1 ಲಕ್ಷ ಬುಕಿಂಗ್ ದಾಟಿದ Hyundai Exter, ವೈಟಿಂಗ್ ಪಿರೇಡ್ 4 ತಿಂಗಳುಗಳಿಗೆ ಹೆಚ್ಚಳ
ಹುಂಡೈ ಎಕ್ಸ್‌ಟರ್ ಗಾಗಿ shreyash ಮೂಲಕ ನವೆಂಬರ್ 29, 2023 04:19 pm ರಂದು ಪ್ರಕಟಿಸಲಾಗಿದೆ
- 57 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಎಕ್ಸ್ಟರ್ ವಾಹನವು ರೂ. 6 ರಿಂದ ರೂ. 10.15 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ).
- ಹ್ಯುಂಡೈ ಸಂಸ್ಥೆಯ ಈ ಮೈಕ್ರೋ SUVಯು 2023ರ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗುವ ಮೊದಲೇ 10,000 ದಷ್ಟು ಬೇಡಿಕೆಯನ್ನು ಪಡೆದಿತ್ತು.
- ಇದು 8 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್, ಚಾಲಕನ ಸೆಮಿ ಡಿಜಿಟಲ್ ಡಿಸ್ಪ್ಲೇ, ಮತ್ತು ಡ್ಯುವಲ್ ಕ್ಯಾಮರ್ ಡ್ಯಾಶ್ ಕ್ಯಾಮ್ ಅನ್ನು ಹೊಂದಿದೆ.
- ಇದನ್ನು 1.2 ಲೀಟರ್ ಪೆಟ್ರೋಲ್ ಮತ್ತು CNG ಪವರ್ ಟ್ರೇನ್ ಮೂಲಕ ಚಲಾಯಿಸಲಾಗುತ್ತದೆ.
- ಹ್ಯುಂಡೈ ಸಂಸ್ಥೆಯು ಎಕ್ಸ್ಟರ್ ವಾಹನವನ್ನು 6 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ರಿಯರ್ ಪಾರ್ಕಿಂಕ್ ಕ್ಯಾಮರಾದೊಂದಿಗೆ ಹೊರತರುತ್ತದೆ.
ಹೊಸ ಹ್ಯುಂಡೈ ಎಕ್ಸ್ಟರ್ Exter ವಾಹನವನ್ನು 2023ರ ಜುಲೈ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು ಇದು ಇಲ್ಲಿ ಈ ಬ್ರಾಂಡಿನ ಮೊದಲ ಮೈಕ್ರೋ SUV ಎನಿಸಿದೆ. ಈ ಎಕ್ಸ್ಟರ್ ವಾಹನವು 1 ಲಕ್ಷ ಬುಕಿಂಗ್ ಪಡೆದಿದೆ ಎನ್ನುವ ಸುದ್ದಿ ಹೊರಬಂದಿದೆ. ಬಿಡುಗಡೆಗೆ ಮೊದಲೇ ಈ ಮೈಕ್ರೋ SUV ಯು 10,000ಕ್ಕೂ ಹೆಚ್ಚಿನ ಬುಕಿಂಗ್ ಅನ್ನು ಪಡೆದಿತ್ತು. ಹ್ಯುಂಡೈ ವಾಹನಗಳ ಸಾಲಿನಲ್ಲಿ ಎಕ್ಸ್ಟರ್ ಕಾರು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವುದರಿಂದ 2023ರ ಡಿಸೆಂಬರ್ ತಿಂಗಳ ಅಂಕಿಅಂಶಗಳ ಪ್ರಕಾರ ಈ ಮೈಕ್ರೋ SUVಯನ್ನು ಪಡೆಯಲು ಸುಮಾರು 4 ತಿಂಗಳುಗಳ ಕಾಲ ಕಾಯಬೇಕು.
ಇದನ್ನು ಸಹ ನೋಡಿರಿ: ಬಿಡುಗಡೆಗೆ ಮೊದಲೇ ಸೋರಿಕೆಯಾದ 2024 ರೆನೋ ಡಸ್ಟರ್ ಚಿತ್ರಗಳು
ನಿಮ್ಮ ಉಲ್ಲೇಖಕ್ಕಾಗಿ, ಭಾರತದ ಪ್ರಮುಖ 20 ನಗರಗಳಲ್ಲಿ ಎಕ್ಸ್ಟರ್ ವಾಹನದ ಕಾಯುವಿಕೆ ಅವಧಿಯನ್ನು ಇಲ್ಲಿ ನೀಡಲಾಗಿದೆ.
ಕಾಯುವಿಕೆ ಅವಧಿಯ ಕೋಷ್ಠಕ
ನಗರ |
ಕಾಯುವಿಕೆ ಅವಧಿ |
ನವದೆಹಲಿ |
4 ತಿಂಗಳುಗಳು |
ಬೆಂಗಳೂರು |
4 ತಿಂಗಳುಗಳು |
ಮುಂಬಯಿ |
4 ತಿಂಗಳುಗಳು |
ಹೈದರಾಬಾದ್ |
3.5 ತಿಂಗಳುಗಳು |
ಪುಣೆ |
2 - 4 ತಿಂಗಳುಗಳು |
ಚೆನ್ನೈ |
4 ತಿಂಗಳುಗಳು |
ಜೈಪುರ |
4 ತಿಂಗಳುಗಳು |
ಅಹ್ಮದಾಬಾದ್ |
4 ತಿಂಗಳುಗಳು |
ಗುರುಗ್ರಾಮ |
3.5 ತಿಂಗಳುಗಳು |
ಲಕ್ನೋ |
3 ತಿಂಗಳುಗಳು |
ಕೋಲ್ಕೊತಾ |
4 ತಿಂಗಳುಗಳು |
ಥಾಣೆ |
4 ತಿಂಗಳುಗಳು |
ಸೂರತ್ |
2 - 3 ತಿಂಗಳುಗಳು |
ಘಾಜಿಯಾಬಾದ್ |
3 - 4 ತಿಂಗಳುಗಳು |
ಚಂಡೀಗಢ |
4 ತಿಂಗಳುಗಳು |
ಕೊಯಮತ್ತೂರು |
3 - 4 ತಿಂಗಳುಗಳು |
ಪಾಟ್ನಾ |
4 ತಿಂಗಳುಗಳು |
ಫರೀದಾಬಾದ್ |
4 ತಿಂಗಳುಗಳು |
ಇಂದೋರ್ |
4 ತಿಂಗಳುಗಳು |
ನೋಯ್ಡಾ |
4 ತಿಂಗಳುಗಳು |
ಇದು ಏನೆಲ್ಲ ಕೊಡುಗೆಗಳನ್ನು ನೀಡುತ್ತದೆ?
ಹ್ಯುಂಡೈ ಸಂಸ್ಥೆಯು ಎಕ್ಸ್ಟರ್ ವಾಹನದಲ್ಲಿ 8 ಇಂಚುಗಳ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ಸೆಮಿ ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್, ವೈರ್ ಲೆಸ್ ಫೋನ್ ಚಾರ್ಜರ್, ವಾಯ್ಸ್ ಕಮಾಂಡ್ ಗಳೊಂದಿಗೆ ಸಿಂಗಲ್ ಪೇನ್ ಸನ್ ರೂಫ್, ಮತ್ತು ಡ್ಯುವಲ್ ಕ್ಯಾಮೆರಾ ಡ್ಯಾಶ್ ಕ್ಯಾಮ್ ಅನ್ನು ನೀಡುತ್ತಿದೆ.
ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, ಎಲ್ಲಾ ಪ್ರಯಾಣಿಕರಿಗಾಗಿ 3 ಪಾಯಿಂಟ್ ಸೀಟ್ ಬೆಲ್ಟ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಮತ್ತು ರಿಯರ್ ವ್ಯೂ ಕ್ಯಾಮರಾವನ್ನು ಒದಗಿಸಲಾಗುತ್ತಿದೆ.
ಇದನ್ನು ಸಹ ನೋಡಿರಿ: ಭಾರತದಲ್ಲಿ ಮಾರಾಟದಲ್ಲಿ ಬೃಹತ್ ಮೈಲಿಗಲ್ಲನ್ನು ಸಾಧಿಸಿದ ಹ್ಯುಂಡೈ ಅಯೋನಿಕ್ 5
ಪವರ್ ಟ್ರೇನ್ ವಿವರಗಳು
ಎಕ್ಸ್ಟರ್ ಕಾರು 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (82 PS/113 Nm) ಅನ್ನು ಬಳಸುತ್ತದೆ. ಈ ಯೂನಿಟ್ ಅನ್ನು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಅಥವಾ 5 ಸ್ಪೀಡ್ AMT ಜೊತೆಗೆ ಹೊಂದಿಸಲಾಗುತ್ತದೆ. ಇದು ಅದೇ ಎಂಜಿನ್ ನೊಂದಿಗೆ CNG ಆಯ್ಕೆಯನ್ನು ಸಹ ಹೊಂದಿದ್ದು 69 PS ಮತ್ತು 95 Nm ನಷ್ಟು ಕಡಿಮೆ ಔಟ್ಪುಟ್ ಅನ್ನು ಹೊಂದಿದೆ ಮಾತ್ರವಲ್ಲದೆ ಇದನ್ನು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಜೊತೆಗೆ ಮಾತ್ರವೇ ಹೊಂದಿಸಲಾಗುತ್ತದೆ.
ಇದನ್ನು ಸಹ ಓದಿರಿ: ಕ್ಯಾಲೆಂಡರ್ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಎಕ್ಸ್ಟರ್ ವಾಹನವು ರೂ. 6 ರಿಂದ ರೂ. 10.15 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ). ಇದು ಟಾಟಾ ಪಂಚ್ ಕಾರಿನ ನೇರ ಪ್ರತಿಸ್ಪರ್ಧಿಯಾಗಿದ್ದು, ಮಾರುತಿ ಇಗ್ನಿಸ್, ನಿಸಾನ್ ಮ್ಯಾಗ್ನೈಟ್, ರೆನೋ ಕೈಗರ್, ಮಾರುತಿ ಫ್ರಾಂಕ್ಸ್, ಮತ್ತು ಸಿಟ್ರಾನ್ C3 ಕಾರುಗಳಿಗೆ ಬದಲಿ ಆಯ್ಕೆ ಎನಿಸಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಎಕ್ಸ್ಟರ್ AMT