• English
  • Login / Register

ಸಿಟ್ರಾನ್ C3 ಏರ್‌ಕ್ರಾಸ್ Vs ಕಾಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿಗಳು: ಸ್ಪರ್ಧೆಯಲ್ಲಿ ಯಾವುದು ಅತಿ ದೊಡ್ಡದು ?

ಸಿಟ್ರೊನ್ aircross ಗಾಗಿ rohit ಮೂಲಕ ಮೇ 05, 2023 10:20 am ರಂದು ಪ್ರಕಟಿಸಲಾಗಿದೆ

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

C3 ಹ್ಯಾಚ್‌ಬ್ಯಾಕ್‌ನ ವಿಸ್ತರಿಸಲ್ಪಟ್ಟ ಆವೃತ್ತಿಯಾಗಿರುವ ಈ C3 ಏರ್‌ಕ್ರಾಸ್. 5- ಮತ್ತು 7-ಸೀಟುಗಳೆರಡೂ ಆಯ್ಕೆಗಳನ್ನು ಹೊಂದಿರುವ ಏಕೈಕ ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುತ್ತದೆ

Toyota Urban Cruiser Hyryder, Citroen C3 Aircross and Hyundai Creta

ಭಾರತದಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಸ್ಪೇಸ್ ಮತ್ತು ಹ್ಯಾಚ್‌ಬ್ಯಾಕ್ ವಿಭಾಗವನ್ನು ಪ್ರವೇಶಿಸಿದ ನಂತರ, ಸಿಟ್ರಾನ್ ಈಗ ತನ್ನ ಎಲ್ಲಾ ಹೊಸ ಭಾರತ-ಕೇಂದ್ರಿತ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. –C3-ಆಧಾರಿತ ಎಸ್‌ಯುವಿ ಆಗಿರುವ– ಈ ಸಿಟ್ರಾನ್ C3 ಏರ್‌ಕ್ರಾಸ್ ಈಗ ತಾನೇ ಅನಾವರಣಗೊಂಡಿದ್ದು, 5- ಮತ್ತು 7-ಸೀಟುಗಳ ವಿನ್ಯಾಸದೊಂದಿಗೆ ಬರಲಿದೆ. ಈ ಫ್ರೆಂಚ್ ಮಾರ್ಕ್ ಎಲ್ಲಾ ವಿವರಗಳನ್ನು ಬಹಿರಂಗಪಡಿಸಿಲ್ಲದಿದ್ದರೂ ಅದರ ಆಯಾಮಗಳು ಮತ್ತು ಕೆಲವು ಗಮನಾರ್ಹ ಫೀಚರ್‌ಗಳನ್ನು ಒಳಗೊಂಡಂತೆ ಕೆಲವು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದೆ.

 

ಗಾತ್ರದ ವಿವರ

ಆಯಾಮ

ಸಿಟ್ರಾನ್ C3 ಏರ್‌ಕ್ರಾಸ್

ಹ್ಯುಂಡೈ ಕ್ರೆಟಾ /ಕಿಯಾ ಸೆಲ್ಟೋಸ್

ಮಾರುತಿ ಗ್ರ್ಯಾಂಡ್ ವಿಟಾರಾ/ಟೊಯೋಟಾ ಹೈರೈಡರ್

ಸ್ಕೋಡಾ ಕುಶಾಕ್/ವಿಡಬ್ಲ್ಯೂ ಟೈಗನ್

ಎಂಜಿ ಆಸ್ಟರ್

ಉದ್ದ

4,300mm (ಅಂದಾಜು.)

4,300mm/4,315mm

4,345mm/4,365mm

4,225mm/4,221mm

4,323mm

ಅಗಲ

1,796mm

1,790mm/1,800mm

1,795mm

1,760mm

1,809mm

ಎತ್ತರ

1,654mm

1,635mm/1,645mm

1,645mm/1635mm

1,612mm

1,650mm

ವ್ಹೀಲ್‌ಬೇಸ್

2,671mm

2,610mm

2,600mm

2,651mm

2,585mm

ಗ್ರೌಂಡ್ ಕ್ಲಿಯರೆನ್ಸ್

200mm

N.A.

N.A.

N.A.

N.A.

ಬೂಟ್ ಸ್ಪೇಸ್

511 ಲೀಟರ್‌ಗಳವರೆಗೆ

N.A.

N.A.

385 ಲೀಟರ್‌ಗಳು

N.A.

ಇದನ್ನೂ ವೀಕ್ಷಿಸಿ: ಈ 12 ಚಿತ್ರಗಳಲ್ಲಿ ಸಿಟ್ರಾನ್ C3 ಏರ್‌ಕ್ರಾಸ್ ಎಸ್‌ಯುವಿಯನ್ನು ಪರಿಶೀಲಿಸಿ

 

ಪ್ರಮುಖಾಂಶಗಳು

Toyota Urban Cruiser Hyryder

MG Astor

  • ಈ C3 ಏರ್‌ಕ್ರಾಸ್ ಸ್ಕೋಡಾ-ವಿಡಬ್ಲ್ಯೂ ಎಸ್‌ಯುವಿ ಜೋಡಿಗಿಂತ ಉದ್ದವಾಗಿದ್ದರೆ ಕ್ರೆಟಾಗೆ ಸಮಾನಾಗಿದೆ ಮತ್ತು ಉಳಿದವುಗಳಿಗಿಂತ ಗಿಡ್ಡದಾಗಿದೆ. ಅರ್ಬನ್ ಕ್ರೂಸರ್ ಹೈರೈಡರ್ ಈ ವಿಭಾಗದಲ್ಲಿ ಅತಿ ಉದ್ದದ ಎಸ್‌ಯುವಿ ಆಗಿದ್ದು, ಎಂಜಿ ಆಸ್ಟರ್ ಭಾರತದಲ್ಲಿ ವಿಶಾಲವಾದ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ.

Citroen C3 Aircross side

  •  ಇದರರ್ಥ, ಈ ವಿಭಾಗದಲ್ಲಿ ಇದು ಅತ್ಯಂತ ಎತ್ತರವಾಗಿದೆ ಮತ್ತು  2,671mm ಅಳತೆಯ ಉದ್ದವಾದ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದು 5- ಮತ್ತು 7-ಸೀಟುಗಳ ಸಂರಚನೆಯನ್ನು ಹೊಂದಿದ್ದು, ತೆಗೆಯಲು ಸಾಧ್ಯವಾಗುವಂತಹ ಮೂರನೇ ಸಾಲಿನ ಸೀಟುಗಳನ್ನು ಸಹ ಹೊಂದಿದೆ.
  • ಸಿಟ್ರಾನ್, ಈ C3 ಏರ್‌ಕ್ರಾಸ್ 200mm ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

Citroen C3 Aircross third-row folded down

  •  ಮೂರನೇ ಸಾಲಿನ ಸೀಟುಗಳನ್ನು ತೆಗೆದುಹಾಕುವುದರೊಂದಿಗೆ, ಈ C3 ಏರ್‌ಕ್ರಾಸ್ 511 ಲೀಟರ್‌ಗಳಷ್ಟು ಬೂಟ್‌ಸ್ಪೇಸ್ ಅನ್ನು ಹೊಂದಿದ್ದು, ಇದು ಈ ವಿಭಾಗದಲ್ಲಿ ಗರಿಷ್ಠವಾಗಿದೆ. ಇದರ ಐದು-ಸೀಟುಗಳ ವಿವರಣೆಯಲ್ಲಿಯೂ ಸಹ, ಇದು 444 ಲೀಟರ್‌ಗಳ ಸೆಗ್ಮೆಂಟ್-ಲೀಡಿಂಗ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಇದನ್ನೂ ಪರಿಶೀಲಿಸಿ: ಮರ್ಸಿಡಿಸ್ ಬೆನ್ಝ್ ಇ-ಕ್ಲಾಸ್ ವರ್ಷದಿಂದ ವರ್ಷಕ್ಕೆ ಹೇಗೆ ವಿಕಸನಗೊಂಡಿದೆ ಎಂಬುದರ ಕುರಿತಾದ ಒಂದು ನೋಟ

 

ಫೀಚರ್‌ಗಳ ಅವಲೋಕನ

Citroen C3 Aircross cabin

 ಈ ಕಾರು ತಯಾರಕರು, ವೈರ್‌ಲೆಸ್ ಆ್ಯಂಡ್ರಾಯ್ಡ್‌ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮತ್ತು ಎರಡನೇ-ಸಾಲಿನ ರೂಫ್-ಮೌಂಟೆಡ್ ಎಸಿ ವೆಂಟ್‌ಗಳು (7-ಸೀಟರ್‌ಗೆ ಮಾತ್ರ) ಅನ್ನು ನೀಡಿದ್ದಾರೆ. ಇದರ ಸುರಕ್ಷತಾ ಕಿಟ್‌ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್-ಸ್ಟಾರ್ಟ್ ಅಸಿಸ್ಟ್, ರಿವರ್ಸಿಂಗ್ ಕ್ಯಾಮರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

Citroen C3 Aircross turbo-petrol engine

ಈ C3 ಏರ್‌ಕ್ರಾಸ್ ಬಿಡುಗಡೆಯ ಸಮಯದಲ್ಲಿ ಕೇವಲ ಒಂದು ಎಂಜಿನ್ ಆಯ್ಕೆಯನ್ನು ಹೊಂದಿದೆ-- C3ಯ 6-ಸ್ಪೀಡ್ ಎಂಟಿಗೆ ಜೊತೆಯಾದ 1.2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ – ಉತ್ತಮ ಸ್ಥಿತಿಯಲ್ಲಿರಬಹುದು. ಸಿಟ್ರಾನ್ ಮುಂದೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಎಸ್‌ಯುವಿಯನ್ನು ಸಹ ಪಡೆಯುತ್ತದೆ. C3 ಏರ್‌ಕ್ರಾಸ್‌ನ ಪ್ಲಾಟ್‌ಫಾರ್ಮ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇವಿ ಕೂಡ ಪೈಪ್‌ಲೈನ್‌ನಲ್ಲಿರಬಹುದು.

Citroen C3 Aircross rear

ಜುಲೈ 2023 ರಲ್ಲಿ ಸಿಟ್ರಾನ್ C3 ಏರ್‌ಕ್ರಾಸ್ ಅನ್ನು ರೂ. 9 ಲಕ್ಷದ ಆರಂಭಿಕ ಬೆಲೆಯೊಂದಿಗೆ (ಎಕ್ಸ್-ಶೋರೂಮ್) ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಎಸ್‌ಯುವಿಯು ಮಾರುತಿ ಗ್ರ್ಯಾಂಡ್ ವಿಟಾರಾ, ಫೋಕ್ಸ್‌ವ್ಯಾಗನ್ ಟೈಗನ್, ಎಂಜಿ ಆಸ್ಟರ್, ಹ್ಯುಂಡೈ ಕ್ರೆಟಾ, ಟೊಯೋಟಾ ಹೈರೈಡರ್, ಸ್ಕೋಡಾ ಕುಶಾಕ್ ಮತ್ತು ಕಿಯಾ ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ಇನ್ನಷ್ಟು ಇಲ್ಲಿ ಓದಿ : ಸಿಟ್ರಾನ್ C3 ಆನ್‌ರೋಡ್ ಬೆಲೆ

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Citroen aircross

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience