• English
  • Login / Register

Citroen Basalt Vision ಕೂಪ್‌ ಎಸ್‌ಯುವಿ; Tata Curvvಗೆ ಪ್ರತಿಸ್ಪರ್ಧಿಯಾಗಿ ಜಾಗತಿಕವಾಗಿ ಪಾದಾರ್ಪಣೆ

ಸಿಟ್ರೊನ್ ಬಸಾಲ್ಟ್‌ ಗಾಗಿ shreyash ಮೂಲಕ ಮಾರ್ಚ್‌ 28, 2024 07:10 pm ರಂದು ಪ್ರಕಟಿಸಲಾಗಿದೆ

  • 51 Views
  • ಕಾಮೆಂಟ್‌ ಅನ್ನು ಬರೆಯಿರಿ

ಸಿಟ್ರೊಯೆನ್ ಬಸಾಲ್ಟ್ ವಿಷನ್ ಈ ಹಿಂದೆ C3X ಎಂದು ಕರೆಯಲಾಗುತ್ತಿದ್ದ ಕೂಪ್-ಶೈಲಿಯ ಎಸ್‌ಯುವಿ ಕೊಡುಗೆಯಾಗಿದೆ. 

Citroen Basalt Vision

  • ಸಿಟ್ರೊಯೆನ್ ದಕ್ಷಿಣ ಅಮೆರಿಕಾ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಬಸಾಲ್ಟ್ ವಿಷನ್ ಅನ್ನು ಬಿಡುಗಡೆ ಮಾಡಲಿದೆ. 
  • ಸಿಟ್ರೊಯೆನ್ C3 ಏರ್‌ಕ್ರಾಸ್‌ನ ಅದೇ ಪ್ಲಾಟ್‌ಫಾರ್ಮ್‌ ಅನ್ನು ಬಸಾಲ್ಟ್ ವಿಷನ್ ಆಧರಿಸಿರುತ್ತದೆ.
  • ಆಟೋಮ್ಯಾಟಿಕ್‌ ಎಸಿ, ಕ್ರೂಸ್ ಕಂಟ್ರೋಲ್‌ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ C3 ಮತ್ತು C3 ಏರ್‌ಕ್ರಾಸ್‌ನಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಬಹುದು.
  • C3 ಮತ್ತು C3 ಏರ್‌ಕ್ರಾಸ್‌ನಲ್ಲಿ ಕಂಡುಬರುವ ಅದೇ 110 PS 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಸಾಲ್ಟ್ ಬಳಸುವ ಸಾಧ್ಯತೆಯಿದೆ.
  • ಭಾರತದಲ್ಲಿ, ಇದು 2024 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ, ಇದರ ಬೆಲೆ ರೂ 8 ಲಕ್ಷ ರೂನಿಂದ ಪ್ರಾರಂಭವಾಗುತ್ತದೆ.

ಫ್ರೆಂಚ್ ವಾಹನ ತಯಾರಕರ ಎಲ್ಲಾ-ಹೊಸ ಕೂಪ್‌ ಎಸ್‌ಯುವಿಯಾದ ಸಿಟ್ರೊಯೆನ್ ಬಸಾಲ್ಟ್ ವಿಷನ್, ಮಾರ್ಚ್ 27, 2024 ರಂದು ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿದೆ. ಸಿಟ್ರೊಯೆನ್‌ನ ಈ ಎಸ್‌ಯುವಿ  ಕೂಪ್ ಅನ್ನು ಹಲವು ಬಾರಿ ಪರೀಕ್ಷಿಸುವಾಗ ರಹಸ್ಯವಾಗಿ ಪೋಟೊಗಳನ್ನು ಸೆರೆ ಹಿಡಿಯಲಾಗಿದೆ ಮತ್ತು ಇದನ್ನು ಮೊದಲು C3X ಎಂದು ಕರೆಯಲಾಗುತ್ತಿತ್ತು. ಇದನ್ನು ದಕ್ಷಿಣ ಅಮೆರಿಕಾ ಮತ್ತು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಸಿಟ್ರೊಯೆನ್ C3 ಮತ್ತು C3 ಏರ್‌ಕ್ರಾಸ್‌ನ ಅದೇ CMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಬಹುದು. ಈ ಹೊಸ ಸಿಟ್ರೊಯೆನ್ಎಸ್‌ಯುವಿಯಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂಬುದು ಇಲ್ಲಿದೆ.

ಸ್ಪೋರ್ಟಿಯರ್ ಕೂಪ್‌ ಡಿಸೈನ್‌

Citroen eC4X

ವಿನ್ಯಾಸದ ವಿಷಯದಲ್ಲಿ ಸಿಟ್ರೊಯೆನ್ ಹೆಚ್ಚು ಬಹಿರಂಗಪಡಿಸದಿದ್ದರೂ, ಟೀಸರ್ ಅದರ ಇಳಿಜಾರಾದ ರೂಫ್‌ಲೈನ್‌ ಅನ್ನು ಪ್ರದರ್ಶಿಸುತ್ತದೆ, ಇದು ಕೂಪ್ ತರಹದ ನೋಟವನ್ನು ನೀಡುತ್ತದೆ. ಸ್ಕ್ವೇರ್-ಇಶ್ ಟೈಲ್‌ಲ್ಯಾಂಪ್‌ಗಳಿಗಾಗಿ ನಾವು ಈಗ ಗುರುತಿಸಬಹುದಾದ ಸಿಟ್ರೊಯೆನ್ ಲೈಟ್ ಸಿಗ್ನೇಚರ್ ಅನ್ನು ಸಹ ನೋಡುತ್ತೇವೆ. ಹಿಂದಿನ ರಹಸ್ಯ ಪೋಟೋಗಳ ಆಧಾರದ ಮೇಲೆ, ಬಸಾಲ್ಟ್ ವಿಷನ್ ಇತರ ವಿನ್ಯಾಸದ ಹೋಲಿಕೆಗಳನ್ನು ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಾದ C3 ಮತ್ತು C3 ಏರ್‌ಕ್ರಾಸ್‌ನೊಂದಿಗೆ ಹಂಚಿಕೊಳ್ಳಬಹುದು, ವಿಶೇಷವಾಗಿ ಮುಂಭಾಗದ ಫೇಸಿಯಾ(ಬಂಪರ್‌ನ ಕವರ್).

ಇದನ್ನು ಸಹ ಓದಿ: ಭಾರತದಲ್ಲಿ ಫೇಸ್‌ಲಿಫ್ಟ್ ಬಿಡುಗಡೆಗೆ ಮುಂಚಿತವಾಗಿಯೇ Skoda Kodiaq ನ ಟಾಪ್ ವೇರಿಯಂಟ್‌ನ ಬೆಲೆಗಳಲ್ಲಿ ಕಡಿತ

ಕ್ಯಾಬಿನ್ ಮತ್ತು ವೈಶಿಷ್ಟ್ಯಗಳು

Citroen C3 Aircross cabin

ಸಿಟ್ರೊಯೆನ್ ಬಸಾಲ್ಟ್ ವಿಷನ್ ಬಹುಶಃ C3 ಮತ್ತು C3 ಏರ್‌ಕ್ರಾಸ್‌ನಂತೆಯೇ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಕ್ಯಾಬಿನ್ ಅನ್ನು ಹೊಂದಿರುತ್ತದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಅದೇ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು C3 ಏರ್‌ಕ್ರಾಸ್ ಎಸ್‌ಯುವಿ ಒಳಗೆ ನೋಡಿದಂತೆ 7-ಇಂಚಿನ ಸಂಪೂರ್ಣ-ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಯನ್ನು ಪಡೆಯಬಹುದು. ಇದು ಆಟೋಮ್ಯಾಟಿಕ್ ಎಸಿ, ಕ್ರೂಸ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ ನಂತಹ ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ನಲ್ಲಿರುವ ಸೌಕರ್ಯಗಳನ್ನು ಸೇರಿಸಬಹುದು.

ಸುರಕ್ಷತೆಯ ದೃಷ್ಟಿಯಿಂದ, ಇಂಡಿಯಾ-ಸ್ಪೆಕ್ ಸಿಟ್ರೊಯೆನ್ ಎಸ್‌ಯುವಿ ಕೂಪ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ವರೆಗೆ ಪಡೆಯಬಹುದು. 

ನಿರೀಕ್ಷಿತ ಪವರ್‌ಟ್ರೇನ್

Citroen C3 Aircross 1.2-litre turbo-petrol engine

ಇಂಡಿಯಾ-ಸ್ಪೆಕ್ ಸಿಟ್ರೊಯೆನ್ ಬಸಾಲ್ಟ್ ವಿಷನ್ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು (110 PS / 205 Nm ವರೆಗೆ) C3 ಹ್ಯಾಚ್‌ಬ್ಯಾಕ್ ಮತ್ತು C3 ಏರ್‌ಕ್ರಾಸ್ SUV ಯಂತೆಯೇ ಬಳಸಬಹುದು. ಇದನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಆಗಿ  ಜೋಡಿಸಲಾಗುತ್ತದೆ.

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

 ಸಿಟ್ರೊಯೆನ್ ಬಸಾಲ್ಟ್ ವಿಷನ್ ಮಾರ್ಚ್ 27 ರಂದು ಜಾಗತಿಕವಾಗಿ ಅನಾವರಣಗೊಂಡಿದ್ದು, 2024 ರ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಿಟ್ರೊಯೆನ್ ಇದರ ಬೆಲೆಯನ್ನು 8 ಲಕ್ಷ ರೂ.ನಿಂದ ಪ್ರಾರಂಭಿಸಬಹುದು. ಭಾರತದಲ್ಲಿ ಇದು ಮುಂಬರುವ ಟಾಟಾ ಕರ್ವ್‌ ಜೊತೆಗೆ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ವೋಕ್ಸ್‌ವ್ಯಾಗನ್ ಟೈಗನ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್‌, ಸ್ಕೋಡಾ ಕುಶಾಕ್ ಮತ್ತು ಹೋಂಡಾ ಎಲಿವೇಟ್‌ನಂತಹ ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Citroen ಬಸಾಲ್ಟ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience