Login or Register ಅತ್ಯುತ್ತಮ CarDekho experience ಗೆ
Login

ಮತ್ತೆ ಬಂದಿದೆ Kia Seltos ಡೀಸೆಲ್ ಮ್ಯಾನುವಲ್ ಆಯ್ಕೆ, ಬೆಲೆಗಳು ರೂ 12 ಲಕ್ಷದಿಂದ ಪ್ರಾರಂಭ

published on ಫೆಬ್ರವಾರಿ 01, 2024 01:58 pm by shreyash for ಕಿಯಾ ಸೆಲ್ಟೋಸ್

ಮ್ಯಾನುವಲ್ ಟ್ರಾನ್ಸ್‌ಮಿಶನ್‌ನ ಮರು ಆಯ್ಕೆಯೊಂದಿಗೆ, ಕಿಯಾ ಸೆಲ್ಟೋಸ್ ಡೀಸೆಲ್ ಈಗ ಒಟ್ಟು ಮೂರು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯ.

  • ಕಿಯಾ ಸೆಲ್ಟೋಸ್ ಡೀಸೆಲ್ ಒಟ್ಟು ಐದು ವೇರಿಯೆಂಟ್‌ಗಳಲ್ಲಿ ಬರುತ್ತದೆ, ಅವುಗಳೆಂದರೆ : HTE, HTK, HTK+, HTX, ಮತ್ತು HTX+.
  • ಸೆಲ್ಟೋಸ್‌ನ 6-ಸ್ಪೀಡ್ ಡೀಸೆಲ್ ಮ್ಯಾನುವಲ್ ವೇರಿಯೆಂಟ್‌ಗಳ ಬೆಲೆಗಳು ಡೀಸೆಲ್ iMT ವೇರಿಯೆಂಟ್‌ಗಳಂತೆಯೇ ಇದ್ದು ರೂ12 ಲಕ್ಷದಿಂದ ರೂ 18.28 ಲಕ್ಷದ ತನಕ (ಎಕ್ಸ್-ಶೋರೂಂ) ಇದೆ.
  • ಇದೇ ರೀತಿಯ ಡೀಸೆಲ್ ಇಂಜಿನ್ ಕೂಡಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಜೊತೆಗೆ ಲಭ್ಯವಿದೆ.
  • ಈ ಕಾಂಪ್ಯಾಕ್ಟ್ SUVಯು 1.5-ಲೀಟರ್ ನೈಸರ್ಗಿಕವಾಗಿ ಆಸ್ಪಿರೇಟ್ ಮಾಡುವ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋ-ಪೆಟ್ರೋಲ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಕಿಯಾ ಸೆಲ್ಟೋಸ್ 2023 ಸಮಗ್ರ ರೂಪಾಂತರ ಪಡೆದಿದ್ದು, ಅನೇಕ ಹೊಸ ಫೀಚರ್‌ಗಳು ಮತ್ತು ಅಪ್‌ಡೇಟ್ ಮಾಡಲಾದ ಸುರಕ್ಷತಾ ಟೆಕ್ ಅನ್ನು ಹೊಂದಿದೆ. ಮೊದಲಿನಂತೆ ಅದೇ ಮೂರು ಇಂಜಿನ್ ಆಯ್ಕೆಯನ್ನು ಹೊಂದಿದ್ದು, ಇವುಗಳಲ್ಲಿ ಒಂದು 6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದೇ ಮ್ಯಾನುವಲ್ ಟ್ರಾನ್ಸ್‌ಮಿಷನ್) ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತದೆ.

ಈಗ ಕಿಯಾ ಸೆಲ್ಟೋಸ್‌ನ 1.5-ಲೀಟರ್ ಡೀಸೆಲ್ ವೇರಿಯೆಂಟ್‌ಗಳ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನ ಆಯ್ಕೆಯನ್ನು ಮತ್ತೊಮ್ಮೆ ಪರಿಚಯಿಸಿದೆ, ಇದು ಪೂರ್ವನವೀಕೃತ ಮಾಡೆಲ್ ನಂತರ ಸ್ಥಗಿತಗೊಂಡಿತ್ತು. ಈಗಾಗಲೇ ತನ್ನ ಡೀಸೆಲ್ ಪವರ್‌ಟ್ರೇನ್‌ (ಎರಡೂ SUVಗಳಲ್ಲಿಯೂ ಒಂದೇ ರೀತಿಯ ಇಂಜಿನ್‌ಗಳು) ಜೊತೆಗೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿರುವ 2024 ಹ್ಯುಂಡೈ ಕ್ರೆಟಾ ಬಿಡುಗಡೆಯಾದ ಕೂಡಲೇ ಇದನ್ನು ಪ್ರಕಟಿಸಲಾಯಿತು.

ಇತ್ತೀಚಿನ ಕಿಯಾ ಸೆಲ್ಟೋಸ್‌ನ ಎಲ್ಲಾ ಡೀಸೆಲ್ ವೇರಿಯೆಂಟ್‌ಗಳ ಬೆಲೆಗಳ ವಿವರಗಳನ್ನು ನೋಡೋಣ:

ವೇರಿಯೆಂಟ್

ಬೆಲೆ

6-MT

6-iMT

6-AT

HTE

ರೂ 12 ಲಕ್ಷ

ರೂ 12 ಲಕ್ಷ

HTK

ರೂ 13.60 ಲಕ್ಷ

ರೂ 13.60 ಲಕ್ಷ

HTK+

ರೂ 15 ಲಕ್ಷ

ರೂ 15 ಲಕ್ಷ

HTX

ರೂ 16.68 ಲಕ್ಷ

ರೂ 16.68 ಲಕ್ಷ

ರೂ 18.18 ಲಕ್ಷ

HTX+

ರೂ 18.28 ಲಕ್ಷ

ರೂ 18.28 ಲಕ್ಷ

GTX+ (S)

ರೂ 19.38 ಲಕ್ಷ

X-Line (S)

ರೂ 19.60 ಲಕ್ಷ

GTX+

ರೂ 19.98 ಲಕ್ಷ

X-ಲೈನ್

ರೂ 20.30 ಲಕ್ಷ

ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರ

ಕಿಯಾ ಸೆಲ್ಟೋಸ್ ಡೀಸೆಲ್ ಮ್ಯಾನುವಲ್‌ನ ಬೆಲೆಗಳು ರೂ 12 ಲಕ್ಷದಿಂದ ಪ್ರಾರಂಭವಾಗಿ ರೂ 18.28 ಲಕ್ಷದ ತನಕ ಹೋಗುತ್ತದೆ. ಡೀಸೆಲ್ iMT ವೇರಿಯೆಂಟ್‌ಗಳು ಕೂಡಾ ಸೆಲ್ಟೋಸ್‌ನ ತತ್ಸಮಾನ ಮ್ಯಾನುವಲ್ ವೇರಿಯೆಂಟ್‌ಗಳಂತೆಯೇ ಇದೆ ಎಂಬುದು ಗಮನಾರ್ಹ.

ಇತರ ಇಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು

ಕಿಯಾ ಸೆಲ್ಟೋಸ್ ಎರಡು ಪೆಟ್ರೋಲ್ ಇಂಜಿನ್‌ಗಳ ಆಯ್ಕೆಯೊಂದಿಗೆ ಬರುತ್ತದೆ: 6-ಸ್ಪೀಡ್ ಮ್ಯಾನುವಲ್ ಅಥವಾ CVT ಜೊತೆಗೆ 1.5-ಲೀಟರ್ ಯೂನಿಟ್ (115 PS / 144 Nm) ಮತ್ತು a 6-ಸ್ಪೀಡ್ iMT ಗೆ (ಕ್ಲಚ್‌ರಹಿತ ಮ್ಯಾನುವಲ್) ಜೋಡಿಸಲಾದ 1.5-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ (160 PS / 253 Nm) ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT).

ಇದನ್ನೂ ಪರಿಶೀಲಿಸಿ: ಹೊಸ ಹ್ಯುಂಡೈ ಕ್ರೆಟಾ ಇ ಬೇಸ್ ವೇರಿಯೆಂಟ್‌ನ ಪ್ರಮುಖ ವಿವರಗಳನ್ನು 5 ಚಿತ್ರಗಳಲ್ಲಿ ಅನ್ವೇಷಿಸಿ

ಫೀಚರ್‌ಗಳು ಮತ್ತು ಸುರಕ್ಷತೆ

ಡೀಸೆಲ್ ಮ್ಯಾನುವಲ್ ವೇರಿಯೆಂಟ್‌ನ ಸೆಲ್ಟೋಸ್‌ಗೆ ಯಾವುದೇ ಫೀಚರ್ ಅಪ್‌ಡೇಟ್‌ಗಳನ್ನು ಮಾಡಲಾಗಿಲ್ಲ. ಕಿಯಾದ ಕಾಂಪ್ಯಾಕ್ಟ್ SUVಯು, ಡ್ಯುಯಲ್ 10.25-ಇಂಚು ಡಿಸ್‌ಪ್ಲೇಗಳು (ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್), ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ವಿಹಂಗಮ ಸನ್‌ರೂಫ್‌ನಂತಹ ಸೌಕರ್ಯಗಳನ್ನು ಹೊಂದಿರುವುದನ್ನು ಹೇಳಿಕೊಂಡಿದೆ. ಅಲ್ಲದೇ ಇದು ಏರ್ ಪ್ಯೂರಿಫೈಯರ್, ಆ್ಯಂಬಿಯೆಂಟ್ ಲೈಟಿಂಗ್, ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು ವೆಂಟಿಲೇಟಡ್ ಮುಂಭಾಗದ ಸೀಟುಗಳನ್ನೂ ಪಡೆದಿದೆ.

ಪ್ರಯಾಣಿಕ ಸುರಕ್ಷತೆಗಾಗಿ, 6 ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್(ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮರಾ ಮತ್ತು ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್ ಕೊಲಿಶನ್ ವಾರ್ನಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಅಡ್ವಾನ್ಸ್‌ಡ್ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು(ADAS) ಹೊಂದಿದೆ.

ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು

ಕಿಯಾ ಸೆಲ್ಟೋಸ್ ಬೆಲೆಯನ್ನು ರೂ 10.90 ಲಕ್ಷದಿಂದ ರೂ 20.30 ಲಕ್ಷದ ತನಕ (ಎಕ್ಸ್-ಶೋರೂಂ ದೆಹಲಿ) ನಿಗದಿಪಡಿಸಲಾಗಿದೆ. ಈ ಕಾಂಪ್ಯಾಕ್ಟ್ SUV ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಷಕ್, ಫೋಕ್ಸ್‌ವಾಗನ್ ಟೈಗನ್ , ಹೋಂಡಾ ಎಲಿವೇಟ್, MG ಎಸ್ಟರ್ ಮತ್ತು ಸಿಟ್ರನ್ C3 ಏರ್‌ಕ್ರಾಸ್‍ಗೆ ಪೈಪೋಟಿ ನೀಡಲಿದೆ.

ಇನ್ನಷ್ಟು ಓದಿ : ಕಿಯಾ ಸೆಲ್ಟೋಸ್ ಡೀಸೆಲ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 34 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಸೆಲ್ಟೋಸ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ