2023 Tata Safari Facelift: ಮೊದಲ ಬಾರಿಗೆ ಕಾರಿನ ಟೀಸರ್ ಅನಾವರಣ, ಅಕ್ಟೋಬರ್ 6ರಿಂದ ಬುಕಿಂಗ್ ಪ್ರಾರಂಭ
ಟಾಟಾ ಸಫಾರಿ ಗಾಗಿ rohit ಮೂಲಕ ಅಕ್ಟೋಬರ್ 05, 2023 03:55 pm ರಂದು ಪ್ರಕಟಿಸಲಾಗಿದೆ
- 93 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಟಾಟಾ ಸಫಾರಿ ಕಾರಿನ ಮಾರಾಟವು 2023ರ ನವೆಂಬರ್ ನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ
- ಮೂರನೇ ತಲೆಮಾರಿನ ಸಫಾರಿಯನ್ನು 2012ರ ಆರಂಭದಲ್ಲಿ ಪರಿಚಯಲಿಸಲಾಗಿದ್ದು, ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗೆ ಒಳಗಾಗಿದೆ.
- ಟಾಟಾ ಸಂಸ್ಥೆಯು ಈ ಪರಿಷ್ಕೃತ SUV ಗೆ ಅಕ್ಟೋಬರ್ 6ರಂದು ಬುಕಿಂಗ್ ಪ್ರಾರಂಭಿಸಲಿದೆ.
- ಸ್ಪ್ಲಿಟ್ LED ಹೆಡ್ ಲೈಟ್ ಗಳು, ಉದ್ದನೆಯ LED DRL, ಮತ್ತು 19 ಇಂಚಿನ ಹೊಸ ಅಲೋಯ್ ವೀಲ್ ಗಳನ್ನು ಪಡೆಯಲಿದೆ.
- ಇದರ ಕ್ಯಾಬಿನ್ ದೊಡ್ಡದಾದ ಟಚ್ ಸ್ಕ್ರೀನ್ ಮತ್ತು ಬ್ಯಾಕ್ ಲಿಟ್ ಟಾಟಾ ಲೋಗೋ ಜೊತೆಗೆ 2 ಸ್ಪೋಕ್ ಸ್ಟೀಯರಿಂಗ್ ವೀಲ್ ಹೊಂದಲಿದೆ.
- ಚಾಲಕನ ಡಿಜಿಟಲ್ ಡಿಸ್ಪ್ಲೇ, ಆರು ಏರ್ ಬ್ಯಾಗ್ ಗಳು ಮತ್ತು ADAS ಮುಂತಾದ ಇತರ ವೈಶಿಷ್ಟ್ಯಗಳು ಇದರಲ್ಲಿರಲಿವೆ.
- ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳೆರಡೂ ಆಯ್ಕೆಗಳಲ್ಲಿ ಇದು ದೊರೆಯಲಿದೆ.
- ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯನ್ನು (ರೂ. 15.85 ಲಕ್ಷದಿಂದ 25.21 ಲಕ್ಷದ ತನಕ, ಎಕ್ಸ್ - ಶೋರೂಂ, ದೆಹಲಿ) ನಿಗದಿಪಡಿಸುವ ಸಾಧ್ಯತೆ ಇದೆ.
ಟಾಟಾ ಸಫಾರಿ ಫೇಸ್ ಲಿಫ್ಟ್ ವಾಹನವು ಸದ್ಯವೇ ಅನಾವರಣಗೊಳ್ಳಲಿದ್ದು, ಟಾಟಾ ಸಂಸ್ಥೆಯು ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಜೊತೆಗೆ ಈ 3 ಸಾಲಿನ SUVಯ ಟೀಸರ್ ಅನ್ನು ಸಹ ಹಂಚಿಕೊಂಡಿದೆ. ಅಲ್ಲದೆ ಈ ಹೊಸ ಸಫಾರಿಯ ಬುಕಿಂಗ್ ಅಕ್ಟೋಬರ್ 6ರಿಂದ ಪ್ರಾರಂಭಗೊಳ್ಳಲಿದೆ.
ಏನೆಲ್ಲ ಗೋಚರಿಸುತ್ತಿದೆ?
ಈ SUVಯ ಮುಂಭಾಗದ ಪ್ರೊಫೈಲ್ ಗೆ ಮಾಡಲಾದ ಕೆಲವು ಬದಲಾವಣೆಗಳ ಕುರಿತು ಈ ಟೀಸರ್ ನಮಗೆ ಒಂದಷ್ಟು ಸುಳಿವನ್ನು ನೀಡುತ್ತದೆ. ಈ ಬದಲಾವಣೆಯು, ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಕಾರಿಗೆ ಮಾಡಲಾದ ಪರಿಷ್ಕರಣೆಗಳನ್ನು ಹೋಲುತ್ತದೆ. ಇನ್ಸರ್ಟ್ ಗಳೊಂದಿಗೆ ಗ್ರಿಲ್ ಗಳು, ನಯವಾದ ಇಂಡಿಕೇಟರ್ ಗಳು, ಬೋನೆಟ್ ನ ಉದ್ದಕ್ಕೂ ಇರುವ ಉದ್ದನೆಯ LED DRL ಪಟ್ಟಿ ಮತ್ತು ಟಾಟಾ ನೆಕ್ಸನ್- ಮತ್ತು ಟಾಟಾ ನೆಕ್ಸನ್ EV ಯಲ್ಲಿ ಇರುವಂತೆಯೇ ಲಂಬಾಂತರವಾಗಿ ಇರುವ ಸ್ಪ್ಲಿಟ್ LED ಹೆಡ್ ಲೈಟ್ ಗಳನ್ನು ಇದು ಹೊಂದಿದೆ.
ಇದರ ಪಕ್ಕದ ಮತ್ತು ಹಿಂದಿನ ಪ್ರೊಫೈಲ್ ಗಳು ಇನ್ನೂ ಕಾಣಸಿಕ್ಕಿಲ್ಲ. ಆದರೆ ಕಾಣಿಸಿಕೊಂಡಿರುವ ಪರೀಕ್ಷಾರ್ಥ ವಾಹನಗಳ ಪ್ರಕಾರ, ಹೊಸ ಸಫಾರಿಯು 19 ಇಂಚಿನಷ್ಟು ದೊಡ್ಡದಾದ ಅಲೋಯ್ ವೀಲ್ ಗಳು, ಡೈನಾಮಿಕ್ ಟರ್ನ್ ಇಂಡಿಕೇಟರ್ ಗಳು ಮತ್ತು ಸಂಪರ್ಕಿತ LED ಟೇಲ್ ಗೇಟ್ ಗಳನ್ನು ಇದು ಹೊಂದಿರಲಿದೆ.
ಇದನ್ನು ಸಹ ನೋಡಿರಿ: 2023 ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಕಾರಿನ ಮೊದಲ ಟೀಸರ್ ಅನಾವರಣ, ಅಕ್ಟೋಬರ್ 6ರಂದು ಬುಕಿಂಗ್ ಪ್ರಾರಂಭ
ಕ್ಯಾಬಿನ್ ನಲ್ಲಿಯೂ ಪರಿಷ್ಕರಣೆ
ಉಲ್ಲೇಖಕ್ಕಾಗಿ ಈಗಿನ ಸಫಾರಿ ಕಾರಿನ ಚಿತ್ರವನ್ನು ಬಳಸಲಾಗಿದೆ
ಈ SUV ಯ ಪರಿಷ್ಕೃತ ಕ್ಯಾಬಿನ್ ಕುರಿತು ಹೆಚ್ಚಿನ ವಿವರಗಳು ಇಲ್ಲಿಯತನಕ ಲಭಿಸದೆ ಇದ್ದರೂ ಆದರೆ ಕ್ಯಾಬಿನ್ ನಲ್ಲಿಯೂ ಬದಲಾವಣೆ ಉಂಟಾಗಲಿದೆ. ಟಾಟಾ ಸಂಸ್ಥೆಯು ಹೊಸ ಸಫಾರಿ ಕಾರಿಗೆ, ಹೊಸ ನೆಕ್ಸನ್ - ನೆಕ್ಸನ್ EV ಎರಡರಲ್ಲಿಯೂ ಇರುವಂತೆ, ಮರುವಿನ್ಯಾಸಗೊಳಿಸಿದ ಡ್ಯಾಶ್ ಬೋರ್ಡ್ ಮತ್ತು ಬ್ಯಾಕ್ ಲಿಟ್ ಟಾಟಾ ಲೋಗೋ ಜೊತೆಗೆ ಹೊಸ 2 ಸ್ಪೋಕ್ ಸ್ಟಿಯರಿಂಗ್ ವೀಲ್ ಮೂಲಕ ಡ್ಯಾಶ್ ಬೋರ್ಡ್ ಗೆ ಬದಲಾವಣೆಯನ್ನು ತಂದಿದೆ.
ಈ ಕಾರು ತಯಾರಕ ಸಂಸ್ಥೆಯು, ಸಫಾರಿ ಮಾದರಿಗೆ ದೊಡ್ಡದಾದ ಟಚ್ ಸ್ಕ್ರೀನ್, ಮೊದಲನೇ ಮತ್ತು ಎರಡನೇ ಸಾಲಿನ ವೆಂಟಿಲೇಟೆಡ್ ಸೀಟುಗಳು (6-ಸೀಟರ್ ಆವೃತ್ತಿಯಲ್ಲಿ ಮಾತ್ರವೇ ಎರಡನೆಯ ಆಯ್ಕೆ ಲಭ್ಯ), ಸಂಪೂರ್ಣ ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ವೈರ್ ಲೆಸ್ ಫೋನ್ ಚಾರ್ಜಿಂಗ್ ಮತ್ತು ಅಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಒದಗಿಸುವ ನಿರೀಕ್ಷೆ ಇದೆl. ಇದರ ಸುರಕ್ಷತಾ ಪಟ್ಟಿಯಲ್ಲಿ ಆರು ಏರ್ ಬ್ಯಾಗ್ ಗಳು, 360 ಡಿಗ್ರಿ ಕ್ಯಾಮರಾ, ISOFIX ಆಂಕರ್ ಪಾಯಿಂಟುಗಳು, ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಗಳನ್ನು ಒಳಗೊಂಡಿದೆ.
ಹುಡ್ ಒಳಗಡೆ ಹೇಗಿರಲಿದೆ?
ಟಾಟಾ ಸಂಸ್ಥೆಯು ತನ್ನ ಮುಂಚೂಣಿಯ 3 ಸಾಲುಗಳ SUV ಗೆ, 6 ಸ್ಪೀಡ್ ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಅದೇ 2-ಲೀಟರ್ ಡೀಸೆಲ್ ಎಂಜಿನ್ (170PS/350Nm) ಅನ್ನು ಒದಗಿಸಲಿದೆ. ಇದು ಮ್ಯಾನುವಲ್ ಮತ್ತು DCT ಆಯ್ಕೆಗಳೊಂದಿಗೆ, 170PS ಮತ್ತು 280Nm ಉಂಟು ಮಾಡುವ, ಟಾಟಾದ ಹೊಸ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ.
ಇದನ್ನು ಸಹ ಓದಿರಿ: 360 ಡಿಗ್ರಿ ಕ್ಯಾಮರಾ ಹೊಂದಿರುವ 10 ಅಗ್ಗದ ಕಾರುಗಳು: ಮಾರುತಿ ಬಲೇನೊ, ಟಾಟಾ ನೆಕ್ಸನ್, ಕಿಯಾ ಸೆಲ್ಟೊಸ್, ಮತ್ತು ಇತರ ಕಾರುಗಳು
ಬೆಲೆ ಮತ್ತು ಸ್ಪರ್ಧೆ
ಪರಿಷ್ಕೃತ ಸಫಾರಿ ಕಾರು ನವೆಂಬರ್ ತಿಂಗಳ ಸುಮಾರಿಗೆ ಶೋರೂಂಗಳಿಗೆ ಲಗ್ಗೆ ಇಡಲಿದೆ. ಇದಕ್ಕೆ ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯನ್ನು (ರೂ. 15.85 ಲಕ್ಷದಿಂದ 25.21 ಲಕ್ಷದ ತನಕ, ಎಕ್ಸ್ - ಶೋರೂಂ, ದೆಹಲಿ) ನಿಗದಿಪಡಿಸುವ ಸಾಧ್ಯತೆ ಇದೆ. ಹೊಸ ಸಫಾರಿ ಕಾರು MG ಹೆಕ್ಟರ್ ಪ್ಲಸ್, ಮಹೀಂದ್ರಾ XUV700 ಮತ್ತು ಹ್ಯುಂಡೈ ಅಲ್ಕಜಾರ್ ಇತ್ಯಾದಿ ಕಾರುಗಳ ಜೊತೆಗಿನ ಸ್ಪರ್ಧೆಗೆ ಮರುಜೀವ ನೀಡಲಿದೆ.
0 out of 0 found this helpful