Login or Register ಅತ್ಯುತ್ತಮ CarDekho experience ಗೆ
Login

Citroen C3 ನಲ್ಲಿ ಇನ್ನು ಮುಂದೆ ಝೆಸ್ಟಿ ಆರೆಂಜ್ ಬಾಡಿ ಕಲರ್‌ ಲಭ್ಯವಿರಲ್ಲ..!

published on ಫೆಬ್ರವಾರಿ 27, 2024 05:40 pm by rohit for ಸಿಟ್ರೊನ್ ಸಿ3

ಸಿಟ್ರೊಯೆನ್ C3 ಇದರ ಬದಲಾಗಿ ಹೊಸ ಕಾಸ್ಮೊ ಬ್ಲೂ ಕಲರ್‌ನ ಆಯ್ಕೆಯನ್ನು ಪಡೆಯುತ್ತದೆ

  • ಭಾರತದಲ್ಲಿ C3 ಬಿಡುಗಡೆಯಾದಾಗಿನಿಂದ ಝೆಸ್ಟಿ ಆರೆಂಜ್ ಶೇಡ್ ಲಭ್ಯವಿತ್ತು.
  • ಫಾಗ್ ಲ್ಯಾಂಪ್‌ಗಳ ಸುತ್ತಲೂ ಮತ್ತು ಒಆರ್‌ವಿಎಮ್‌ ಹೌಸಿಂಗ್‌ಗಳ ಮೇಲೆ ಪೇಂಟ್ ಫಿನಿಶ್ ಹೊಂದಿರುವ 'ವೈಬ್' ಆಕ್ಸೆಸರಿ ಪ್ಯಾಕ್‌ನಲ್ಲಿ ಸಹ ಬದಲಾಯಿಸಲಾಗಿದೆ.
  • ಹ್ಯಾಚ್‌ಬ್ಯಾಕ್‌ಗೆ ಬೇರೆ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ.
  • ವೈಶಿಷ್ಟ್ಯಗಳು 10-ಇಂಚಿನ ಟಚ್‌ಸ್ಕ್ರೀನ್, ಮ್ಯಾನುಯಲ್ ಎಸಿ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿವೆ.
  • 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಮತ್ತು 1.2-ಲೀಟರ್ ಟರ್ಬೊ ಎಂಬ ಎರಡು ಪೆಟ್ರೋಲ್ ಎಂಜಿನ್‌ಗಳನ್ನು ಒದಗಿಸಲಾಗಿದೆ.
  • ದೆಹಲಿಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆಗಳು ರೂ 6.16 ಲಕ್ಷ ರೂ.ನಿಂದ 8.96 ಲಕ್ಷ ರೂ.ವರೆಗೆ ಇರಲಿದೆ.

ಸಿಟ್ರೊಯೆನ್ C3 ಹ್ಯಾಚ್‌ಬ್ಯಾಕ್‌ಗೆ ಕಲರ್‌ನ ಮರು ಹೊಂದಾಣಿಕೆ ಮಾಡಲಾಗಿದೆ. ಇದರ ಝೆಸ್ಟಿ ಆರೆಂಜ್ ಬಣ್ಣದ ಆಯ್ಕೆಯನ್ನು ಈಗ C3 ಏರ್‌ಕ್ರಾಸ್ ಎಸ್‌ಯುವಿ ಯಿಂದ ಹೊಸ ಕಾಸ್ಮೊ ಬ್ಲೂ ಬಣ್ಣಕ್ಕೆ ಬದಲಾಯಿಸಲಾಗಿದೆ. ಇಸಿ3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನೊಂದಿಗೆ ಆರೆಂಜ್‌ ಬಣ್ಣವು ಇನ್ನು ಮುಂದೆ ಲಭ್ಯವಿರುವುದಿಲ್ಲ. ವಿಶಿಷ್ಟವಾದ ಫ್ರೆಂಚ್ ಸ್ಟೈಲಿಂಗ್‌ಗೆ ಹೆಸರುವಾಸಿಯಾಗಿರುವ ಈ ಹ್ಯಾಚ್‌ಬ್ಯಾಕ್ 2022 ರಲ್ಲಿ ಮಾರಾಟವಾದಾಗಿನಿಂದ ಆರೆಂಜ್‌ ಕಲರ್‌ನೊಂದಿಗೆ ನೀಡಲ್ಪಟ್ಟಿದೆ.

ಬಣ್ಣದ ಪರಿಷ್ಕರಣೆಯ ಕುರಿತು ಹೆಚ್ಚಿನ ವಿವರಗಳು

ಸಿಟ್ರೊಯೆನ್ ರೂಫ್‌ಗೆ ಮತ್ತು ಕೆಲವು ಡ್ಯುಯಲ್-ಟೋನ್ ಛಾಯೆಗಳಲ್ಲಿ ಜೆಸ್ಟಿ ಆರೆಂಜ್ ಬಣ್ಣವನ್ನು ನೀಡುತ್ತಿತ್ತು. ಹೊಸ ಕಾಸ್ಮೊ ಬ್ಲೂ ಛಾಯೆಯು ಈಗ ಆರೆಂಜ್‌ ಬಣ್ಣವನ್ನು ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ಸಹ ಬದಲಾಯಿಸಿದೆ, ಅವುಗಳು ಈ ಕೆಳಗಿನಂತಿವೆ:

  • ಕಾಸ್ಮೊ ಬ್ಲೂ ಜೊತೆ ಸ್ಟೀಲ್ ಗ್ರೇ

  • ಕಾಸ್ಮೋ ಬ್ಲೂ ಜೊತೆ ಪೋಲಾರ್ ವೈಟ್

ಹೊಸ ಕಾಸ್ಮೊ ಬ್ಲೂ ಬಣ್ಣವನ್ನು ಪೋಲಾರ್ ವೈಟ್ ರೂಫ್‌ನೊಂದಿಗೆ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯಲ್ಲಿಯೂ ಸಹ ಹೊಂದಬಹುದು.

ಇದು 'ವೈಬ್' ಆಕ್ಸೆಸರಿ ಪ್ಯಾಕ್‌ಗೆ ಬಂದಾಗ, ಇದು ಮುಂಭಾಗದ ಫಾಗ್‌ ಲ್ಯಾಂಪ್‌ಗಳು ಮತ್ತು ಹಿಂಭಾಗದ ರಿಫ್ಲೆಕ್ಟರ್‌ ಘಟಕದ ಸುತ್ತುವರೆದಿರುವ, ಒಆರ್‌ವಿಎಮ್‌ ಹೌಸಿಂಗ್‌ಗಳು ಮತ್ತು ಮುಂಭಾಗದ ಬಾಗಿಲಿನ ಇನ್ಸರ್ಟ್‌ಗಳಿಗೆ ಆರೆಂಜ್‌ ಫಿನಿಶ್‌ ಅನ್ನು ಹೊಂದಿದೆ. ಡ್ಯುಯಲ್-ಟೋನ್ ಆವೃತ್ತಿಗಳಲ್ಲಿ ಆಯ್ಕೆ ಮಾಡಿದಾಗ ಇದನ್ನು ಕಾಸ್ಮೊ ಬ್ಲೂ ಶೇಡ್‌ನಿಂದ ಬದಲಾಯಿಸಲಾಗಿದೆ, ಸಿಂಗಲ್-ಟೋನ್ ಪೇಂಟ್ ಶೇಡ್‌ನ ವೈಬ್ ಪ್ಯಾಕ್ ಇನ್ನೂ ಆರೆಂಜ್‌ ಹೈಲೈಟ್ಸ್‌ಗಳನ್ನು ಮಾತ್ರ ಒಳಗೊಂಡಿದೆ.

ಯಾವುದೇ ಇತರ ಬದಲಾವಣೆಗಳನ್ನು ಮಾಡಲಾಗಿದೆಯೇ?

ಬಣ್ಣದ ಆಪ್‌ಡೇಟ್‌ಗಳನ್ನು ಹೊರತುಪಡಿಸಿ, ಸಿಟ್ರೊಯೆನ್ ಹ್ಯಾಚ್‌ಬ್ಯಾಕ್‌ಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಇನ್ನೂ 10-ಇಂಚಿನ ಟಚ್‌ಸ್ಕ್ರೀನ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್‌ ಸೀಟ್‌, 4-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯೊಂದಿಗೆ ಸಜ್ಜುಗೊಂಡಿದೆ.

ಇದರ ಸುರಕ್ಷತಾ ಕಿಟ್‌ನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿವೆ.

ಇದನ್ನು ಸಹ ಓದಿ: ಇವುಗಳು ಭಾರತದಲ್ಲಿ ಕ್ರೂಸ್ ಕಂಟ್ರೋಲ್ ಹೊಂದಿರುವ 10 ಅತ್ಯಂತ ಕೈಗೆಟುಕುವ ಕಾರುಗಳು

ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳು

ಇದನ್ನು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ: ಮೊದಲನೆಯದು 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಎಂಜಿನ್ (82 PS / 115 Nm), ಇದನ್ನು 5-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು 1.2-ಲೀಟರ್ ಟರ್ಬೋಚಾರ್ಜ್ಡ್ ಯುನಿಟ್ (110 PS / 190 Nm) 6-ಸ್ಪೀಡ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. Citroen C3 ಗಾಗಿ ಇನ್ನೂ ಯಾವುದೇ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನ ಆಯ್ಕೆ ಇಲ್ಲ.

ಬೆಲೆಯ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

ದೆಹಲಿಯಲ್ಲಿ ಸಿಟ್ರೊಯೆನ್ ಸಿ3ಯ ಎಕ್ಸ್ ಶೋರೂಂ ಬೆಲೆಯು 6.16 ಲಕ್ಷ ರೂ.ನಿಂದ 8.96 ಲಕ್ಷ ರೂ. ನಡುವೆ ಇರಲಿದೆ. ಇದು ಮಾರುಕಟ್ಟೆಯಲ್ಲಿ ಮಾರುತಿ ವ್ಯಾಗನ್ ಆರ್ ಮತ್ತು ಸೆಲೆರಿಯೊ ಮತ್ತು ಟಾಟಾ ಟಿಯಾಗೊಗೆ ಸ್ಪರ್ಧೆಯನ್ನು ಒಡ್ಡುತ್ತದೆ. ಅದರ ಬೆಲೆ ಮತ್ತು ಆಯಾಮಗಳನ್ನು ಪರಿಗಣಿಸಿ, ಸಿಟ್ರೊಯೆನ್ ಹ್ಯಾಚ್‌ಬ್ಯಾಕ್ ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್, ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಹೆಚ್ಚು ಓದಿ : C3 ಆನ್‌ ರೋಡ್‌ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 18 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸಿಟ್ರೊನ್ ಸಿ3

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.24 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ