ್ಸೆಪ್ಟ್‌ಅನ್ನು 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.

  • ಎಲ್ಲಾ
  • ಪೆಟ್ರೋಲ್
  • ಸಿಎನ್‌ಜಿ
ಅಗ್ರ ಮಾರಾಟ
ಗ್ರಾಂಡ್ ವಿಟರಾ ಸಿಗ್ಮಾ(ಬೇಸ್ ಮಾಡೆಲ್)1462 cc, ಮ್ಯಾನುಯಲ್‌, ಪೆಟ್ರೋಲ್, 21.11 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
11.19 ಲಕ್ಷ*view ಏಪ್ರಿಲ್ offer
ಗ್ರಾಂಡ್ ವಿಟರಾ ಡೆಲ್ಟಾ1462 cc, ಮ್ಯಾನುಯಲ್‌, ಪೆಟ್ರೋಲ್, 21.11 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ12.30 ಲಕ್ಷ*view ಏಪ್ರಿಲ್ offer
ಅಗ್ರ ಮಾರಾಟ
ಗ್ರಾಂಡ್ ವಿಟರಾ ಡೆಲ್ಟಾ ಸಿಎನ್‌ಜಿ1462 cc, ಮ್ಯಾನುಯಲ್‌, ಸಿಎನ್‌ಜಿ, 26.6 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆ
13.25 ಲಕ್ಷ*view ಏಪ್ರಿಲ್ offer
ಗ್ರಾಂಡ್ ವಿಟರಾ ಡೆಲ್ಟಾ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.58 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ13.70 ಲಕ್ಷ*view ಏಪ್ರಿಲ್ offer
ಗ್ರಾಂಡ್ ವಿಟರಾ ಝೀಟಾ1462 cc, ಮ್ಯಾನುಯಲ್‌, ಪೆಟ್ರೋಲ್, 21.11 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ14.26 ಲಕ್ಷ*view ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಗ್ರಾಂಡ್ ವಿಟರಾ ವಿಮರ್ಶೆ

Overview

ಫಸ್ಟ್ ಲುಕ್ ನಲ್ಲಿ, ಗ್ರ್ಯಾಂಡ್ ವಿಟಾರಾ ಒಂದು ಸಂಪೂರ್ಣ ಫ್ಯಾಮಿಲಿ ಕಾರು ಎಂದು ಎನಿಸಿಕೊಳ್ಳಲು ಎಲ್ಲಾ ಅಂಶಗಳನ್ನು ಹೊಂದಿದೆ ಎಂದು ತೋರುತ್ತದೆ ಆದರೆ ಹೆಚ್ಚು ವಿವರವಾದ ತಪಾಸಣೆ ಮಾಡುವಾಗ, ಇದು ಕುಟುಂಬದ ಎಲ್ಲ ಸದಸ್ಯರ ನಿರೀಕ್ಷೆಗಳನ್ನು ಇದು ಪೂರೈಸಬಹುದೇ?

ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್  ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗುವ ಪ್ರತಿಯೊಂದು ಹೊಸ ಮಾದರಿಯಿಂದಲೂ ನಮ್ಮ ನಿರೀಕ್ಷೆಗಳು ಬೆಳೆಯುತ್ತಲೇ ಇರುತ್ತದೆ. ವಿಶಾಲವಾದ ಮತ್ತು ಉನ್ನತ-ಗ್ರೌಂಡ್-ಕ್ಲಿಯರೆನ್ಸ್ ಹೊಂದಿರುವ ಹಾಗು ಸಿಟಿಗೆ ಸೂಕ್ತವಾದ ಕಾರುಗಳಿಂದ ಇಂದು ನಾವು ಸಮರ್ಥ, ಆರಾಮದಾಯಕ ಮತ್ತು ಪ್ರಾಯೋಗಿಕವಾಗಿರುವಾಗ ಕಲ್ಪಿಸಬಹುದಾದ ಪ್ರತಿಯೊಂದು ವೈಶಿಷ್ಟ್ಯವನ್ನು ಪ್ಯಾಕ್ ಮಾಡಬೇಕೆಂದು ನಾವು ನಿರೀಕ್ಷಿಸುತ್ತೇವೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮಾರುತಿಯಿಂದ ಗ್ರ್ಯಾಂಡ್ ವಿಟಾರಾ ಕೊನೆಯದಾಗಿರುವುದರಿಂದ ಈ ಎಲ್ಲಾ ನಿರೀಕ್ಷೆಗಳನ್ನು ಅಧ್ಯಯನ ಮಾಡಲು ಮಾರುತಿ ಸಾಕಷ್ಟು ಸಮಯವನ್ನು ಪಡೆದಿತ್ತು. ಮತ್ತು ನೀಡಿದ ಅಂಕಿಅಂಶಗಳಲ್ಲಿ ಕನಿಷ್ಠಪಕ್ಷ ಅವರು ಸೂತ್ರವನ್ನು ಸರಿಯಾಗಿ ಪಡೆದುಕೊಂಡಿದ್ದಾರೆ ಎಂದು ತೋರುತ್ತದೆ. ಇದು ವಾಸ್ತವಾಗಿ ಅದನ್ನು ತಲುಪಿಸುತ್ತದೆಯೇ ಎಂದು ಕಂಡುಹಿಡಿಯುವ ಸಮಯ.

ಮತ್ತಷ್ಟು ಓದು

ಎಕ್ಸ್‌ಟೀರಿಯರ್

ಎಸ್‌ಯುವಿಗಳ ಮೇಲೆ ನಾವು ಹೊಂದಿರುವ ನಿರೀಕ್ಷೆಗಳನ್ನು ಗ್ರ್ಯಾಂಡ್ ವಿಟಾರಾ ಪೂರೈಸುತ್ತದೆ. ಮುಂಭಾಗದ ಮುಖವು ದೊಡ್ಡ ಗ್ರಿಲ್ ಮತ್ತು ಕ್ರೋಮ್ ಸರೌಂಡ್‌ನೊಂದಿಗೆ ದಪ್ಪವಾಗಿದೆ. ಎಲ್ಇಡಿ ಡಿಆರ್‌ಎಲ್‌ಗಳನ್ನು ಎತ್ತರದಲ್ಲಿ ಜೋಡಿಸಲಾಗಿದೆ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಹೆಚ್ಚು ಬೆದರಿಸುವ ನೋಟಕ್ಕಾಗಿ ಬಂಪರ್‌ನಲ್ಲಿ ಕೆಳಗಿವೆ. ನೀವು ಸ್ಟ್ರೋಂಗ್‌ ಹೈಬ್ರಿಡ್ ಅನ್ನು ಮೈಲ್ಡ್‌-ಹೈಬ್ರಿಡ್‌ನೊಂದಿಗೆ ಪ್ರತ್ಯೇಕಿಸಿದರೆ, ಎರಡನೆಯದು ಸಿಲ್ವರ್ ಸ್ಕಿಡ್ ಪ್ಲೇಟ್ ಮತ್ತು ಸಾಮಾನ್ಯ ಕ್ರೋಮ್ ಅನ್ನು ಪಡೆಯುತ್ತದೆ, ಇದು ಗನ್‌ಮೆಟಲ್ ಗ್ರೇ ಸ್ಕಿಡ್ ಪ್ಲೇಟ್ ಮತ್ತು ಹಿಂದಿನ ಡಾರ್ಕ್ ಕ್ರೋಮ್‌ಗೆ ವಿರುದ್ಧವಾಗಿರುತ್ತದೆ.

ಸೈಡ್‌ನಿಂದ ನೋಡುವಾಗ, ಗ್ರ್ಯಾಂಡ್ ವಿಟಾರಾ ಈ ಸೆಗ್ಮೆಂಟ್‌ನಲ್ಲಿ ಅತಿ ಉದ್ದದ ಕಾರು ಎಂಬುವುದನ್ನು ತೋರಿಸುತ್ತದೆ. ಇಳಿಜಾರಿನ ರೂಫ್‌ಲೈನ್‌ ಮತ್ತು ಗಾತ್ರವು ಸ್ಪೋರ್ಟಿಯಾಗಿ ಕಾಣಲು ಸಹಾಯ ಮಾಡುತ್ತದೆ ಮತ್ತು 17-ಇಂಚಿನ ಅಲಾಯ್‌ ವೀಲ್‌ಗಳು ಉತ್ತಮ ಪ್ರಮಾಣದಲ್ಲಿ ಕಾಣುತ್ತವೆ. ಇದು ಬೆಲ್ಟ್‌ಲೈನ್‌ನಲ್ಲಿ ಕ್ರೋಮ್‌ನ ಸೂಕ್ಷ್ಮ ಬಳಕೆಯಾಗಿದೆ. ಈ ಆಂಗಲ್‌ನಿಂದಲೂ, ನೀವು ಮೈಲ್ಡ್‌ ಮತ್ತು ಬಲವಾದ-ಹೈಬ್ರಿಡ್ ನಡುವೆ ವ್ಯತ್ಯಾಸವನ್ನು ಗಮನಿಸಬಹುದು.  ಏಕೆಂದರೆ ಎರಡನೆಯದು ಶೈನ್‌ ಆಗಿರುವ ಕಪ್ಪು ಹೊದಿಕೆಯನ್ನು ಹೊಂದಿದೆ ಮತ್ತು ಮೊದಲನೆಯದು ಮ್ಯಾಟ್ ಕಪ್ಪು ಬಣ್ಣವನ್ನು ಪಡೆಯುತ್ತದೆ.

ಹಿಂಭಾಗದಲ್ಲಿರುವ ಕನೆಕ್ಟೆಡ್‌ ಟೈಲ್ ಲ್ಯಾಂಪ್‌ಗಳು ರಾತ್ರಿಯ ವೇಳೆ ಎಲ್ಲರ ಗಮನ ಸೆಳೆಯುತ್ತದೆ. ಕಾರ್ನರ್‌ನಲ್ಲಿ ಇರಿಸಲಾದ ಇತರ ಲೈಟ್‌ಗಳು ಈ ಎಸ್‌ಯುವಿಯನ್ನು ಇನ್ನೂ ಅಗಲವಾಗಿ ಕಾಣಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಗ್ರ್ಯಾಂಡ್ ವಿಟಾರಾ ವಿಭಾಗದಲ್ಲಿ ಉತ್ತಮವಾಗಿ ಕಾಣುವ ಎಸ್‌ಯುವಿಗಳಲ್ಲಿ ಒಂದಾಗಿದೆ ಮತ್ತು ರಸ್ತೆಯಲ್ಲಿ ಉತ್ತಮ ಲುಕ್‌ ಹೊಂದಿದೆ. 

ಮತ್ತಷ್ಟು ಓದು

ಇಂಟೀರಿಯರ್

ದಶಕಗಳ ಕಾಲ ಬಜೆಟ್-ಸ್ನೇಹಿ ಕಾರುಗಳನ್ನು ಉತ್ಪಾದಿಸಿರುವ ಮಾರುತಿ ಸಂಸ್ಥೆಯ ಕಾರುಗಳಿಂದ ನಾವೀಗ ಕ್ಯಾಬಿನ್ ನಲ್ಲಿ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ನ್ನು ನಿರೀಕ್ಷಿಸಲು ನಾವು ಪ್ರಾರಂಭಿಸಿದ್ದೇವೆ. ಡ್ಯಾಶ್‌ಬೋರ್ಡ್, ಡೋರ್ ಪ್ಯಾಡ್‌ಗಳು ಮತ್ತು ಸ್ಟೀರಿಂಗ್ ವೀಲ್ ಮೃದು ಟಚ್ ನ ಲೆಥೆರೆಟ್ ಅನ್ನು ಹೊಂದಿದ್ದು,  ಅದು ಸ್ಪರ್ಶಕ್ಕೆ ಪ್ರೀಮಿಯಂ ಆಗಿರುವ ಅನುಭವವನ್ನು ನೀಡುತ್ತದೆ. ಕಾಂಟ್ರಾಸ್ಟ್ ಸ್ಟಿಚಿಂಗ್, ಕ್ವಿಲ್ಟೆಡ್ ಲೆಥೆರೆಟ್ ಸೀಟ್‌ಗಳು ಮತ್ತು ಷಾಂಪೇನ್ ಚಿನ್ನದ ಸಾರವನ್ನು ನೀಡುವ ಮೂಲಕ  ಕಾರುಗಳು ಈಗ ಸಾಕಷ್ಟು ದುಬಾರಿಯಾಗಿದೆ. ಆದಾಗಿಯೂ,  ನಿರ್ಮಾಣದ ಗುಣಮಟ್ಟ ಈ ಇಂಟೀರಿಯರ್ ನ ಉತ್ತಮ ಭಾಗವಾಗಿದೆ. ಎಲ್ಲವೂ ಗಟ್ಟಿಯಾಗಿ ಮತ್ತು ಚೆನ್ನಾಗಿ ಒಟ್ಟುಗೂಡಿಸಲ್ಪಟ್ಟಿದೆ ಮತ್ತು ಒಟ್ಟಾರೆಯಾಗಿ ಗಮನಿಸುವಾಗ, ಇದು ಖಂಡಿತವಾಗಿಯೂ ಮಾರುತಿಯಲ್ಲಿ ಅತ್ಯುತ್ತಮವಾಗಿದೆ. 

ವೈಶಿಷ್ಟ್ಯಗಳನ್ನು ಗಮನಿಸುವಾಗ ಇದರಲ್ಲಿ ಒಳ್ಳೆಯ ಸುದ್ದಿಯೂ ಇದೆ. ಮತ್ತು ವೈಶಿಷ್ಟ್ಯಗಳ ಸಂಖ್ಯೆಯಲ್ಲಿ ಮಾತ್ರವಲ್ಲ, ಗುಣಮಟ್ಟ ಮತ್ತು ಉಪಯುಕ್ತತೆಯೂ ಉತ್ತಮವಾಗಿದೆ. ಬಳಸಲು ವಿಳಂಬವಾಗದ ಮತ್ತು ಉತ್ತಮ ಡಿಸ್‌ಪ್ಲೇಯನ್ನು ಹೊಂದಿರುವ  9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನೀವು ಪಡೆಯುತ್ತೀರಿ. ಇದರಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 6-ಸ್ಪೀಕರ್‌ನ ಸೌಂಡ್ ಸಿಸ್ಟಮ್ ಮತ್ತು ಉತ್ತಮ ಅನಿಮೇಷನ್‌ಗಳೊಂದಿಗೆ ಸಾಕಷ್ಟು ವಾಹನದ ಮಾಹಿತಿಯನ್ನು ಒಳಗೊಂಡಿದೆ.

ಈ ಕಾರು ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಅಗಲವಾಗಿ ತೆರೆಯುವ ದೊಡ್ಡದಾದ ಪನೋರಮಿಕ್ ಸನ್‌ರೂಫ್ ಅನ್ನು ಸಹ ಹೊಂದಿದೆ. ವಾಸ್ತವವಾಗಿ, ಇದು ಈ ಸೆಗ್ಮೆಂಟ್‌ನಲ್ಲಿ ವಿಶಾಲವಾಗಿ ತೆರೆಯುವ ಸನ್‌ರೂಫ್ ಆಗಿದೆ. ಆದಾಗಿಯೂ, ಸನ್‌ರೂಫ್ ಪರದೆಯು ಹಗುರವಾಗಿರುತ್ತದೆ ಮತ್ತು ಹೆಚ್ಚಿನ ಶಾಖ ಮತ್ತು ಬೆಳಕನ್ನು ಕಾರ್ಬನ್‌ಗೆ ಅನುಮತಿಸುತ್ತದೆ, ಇದರಿಂದ ಬೇಸಿಗೆಯ ದಿನಗಳಲ್ಲಿ ತೊಂದರೆಯಾಗುತ್ತದೆ.

ಕೆಲವು ಪ್ರೀಮಿಯಂ ವೈಶಿಷ್ಟ್ಯಗಳು ಸ್ಟ್ರಾಂಗ್ ಹೈಬ್ರಿಡ್‌ಗೆ ಮಾತ್ರ ಸೀಮಿತವಾಗಿವೆ. 7-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಸ್ಪಷ್ಟವಾದ ಗ್ರಾಫಿಕ್ಸ್‌ನೊಂದಿಗೆ ಸಾಕಷ್ಟು ಮಾಹಿತಿಯೊಂದಿಗೆ ಬರುತ್ತದೆ. ಹೆಡ್ಸ್-ಅಪ್ ಡಿಸ್‌ಪ್ಲೇಯು ಬ್ಯಾಟರಿಯ ಮಾಹಿತಿ ಮತ್ತು ನ್ಯಾವಿಗೇಷನ್ ಅನ್ನು ಪಡೆಯುತ್ತದೆ ಮತ್ತು ಮುಂಭಾಗದ ಸೀಟುಗಳಲ್ಲಿ ಇರುವ ವೆಂಟಿಲೇಶನ್‌ ಸೌಕರ್ಯ ಬಹಳಷ್ಟು ಶಕ್ತಿಯುತವಾಗಿವೆ. ಈ ಎಲ್ಲಾ ವೈಶಿಷ್ಟ್ಯಗಳನ್ನು ಮೈಲ್ಡ್‌-ಹೈಬ್ರಿಡ್‌ನ ಟಾಪ್ ವೇರಿಯೆಂಟ್‌ನಲ್ಲಿ ಸೇರಿಸಿರಬೇಕು.

ಆದಾಗಿಯೂ, ಕ್ಯಾಬಿನ್ ಪ್ರಾಯೋಗಿಕತೆಯು ಇನ್ನೂ ಉತ್ತಮವಾಗಿರಬಹುದಿತ್ತು. ಗ್ರ್ಯಾಂಡ್ ವಿಟಾರಾ ಎರಡು ಕಪ್ ಹೋಲ್ಡರ್‌ಗಳು, ಅಂಡರ್ ಆರ್ಮ್‌ರೆಸ್ಟ್ ಸ್ಟೋರೇಜ್ ಮತ್ತು ದೊಡ್ಡ ಡೋರ್ ಪಾಕೆಟ್‌ಗಳೊಂದಿಗೆ ಎಲ್ಲಾ ಬೇಸಿಕ್‌ ಅಂಶಗಳನ್ನು ಸರಿಯಾಗಿ ಒಳಗೊಂಡಿದೆ. ಆದಾಗಿಯೂ ಸೆಂಟರ್ ಕನ್ಸೋಲ್, ವೈರ್‌ಲೆಸ್ ಚಾರ್ಜರ್ ಅನ್ನು ಮಾತ್ರ ಪಡೆಯುತ್ತದೆ ಮತ್ತು ಈಗ ಪ್ರತ್ಯೇಕ ಮೊಬೈಲ್ ಸ್ಟೋರೆಜ್‌ನ್ನು ಹೊಂದಿದೆ. ಜೊತೆಗೆ, ಕೇವಲ ಒಂದು ಯುಎಸ್‌ಬಿ ಪೋರ್ಟ್ ಮತ್ತು ಚಾರ್ಜ್ ಮಾಡಲು 12 ವ್ಯಾಟ್‌ನ ಸಾಕೆಟ್ ನ ಹೊಂದಿದೆ. ಅದಾರೆ ಈ ಕಾಲದಲ್ಲಿ ಬಲು ಅಗತ್ಯವಿರುವ ಟೈಪ್-ಸಿ ಇಲ್ಲಿ ಕಣ್ಮರೆಯಾಗಿದೆ. 

ಹಿಂಭಾಗದಲ್ಲಿರುವ ದೊಡ್ಡ ಆಸನಗಳು ಸಹ ನಿಮಗೆ ಆರಾಮದಾಯಕವಾದ ಅನುಭವವನ್ನು ನೀಡುತ್ತದೆ. ರಿಕ್ಲೈನ್ ನ ಆಂಗಲ್‌ ಆರಾಮದಾಯಕವಾಗಿದೆ ಮತ್ತು ಸೀಟ್ ಬೇಸ್ ಕೋನವು ನಿಮ್ಮನ್ನು ಒಳಗೊಳ್ಳುವಂತೆ ಮಾಡುತ್ತದೆ. ಮತ್ತು ಲೆಗ್‌ರೂಮ್ ಮತ್ತು ಮೊಣಕಾಲು ಇಡಲು ಸಾಕಷ್ಟು ಜಾಗ ಇದ್ದರೂ, ಆರು ಆಡಿ ಎತ್ತರದವರಿಗೆ ಹೆಡ್‌ರೂಮ್ ಸ್ವಲ್ಪ ಕಿರಿದಾಗಿರುತ್ತದೆ. ಇದರಲ್ಲಿ ಮೂವರು ಪ್ರಯಾಣಿಕರು ಕುಳಿತುಕೊಳ್ಳಬಹುದಾದರೂ, ಇದು ಸಣ್ಣ ಪ್ರಯಾಣಗಳಿಗೆ ಮಾತ್ರ ಆರಾಮದಾಯಕವಾಗಿರುತ್ತದೆ.

ಹಿಂಬದಿಯ ಪ್ರಯಾಣಿಕರಿಗೆ ಸಹ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡುವ ಮೂಲಕ ಉತ್ತಮವಾಗಿ ಸತ್ಕರಿಸಲಾಗಿದೆ. ಅವುಗಳಲ್ಲಿ ಬ್ಲೋವರ್ ನಿಯಂತ್ರಣದೊಂದಿಗೆ ಎಸಿ ವೆಂಟ್‌ಗಳು, ಫೋನ್ ಹೋಲ್ಡರ್, ಸೀಟ್ ಬ್ಯಾಕ್ ಪಾಕೆಟ್‌ಗಳು, ಕಪ್‌ಹೋಲ್ಡರ್‌ಗಳೊಂದಿಗೆ ಆರ್ಮ್‌ರೆಸ್ಟ್, ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳು ಮತ್ತು 2-ಹಂತದ ಒರಗಿರುವ ಬ್ಯಾಕ್‌ರೆಸ್ಟ್ ಗಳನ್ನು ಒಳಗೊಂಡಿದೆ. ಇಲ್ಲಿ ಕಣ್ಮರೆಯಾಗಿರುವ ಏಕೈಕ ವಿಷಯವೆಂದರೆ ಕಿಟಕಿಯ ಶೇಡ್‌ಗಳು, ಇದು ನಿಜವಾಗಿಯೂ ಕೇಕ್ ಮೇಲೆ ಐಸ್‌ ಇದ್ದಂತೆ.  

ಮತ್ತಷ್ಟು ಓದು

ಸುರಕ್ಷತೆ

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ನಾಲ್ಕು ಸ್ಟಾರ್‌ಗಳನ್ನು ಗಳಿಸಿದ ಬ್ರೆಜ್ಜಾ ಪ್ಲಾಟ್‌ಫಾರ್ಮ್ ಅನ್ನೇ ಗ್ರ್ಯಾಂಡ್ ವಿಟಾರಾ ಹೊಂದಿದೆ. ಹಾಗಾಗಿ ನಾವು ಗ್ರ್ಯಾಂಡ್ ವಿಟಾರಾದಿಂದ ಕೂಡ ಯಾವುದೇ ಕ್ರ್ಯಾಶ್ ಟೆಸ್ಟ್‌ನಲ್ಲಿ ಕನಿಷ್ಠ ನಾಲ್ಕು ಸ್ಟಾರ್‌ಗಳನ್ನು ನಿರೀಕ್ಷಿಸುತ್ತೇವೆ. ಜೊತೆಗೆ, ನೀವು ಇದರಲ್ಲಿ ಆರು ಏರ್‌ಬ್ಯಾಗ್‌ಗಳು, 360 ಡಿಗ್ರಿ ವ್ಯೂ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳನ್ನು ಪಡೆಯುತ್ತೀರಿ.

ಮತ್ತಷ್ಟು ಓದು

ಬೂಟ್‌ನ ಸಾಮರ್ಥ್ಯ

ಮಾರುತಿಯು ಬೂಟ್ ಸ್ಪೇಸ್ ಅಂಕಿಅಂಶಗಳನ್ನು ಬಹಿರಂಗಪಡಿಸದಿದ್ದರೂ, ಮೈಲ್ಡ್-ಹೈಬ್ರಿಡ್ ಎಸ್‌ಯುವಿಯಲ್ಲಿ ದೊಡ್ಡ ಸೂಟ್‌ಕೇಸ್‌ಗಳನ್ನು ಸುಲಭವಾಗಿ ಇಡಬಹುದು. ಹಾಗೆಯೇ ಹಿಂದಿನ ಸೀಟನ್ನು ಮಡಿಸಿದಾಗ ಮತ್ತಷ್ಟು ವಿಶಾಲವಾದ  ಜಾಗವನ್ನು ನಾವು ಪಡೆಯಬಹುದು. ಆದಾಗಿಯೂ, ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಬ್ಯಾಟರಿಯನ್ನು ಹೊಂದಿರುವ ಕಾರಣ ಬೂಟ್‌ನ್ನು ಮರೆಮಾಡುತ್ತದೆ ಮತ್ತು ಅದು ಬಹಳಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಬ್ಯಾಟರಿಯ ಕಾರಣದಿಂದಾಗಿ, ನೀವು ಸಣ್ಣ ಸೂಟ್‌ಕೇಸ್‌ಗಳನ್ನಷ್ಟೇ ಇರಿಸಬಹುದು ಮತ್ತು ದೊಡ್ಡ ವಸ್ತುಗಳಿಗೆ ಹೆಚ್ಚಿನ ಖಾಲಿ ಜಾಗವನ್ನು ಪಡೆಯುವುದಿಲ್ಲ.

ಮತ್ತಷ್ಟು ಓದು

ಕಾರ್ಯಕ್ಷಮತೆ

ಗ್ರ್ಯಾಂಡ್ ವಿಟಾರಾ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೈಲ್ಡ್‌-ಹೈಬ್ರಿಡ್ ಸಿಸ್ಟಮ್‌ನೊಂದಿಗೆ 103.06ಪಿಎಸ್‌ / 136.8 ಎನ್‌ಎಮ್‌ ನಷ್ಟು ಶಕ್ತಿಯನ್ನು ಉತ್ಪಾದಿಸುವ 1.5 ಲೀ.ನ ಪೆಟ್ರೋಲ್ ಎಂಜಿನ್‌ ಅತ್ಯಂತ ಜನಪ್ರಿಯವಾಗಿದೆ. ಅಲ್ಲದೆ, ಮ್ಯಾನುಯಲ್‌ ನೊಂದಿಗೆ, ನೀವು ಸುಜುಕಿಯ AllGrip ಆಲ್‌ ವೀಲ್‌ ಡ್ರೈವ್‌ ವ್ಯವಸ್ಥೆಯನ್ನು ಪಡೆಯಬಹುದು. ಇನ್ನೊಂದು ಎಲ್ಲಾ ರೀತಿಯಲ್ಲಿಯೂ ಹೊಸತನವನ್ನು ಹೊಂದಿರುವ ಸ್ಟ್ರಾಂಗ್-ಹೈಬ್ರಿಡ್ ಆಗಿದೆ.

ಮೈಲ್ಡ್‌-ಹೈಬ್ರಿಡ್

ಇಲ್ಲಿ ಮಾರುತಿಯು ಹೆಚ್ಚಿನ ಗಮನವನ್ನು ಸಾಧ್ಯವಾದಷ್ಟು ಮೈಲೇಜ್ ಅನ್ನು ಪಡೆಯುವ ಮೇಲೆಯೇ ಕೇಂದ್ರಿಕರಿಸಿದೆ.  ಮತ್ತು ಮೈಲೇಜ್‌ನ ಕುರಿತು ಘೋಷಿಸಿರುವ ಅಂಕಿಅಂಶಗಳು ಹೀಗಿವೆ, ಮ್ಯಾನುಯಲ್‌ನಲ್ಲಿ ಪ್ರತಿ ಲೀ.ಗೆ 21.11 ಕಿ.ಮೀ, ಆಟೋಮ್ಯಾಟಿಕ್‌ನಲ್ಲಿ ಪ್ರತಿ ಲೀ.ಗೆ 20.58 ಕಿ.ಮೀ ಮತ್ತು ಆಲ್‌ ವೀಲ್‌ ಡ್ರೈವ್‌ ಮ್ಯಾನುಯಲ್‌ ನಲ್ಲಿ ಪ್ರತಿ ಲೀ.ಗೆ 19.38 ಕಿ.ಮೀ ಯಷ್ಟು ಹೊಂದಿದೆ. ಆದಾಗಿಯೂ, ಇಷ್ಟು ಮೈಲೇಜ್‌ ನ್ನು ಪಡೆಯಲು ಅವರು ಫರ್ಫೊರ್ಮೆನ್ಸ್‌ನಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು. ನಗರಗಳ ಒಳಗೆ ವಿಟಾರಾ ಆರಾಮವಾಗಿ ಚಾಲನೆಯ ಅನುಭವವನ್ನು ನೀಡುತ್ತದೆ ಮತ್ತು ಶಾಂತವಾಗಿ ಪ್ರಯಾಣಿಸಬಹುದು. ವಾಸ್ತವವಾಗಿ, ಪರಿಷ್ಕರಣೆ ಮತ್ತು ಗೇರ್ ಬದಲಾವಣೆಗಳು ಆಕರ್ಷಕವಾಗಿವೆ.

ಆದಾಗಿಯೂ, ತ್ವರಿತವಾಗಿ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಇಲ್ಲದಿರುವುದು ಇದರಲ್ಲಿ ಕಂಡುಬರುವ ಕೊರತೆಯಾಗಿದೆ. ಓವರ್‌ಟೇಕ್‌ ಮಾಡಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತವೆ ಮತ್ತು ವೇಗದ ಚಲನೆಯನ್ನು ಪಡೆಯಲು ನೀವು ಆಗಾಗ್ಗೆ ಸ್ವಲ್ಪ ಥ್ರೊಟಲ್ ಅನ್ನು ಬಳಸಬೇಕಾಗುತ್ತದೆ. ಹೆದ್ದಾರಿಗಳಲ್ಲಿಯು ಸಹ ಇದರಲ್ಲಿ ಶಾಂತವಾಗಿ ಪ್ರಯಾಣಿಸಬಹುದು. ಆದರೆ ಓವರ್‌ಟೇಕ್‌ ಮಾಡಲು ಮುಂಚಿತವಾಗಿ ಪ್ಲಾನಿಂಗ್‌ನ ಅಗತ್ಯವಿದೆ. ಮತ್ತು ಹಾಗೆ ಮಾಡುವಾಗ, ಎಂಜಿನ್ ಹೆಚ್ಚಿನ ಆರ್‌ಪಿಎಮ್‌ಗಳನ್ನು ಬಯಸುತ್ತದೆ ಮತ್ತು ಇದು ಎಂಜಿನ್‌ಗೆ ಒತ್ತಡವನ್ನು ನೀಡುತ್ತದೆ. ಈ ಎಂಜಿನ್ ಶಾಂತವಾದ ಪ್ರಯಾಣಕ್ಕೆ ಉತ್ತಮವಾಗಿದೆ. ಆದರೆ ಈ ವರ್ಗದ ಎಸ್‌ಯುವಿಗಳಲ್ಲಿ ನಾವು ನಿರೀಕ್ಷಿಸುವ ಬಹುಮುಖತೆಯನ್ನು ಈ ಪವರ್‌ಟ್ರೇನ್ ಹೊಂದಿಲ್ಲ.

SUV ನಲ್ಲಿ S ಅನ್ನು(ಸ್ಪೋರ್ಟ್ಸ್‌) ಗಂಭೀರವಾಗಿ ಪರಿಗಣಿಸುವವರಿಗೆ ಈ ಎಂಜಿನ್‌ನಲ್ಲಿ ಆಲ್‌ ವೀಲ್‌ ಡ್ರೈವ್‌  ಸ್ವಾಗತಾರ್ಹ ಸೇರ್ಪಡೆಯಾಗಿದೆ. ಇದು ರಫ್‌ ಆಗಿರುವ ಭೂಪ್ರದೇಶಗಳನ್ನು ಸುಲಭವಾಗಿ ಏರಬಲ್ಲದು ಮತ್ತು ಇಳಿಜಾರು ಪ್ರದೇಶಗಳಲ್ಲಿ   ಪ್ರಭಾವಶಾಲಿಯಾದ ಎಳೆತವನ್ನು ನೀಡುತ್ತದೆ. ಹಾಗೆಯೇ ಕಡಿಮೆ ಅನುಪಾತದ ಗೇರ್ ಮತ್ತು ಬಲವಾದ ಟಾರ್ಕ್‌ ಇದರಲ್ಲಿ ಮಿಸ್‌ ಆಗಿರುವ ಕಾರಣ ಇದು ಸಂಪೂರ್ಣವಾಗಿ ಆಫ್-ರೋಡ್-ಸಾಮರ್ಥ್ಯದ ಎಸ್‌ಯುವಿ ಅಲ್ಲದಿದ್ದರೂ, ಇದು ಟೊಯೋಟಾ ಹೈರೈಡರ್ ಜೊತೆಗೆ ಈ ಸೆಗ್ಮೆಂಟ್‌ನಲ್ಲಿ ಸಮರ್ಥವಾದ ಸ್ಪರ್ಧೆಯನ್ನು ಒಡ್ಡುತ್ತದೆ. 

ಸ್ಟ್ರಾಂಗ್-ಹೈಬ್ರಿಡ್ 

115.56PSನಷ್ಟು ಶಕ್ತಿಯನ್ನು ಉತ್ಪಾದಿಸುವ 1.5 ಲೀ.ನ ಮೂರು-ಸಿಲಿಂಡರ್ ಎಂಜಿನ್ ಜೊತೆಗೆ ಕಾರನ್ನು ಓಡಿಸಲು ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸುವ ಸ್ಟ್ರಾಂಗ್‌-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಗ್ರ್ಯಾಂಡ್ ವಿಟಾರಾ ಬರುತ್ತದೆ. ಇದು ನಗರದಲ್ಲಿ ಪ್ಯೂರ್‌ ಎಲೆಕ್ಟ್ರಿಕ್‌ನಲ್ಲಿ ಓಡಬಲ್ಲದು ಮತ್ತು ಬ್ಯಾಟರಿಗಳು ಸಮರ್ಪಕವಾದ ಚಾರ್ಜ್‌ ಅನ್ನು ನೀಡಿದರೆ ಪ್ಯೂರ್‌ ಎಲೆಕ್ಟ್ರಿಕ್‌ನಲ್ಲಿ 100 ಕಿ.ಮೀ ಯಷ್ಟು ವೇಗದಲ್ಲಿ ಪ್ರಯಾಣಿಸಬಹುದು. ಮತ್ತು ಅವು ಖಾಲಿಯಾದಾಗ, ಅವುಗಳನ್ನು ಚಾರ್ಜ್ ಮಾಡಲು ಮತ್ತು ಎಸ್‌ಯುವಿಗೆ ಶಕ್ತಿ ನೀಡುವ ಕೆಲಸವನ್ನು ಎಸ್‌ಯುವಿಗಳು ಮಾಡಲಿದೆ. ವಿದ್ಯುತ್ ಮೂಲದ ಈ ಪರಿವರ್ತನೆಯು ತಡೆರಹಿತವಾಗಿದೆ ಮತ್ತು ನೀವು ಅದನ್ನು ಸುಲಭವಾಗಿ ಬಳಸಿಕೊಳ್ಳುತ್ತೀರಿ.

ಪ್ಯೂರ್‌ ಇವಿಯ ಡ್ರೈವ್‌ನಲ್ಲಿರುವಾಗ, ಗ್ರ್ಯಾಂಡ್ ವಿಟಾರಾ ತುಂಬಾ ಶಾಂತವಾಗಿರುತ್ತದೆ ಮತ್ತು ಚಾಲನೆ ಮಾಡುವಾಗ ಪ್ರೀಮಿಯಂ ಆದ ಅನುಭವವನ್ನು ನೀಡುತ್ತದೆ. ಓವರ್‌ಟೇಕ್‌ಗಳಿಗೆ ತ್ವರಿತವಾಗಿ ಸ್ಪಂದಿಸಲು ಇದು ಸಾಕಷ್ಟು ಅಂಶಗಳನ್ನು ಹೊಂದಿದೆ ಮತ್ತು ಒಮ್ಮೆ ಎಂಜಿನ್ ಮೋಡ್‌ಗೆ ಬಂದಾಗ ನೀವು ತ್ವರಿತ ಓವರ್‌ಟೇಕ್‌ಗಳನ್ನು ಸಹ ಕಾರ್ಯಗತಗೊಳಿಸಬಹುದು. ಮತ್ತು ಇದು ಸ್ಪೋರ್ಟಿ ಅಥವಾ ಅತ್ಯಾಕರ್ಷಕ ಎಸ್‌ಯುವಿ ಅಲ್ಲದಿದ್ದರೂ, ಚಾಲನೆ ಮಾಡಲು ಇದು ತುಂಬಾ ಶ್ರಮವಿಲ್ಲದಂತೆ ಭಾಸವಾಗುತ್ತದೆ. ಎರಡು ಎಂಜಿನ್‌ಗಳಲ್ಲಿ ಸ್ಟ್ರೋಂಗ್‌-ಹೈಬ್ರಿಡ್ ಖಂಡಿತವಾಗಿಯೂ ಆಯ್ಕೆ ಮಾಡಬಹುದಾದ ಎಸ್‌ಯುವಿ ಆಗಿದೆ.

ಮತ್ತಷ್ಟು ಓದು

ರೈಡ್ ಅಂಡ್ ಹ್ಯಾಂಡಲಿಂಗ್

ಈ ವಿಭಾಗದಲ್ಲಿ ಗ್ರ್ಯಾಂಡ್ ವಿಟಾರಾ ತನ್ನ ಹೆಸರಿಗೆ ತಕ್ಕಂತೆ ಇದೆ. ಗುಂಡಿಯಿಂದ ಮತ್ತು ಉಬ್ಬುಗಳಿಂದ ಕೂಡಿದ ರಸ್ತೆಗಳಲ್ಲಿ ದೀರ್ಘ-ಪ್ರಯಾಣದ ಸಸ್ಪೆನ್ಸನ್‌ ನಿಮ್ಮನ್ನು ಚೆನ್ನಾಗಿ ಪ್ರಯಾಣಿಸುವಂತೆ ಮಾಡುತ್ತದೆ ಮತ್ತು ಗುಂಡಿಗಳು ಮತ್ತು ಹಮ್ಸ್‌ಗಳ ಮೇಲೆ ಪ್ರಯಾಣಿಸುವಾಗ ವಿಶ್ವಾಸವನ್ನು ನೀಡುತ್ತದೆ. ನಗರದಲ್ಲಿ ಪ್ರಯಾಣಿಸುವಾಗ ಇದರಲ್ಲಿರುವ ಸೌಕರ್ಯವನ್ನು ನೀವು ಪ್ರಶಂಸಿಸುತ್ತೀರಿ ಮತ್ತು ಹೆದ್ದಾರಿಯಲ್ಲಿ ಹೋಗುವಾಗ ಸ್ಥಿರತೆ ಇದರ ಹೈಲೈಟ್ ಆಗಿದೆ. ಲಾಂಗ್‌ ಡ್ರೈವ್‌ನಲ್ಲಿ ನೀವು ಮೆಚ್ಚುವಂತಹ ಮತ್ತೊಂದು ಅಂಶವೆಂದರೆ  ಶಾಂತವಾಗಿರುವ ಸಸ್ಪೆನ್ಸನ್‌ ಆಗಿದೆ. ಪ್ರಭಾವಶಾಲಿ ಕ್ಯಾಬಿನ್ ಇನ್ಸುಲೇಷನ್ ಮತ್ತು ಗ್ರ್ಯಾಂಡ್ ವಿಟಾರಾದೊಂದಿಗಿನ ಕ್ಲಬ್ ನಿಜವಾಗಿಯೂ ದೂರವನ್ನು ಸುಲಭವಾಗಿ ಕ್ರಮಿಸುವ ಯಂತ್ರವಾಗುತ್ತದೆ.

ಮತ್ತಷ್ಟು ಓದು

ರೂಪಾಂತರಗಳು

ಮೈಲ್ಡ್‌-ಹೈಬ್ರಿಡ್ ಗ್ರಾಂಡ್ ವಿಟಾರಾ ಸಾಮಾನ್ಯವಾದ 4 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ. ಆಲ್‌ವೀಲ್‌ ಡ್ರೈವ್‌ ಆಲ್ಫಾ ವೇರಿಯೆಂಟ್‌ನಲ್ಲಿ ಮಾತ್ರ ಲಭ್ಯವಿದೆ. ಆದಾಗಿಯೂ, ಸ್ಟ್ರಾಂಗ್-ಹೈಬ್ರಿಡ್ ಎರಡು ವಿಶೇಷ ವೇರಿಯೆಂಟ್‌ ನ್ನು ಹೊಂದಿದೆ. ಅವುಗಳೆಂದರೆ, ಝೀಟಾ + ಮತ್ತು ಆಲ್ಫಾ +.  ಹೆಚ್ಚಿನ ದೊಡ್ಡ ವೈಶಿಷ್ಟ್ಯಗಳು ಆಲ್ಫಾ+ ವೇರಿಯೆಂಟ್‌ನಲ್ಲಿ ಮಾತ್ರ ಲಭ್ಯವಿವೆ.

ಮತ್ತಷ್ಟು ಓದು

ವರ್ಡಿಕ್ಟ್

ಗ್ರ್ಯಾಂಡ್ ವಿಟಾರಾ ಭಾರತೀಯ ಕುಟುಂಬಗಳಿಗೆ ಕೆಲವೇ ಕೆಲವು ರಾಜಿಯೊಂದಿಗೆ ಬಹಳಷ್ಟು ಕೊಡುಗೆಗಳನ್ನು ನೀಡುತ್ತದೆ. ಆದಾಗಿಯೂ, ಆ ಸಣ್ಣ ರಾಜಿಯಲ್ಲಿ ದೊಡ್ಡದೆಂದರೆ ಇದರ ಪರ್ಫೊರ್ಮೆನ್ಸ್‌.  ದೊಡ್ಡದು: ಕಾರ್ಯಕ್ಷಮತೆ. ಮೈಲ್ಡ್‌-ಹೈಬ್ರಿಡ್ ಎಂಜಿನ್ ನಗರದೊಳಗಿನ ಪ್ರಯಾಣಕ್ಕೆ ಮತ್ತು ಶಾಂತವಾದ ಪ್ರಯಾಣಕ್ಕೆ ಮಾತ್ರ ಉತ್ತಮವಾಗಿದೆ ಮತ್ತು ಹೆಚ್ಚಿನದನ್ನು ನಿರೀಕ್ಷಿಸುವವರಿಗೆ ಇದು ಸಮರ್ಪಕವಾಗಿಲ್ಲ. ಇನ್ನೂ ಸ್ಟ್ರೋಂಗ್‌ -ಹೈಬ್ರಿಡ್‌ಗೆ ಸಂಬಂಧಿಸಿದಂತೆ, ಬ್ಯಾಟರಿಯಿಂದಾಗಿ ಕಡಿಮೆ ಬೂಟ್ ಸ್ಪೇಸ್‌ ಹೊಂದಿರುವುದು ಇದಕ್ಕೆ ಹಿನ್ನಡೆ ಉಂಟು ಮಾಡುವ ಅಂಶವಾಗಿದೆ. ಆದರೆ ಈ ಎರಡು ಅಂಶಗಳು ನಿಮಗೆ ದೊಡ್ಡ ಸಂಗತಿಯಲ್ಲದಿದ್ದರೆ, ಗ್ರ್ಯಾಂಡ್ ವಿಟಾರಾ ನಿಜವಾಗಿಯೂ ಎಸ್‌ಯುವಿ ವಿಭಾಗದಲ್ಲಿ ಉತ್ತಮ ಆಯ್ಕೆಯಾಗಿದೆ. ಇದು ವಿಶಾಲವಾದ, ಆರಾಮದಾಯಕ, ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿರುವ, ಪರಿಣಾಮಕಾರಿ ಮತ್ತು ಅತ್ಯಂತ ಇಷ್ಟವಾಗುವ ಫ್ಯಾಮಿಲಿ ಎಸ್‌ಯುವಿ ಆಗಿದೆ. ಆದಾಗಿಯೂ, ಈ ಎರಡು ಎಂಜಿನ್‌ ಗಳ ನಡುವೆ ನಮ್ಮ ಆಯ್ಕೆಯು ಸ್ಟ್ರೋಂಗ್‌-ಹೈಬ್ರಿಡ್ ಗ್ರ್ಯಾಂಡ್ ವಿಟಾರಾ ಆಗಿದ್ದು, ಇದು ಹೆಚ್ಚು ಪ್ರೀಮಿಯಂ ಅನುಭವವನ್ನು ನೀಡುತ್ತದೆ.

ಮತ್ತಷ್ಟು ಓದು

ಮಾರುತಿ ಗ್ರಾಂಡ್ ವಿಟರಾ

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ನೇರವಾದ ಎಸ್‌ಯುವಿ ನಿಲುವನ್ನು ಪಡೆಯುತ್ತದೆ
  • ಎಲ್ಇಡಿ ಲೈಟ್ ನ ಅಂಶಗಳು ಆಧುನಿಕ ಮತ್ತು ಪ್ರೀಮಿಯಂ ಆಗಿ ಕಾಣಲು ಸಹಾಯ ಮಾಡುತ್ತದೆ
  • ಸ್ಟ್ರಾಂಗ್ ಹೈಬ್ರಿಡ್ ವೆರಿಯೇಂಟ್‌ 27.97 ಕಿ.ಮೀ ಗಿಂತಲೂ ಹೆಚ್ಚಿನ ಮೈಲೇಜ್‌ ನೀಡುತ್ತದೆ ಎಂದು ಹೇಳಿಕೊಂಡಿದೆ.
ಮಾರುತಿ ಗ್ರಾಂಡ್ ವಿಟರಾ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಮಾರುತಿ ಗ್ರಾಂಡ್ ವಿಟರಾ comparison with similar cars

ಮಾರುತಿ ಗ್ರಾಂಡ್ ವಿಟರಾ
Rs.11.19 - 20.09 ಲಕ್ಷ*
ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
Rs.11.14 - 19.99 ಲಕ್ಷ*
ಮಾರುತಿ ಬ್ರೆಝಾ
Rs.8.69 - 14.14 ಲಕ್ಷ*
ಹುಂಡೈ ಕ್ರೆಟಾ
Rs.11.11 - 20.50 ಲಕ್ಷ*
ಮಾರುತಿ ಫ್ರಾಂಕ್ಸ್‌
Rs.7.52 - 13.04 ಲಕ್ಷ*
ಕಿಯಾ ಸೆಲ್ಟೋಸ್
Rs.11.13 - 20.51 ಲಕ್ಷ*
ಮಾರುತಿ ಎಕ್ಸ್‌ಎಲ್ 6
Rs.11.71 - 14.77 ಲಕ್ಷ*
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
Rating4.5558 ವಿರ್ಮಶೆಗಳುRating4.4380 ವಿರ್ಮಶೆಗಳುRating4.5719 ವಿರ್ಮಶೆಗಳುRating4.6384 ವಿರ್ಮಶೆಗಳುRating4.5594 ವಿರ್ಮಶೆಗಳುRating4.5418 ವಿರ್ಮಶೆಗಳುRating4.4268 ವಿರ್ಮಶೆಗಳುRating4.6684 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1462 cc - 1490 ccEngine1462 cc - 1490 ccEngine1462 ccEngine1482 cc - 1497 ccEngine998 cc - 1197 ccEngine1482 cc - 1497 ccEngine1462 ccEngine1199 cc - 1497 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿ
Power87 - 101.64 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower99 - 118.27 ಬಿಹೆಚ್ ಪಿ
Mileage19.38 ಗೆ 27.97 ಕೆಎಂಪಿಎಲ್Mileage19.39 ಗೆ 27.97 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage17 ಗೆ 20.7 ಕೆಎಂಪಿಎಲ್Mileage20.27 ಗೆ 20.97 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್
Boot Space373 LitresBoot Space-Boot Space-Boot Space-Boot Space308 LitresBoot Space433 LitresBoot Space-Boot Space382 Litres
Airbags2-6Airbags2-6Airbags6Airbags6Airbags2-6Airbags6Airbags4Airbags6
Currently Viewingಗ್ರಾಂಡ್ ವಿಟರಾ vs ಅರ್ಬನ್ ಕ್ರೂಸರ್ ಹೈ ರೈಡರ್ಗ್ರಾಂಡ್ ವಿಟರಾ vs ಬ್ರೆಝಾಗ್ರಾಂಡ್ ವಿಟರಾ vs ಕ್ರೆಟಾಗ್ರಾಂಡ್ ವಿಟರಾ vs ಫ್ರಾಂಕ್ಸ್‌ಗ್ರಾಂಡ್ ವಿಟರಾ vs ಸೆಲ್ಟೋಸ್ಗ್ರಾಂಡ್ ವಿಟರಾ vs ಎಕ್ಸ್‌ಎಲ್ 6ಗ್ರಾಂಡ್ ವಿಟರಾ vs ನೆಕ್ಸಾನ್‌
ಇಎಮ್‌ಐ ಆರಂಭ
Your monthly EMI
29,462Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
View EMI Offers

ಮಾರುತಿ ಗ್ರಾಂಡ್ ವಿಟರಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್

ಮಾರುತಿ ಗ್ರಾಂಡ್ ವಿಟರಾ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (558)
  • Looks (165)
  • Comfort (212)
  • Mileage (184)
  • Engine (77)
  • Interior (96)
  • Space (54)
  • Price (103)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ

ಮಾರುತಿ ಗ್ರಾಂಡ್ ವಿಟರಾ ಬಣ್ಣಗಳು

ಮಾರುತಿ ಗ್ರಾಂಡ್ ವಿಟರಾ ಚಿತ್ರಗಳು

360º view of ಮಾರುತಿ ಗ್ರಾಂಡ್ ವಿಟರಾ

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

VishwanathDodmani asked on 17 Oct 2024
Q ) How many seat
Tushar asked on 10 Oct 2024
Q ) Base model price
srijan asked on 22 Aug 2024
Q ) What is the ground clearance of Maruti Grand Vitara?
vikas asked on 10 Jun 2024
Q ) What is the max torque of Maruti Grand Vitara?
Anmol asked on 24 Apr 2024
Q ) What is the number of Airbags in Maruti Grand Vitara?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಏಪ್ರಿಲ್ offer