ಹೊಸ ಫೀಚರ್‌ಗಳಿಂದ ಬರುತ್ತಿರುವ Citroen C3 ಹ್ಯಾಚ್‌ಬ್ಯಾಕ್ ಮತ್ತು C3 Aircross ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆ
ಸಿಟ್ರೊನ್ ಸಿ3 ಗಾಗಿ dipan ಮೂಲಕ ಆಗಸ್ಟ್ 05, 2024 04:04 pm ರಂದು ಪ್ರಕಟಿಸಲಾಗಿದೆ
- 33 Views
- ಕಾಮೆಂಟ್ ಅನ್ನು ಬರೆಯಿರಿ
C3 ಜೋಡಿಯ ಸಮಯದಿಂದಲೂ ಮಿಸ್ ಆಗಿದ್ದ ಕೆಲವು ಪ್ರೀಮಿಯಂ ಸ್ಪರ್ಶಗಳು ಮತ್ತು ಪ್ರಮುಖ ಸುರಕ್ಷತಾ ಸೇರ್ಪಡೆಗಳನ್ನು ಹೊಸ ಫೀಚರ್‌ಗಳು ಒಳಗೊಂಡಿವೆ
- ಸಿ3 ಮತ್ತು ಸಿ3 ಏರ್‌ಕ್ರಾಸ್ ಈಗ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ORVM-ಮೌಂಟೆಡ್ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ.
- ಸಿ3 ಹೊಸ 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ ಮತ್ತು ಎರಡೂ ಕಾರುಗಳು ಈಗ ಆಟೋ ಎಸಿ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಹೊಂದಿವೆ.
- 10.2-ಇಂಚಿನ ಟಚ್‌ಸ್ಕ್ರೀನ್ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳಂತಹ ಫೀಚರ್‌ಗಳು ಆಫರ್‌ನಲ್ಲಿ ಲಭ್ಯವಿರಲಿದೆ.
- ಆಪ್‌ಗ್ರೇಡ್ ಆಗಿರುವ ಮೊಡೆಲ್‌ಗಳ ಪವರ್‌ಟ್ರೇನ್ ಆಯ್ಕೆಗಳು ಬದಲಾಗದೆ ಉಳಿಯುವ ಸಾಧ್ಯತೆಯಿದೆ.
- ಆಪ್‌ಗೇಡ್ ಮಾಡಲಾಗಿರುವ ಎರಡೂ ಮೊಡೆಲ್‌ಗಳು ಅವುಗಳ ಪ್ರಸ್ತುತ ಬೆಲೆಗಳಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಬಿಡುಗಡೆಯಾಗಿ ರಸ್ತೆಗಿಳಿದ ಬಹಳ ವರ್ಷಗಳ ನಂತರ ಇದೀಗ, ಸಿಟ್ರೊಯೆನ್ ಸಿ3 ಹ್ಯಾಚ್‌ಬ್ಯಾಕ್ ಮತ್ತು ಸಿ3 ಏರ್‌ಕ್ರಾಸ್ ಎಸ್‌ಯುವಿ ಎರಡಕ್ಕೂ ಈಗ ದೊಡ್ಡ ಫೀಚರ್‌ಗಳನ್ನು ಮರುಜೋಡಣೆ ನೀಡಲಾಗಿದೆ. ಆಪ್‌ಡೇಟ್ ಮಾಡಲಾಗಿರುವ ಮೊಡೆಲ್‌ಗಳು ಈಗ ಹಲವಾರು ಹೊಸ ಸೌಕರ್ಯ, ಸೌಲಭ್ಯ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿವೆ, ಅವುಗಳಲ್ಲಿ ಹಲವು ಇತ್ತೀಚೆಗೆ ಅನಾವರಣಗೊಂಡ ಸಿಟ್ರೊಯೆನ್ ಬಸಾಲ್ಟ್ ಎಸ್‌ಯುವಿ-ಕೂಪ್‌ನಲ್ಲಿ ಕಂಡುಬರುತ್ತವೆ. ಆಪ್‌ಡೇಟ್ ಮಾಡಲಾದ ಸಿ3 ಹ್ಯಾಚ್‌ಬ್ಯಾಕ್ ಮತ್ತು ಸಿ3 ಏರ್‌ಕ್ರಾಸ್ ಎಸ್‌ಯುವಿನಲ್ಲಿ ಹೊಸದೇನಿದೆ ಎಂಬುದನ್ನು ನೋಡೋಣ.
ಹೊಸದೇನಿದೆ ಇವುಗಳಲ್ಲಿ?
ಆಪ್‌ಡೇಟ್ ಮಾಡಲಾದ ಸಿಟ್ರೊಯೆನ್ ಮೊಡೆಲ್‌ಗಳು ತಮ್ಮ ಹೊರಭಾಗದ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ತಂದಿಲ್ಲ, ಆದರೆ ಈಗ ಹಿಂದಿನ ಹ್ಯಾಲೊಜೆನ್ ಯುನಿಟ್‌ಗಳ ಬದಲಿಗೆ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಹೊಂದಿವೆ. ಹೊರಗಿನ ರಿಯರ್‌ವ್ಯೂ ಮಿರರ್‌ಗಳು (ORVMs) ಈಗ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿವೆ ಮತ್ತು ಈ ಹಿಂದೆ ಇಂಡಿಕೇಟರ್‌ಗಳನ್ನು ಹೊಂದಿದ್ದ ಮುಂಭಾಗದ ಫೆಂಡರ್‌ಗಳು ಈಗ ಹೊಸ ಸಿಟ್ರೊಯೆನ್ ಬ್ಯಾಡ್ಜಿಂಗ್ ಅನ್ನು ಹೊಂದಿವೆ. ಹೆಚ್ಚುವರಿಯಾಗಿ, ಕಾರುಗಳು ಈಗ ವಾಷರ್‌ನೊಂದಿಗೆ ಹಿಂಭಾಗದ ವಿಂಡ್‌ಶೀಲ್ಡ್ ವೈಪರ್ ಅನ್ನು ಒಳಗೊಂಡಿವೆ.


ಒಳಭಾಗದಲ್ಲಿ, ಡ್ಯಾಶ್‌ಬೋರ್ಡ್ ಒಂದೇ ಆಗಿರುತ್ತದೆ, ಆದರೆ ಸಿ3 ಈಗ ಹೊಸ 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯನ್ನು ಹೊಂದಿದೆ, ಇದನ್ನು ಸಿ3 ಏರ್‌ಕ್ರಾಸ್ ಎಸ್‌ಯುವಿನಿಂದ ಪಡೆಯಲಾಗಿದೆ. ಫೀಚರ್‌ಗಳ ಸೇರ್ಪಡೆಗಳ ವಿಷಯದಲ್ಲಿ, ಎರಡೂ ಕಾರುಗಳು ಈಗ ಆಟೋಮ್ಯಾಟಿಕ್ ಎಸಿಯನ್ನು ಪಡೆಯುತ್ತವೆ ಮತ್ತು ಪವರ್ ವಿಂಡೋ ಸ್ವಿಚ್‌ಗಳು ಸೆಂಟರ್ ಕನ್ಸೋಲ್‌ನಿಂದ ಡೋರ್ ಪ್ಯಾಡ್‌ಗಳಿಗೆ ಸ್ಥಳಾಂತರಗೊಂಡಿವೆ ಮತ್ತು ಎಲೆಕ್ಟ್ರಾನಿಕ್ ಎಡ್ಜಸ್ಟ್‌ಮೆಂಟ್ ಅನ್ನು ಸಹ ಪಡೆಯುತ್ತವೆ. ಆದರೆ, ಆಫರ್‌ನಲ್ಲಿ ಪುಶ್-ಬಟನ್ ಸ್ಟಾರ್ಟ್-ಸ್ಟಾಪ್ ಫೀಚರ್ ಅನ್ನು ಸೇರ್ಪಡೆಗೊಳಿಸಿಲ್ಲ.


ಎರಡು ಸಿಟ್ರೊಯೆನ್ ಮೊಡೆಲ್‌ಗಳಲ್ಲಿನ ಸುರಕ್ಷತಾ ಪ್ಯಾಕೇಜ್‌ಗೆ ಈಗ ಆರು ಏರ್‌ಬ್ಯಾಗ್‌ಗಳನ್ನು ಸೇರಿಸಲು ಆಪ್‌ಡೇಟ್ ಮಾಡಲಾಗಿದೆ.
ಇತರ ಫಿಚರ್‌ಗಳು ಮತ್ತು ಸುರಕ್ಷತೆ
ಸಿ3 ಹ್ಯಾಚ್‌ಬ್ಯಾಕ್ ಮತ್ತು ಸಿ3 ಏರ್‌ಕ್ರಾಸ್ ಎರಡೂ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ನಂತಹ ಫೀಚರ್‌ಗಳೊಂದಿಗೆ ಬರುತ್ತಿವೆ. ಈ ಎಸ್‌ಯುವಿಯು ಎರಡನೇ ಸಾಲಿನ ಪ್ರಯಾಣಿಕರಿಗೆ ರೂಫ್-ಮೌಂಟೆಡ್ ಎಸಿ ವೆಂಟ್‌ಗಳನ್ನು ಸಹ ಪಡೆಯುತ್ತದೆ.
ಸುರಕ್ಷತೆಯ ಭಾಗವನ್ನು ಗಮನಿಸುವುದಾದರೆ, ಸಿಟ್ರೊಯೆನ್ ತನ್ನ ಸಿ3 ಮತ್ತು ಸಿ3 ಏರ್‌ಕ್ರಾಸ್ ಅನ್ನು ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಸಜ್ಜುಗೊಳಿಸಿದೆ.
ಪವರ್‌ಟ್ರೇನ್‌ನ ಕುರಿತು
ಸಿಟ್ರೊಯೆನ್ ಸಿ3 ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತಿದ್ದು, ಮೊದಲ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 ಪಿಎಸ್/190 ಎನ್‌ಎಮ್) ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನೊಂದು ಆಯ್ಕೆಯೆಂದರೆ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ (82 ಪಿಎಸ್/115 ಎನ್‌ಎಮ್), ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಮತ್ತೊಂದೆಡೆ, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಕೇವಲ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಅದು 110 ಪಿಎಸ್ ಮತ್ತು 205 ಎನ್‌ಎಮ್‌ವರೆಗೆ ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಒಪ್ಶನಲ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸಿಟ್ರೊಯೆನ್ ಸಿ3 ಮತ್ತು ಸಿ3 ಏರ್‌ಕ್ರಾಸ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಮತ್ತು ಅವುಗಳು ಪ್ರಸ್ತುತ ಲಭ್ಯವಿರುವ ಮೊಡೆಲ್‌ಗಳ ಬೆಲೆಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರಬಹುದೆಂದು ಅಂದಾಜಿಸಲಾಗಿದೆ.
ಪ್ರಸ್ತುತ ಮಾರಟದಲ್ಲಿರುವ ಸಿಟ್ರೊಯೆನ್ C3ಯ ಭಾರತದಾದ್ಯಂತದ ಎಕ್ಸ್‌ಶೋರೂಮ್ ಬೆಲೆಯು 6.16 ಲಕ್ಷ ರೂ.ನಿಂದ 9.12 ಲಕ್ಷ ರೂ. ವೆರೆಗೆ ಇದೆ. ಇದು ಮಾರುತಿ ವ್ಯಾಗನ್ ಆರ್, ಮಾರುತಿ ಸೆಲೆರಿಯೊ ಮತ್ತು ಟಾಟಾ ಟಿಯಾಗೊಗೆ ಪ್ರತಿಸ್ಪರ್ಧಿಯಾಗಿದೆ. ಇದರ ಬೆಲೆ ಮತ್ತು ಆಯಾಮಗಳನ್ನು ಪರಿಗಣಿಸುವುದಾದರೆ, ಸಿಟ್ರೊಯೆನ್ ಹ್ಯಾಚ್‌ಬ್ಯಾಕ್ ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ದೊಡ್ಡದಾದ ಸಿ3 ಏರ್‌ಕ್ರಾಸ್ ಎಸ್‌ಯುವಿಯು ಪ್ರಸ್ತುತ ಭಾರತದಾದ್ಯಂತದ 9.99 ಲಕ್ಷ ರೂ.ನಿಂದ 14.11 ಲಕ್ಷ ರೂ.ವರೆಗೆ ಎಕ್ಸ್‌ಶೋರೂಮ್ ಬೆಲೆಯನ್ನು ಹೊಂದಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹೋಂಡಾ ಎಲಿವೇಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಟಾಟಾ ಕರ್ವ್ ಮತ್ತು ಸಿಟ್ರೋಯೆನ್ ಬಸಾಲ್ಟ್ ಎರಡೂ ಕೂಡ ಸಿ3 ಏರ್‌ಕ್ರಾಸ್‌ಗೆ ಸ್ಟೈಲಿಶ್ ಮತ್ತು ಎಸ್‌ಯುವಿ-ಕೂಪ್ ಪರ್ಯಾಯಗಳಾಗಿವೆ.
ಸಿಟ್ರೋಯೆನ್ ಕಾರುಗಳ ಕುರಿತ ಎಲ್ಲಾ ಕ್ಷಣಕ್ಷಣದ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಸಿ3 ಆನ್ ರೋಡ್ ಬೆಲೆ