Login or Register ಅತ್ಯುತ್ತಮ CarDekho experience ಗೆ
Login

ಸಿಟ್ರಾನ್ C3 ಏರ್‌ಕ್ರಾಸ್ Vs ಕಾಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿಗಳು: ಸ್ಪರ್ಧೆಯಲ್ಲಿ ಯಾವುದು ಅತಿ ದೊಡ್ಡದು ?

C3 ಹ್ಯಾಚ್‌ಬ್ಯಾಕ್‌ನ ವಿಸ್ತರಿಸಲ್ಪಟ್ಟ ಆವೃತ್ತಿಯಾಗಿರುವ ಈ C3 ಏರ್‌ಕ್ರಾಸ್. 5- ಮತ್ತು 7-ಸೀಟುಗಳೆರಡೂ ಆಯ್ಕೆಗಳನ್ನು ಹೊಂದಿರುವ ಏಕೈಕ ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುತ್ತದೆ

ಭಾರತದಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಸ್ಪೇಸ್ ಮತ್ತು ಹ್ಯಾಚ್‌ಬ್ಯಾಕ್ ವಿಭಾಗವನ್ನು ಪ್ರವೇಶಿಸಿದ ನಂತರ, ಸಿಟ್ರಾನ್ ಈಗ ತನ್ನ ಎಲ್ಲಾ ಹೊಸ ಭಾರತ-ಕೇಂದ್ರಿತ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. –C3-ಆಧಾರಿತ ಎಸ್‌ಯುವಿ ಆಗಿರುವ– ಈ ಸಿಟ್ರಾನ್ C3 ಏರ್‌ಕ್ರಾಸ್ ಈಗ ತಾನೇ ಅನಾವರಣಗೊಂಡಿದ್ದು, 5- ಮತ್ತು 7-ಸೀಟುಗಳ ವಿನ್ಯಾಸದೊಂದಿಗೆ ಬರಲಿದೆ. ಈ ಫ್ರೆಂಚ್ ಮಾರ್ಕ್ ಎಲ್ಲಾ ವಿವರಗಳನ್ನು ಬಹಿರಂಗಪಡಿಸಿಲ್ಲದಿದ್ದರೂ ಅದರ ಆಯಾಮಗಳು ಮತ್ತು ಕೆಲವು ಗಮನಾರ್ಹ ಫೀಚರ್‌ಗಳನ್ನು ಒಳಗೊಂಡಂತೆ ಕೆಲವು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದೆ.

ಗಾತ್ರದ ವಿವರ

ಆಯಾಮ

ಸಿಟ್ರಾನ್ C3 ಏರ್‌ಕ್ರಾಸ್

ಹ್ಯುಂಡೈ ಕ್ರೆಟಾ /ಕಿಯಾ ಸೆಲ್ಟೋಸ್

ಮಾರುತಿ ಗ್ರ್ಯಾಂಡ್ ವಿಟಾರಾ/ಟೊಯೋಟಾ ಹೈರೈಡರ್

ಸ್ಕೋಡಾ ಕುಶಾಕ್/ವಿಡಬ್ಲ್ಯೂ ಟೈಗನ್

ಎಂಜಿ ಆಸ್ಟರ್

ಉದ್ದ

4,300mm (ಅಂದಾಜು.)

4,300mm/4,315mm

4,345mm/4,365mm

4,225mm/4,221mm

4,323mm

ಅಗಲ

1,796mm

1,790mm/1,800mm

1,795mm

1,760mm

1,809mm

ಎತ್ತರ

1,654mm

1,635mm/1,645mm

1,645mm/1635mm

1,612mm

1,650mm

ವ್ಹೀಲ್‌ಬೇಸ್

2,671mm

2,610mm

2,600mm

2,651mm

2,585mm

ಗ್ರೌಂಡ್ ಕ್ಲಿಯರೆನ್ಸ್

200mm

N.A.

N.A.

N.A.

N.A.

ಬೂಟ್ ಸ್ಪೇಸ್

511 ಲೀಟರ್‌ಗಳವರೆಗೆ

N.A.

N.A.

385 ಲೀಟರ್‌ಗಳು

N.A.

ಇದನ್ನೂ ವೀಕ್ಷಿಸಿ: ಈ 12 ಚಿತ್ರಗಳಲ್ಲಿ ಸಿಟ್ರಾನ್ C3 ಏರ್‌ಕ್ರಾಸ್ ಎಸ್‌ಯುವಿಯನ್ನು ಪರಿಶೀಲಿಸಿ

ಪ್ರಮುಖಾಂಶಗಳು

  • ಈ C3 ಏರ್‌ಕ್ರಾಸ್ ಸ್ಕೋಡಾ-ವಿಡಬ್ಲ್ಯೂ ಎಸ್‌ಯುವಿ ಜೋಡಿಗಿಂತ ಉದ್ದವಾಗಿದ್ದರೆ ಕ್ರೆಟಾಗೆ ಸಮಾನಾಗಿದೆ ಮತ್ತು ಉಳಿದವುಗಳಿಗಿಂತ ಗಿಡ್ಡದಾಗಿದೆ. ಅರ್ಬನ್ ಕ್ರೂಸರ್ ಹೈರೈಡರ್ ಈ ವಿಭಾಗದಲ್ಲಿ ಅತಿ ಉದ್ದದ ಎಸ್‌ಯುವಿ ಆಗಿದ್ದು, ಎಂಜಿ ಆಸ್ಟರ್ ಭಾರತದಲ್ಲಿ ವಿಶಾಲವಾದ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ.

  • ಇದರರ್ಥ, ಈ ವಿಭಾಗದಲ್ಲಿ ಇದು ಅತ್ಯಂತ ಎತ್ತರವಾಗಿದೆ ಮತ್ತು 2,671mm ಅಳತೆಯ ಉದ್ದವಾದ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದು 5- ಮತ್ತು 7-ಸೀಟುಗಳ ಸಂರಚನೆಯನ್ನು ಹೊಂದಿದ್ದು, ತೆಗೆಯಲು ಸಾಧ್ಯವಾಗುವಂತಹ ಮೂರನೇ ಸಾಲಿನ ಸೀಟುಗಳನ್ನು ಸಹ ಹೊಂದಿದೆ.
  • ಸಿಟ್ರಾನ್, ಈ C3 ಏರ್‌ಕ್ರಾಸ್ 200mm ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

  • ಮೂರನೇ ಸಾಲಿನ ಸೀಟುಗಳನ್ನು ತೆಗೆದುಹಾಕುವುದರೊಂದಿಗೆ, ಈ C3 ಏರ್‌ಕ್ರಾಸ್ 511 ಲೀಟರ್‌ಗಳಷ್ಟು ಬೂಟ್‌ಸ್ಪೇಸ್ ಅನ್ನು ಹೊಂದಿದ್ದು, ಇದು ಈ ವಿಭಾಗದಲ್ಲಿ ಗರಿಷ್ಠವಾಗಿದೆ. ಇದರ ಐದು-ಸೀಟುಗಳ ವಿವರಣೆಯಲ್ಲಿಯೂ ಸಹ, ಇದು 444 ಲೀಟರ್‌ಗಳ ಸೆಗ್ಮೆಂಟ್-ಲೀಡಿಂಗ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಇದನ್ನೂ ಪರಿಶೀಲಿಸಿ: ಮರ್ಸಿಡಿಸ್ ಬೆನ್ಝ್ ಇ-ಕ್ಲಾಸ್ ವರ್ಷದಿಂದ ವರ್ಷಕ್ಕೆ ಹೇಗೆ ವಿಕಸನಗೊಂಡಿದೆ ಎಂಬುದರ ಕುರಿತಾದ ಒಂದು ನೋಟ

ಫೀಚರ್‌ಗಳ ಅವಲೋಕನ

ಈ ಕಾರು ತಯಾರಕರು, ವೈರ್‌ಲೆಸ್ ಆ್ಯಂಡ್ರಾಯ್ಡ್‌ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮತ್ತು ಎರಡನೇ-ಸಾಲಿನ ರೂಫ್-ಮೌಂಟೆಡ್ ಎಸಿ ವೆಂಟ್‌ಗಳು (7-ಸೀಟರ್‌ಗೆ ಮಾತ್ರ) ಅನ್ನು ನೀಡಿದ್ದಾರೆ. ಇದರ ಸುರಕ್ಷತಾ ಕಿಟ್‌ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್-ಸ್ಟಾರ್ಟ್ ಅಸಿಸ್ಟ್, ರಿವರ್ಸಿಂಗ್ ಕ್ಯಾಮರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಈ C3 ಏರ್‌ಕ್ರಾಸ್ ಬಿಡುಗಡೆಯ ಸಮಯದಲ್ಲಿ ಕೇವಲ ಒಂದು ಎಂಜಿನ್ ಆಯ್ಕೆಯನ್ನು ಹೊಂದಿದೆ-- C3ಯ 6-ಸ್ಪೀಡ್ ಎಂಟಿಗೆ ಜೊತೆಯಾದ 1.2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ – ಉತ್ತಮ ಸ್ಥಿತಿಯಲ್ಲಿರಬಹುದು. ಸಿಟ್ರಾನ್ ಮುಂದೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಎಸ್‌ಯುವಿಯನ್ನು ಸಹ ಪಡೆಯುತ್ತದೆ. C3 ಏರ್‌ಕ್ರಾಸ್‌ನ ಪ್ಲಾಟ್‌ಫಾರ್ಮ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇವಿ ಕೂಡ ಪೈಪ್‌ಲೈನ್‌ನಲ್ಲಿರಬಹುದು.

ಜುಲೈ 2023 ರಲ್ಲಿ ಸಿಟ್ರಾನ್ C3 ಏರ್‌ಕ್ರಾಸ್ ಅನ್ನು ರೂ. 9 ಲಕ್ಷದ ಆರಂಭಿಕ ಬೆಲೆಯೊಂದಿಗೆ (ಎಕ್ಸ್-ಶೋರೂಮ್) ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಎಸ್‌ಯುವಿಯು ಮಾರುತಿ ಗ್ರ್ಯಾಂಡ್ ವಿಟಾರಾ, ಫೋಕ್ಸ್‌ವ್ಯಾಗನ್ ಟೈಗನ್, ಎಂಜಿ ಆಸ್ಟರ್, ಹ್ಯುಂಡೈ ಕ್ರೆಟಾ, ಟೊಯೋಟಾ ಹೈರೈಡರ್, ಸ್ಕೋಡಾ ಕುಶಾಕ್ ಮತ್ತು ಕಿಯಾ ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ಇನ್ನಷ್ಟು ಇಲ್ಲಿ ಓದಿ : ಸಿಟ್ರಾನ್ C3 ಆನ್‌ರೋಡ್ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 12 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸಿಟ್ರೊನ್ ಸಿ3 Aircross

Read Full News

explore similar ಕಾರುಗಳು

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಕಿಯಾ ಸೆಲ್ಟೋಸ್

ಡೀಸಲ್19.1 ಕೆಎಂಪಿಎಲ್
ಪೆಟ್ರೋಲ್17.7 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಗ್ರಾಂಡ್ ವಿಟರಾ

ಪೆಟ್ರೋಲ್21.11 ಕೆಎಂಪಿಎಲ್
ಸಿಎನ್‌ಜಿ26.6 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ