ಮತ್ತೊಮ್ಮೆ Force Gurkha 5-door ಅನ್ನು ಗುರುತನ್ನು ಮರೆಮಾಚುವ ಲುಕ್ ನಲ್ಲಿ ರಹಸ್ಯ ಫೋಟೊಗಳು ಸೆರೆ
ಬಲ ಗೂರ್ಖಾ 5 ಡೋರ್ ಗಾಗಿ ansh ಮೂಲಕ ಫೆಬ್ರವಾರಿ 27, 2024 06:31 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಆಫ್-ರೋಡರ್‌ನ ಈ ಉದ್ದವಾದ ವರ್ಷನ್ ಕಳೆದ ಸ್ವಲ್ಪ ಸಮಯದಿಂದ ತಯಾರಾಗುತ್ತಿದೆ ಮತ್ತು ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ
-
5-ಡೋರ್ ಫೋರ್ಸ್ ಗೂರ್ಖಾ ಕಳೆದ ಸುಮಾರು 2 ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿದೆ.
-
ಇದು ಕ್ರಮವಾಗಿ ಎರಡು ಮತ್ತು ಮೂರನೇ ಸಾಲಿಗೆ ಬೆಂಚ್ ಸೀಟ್‌ಗಳು ಮತ್ತು ಕ್ಯಾಪ್ಟನ್ ಸೀಟ್‌ಗಳೊಂದಿಗೆ ಮೂರು-ಸಾಲಿನ ಲೇಔಟ್ ಅನ್ನು ಪಡೆಯಲಿದೆ
-
3-ಡೋರ್ ವರ್ಷನ್ ನಲ್ಲಿ ಇರುವ ಅದೇ 2.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಫೋರ್ಸ್ ಇಲ್ಲಿ ಕೂಡ ನೀಡಲಿದೆ, ಆದರೆ ಉನ್ನತ ಹಂತದ ಅಪ್ಗ್ರೇಡ್ ನೊಂದಿಗೆ.
-
ಬೆಲೆಯು 16 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
5-ಡೋರ್ ಫೋರ್ಸ್ ಗೂರ್ಖಾ ಮತ್ತೊಂದು ಹೆಚ್ಚು ನಿರೀಕ್ಷಿತ ಆಫ್-ರೋಡರ್ ಆಗಿದ್ದು, ಇದನ್ನು ಹಲವು ಬಾರಿ ಸ್ಪೈ ಮಾಡಲಾಗಿದೆ. ಇತ್ತೀಚಿಗೆ ನೋಡಿದಾಗ, ಅದರ ಲುಕ್ ಅನ್ನು ಸಂಪೂರ್ಣವಾಗಿ ಮರೆಮಾಚಲಾಗಿದೆ ಆದರೆ ಅದರ ಸೈಡ್ ಮತ್ತು ಹಿಂಭಾಗದ ಪ್ರೊಫೈಲ್ ಅನ್ನು ವಿವರವಾಗಿ ನೋಡಿದ್ದೇವೆ. ಈ ದೊಡ್ಡದಾದ ಆಫ್ ರೋಡರ್ ನಲ್ಲಿ ಏನೇನಿದೆ ಎಂಬುದನ್ನು ನೋಡೋಣ.
ಏನೇನು ನೋಡಬಹುದು ?
5-ಡೋರ್ ವರ್ಷನ್ ಗೂರ್ಖಾದ ಸೈಡ್ ಪ್ರೊಫೈಲ್ ಅನ್ನು ಹೆಚ್ಚು ವಿವರವಾಗಿ ಇಲ್ಲಿ ನೋಡಬಹುದಾಗಿದೆ. ಇಲ್ಲಿ, ನೀವು ಅದರ 3-ಡೋರ್ ವರ್ಷನ್ ಗಿಂತ ಸ್ವಲ್ಪ ಭಿನ್ನವಾಗಿರುವ ಅಲೊಯ್ ವೀಲ್ಸ್ ಅನ್ನು ಕೂಡ ನೋಡಬಹುದು. ಇಲ್ಲಿ ಕ್ಯಾಬಿನ್ ಒಳಗೆ ಸುಲಭವಾಗಿ ಪ್ರವೇಶಿಸಲು ಸೈಡ್ ಸ್ಟೆಪ್ಸ್ ಗಳನ್ನು ಮತ್ತು ನಿಮ್ಮ ಲಗೇಜ್ ಗಳನ್ನು ಇರಿಸಲು ಬಾಕ್ಸ್ ಆಕಾರದ ಆಯತಾಕಾರದ ವಿಂಡೋಗಳು ಮತ್ತು ರೂಫ್ ರಾಕ್ ಅನ್ನು ನೀಡಲಾಗಿದೆ.
ಇದರ ಹಿಂಭಾಗವನ್ನು ಕೂಡ ವಿವರವಾಗಿ ಗುರುತಿಸಲಾಗಿದೆ. ನೀವು ಟೈಲ್‌ಗೇಟ್-ಮೌಂಟೆಡ್ ಅಲಾಯ್ ವೀಲ್, ನಿಮ್ಮ ಲಗೇಜ್ ಅನ್ನು ಮೇಲೇರಿ ಇರಿಸಲು ಏಣಿ ಮತ್ತು ಅದರ 3-ಡೋರ್ ವರ್ಷನ್ ನಲ್ಲಿ ಇರುವ ಅದೇ ಟೈಲ್‌ಲೈಟ್‌ಗಳನ್ನು ನೋಡಬಹುದು. ಇಲ್ಲಿ, ಎಲ್ಲವೂ ಅದರ 3-ಡೋರ್ ವರ್ಷನ್ ನಂತೆಯೇ ಇದೆ.
ಕ್ಯಾಬಿನ್ ಮತ್ತು ಫೀಚರ್ ಗಳು
5-ಡೋರ್ ಗೂರ್ಖಾದ ಕ್ಯಾಬಿನ್ ಅನ್ನು ಸ್ವಲ್ಪ ಸಮಯದ ಹಿಂದೆ ಡಾರ್ಕ್ ಗ್ರೇ ಬಣ್ಣದ ಕ್ಯಾಬಿನ್ ಮತ್ತು ಆಲ್ ಬ್ಲಾಕ್ ಸೀಟ್‌ಗಳೊಂದಿಗೆ ಸ್ಪೈ ಮಾಡಲಾಗಿತ್ತು. SUV ಯ ಈ ವರ್ಷನ್ ಮೂರು-ಸಾಲಿನ ಲೇಔಟ್‌ನಲ್ಲಿ ಬರುವ ಸಾಧ್ಯತೆಯಿದೆ, ಇಲ್ಲಿ ಎರಡನೇ ಸಾಲಿನಲ್ಲಿ ಬೆಂಚ್ ಸೀಟುಗಳು ಸಿಗಲಿವೆ ಮತ್ತು ಮೂರನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳನ್ನು ನೀಡಲಾಗುತ್ತದೆ. 3-ಡೋರ್ ವರ್ಷನ್ ಗೆ ಹೋಲಿಸಿದರೆ ಮತ್ತೊಂದು ಬದಲಾವಣೆಯೆಂದರೆ 4WD ಸೆಲೆಕ್ಟರ್ ಆಗಿದೆ, ಇದು 5-ಡೋರ್ ವರ್ಷನ್ ನಲ್ಲಿ ಎಲೆಕ್ಟ್ರಾನಿಕ್ ಆಗಿರುತ್ತದೆ.
ಇದನ್ನು ಕೂಡ ಓದಿ: ಮಹೀಂದ್ರ ಥಾರ್ 5-ಡೋರ್ ಅನ್ನು ಕೆಸರಿನಲ್ಲಿ ಸಿಲುಕಿಕೊಂಡಿರುವ ಸಂದರ್ಭದಲ್ಲಿ ಗುರುತಿಸಲಾಗಿದೆ
ಫೀಚರ್ ಗಳ ವಿಷಯದಲ್ಲಿ, 5-ಡೋರ್ ಗೂರ್ಖಾ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮುಂಭಾಗ ಮತ್ತು ಹಿಂಭಾಗದ ಪವರ್ ವಿಂಡೋಗಳು, ಹಿಂಭಾಗದ AC ವೆಂಟ್ ಗಳೊಂದಿಗೆ ಮ್ಯಾನುಯಲ್ AC, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ರಿಯರ್‌ವ್ಯೂ ಕ್ಯಾಮೆರಾದೊಂದಿಗೆ ಬರಲಿದೆ.
ಪವರ್‌ಟ್ರೇನ್ ವಿವರಗಳು
ಫೋರ್ಸ್ ತನ್ನ ಪ್ರಸ್ತುತ ಇರುವ 3-ಡೋರ್ ಮಾಡೆಲ್ ನಲ್ಲಿ ಇರುವ ಅದೇ ಎಂಜಿನ್ ಅನ್ನು 5-ಡೋರ್ ಗೂರ್ಖಾಗೆ ನೀಡಲಿದೆ: 2.6-ಲೀಟರ್ ಡೀಸೆಲ್ ಎಂಜಿನ್ (90 PS/250 Nm), ಇದು ಕೇವಲ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರಲಿದೆ. ಆದರೆ, 5-ಡೋರ್ ವರ್ಷನ್ ನಲ್ಲಿ, ಈ ಎಂಜಿನ್ ಉನ್ನತ ಹಂತದ ಟ್ಯೂನ್‌ನಲ್ಲಿ ಬರಬಹುದು. 5-ಡೋರ್ ಗೂರ್ಖಾ 4-ವೀಲ್-ಡ್ರೈವ್ ಅನ್ನು ಕೂಡ ಪಡೆಯಲಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ನಾವು 5-ಡೋರ್ ಫೋರ್ಸ್ ಗೂರ್ಖಾಗಾಗಿ ಕಳೆದ ಸ್ವಲ್ಪ ಸಮಯದಿಂದ ಕಾಯುತ್ತಿದ್ದೇವೆ ಮತ್ತು ಇಲ್ಲಿಯವರೆಗೆ SUV ಯ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಇದನ್ನು ಈ ವರ್ಷದ ಕೊನೆಯಲ್ಲಿ ರೂ 16 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಬಿಡುಗಡೆ ಮಾಡಲಾಗುವುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಬಿಡುಗಡೆಯಾದ ನಂತರ, ಇದು 5-ಡೋರ್ ಮಹೀಂದ್ರ ಥಾರ್ ಗೆ ಪ್ರತಿಸ್ಪರ್ಧಿಯಾಗಲಿದೆ ಮತ್ತು ಮಾರುತಿ ಜಿಮ್ನಿಗೆ ದೊಡ್ಡ ಮಟ್ಟದ ಪರ್ಯಾಯ ಆಯ್ಕೆಯಾಗಲಿದೆ.
ಇನ್ನಷ್ಟು ಓದಿ: ಗೂರ್ಖಾ ಡೀಸೆಲ್