Login or Register ಅತ್ಯುತ್ತಮ CarDekho experience ಗೆ
Login

ಇಲ್ಲಿದೆ Tata Nexon Faceliftನ ಅಪ್‌ಡೇಟ್ ಮಾಡಲಾದ ಡ್ಯಾಶ್‌ಬೋರ್ಡ್‌ನ ಝಲಕ್

published on ಆಗಸ್ಟ್‌ 29, 2023 06:57 pm by ansh for ಟಾಟಾ ನೆಕ್ಸ್ಂನ್‌

ಕ್ಯಾಬಿನ್‌ನ ಹೊಸ ಬಾಹ್ಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಅದು ನೇರಳೆ ಬಣ್ಣದ ಫಿನಿಶಿಂಗ್ ಅನ್ನು ಪಡೆದುಕೊಂಡಿದೆ

  • ನವೀಕೃತ ನೆಕ್ಸಾನ್ ಸೆಪ್ಟೆಂಬರ್ 14 ರಂದು ಬಿಡುಗಡೆಯಾಗಲಿದೆ.
  • ಇದು ಹಿಂದಿನ 1.5-ಲೀಟರ್ ಡೀಸೆಲ್ ಆಯ್ಕೆಯನ್ನು ಉಳಿಸಿಕೊಳ್ಳುವುದರೊಂದಿಗೆ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹುದು.
  • ನೆಕ್ಸಾನ್ ಕರ್ವ್ ಪರಿಕಲ್ಪನೆಯಲ್ಲಿ ಪ್ರದರ್ಶಿಸಲಾದ ಟಾಟಾದ ಹೊಸ ವಿನ್ಯಾಸದ ಥೀಮ್ ಅನ್ನು ಹೊಂದಿರುತ್ತದೆ.
  • ಅದರ ಸುರಕ್ಷತಾ ಕಿಟ್‌ನ ಭಾಗವಾಗಿ ADAS ಫೀಚರ್‌ಗಳನ್ನು ಪಡೆಯಬಹುದು.
  • ಭಾರತದಲ್ಲಿ ಇದರ ಬೆಲೆಗಳು ರೂ. 8 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ನವೀಕೃತ ಟಾಟಾ ನೆಕ್ಸಾನ್ ಪರೀಕ್ಷೆಯ ಸಮಯದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ಈ ಬಾರಿ ವಾಹನದ ಕ್ಯಾಬಿನ್ ಚಿತ್ರಗಳು ಮುನ್ನೆಲೆಗೆ ಬಂದಿದ್ದು, ಅದರಲ್ಲಿ ಅದರ ಹೊಸ ಡ್ಯಾಶ್ ಬೋರ್ಡ್‌ನ ಸ್ಪಷ್ಟ ನೋಟ ಲಭ್ಯವಾಗಿದೆ. ಈ ಹೊಸ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಹೊರಭಾಗ ಮತ್ತು ಒಳಭಾಗದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಅವುಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ:

ಕ್ಯಾಬಿನ್

ಈ ವಾಹನದ ಕ್ಯಾಬಿನ್‌ಗೆ ಬ್ಲ್ಯಾಕ್ ಥೀಮ್‌ನೊಂದಿಗೆ ಲೇಯರ್ಡ್ ಡ್ಯಾಶ್‌ಬೋರ್ಡ್ ನೀಡಲಾಗಿದೆ. ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಮಾಡೆಲ್ ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್-ಟೋನ್ ಫಿನಿಶ್ ಅನ್ನು ಹೊಂದಿದೆ, ಇದು ಹೊಸ ಬಾಹ್ಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಕ್ಯಾಬಿನ್ ನೇರಳೆ ಬಣ್ಣದ ಫಿನಿಶಿಂಗ್ ಅನ್ನು ಪಡೆದುಕೊಂಡಿದೆ. ಅದೇ ಬಣ್ಣದ ಆಯ್ಕೆಯನ್ನು ಸೀಟ್‌ಗಳಲ್ಲಿ ಮತ್ತು ಸ್ಟೀರಿಂಗ್ ವ್ಹೀಲ್‌ನ ಕೆಳಭಾಗದಲ್ಲಿಯೂ ಕಾಣಬಹುದಾಗಿದೆ.

ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್‌ನಲ್ಲಿ ಲಿಟ್-ಅಪ್ ಟಾಟಾ ಲೋಗೋವನ್ನು ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಇದು ಹೊಸ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಮಧ್ಯದಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ. ಉಳಿದ ಕ್ಯಾಬಿನ್ ವಿನ್ಯಾಸವು ಹೊಸದಾಗಿದೆ.

ಪವರ್‌ಟ್ರೇನ್‌ಗಳು

ಹೊಸ ನೆಕ್ಸಾನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಅದೇ 1.5-ಲೀಟರ್ ಡೀಸೆಲ್ ಎಂಜಿನ್ (110PS/260Nm) ಅನ್ನು ಪ್ರಮಾಣಿತವಾಗಿ ಪಡೆಯುವುದನ್ನು ಮುಂದುವರಿಸಬಹುದು. ಕಂಪನಿಯು ಟಾಟಾದ ಹೊಸ E20 ಕಂಪ್ಲಿಯಂಟ್ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (125PS/225Nm) ಜೊತೆಗೆ ಮ್ಯಾನುಯಲ್ ಮತ್ತು DCT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳ ಆಯ್ಕೆಯನ್ನು ನೀಡುವ ನಿರೀಕ್ಷೆಯಿದೆ.

ಫೀಚರ್‌ಗಳು ಮತ್ತು ಸುರಕ್ಷತೆ

10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಜೊತೆಗೆ, ಹೊಸ ನೆಕ್ಸಾನ್ ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಸಹ ಪಡೆಯಬಹುದು.

ಇದನ್ನೂ ಓದಿ: ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್: ಇದುವರೆಗೆ ಗಮನಿಸಲಾದ ಎಲ್ಲಾ ಬದಲಾವಣೆಗಳು

ಪ್ರಯಾಣಿಕರ ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊರತುಪಡಿಸಿ EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಫೀಚರ್‌ಗಳನ್ನು ಪಡೆಯಬಹುದು. ಬಿಡುಗಡೆಯಾಗಲಿರುವ ಈ ಕಾರು ADAS ತಂತ್ರಜ್ಞಾನದ ಅಡಿಯಲ್ಲಿ ಲೇನ್-ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳನ್ನು ಕೂಡ ಪಡೆದುಕೊಳ್ಳಬಹುದು.

ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು

ನವೀಕೃತ ಟಾಟಾ ನೆಕ್ಸಾನ್ ಮತ್ತು ನೆಕ್ಸಾನ್ ಎಲೆಕ್ಟ್ರಿಕ್ ಭಾರತದಲ್ಲಿ ಸೆಪ್ಟೆಂಬರ್ 14 ರಂದು ಬಿಡುಗಡೆಯಾಗಲಿವೆ. ಹೊಸ ನೆಕ್ಸಾನ್ ಬೆಲೆಯು 8 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ300, ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ ಗಳೊಂದಿಗೆ ಸ್ಪರ್ಧಿಸಲಿದೆ.

ಚಿತ್ರಕೃಪೆ

ಇನ್ನಷ್ಟು ಓದಿ: ಟಾಟಾ ನೆಕ್ಸಾನ್ ಆಟೋಮ್ಯಾಟಿಕ್

a
ಅವರಿಂದ ಪ್ರಕಟಿಸಲಾಗಿದೆ

ansh

  • 194 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ನೆಕ್ಸ್ಂನ್‌

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ