Login or Register ಅತ್ಯುತ್ತಮ CarDekho experience ಗೆ
Login

ಮಹೀಂದ್ರಾ ಸ್ಕಾರ್ಪಿಯೋ ಎನ್‌ನಲ್ಲಿ ನೀರು ಸೋರಿಕೆ ವೀಡಿಯೋ ವೈರಲ್: ಎಡವಟ್ಟಾಗಿದ್ದೆಲ್ಲಿ?

ಮಹೀಂದ್ರಾ ಸ್ಕಾರ್ಪಿಯೋ ಎನ್ ಗಾಗಿ tarun ಮೂಲಕ ಮಾರ್ಚ್‌ 01, 2023 03:49 pm ರಂದು ಪ್ರಕಟಿಸಲಾಗಿದೆ

ನಿರ್ವಹಣೆ ಮತ್ತು ಪ್ರಯಾಣಿಕರ ಸುರಕ್ಷತೆಯೂ ಸೇರಿದಂತೆ ಅನೇಕ ಸಮಸ್ಯೆಗಳನ್ನು ಈ ಸನ್‌ರೂಫ್‌ಗಳು ತಂದೊಡ್ಡಬಹುದು.

  • ಸ್ಕಾರ್ಪಿಯೋ ಎನ್‌ನ ಸ್ಪೀಕರ್‌ಗಳು ಮತ್ತು ಕ್ಯಾಬಿನ್ ಲೈಟ್ ಪ್ಯಾನೆಲ್ ಮೂಲಕ ನೀರು ಸೋರಿಕೆಯಾಗುವ ವೀಡಿಯೋ ವೈರಲ್ ಆಗಿದೆ.
  • ಸನ್‌ರೂಫ್‌ನ ಅಸಮರ್ಪಕ ಮುಚ್ಚುವಿಕೆ ಅಥವಾ ಬ್ಲಾಕ್ ಆದ ಡ್ರೈನ್ ರಂಧ್ರಗಳು ಸಂಭಾವ್ಯ ಕಾರಣಗಳಾಗಿರಬಹುದು.
  • ರೂಫ್-ಮೌಂಟಡ್ ಸ್ಪೀಕರ್ ಪ್ಯಾನೆಲ್ ಸನ್‌ರೂಫ್‌ನಿಂದಲೇ ಕೆಳಗೆ ಕಾಣುವಂತೆ ಇರುವುದರಿಂದ ನೀರು ಒಳಕ್ಕೆ ಹರಿಯಲು ಸುಲಭವಾಯಿತು.
  • ಇದು ಇಲೆಕ್ಟ್ರಾನಿಕ್ಸ್‌ನ ಅಸಮರ್ಪಕ ಕಾರ್ಯ ಮತ್ತು ಭಾಗಗಳ ತುಕ್ಕುಹಿಡಿಯುವಿಕೆಗೆ ಕಾರಣವಾಗಬಹುದು.

ಜಲಪಾತದ ಅಡಿಯಲ್ಲಿ ನಿಲ್ಲಿಸಿದ್ದ ಮಹೀಂದ್ರ ಸ್ಕಾರ್ಪಿಯೋ ಎನ್‌ನ ರೂಫ್ ಮೂಲಕ ನೀರು ಸೋರಿಕೆಯಾಗಿರುವ ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದರ ಮಾಲೀಕರು ತಮ್ಮ ಸ್ಕಾರ್ಪಿಯೋ N Z8L 4WDನೊಂದಿಗೆ ಸ್ಪಿತಿಗೆ ಪ್ರಯಾಣಿಸುತ್ತಿದ್ದರು ಹಾಗೂ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆದಿದೆ.

ಎಡವಟ್ಟಾಗಿದ್ದೇನು?

ಸ್ಕಾರ್ಪಿಯೋ ಎನ್‌ನ ಮಾಲೀಕರು “ಒಂದು ತ್ವರಿತ ಹಾಗು ಉಚಿತ ವಾಶ್‌”ಗಾಗಿ ವಾಹನವನ್ನು ಜಲಪಾತದ ಅಡಿಯಲ್ಲಿ ನಿಲ್ಲಿಸಿದರು, ಕೆಲವೇ ಸೆಕೆಂಡುಗಳಲ್ಲಿ, ರೂಫ್ ಮೌಂಟಡ್ ಸ್ಪೀಕರ್‌ಗಳು ಮತ್ತು ಕ್ಯಾಬಿನ್ ಲೈಟ್‌ ಪ್ಯಾನೆಲ್ ಮೂಲಕ ನೀರು ಸೋರಿಕೆಯಾಗಲು ಪ್ರಾರಂಭಿಸಿತು. ಅಲ್ಲದೇ ಪ್ಯಾಸೆಂಜರ್ ವಿಂಡೋ ಕೂಡಾ ತೆರೆದಿದ್ದು ನೀರು ಹೆಚ್ಚಿನ ಪ್ರಮಾಣದಲ್ಲಿ ಒಳಕ್ಕೆ ಹರಿಯಿತು; ಆದರೆ ಅದನ್ನು ಮುಚ್ಚಿದ ನಂತರವೂ ಸೋರುವಿಕೆ ಮುಂದುವರಿಯಿತು.

ಯಾಕೆ ಹೀಗಾಯಿತು?

ಈ ಘಟನೆಗೆ ಅನೇಕ ಕಾರಣಗಳಿರಬಹುದು, ಸನ್‌ರೂಫ್‌ನ ಅಸಮರ್ಪಕ ಮುಚ್ಚುವಿಕೆ ಪ್ರಮುಖವಾದುದು. ಸನ್‌ರೂಫ್ ಸಂಪೂರ್ಣವಾಗಿ ತನ್ನ ಸ್ಥಾನದಲ್ಲಿ ಇದೆಯೇ ಹಾಗೂ ಪ್ಯಾನೆಲ್‌ನಲ್ಲಿ ಯಾವುದೇ ಅಂತರವಿಲ್ಲವೇ ಎಂಬುದನ್ನು ಪರಿಶೀಲಿಸವುದು ತುಂಬಾ ಮುಖ್ಯ. ಸನ್‌ರೂಫ್‌ಗಳ ಡಿಸೈನ್‌ನಿಂದಾಗಿ ಅವುಗಳು ಇಂತಹ ಸಮಸ್ಯೆಗಳಿಗೆ ಈಡಾಗಬಹುದು, ಇದರಿಂದಾಗಿ ನೀರು ಕೂಡಾ ಸಂಗ್ರಹಗೊಳ್ಳಬಹುದು. ಸಾಮಾನ್ಯವಾಗಿ ಈ ಸನ್‌ರೂಫ್‌ ಪ್ಯಾನೆಲ್‌ಗಳಲ್ಲಿ ಡ್ರೈನ್ ರಂಧ್ರಗಳಿದ್ದು, ಇದು ಸಂಗ್ರಹಗೊಂಡಂತಹ ನೀರನ್ನು ಸುರಕ್ಷಿತ ನಿರ್ಗಮನ ಮಾರ್ಗಕ್ಕೆ ನಿರ್ದೇಶಿಸಬಹುದು.

ಇದನ್ನೂ ಓದಿ: ಮಹೀಂದ್ರಾ ಸ್ಕಾರ್ಪಿಯೋದ ಲೋ-ಎಂಡ್ ವೇರಿಯೆಂಟ್‌ಗಳಿಗೆ ಶೀಘ್ರವೇ ಬೆಲೆ ಇಳಿಯಲಿದೆ

ಈ ಡ್ರೈನ್ ರಂಧ್ರಗಳು ಕೊಳೆಗಳು, ಕಸ ಕಡ್ಡಿಗಳಿಂದ ಬ್ಲಾಕ್ ಆಗಿದ್ದರೆ, ಆ ಸನ್‌ರೂಫ್ ಪ್ಯಾನೆಲ್‌ನಲ್ಲಿ ನೀರು ತುಂಬಿಕೊಳ್ಳಬಹುದು. ನಿರಂತರವಾಗಿ ಹರಿಯುವ ಜಲಪಾತದ ನೀರಿನ ಪ್ರಮಾಣವು ಈ ಡ್ರೈನ್‌ನ ಸಾಮರ್ಥ್ಯಕ್ಕೂ ಮೀರಿದ್ದಾಗಿರಬಹುದು, ಇದು ಚಾಲನೆಯಲ್ಲಿರುವಾಗ ನೀರು ಹರಿದು ಹೋಗುವಿಕೆಯನ್ನು ನಿಭಾಯಿಸಲಷ್ಟೇ ಸಾಧ್ಯವಾಗಿರಬಹುದು.

ಸ್ಕಾರ್ಪಿಯೋ ಎನ್‌ನಲ್ಲಿರುವ ಮತ್ತೊಂದು ಸಮಸ್ಯೆಯೆಂದರೆ, ರೂಫ್ ಮೌಂಟಡ್ ಸ್ಪೀಕರ್‌ಗಳು ಸನ್‌ರೂಫ್ ಪ್ಯಾನೆಲ್‌ನ ಕೆಳಭಾಗದಲ್ಲೇ ಇರುವುದು. ಇದರಿಂದಾಗಿ, ನೀರು ಯಾವಾಗಲಾದರೂ ಸನ್‌ರೂಫ್ ಮೂಲಕ ಒಳಹರಿದರೆ, ಅದು ಸ್ಪೀಕರ್‌ಗಳು ಮತ್ತು ಕ್ಯಾಬಿನ್‌ ಲೈಟ್‌ ಸ್ವಿಚ್‌ಗಳ ಮೂಲಕ ಸೋರಿಕೆಯಾಗುತ್ತದೆ.

ಸನ್‌ರೂಫ್‌ಗಳನ್ನು ಹೊಂದಿರುವ ಕಾರುಗಳ ಮಾಲೀಕರು ತಮ್ಮ ವಾಹನವನ್ನು ಜಲಪಾತಗಳ ಅಡಿಯಲ್ಲಿ ನಿಲ್ಲಿಸುವುದು ವಿಶೇಷವೇನಲ್ಲ ಹಾಗೂ ವಿಶೇಷವಾಗಿ ದುಬಾರಿ ವಾಹನಗಳಲ್ಲಿ ಇದು ಯಾವಾಗಲೂ ಸಮಸ್ಯೆಯನ್ನು ತಂದೊಡ್ಡಬೇಕೆಂದೇನಿಲ್ಲ. ವಿಶಾಲ ನೋಟದ ಸನ್‌ರೂಫ್ ಹೊಂದಿರುವ XUV700 ಜಲಪಾತದಡಿಯಲ್ಲಿ ಹೋದರೂ ಏನೂ ತೊಂದರೆಯಾಗದ ಉದಾಹರಣೆಯೂ ಇದೆ.

ಇದನ್ನೂ ಓದಿ: ವಿಸ್ತೃತ ಮಾಹಿತಿ! ಮಹೀಂದ್ರಾ ಸ್ಕಾರ್ಪಿಯೋ ಎನ್‌ ವೇರಿಯೆಂಟ್‌ವಾರು ಫೀಚರ್‌ಗಳು

ನೀರು ಕ್ಯಾಬಿನ್ ಒಳಗೆ ಹರಿಯುವುದರಿಂದ ಇಲೆಕ್ಟ್ರಾನಿಕ್ಸ್ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಮತ್ತು ಅನೇಕ ಭಾಗಗಳ ತುಕ್ಕು ಹಿಡಿಯುವಿಕೆಗೆ ಕಾರಣವಾಗುವುದನ್ನು ಸ್ಪಷ್ಟವಾಗಿ ಕಾಣಬಹುದು. ಅದ್ದರಿಂದ ಇದನ್ನು ಇಲ್ಲಿ ಹೇಳುವುದು ಸೂಕ್ತವಾಗಿದೆ. ಇಂತಹ ಚಟುವಟಿಕೆಗಳು ನಿಮ್ಮ ಕಾರು ಹಾಗೂ ನಿಮ್ಮ ಸುರಕ್ಷತೆಗೆ ತೊಂದರೆ ಉಂಟುಮಾಡಬಹುದಾದ ಕಾರಣ ಸನ್‌ರೂಫ್‌ಗಳನ್ನು ಆ ರೀತಿ ಬಳಸದಿರುವುದು ಉತ್ತಮ.

ಇನ್ನಷ್ಟು ಓದಿ : ಮಹೀಂದ್ರಾ ಸ್ಕಾರ್ಪಿಯೋ ಎನ್‌ನ ಆನ್‌ ರೋಡ್ ಬೆಲೆ

Share via

Write your Comment on Mahindra ಸ್ಕಾರ್ಪಿಯೊ ಎನ್

S
sathynarayana
Feb 28, 2023, 5:05:24 PM

Before releasing it into market,the company has to check for this kind of issues.suppose a heavy rainfall occurs while in journey,the result will be the same.

u
user
Feb 28, 2023, 4:50:07 PM

Not intrested like this kond of quality

explore ಇನ್ನಷ್ಟು on ಮಹೀಂದ್ರಾ ಸ್ಕಾರ್ಪಿಯೋ ಎನ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ