• English
  • Login / Register

ಬ್ರೇಕಿಂಗ್ ನ್ಯೂಸ್: ಶೀಘ್ರದಲ್ಲೇ ಹೊಸ ಮತ್ತು ಹೆಚ್ಚು ಫೀಚರ್-ಭರಿತ ಟಾಪ್ ವೇರಿಯೆಂಟ್ ಅನ್ನು ಪಡೆಯಲಿರುವ ಸಿಟ್ರಾನ್ C3

ಸಿಟ್ರೊನ್ ಸಿ3 ಗಾಗಿ tarun ಮೂಲಕ ಏಪ್ರಿಲ್ 04, 2023 08:00 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೀಲ್ ವೇರಿಯೆಂಟ್‌ನಲ್ಲಿ ಬಿಟ್ಟುಹೋಗಿರುವ ಎಲ್ಲಾ ಫೀಚರ್‌ಗಳನ್ನು ಹೊಸ ಶೈನ್ ವೇರಿಯೆಂಟ್ ಹೊಂದಿರುತ್ತದೆ. 

Citroen C3

  • ಪ್ರಸ್ತುತ ಸಿಟ್ರಾನ್ C3 ಲೈವ್ ಮತ್ತು ಫೀಲ್ ವೇರಿಯೆಂಟ್‌ಗಳಲ್ಲಿ ಪ್ರಾಥಮಿಕ ಫೀಚರ್‌ಗಳೊಂದಿಗೆ ಲಭ್ಯವಿದೆ. 
  •  ರಿಯರ್ ವೈಪರ್/ವಾಷರ್, ಎಲೆಕ್ಟ್ರಿಕ್ ಮೂಲಕ ಹೊಂದಿಸಬಹುದಾದ ORVMಗಳು, ಬಟನ್ ಸ್ಟಾರ್ಟ್-ಸ್ಟಾಪ್ ಮತ್ತು ರಿಯರ್ ಕ್ಯಾಮರಾ ಅನ್ನು ಹೊಸ ವೇರಿಯೆಂಟ್ ಪಡೆಯಲಿದೆ. 
  •  ಅಲಾಯ್ ವ್ಹೀಲ್‌ಗಳು, ಮತ್ತು ಲೆದರ್‌ನಿಂದ ಸುತ್ತಲ್ಪಟ್ಟ ಸ್ಟಿಯರಿಂಗ್ ವ್ಹೀಲ್‌ಗಳನ್ನು ಸಹ ಇದು ಪಡೆಯಬಹುದು. 
  •  ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಅದೇ 1.2-ಲೀಟರ್ NA ಪೆಟ್ರೋಲ್ ಮತ್ತು ಟರ್ಬೋ-ಪೆಟ್ರೋಲ್ ಎಂಜಿನ್‌ಗಳೊಂದಿಗೆ ಇದು ಮುಂದುವರಿಯಲಿದೆ. 
  • ಟಾಪ್-ಎಂಡ್ ವೇರಿಯೆಂಟ ಪ್ರಸ್ತುತ ಟಾಪ್-ಸ್ಪೆಕ್ ಫೀಲ್ ವೇರಿಯೆಂಟ್‌ಗಿಂತ ರೂ. 1 ಲಕ್ಷ ಅಧಿಕ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ.
  •  ಈ eC3 ಸಹ ಈ ಫೀಚರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. 

ಸಿಟ್ರಾನ್ C3 ಶೀಘ್ರದಲ್ಲೇ ಹೊಸ ಟಾಪ್-ಎಂಡ್ “ಶೈನ್” ವೇರಿಯೆಂಟ್ ಅನ್ನು ಪಡೆಯಲಿದೆ ಎಂದು ನಮ್ಮ ಡೀಲರ್ ಮೂಲಗಳು ತಿಳಿಸಿವೆ. ಈ ಹ್ಯಾಚ್‌ಬ್ಯಾಕ್ ಅನ್ನು ಪ್ರಸ್ತುತ “ಲೈವ್” ಮತ್ತು “ಫೀಲ್” ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದ್ದು ಹೆಚ್ಚುವರಿ ವೇರಿಯೆಂಟ್ ಖಂಡಿತವಾಗಿಯೂ ಹಲವಾರು ನವೀಕೃತ ಫೀಚರ್‌ಗಳನ್ನು ಪಡೆಯುವ ಸಾಧ್ಯತೆಯಿದೆ. 

Citroen C3

ಇದೇ ರೀತಿಯ ಬೆಲೆಯನ್ನು ಹೊಂದಿರುವ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ C3 ಯು ಕಡಿಮೆ ಸಜ್ಜುಗೊಂಡಿದ್ದಕ್ಕಾಗಿ ಬಹಿಷ್ಕರಿಸಲ್ಪಟ್ಟಿತು. ಈ ಹೊಸ ಶೈನ್ ವೇರಿಯೆಂಟ್ ರಿಯರ್ ವೈಪರ್ ಮತ್ತು ವಾಷರ್, ಡಿಫಾಗರ್, ಎಲೆಕ್ಟ್ರಿಕ್ ಮೂಲಕ ಹೊಂದಿಸಬಹುದಾದ ORVMಗಳು, ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾ ಅನ್ನು ಪಡೆಯಲಿದೆ. ಇದು ಎಲ್ಲಾ ಐದು ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಅಲಾಯ್ ವ್ಹೀಲ್‌ಗಳು, ಮತ್ತು ಲೆದರ್‌ನಿಂದ ಸುತ್ತಲ್ಪಟ್ಟ ಸ್ಟಿಯರಿಂಗ್ ವ್ಹೀಲ್‌ಗಳನ್ನು ಸಹ ಪಡೆಯಬಹುದು.

ಇದನ್ನೂ ಓದಿ: ಏಪ್ರಿಲ್ 27 ರಂದು ತನ್ನ ನಾಲ್ಕನೇ ಮಾಡೆಲ್ ಅನ್ನು ಭಾರತದಲ್ಲಿ ಅನಾವರಣಗೊಳಿಸಲಿದೆ ಸಿಟ್ರಾನ್ 

 ಪ್ರಸ್ತುತ, ಈ ಹ್ಯಾಚ್‌ಬ್ಯಾಕ್ 10.2-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಎತ್ತರವನ್ನು ಹೊಂದಿಸಬಹುದಾದ ಚಾಲಕನ ಸೀಟ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ. 

Citroen C3 ಈ ಟಾಪ್-ಎಂಡ್ ವೇರಿಯೆಂಟ್ ಅನ್ನು 82PS, 1.2-ಲೀಟರ್ ಪೆಟ್ರೋಲ್ ಮತ್ತು 110PS, 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ಗಳೊಂದಿಗೆ ನೀಡಲಾಗುವುದು. ಇದು ಪ್ರಸ್ತುತ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ ಆದರೆ ಮುಂದಿನ ದಿನಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಸೇರಿಸುವ ನಿರೀಕ್ಷೆಯನ್ನು ಹೊಂದಬಹುದು.

 ಇದನ್ನು ಓದಿ: ಸಿಟ್ರಾನ್ eC3 ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆ ಬಾತ್

 ಹೊಸ ಟಾಪ್-ಎಂಡ್ ವೇರಿಯೆಂಟ್ ಫೀಲ್ ವೇರಿಯೆಂಟ್‌ಗಿಂತ ಗಮನಾರ್ಹ ಪ್ರೀಮಿಯಂ ಅನ್ನು ಪಡೆಯುವ ನಿರೀಕ್ಷೆಯಿದೆ. ಈ ಹ್ಯಾಚ್‌ಬ್ಯಾಕ್ ಪ್ರಸ್ತುತ ರೂ. 6.16 ಲಕ್ಷದಿಂದ ರೂ. 8.43 ಲಕ್ಷಕ್ಕೆ (ಎಕ್ಸ್-ಶೋರೂಮ್, ದೆಹಲಿ) ಮಾರಾಟವಾಗುತ್ತಿದೆ. ಇದು ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್, ಮಾರುತಿ ಸ್ವಿಫ್ಟ್ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿದೆ. 

 ಇದನ್ನೂ ಓದಿ : ಸಿಟ್ರಾನ್ C3 ಆನ್ ರೋಡ್ ಬೆಲೆ

was this article helpful ?

Write your Comment on Citroen ಸಿ3

explore ಇನ್ನಷ್ಟು on ಸಿಟ್ರೊನ್ ಸಿ3

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience