ಕರ್ವ್‌ಗೆ ಟಕ್ಕರ್ ಕೊಡಲು ನಾಳೆ ಮಾರುಕಟ್ಟೆಗೆ ಬರುತ್ತಿದೆ Citroen Basalt
ಸಿಟ್ರೊನ್ ಬಸಾಲ್ಟ್ ಗಾಗಿ rohit ಮೂಲಕ ಆಗಸ್ಟ್ 08, 2024 01:36 pm ರಂದು ಪ್ರಕಟಿಸಲಾಗಿದೆ
- 47 Views
- ಕಾಮೆಂಟ್ ಅನ್ನು ಬರೆಯಿರಿ
ಬಸಾಲ್ಟ್ ಎಸ್‌ಯುವಿ-ಕೂಪ್ ಭಾರತದಲ್ಲಿ ಆಗಸ್ಟ್ 9 ರಂದು (ನಾಳೆ) ಬಿಡುಗಡೆಯಾಗಲಿದೆ ಮತ್ತು ಇದರ ಆರಂಭಿಕ ಬೆಲೆಯು ಸುಮಾರು 8.5 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ
-
ಇದು ಭಾರತದಲ್ಲಿ ಸಿಟ್ರೊಯೆನ್‌ನಿಂದ ಐದನೇ ಕಾರು ಆಗಿದೆ.
-
ಹೊರಗಿನ ಅಂಶಗಳಲ್ಲಿ ಎಲ್ಲಾ-ಎಲ್‌ಇಡಿ ಲೈಟಿಂಗ್, 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಇಳಿಜಾರಾದ ರೂಫ್‌ಲೈನ್ ಸೇರಿವೆ.
-
10.2-ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ.
-
1.2-ಲೀಟರ್ N/A ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಬ ಎರಡು ಪೆಟ್ರೋಲ್ ಎಂಜಿನ್‌ಗಳೊಂದಿಗೆ ನೀಡಲಾಗುವುದು.
ಕೆಲ ದಿನಗಳ ಹಿಂದಷ್ಟೇ ಮುಂಬರುವ ಸಿಟ್ರೊಯೆನ್ ಬಸಾಲ್ಟ್ ಎಸ್‌ಯುವಿ-ಕೂಪ್‌ನ ಅಧಿಕೃತ ಟೀಸರ್‌ಗಳನ್ನು ನಾವು ನೋಡಿದ್ದೆವು. ಇದೀಗ ಬಸಾಲ್ಟ್ ಅನ್ನು ಭಾರತದಲ್ಲಿ ಆಗಸ್ಟ್ 9 ರಂದು ಬಿಡುಗಡೆ ಮಾಡಲಾಗುವುದು ಎಂದು ಸಿಟ್ರೊಯೆನ್ ದೃಢಪಡಿಸಿದೆ. ಅದರ ಬೆಲೆ ಘೋಷಣೆಗೆ ಮುಂಚಿತವಾಗಿ ದೇಶಾದ್ಯಂತ ಕೆಲವು ಡೀಲರ್‌ಶಿಪ್‌ಗಳಲ್ಲಿ ಅದರ ಆಫ್‌ಲೈನ್ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದೆ. ಟಾಟಾ ಕರ್ವ್‌ನ ಪ್ರತಿಸ್ಪರ್ಧಿಯಾಗಿರುವ ಸಿಟ್ರೊಯೆನ್‌ನ ಈ ಕೂಪ್-ಎಸ್‌ಯುವಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ:
ಹೊರಭಾಗದ ಲುಕ್ ಹೇಗಿದೆ ?
ಬಸಾಲ್ಟ್ ಒಂದು ಎಸ್‌ಯುವಿ-ಕೂಪ್ ಕಾರು ಆಗಿದ್ದರೂ, ಇದು ಅದರ ಕೆಲವು ವಿನ್ಯಾಸ ಅಂಶಗಳನ್ನು ಸಿ3 ಏರ್‌ಕ್ರಾಸ್‌ನೊಂದಿಗೆ ಹಂಚಿಕೊಳ್ಳುತ್ತದೆ. ಇದು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ವಿ-ಆಕಾರದ ಸ್ಪ್ಲಿಟ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಸ್ಪ್ಲೀಟ್ ಗ್ರಿಲ್ ಅನ್ನು ಪಡೆಯುತ್ತದೆ, ಇದನ್ನು ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿಯು ಗಮನಿಸಬಹುದು. ಮುಂಭಾಗದ ಬಂಪರ್‌ನಲ್ಲಿ ಬದಲಾವಣೆ ತರಲಾಗಿದೆ ಮತ್ತು ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ ಮತ್ತು ಸ್ಲಿಮ್ ಲಂಬವಾದ ಕೆಂಪು ಇನ್ಸರ್ಟ್‌ಗಳು ಮತ್ತು ಸಿಲ್ವರ್-ಫಿನಿಶ್ಡ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.
ಸೈಡ್‌ನಿಂದ ಗಮನಿಸುವಾಗ, ನೀವು ಅದರ ದೊಡ್ಡ ಹೈಲೈಟ್, ಇದು ಕೂಪ್ ರೂಫ್‌ಲೈನ್ ಮತ್ತು 16-ಇಂಚಿನ ಡ್ಯುಯಲ್-ಟೋನ್ ಫಿನಿಶ್ ಆಗಿರುವ ಅಲಾಯ್ ವೀಲ್‌ಗಳನ್ನು ಗಮನಿಸಬಹುದು. ಹಿಂಭಾಗದಲ್ಲಿ, ಇದು ಸುತ್ತುವ ಹ್ಯಾಲೊಜೆನ್ ಟೈಲ್ ಲೈಟ್‌ಗಳು ಮತ್ತು ಸಂಪೂರ್ಣ ಕಪ್ಪು ಬಣ್ಣದ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ಬರುತ್ತದೆ.
ಕ್ಯಾಬಿನ್ ಮತ್ತು ಫೀಚರ್‌ಗಳು
C3 ಏರ್‌ಕ್ರಾಸ್‌ನೊಂದಿಗಿನ ಹೋಲಿಕೆಯು ಒಳಭಾಗದಲ್ಲಿಯೂ ಮುಂದುವರಿಯುತ್ತದೆ, ಏಕೆಂದರೆ ಬಸಾಲ್ಟ್ ಸಹ ಒಂದೇ ರೀತಿಯ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದೆ, ಇದರಲ್ಲಿ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು ಮತ್ತು ಎಸಿ ವೆಂಟ್ಸ್‌ಗಳಿಗೆ ಒಂದೇ ವಿನ್ಯಾಸವಿದೆ. ಬಸಾಲ್ಟ್‌ನ ಕ್ಯಾಬಿನ್‌ನ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಅದರ ಹಿಂದಿನ ಸೀಟ್ ಬೇಸ್, ಇದು ಉತ್ತಮವಾದ ತೊಡೆಯ ಬೆಂಬಲವನ್ನು ಒದಗಿಸಲು 87 ಎಂಎಂ ಉದ್ದವನ್ನು ಹೊಂದಿದೆ.
ಫೀಚರ್‌ಗಳ ವಿಷಯದಲ್ಲಿ, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಎಸ್‌ಯುವಿಯಂತೆಯೇ 10.2-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇಯನ್ನು ನೀಡಿದೆ. ಬಸಾಲ್ಟ್ ಆಟೋಮ್ಯಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.
ಇದನ್ನೂ ಓದಿ: ಹೊಸ ಫೀಚರ್‌ಗಳಿಂದ ಬರುತ್ತಿರುವ Citroen C3 ಹ್ಯಾಚ್‌ಬ್ಯಾಕ್ ಮತ್ತು C3 Aircross ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆ
ಇದು ಯಾವ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ?
ಬಸಾಲ್ಟ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಳೊಂದಿಗೆ ಬರಲಿದೆ, ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ:
|
1.2-ಲೀಟರ್ N/A ಪೆಟ್ರೋಲ್ |
1.2-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
82 ಪಿಎಸ್ |
110 ಪಿಎಸ್ |
ಟಾರ್ಕ್ |
115 ಎನ್‌ಎಮ್ |
205 ಎನ್‌ಎಮ್ ವರೆಗೆ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನುಯಲ್ |
6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಆಟೋಮ್ಯಾಟಿಕ್ |
ಕ್ಲೈಮ್ ಮಾಡಲಾದ ಮೈಲೇಜ್ |
18 kmpl |
19.5 kmpl, 18.7 kmpl |
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ನಾವು ಸಿಟ್ರೊಯೆನ್ ಬಸಾಲ್ಟ್ ಬೆಲೆಯು 8.5 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸುತ್ತೇವೆ. ಇದು ಟಾಟಾ ಕರ್ವ್‌ಗೆ ನೇರಪ್ರತಿಸ್ಪರ್ಧಿಯಾಗಿದ್ದು, ಹಾಗೆಯೇ ಇದರೊಂದಿಗೆ ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಹ್ಯುಂಡೈ ಕ್ರೆಟಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಕಿಯಾ ಸೆಲ್ಟೋಸ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ಗಳಿಗೆ ಸೊಗಸಾದ ಪರ್ಯಾಯವಾಗಿದೆ.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡುವುದನ್ನು ಮಿಸ್ ಮಾಡ್ಬೇಡಿ.