ಅಚ್ಚರಿಯ ಸುದ್ದಿ; ಆಸ್ಟ್ರೇಲಿಯಾದ NCAP ಕ್ರ್ಯಾಶ್ ಟೆಸ್ಟ್ ನಲ್ಲಿ Mahindra Scorpio N ಕಾರಿಗೆ 0 ಸ್ಟಾರ್ ಪ್ರಾಪ್ತಿ
ಇದೇ ಮಹೀಂದ್ರಾ ಸ್ಕಾರ್ಪಿಯೊ N ಗ್ಲೋಬಲ್ NCAP ನಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಗಳಿಸಿದೆ
ಮಹೀಂದ್ರಾ ಸ್ಕೋರ್ಪಿಯೊ N ಕಾರು 2022ರ ಕೊನೆಗೆ ಗ್ಲೋಬಲ್ NCAP ನಿಂದ 5 ಸ್ಟಾರ್ ಸುರಕ್ಷಾ ರೇಟಿಂಗ್ ಪಡೆದುದು ಸಾಕಷ್ಟು ಸುದ್ದಿಯಾಗಿತ್ತು. ಮೂರು ಸಾಲುಗಳ ಈ SUV ಯನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈಗ ಸ್ಕೋರ್ಪಿಯೊ N ಅನ್ನು ಆಸ್ಟ್ರೇಲಿಯನ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (ANCAP) ಅಡಿಯಲ್ಲಿ ಕ್ರ್ಯಾಶ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಅಚ್ಚರಿಯ ವಿಷಯವೆಂದರೆ ಇದಕ್ಕೆ ಕೇವಲ 0 ಸ್ಟಾರ್ ಸುರಕ್ಷತಾ ರೇಟಿಂಗ್ ದೊರೆತಿದೆ. ಈ ಮಹೀಂದ್ರಾ SUV ಯು ಹೇಗೆ ಸಾಧನೆ ಮಾಡಿದೆ ಎಂಬುದನ್ನು ನೋಡುವುದಕ್ಕಾಗಿ ಕ್ರ್ಯಾಶ್ ಟೆಸ್ಟ್ ನ ವಿವರಗಳತ್ತ ಬೆಳಕು ಹರಿಸೋಣ.
ಅಡಲ್ಟ್ ಒಕ್ಯುಪೆಂಟ್ಸ್ ಪ್ರೊಟೆಕ್ಷನ್: ಮಿಶ್ರ ಫಲಿತಾಂಶ
ಅಡಲ್ಟ್ ಒಕ್ಯುಪೆಂಟ್ಸ್ ಪ್ರೊಟೆಕ್ಷನ್ ವಿಭಾಗದಲ್ಲಿ ಮಹೀಂದ್ರಾ ಸ್ಕೋರ್ಪಿಯೊ N ವಾಹನವು 40ರಲ್ಲಿ 17.67 ಅಂಕಗಳನ್ನು ಪಡೆದಿದ್ದು ಸಾಧಾರಣವೆನಿಸುವ 44 ಶೇಕಡಾ ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಒಳಪಟ್ಟ ಈ SUV ಯು 6 ಏರ್ ಬ್ಯಾಗ್ ಗಳೊಂದಿಗೆ ಬರುತ್ತದೆ. ಫ್ರಂಟಲ್ ಆಫ್ ಸೆಟ್ ಪರೀಕ್ಷೆಯ ಪ್ರಕಾರ ಈ SUV ಯ ಪ್ಯಾಸೆಂಜರ್ ಕಂಪಾರ್ಟ್ ಮೆಂಟ್ ಸ್ಥಿರವಾಗಿದೆ. ಆದರೆ ಫುಲ್ ಫ್ರಂಟಲ್ ಇಂಪ್ಯಾಕ್ಟ್ ಟೆಸ್ಟ್ ಪ್ರಕಾರ, ಚಾಲಕನ ಎದೆಗೆ ರಕ್ಷಣೆಯ ಕೊರತೆ ಹಾಗೂ ಹಿಂದಿನ ಚಾಲಕನ ತಲೆ, ಕುತ್ತಿಗೆ ಮತ್ತು ಎದೆಗೂ ಸೂಕ್ತ ರಕ್ಷಣೆಯ ಕೊರತೆ ಕಂಡು ಬಂದಿದೆ. ಎರಡೂ ಪ್ರಂಟಲ್ ಇಂಪ್ಯಾಕ್ಟ್ ಗಳನ್ನು 50 kmph ವೇಗದಲ್ಲಿ ನಡೆಸಲಾಗಿತ್ತು. ಆದರೆ ಪರೀಕ್ಷೆಯ ಇತರ ಕ್ಷೇತ್ರಗಳು ಆಸ್ಟ್ರೇಲಿಯನ್ NCAP ಯಿಂದ ಸಕಾರಾತ್ಮಕ ರೇಟಿಂಗ್ ಅನ್ನು ಪಡೆದಿವೆ.
ಸ್ಕೋರ್ಪಿಯೊ N ವಾಹನವು 60 kmph ವೇಗದಲ್ಲಿ ನಡೆಸಿದ ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ ಸಂಪೂರ್ಣ ಅಂಕಗಳನ್ನು ಪಡೆದಿದ್ದು, ಒಬ್ಲಿಕ್ ಪೋಲ್ ಪರೀಕ್ಷೆಯಲ್ಲಿ 6ರಲ್ಲಿ 5.31 ಅಂಕಗಳನ್ನು ತನ್ನದಾಗಿಸಿದೆ. ಆದರೆ ಈ SUVಯು ಫಾರ್ ಸೈಡ್ ಇಂಪ್ಯಾಕ್ಟ್ ನಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ (4ರಲ್ಲಿ 0 ಅಂಕಗಳು). ರಿಯರ್ ಕ್ರ್ಯಾಶ್ ಸನ್ನಿವೇಶಗಳಲ್ಲಿ ಮುಂದಿನ ಸೀಟುಗಳು ಉಳುಕಿನಿಂದ ಉಂಟಾಗುವ ಗಾಯದ ವಿರುದ್ಧ ದುರ್ಬಲ ರಕ್ಷಣೆ ನೀಡುವುದು ಕಂಡು ಬಂದಿದೆ. ಈ ಮಹೀಂದ್ರಾ SUV ಯನ್ನು ಫಾರ್ ಸೈಡ್ ಇಂಪ್ಯಾಕ್ಟ್ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಚೈಲ್ಡ್ ಒಕ್ಯುಪೆಂಟ್ ಪ್ರೊಟೆಕ್ಷನ್ ಎಚ್ಚರಿಕೆಯ ಜೊತೆಗೆ ತಕ್ಕ ಮಟ್ಟಿನ ಅಂಕಗಳು
ANCAP ಯು ಬಾಲ ಪ್ರಯಾಣಿಕರ ರಕ್ಷಣೆಯ ವಿಚಾರದಲ್ಲಿ ಮಹೀಂದ್ರಾ ಸ್ಕೋರ್ಪಿಯೊ N ವಾಹನಕ್ಕೆ 49ರಲ್ಲಿ 39.27 ಅಂಕಗಳನ್ನು ನೀಡುವ ಮೂಲಕ ಸಮಾಧಾನಕರವೆನಿಸುವ 80 ಶೇಕಡಾದಷ್ಟು ಫಲಿತಾಂಶ ನೀಡಿದೆ. ಆದರೆ ಫ್ರಂಟಲ್ ಆಫ್ ಸೆಟ್ ಪರೀಕ್ಷೆಯು 10 ವರ್ಷದ ವಯಸ್ಸಿನ ಮಗುವಿನ ಡಮ್ಮಿಯ ಕುತ್ತಿಗೆ ಮತ್ತು ಎದೆಗೆ ಕನಿಷ್ಠ ಪ್ರಮಾಣದ ಸುರಕ್ಷತಾ ರೇಟಿಂಗ್ ಅನ್ನು ದಯಪಾಲಿಸಿದೆ. ಅಲ್ಲದೆ ANCAP ಎಚ್ಚರಿಕೆಯೊಂದನ್ನು ನೀಡಿದ್ದು, ನಿರ್ದಿಷ್ಟ ಸೀಟಿಂಗ್ ಸ್ಥಾನಗಳಲ್ಲಿ ಟಾಪ್ ಟೀಥರ್ ಆಂಕರೇಜ್ ಗಳ ಅನುಪಸ್ಥಿತಿಯನ್ನು ಗುರುತಿಸಿದೆ. ಈ ಮೂಲಕ ಅಂತಹ ಪ್ರದೇಶಗಳಲ್ಲಿ ಎಳೆಯ ಮಕ್ಕಳನ್ನು ಸಾಗಿಸಲು ಇದು ಸೂಕ್ತವಲ್ಲ ಎಂದು ಇದು ಹೇಳಿದೆ. ಜತೆಗೆ ಈ SUVಯು ಚೈಲ್ಡ್ ಪ್ರೆಸೆನ್ಸ್ ಡಿಟೆಕ್ಷನ್ ಸಿಸ್ಟಂ ಹೊಂದಿಲ್ಲದೆ ಇರುವುದನ್ನು ಗುರುತಿಸಲಾಗಿದೆ.
ANCAP ಪರೀಕ್ಷೆಯಲ್ಲಿ ಗುರುತಿಸಲಾಗಿರುವ ಇನ್ನೊಂದು ಸಮಸ್ಯೆ ಎಂದರೆ, ISOFIX ಆಂಕರೇಜ್ ಗಳನ್ನು ಬಳಸಿ ಚೈಲ್ಡ್ ರಿಸ್ಟ್ರೇಂಟ್ ಗಳನ್ನು ಸರಿಯಾಗಿ ಅಳವಡಿಸಲು ಆಗುವುದಿಲ್ಲ. ಏಕೆಂದರೆ ಇದರೊಂದಿಗೆ ಸೀಟ್ ಟ್ರಿಮ್ ಹಸ್ತಕ್ಷೇಪ ಮಾಡುತ್ತದೆ.
ವಲ್ನರೇಬಲ್ ರೋಡ್ ಯೂಸ್ ಪ್ರೊಟೆಕ್ಷನ್: ಚಿಂತೆಯ ವಿಷಯ
ವಲ್ನರೇಬಲ್ ರೋಡ್ ಯೂಸ್ ಪ್ರೊಟೆಕ್ಷನ್ ನಲ್ಲಿ 63 ರಲ್ಲಿ ಕೇವಲ 14.94 ಅಂಕಗಳನ್ನು (23 ಶೇಕಡಾ) ಗಳಿಸುವ ಮೂಲಕ ಸ್ಕೋರ್ಪಿಯೊ N ಎಲ್ಲರ ಹುಬ್ಬೇರುವಂತೆ ಮಾಡಿದೆ. ಪಾದಚಾರಿಯ ತಲೆಗೆ ಬೋನೆಟ್ ಕನಿಷ್ಠ ಮಿತಿಯ ಅಥವಾ ಸಾಕಷ್ಟು ರಕ್ಷಣೆಯನ್ನು ನೀಡುತ್ತಿದೆ ಎಂದು ANCAP ಗುರುತಿಸಿದೆ. ಆದರೆ ಬೋನೆಟ್ ಮುಂಭಾಗ, ವಿಂಡ್ ಸ್ಕ್ರೀನ್ ನ ತಳ ಮತ್ತು ಸ್ಟಿಫ್ ಪಿಲ್ಲರ್ ಗಳಲ್ಲಿ ದೌರ್ಬಲ್ಯವನ್ನು ವರದಿ ಮಾಡಿದೆ. ಶ್ರೋಣಿ ಕುಹರ, ತೊಡೆಯೆಲುವು ಮತ್ತು ಕಾಲಿನ ಕೆಳಭಾಗದ ರಕ್ಷಣೆಯ ವಿಷಯದಲ್ಲಿ ಕಳಪೆ ರೇಟಿಂಗ್ ಅನ್ನು ನೀಡಲಾಗಿದ್ದು, ಇದರಲ್ಲಿ ಅಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB) ನ ಅನುಪಸ್ಥಿತಿಯನ್ನು ANCAP ಗುರುತಿಸಿದೆ.
ಸೇಫ್ಟಿ ಅಸಿಸ್ಟ್: ADAS ವೈಶಿಷ್ಟ್ಯಗಳ ಅನುಪಸ್ಥಿತಿಗಾಗಿ ಶೂನ್ಯ ರೇಟಿಂಗ್
ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಗಳ ಅನುಪಸ್ಥಿತಿಯ ಕಾರಣ ಮಹೀಂದ್ರಾ ಸ್ಕೋರ್ಪಿಯೊ N ವಾಹನಕ್ಕೆ ಸೇಫ್ಟಿ ಅಸಿಸ್ಟ್ ವಿಭಾಗದಲ್ಲಿ 18ರಲ್ಲಿ ಶೂನ್ಯ ಅಂಕ ದೊರೆತಿದೆ.
ಕುಂದುಕೊರತೆಗಳನ್ನು ಸರಿಪಡಿಸುವುದು: ಭವಿಷ್ಯದ ನೋಟ
ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸುರಕ್ಷಾ ರೇಟಿಂಗ್ ಪಡೆದ ಮಹೀಂದ್ರಾ ಸ್ಕೋರ್ಪಿಯೊ N ವಾಹನವು ANCAP ಮೌಲ್ಯಮಾಪನದಲ್ಲಿ 0 ಅಂಕವನ್ನು ಪಡೆದಿದ್ದು ಹೇಗೆ? ಪರೀಕ್ಷೆಯ ಮಾನದಂಡವು ಅಷ್ಟೇನೂ ಕಠಿಣವಾಗಿಲ್ಲ. ಆದರೆ ತಾಂತ್ರಿಕತೆಯ ದೃಷ್ಟಿಯಿಂದ ಹಿನ್ನಡೆ ಉಂಟಾಗಿದೆ. ಆಸ್ಟ್ರೇಲಿಯಾದಲ್ಲಿ ಮಾರ್ಚ್ 2023ರಿಂದ ಎಲ್ಲಾ ಕಾರುಗಳಿಗೆ ಅಟೋನೋಮಸ್ ಡ್ರೈವರ್ ಅಸಿಸ್ಟ್ ಗಳನ್ನು ಕಡ್ಡಾಯಗೊಳಿಸಲಾಗಿದೆ. ಮಹೀಂದ್ರಾವು ಈ ಅನುಸರಣೆಯಲ್ಲಿ ಹಿಂದೆ ಬಿತ್ತು. ಯಾವುದೇ ADAS ಇಲ್ಲದೆಯೇ ಸ್ಕೋರ್ಪಿಯೊ N ಅನ್ನು ಮಾರುವ ಅನಿವಾರ್ಯತೆ ಉಂಟಾಯಿತು.
ಸುರಕ್ಷತಾ ಮಾನದಂಡಗಳು ಮಾತ್ರವೇ ಒಂದು ಕಾರು ಪ್ರಯಾಣಿಕನಿಗೆ ಒದಗಿಸುವ ನೈಜ ರಕ್ಷಣೆಯನ್ನು ಖಚಿತಪಡಿಸುವುದಿಲ್ಲ. ಕಾರು ತಯಾರಕರು ಹೊಸ ತಂತ್ರಜ್ಞಾನವನ್ನು ನೀಡುವುದಕ್ಕಾಗಿ ಮತ್ತು ವೆಚ್ಚ ಕಡಿತದ ಅಭ್ಯಾಸವನ್ನು ಅಳವಡಿಸಿಕೊಳ್ಳದೆ ಇರುವುದಕ್ಕಾಗಿ ಈ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದೇ ವಿಧಾನವನ್ನು ಭಾರತದಲ್ಲೂ ಜಾರಿಗೆ ಬರಲಿದ್ದು, ಎಲ್ಲಾ ಹೊಸ ಕಾರುಗಳು ಕನಿಷ್ಠ 6 ಏರ್ ಬ್ಯಾಗ್ ಗಳನ್ನು ಅಳವಡಿಸುವುದು ಇಲ್ಲಿಯೂ ಕಡ್ಡಾಯವೆನಿಸಲಿದೆ.
ಭವಿಷ್ಯದಲ್ಲಿ ಮಹೀಂದ್ರಾವು ADAS ವೈಶಿಷ್ಟ್ಯಗಳನ್ನು ಅಳವಡಿಸುವ ಮೂಲಕ ಸ್ಕೋರ್ಪಿಯೊ N ನ ಸುರಕ್ಷತೆಯನ್ನು ವೃದ್ಧಿಸುವ ಯೋಜನೆಯನ್ನು ಹೊಂದಿದ್ದು,, 2025ರಿಂದ ಮಾರಾಟವಾಗಲಿರುವ ಕಾರುಗಳಿಗೆ ಕಡ್ಡಾಯಗೊಳಿಸಿರುವ ಹೊಸ ಕೈಗಾರಿಕಾ ಮಾನದಂಡಗಳನ್ನು ಪಾಲಿಸುವತ್ತ ಹೆಜ್ಜೆ ಇಟ್ಟಿದೆ. ಸದ್ಯಕ್ಕೆ XUV700 ವಾಹನವು ಮಹೀಂದ್ರಾದ ಅಗ್ರ ಮಾದರಿ ಎನಿಸಿದ್ದು, ಭಾರತದಲ್ಲಿ ಅಟೋನೋಮಸ್ ಚಾಲನಾ ಸಾಮರ್ಥ್ಯಗಳನ್ನು ಒದಗಿಸುತ್ತಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ಕೋರ್ಪಿಯೊ N ಅಟೋಮ್ಯಾಟಿಕ್