Login or Register ಅತ್ಯುತ್ತಮ CarDekho experience ಗೆ
Login

Enable notifications to stay updated with exclusive offers, car news, and more from CarDekho!

Kia ಆಪ್‌ಡೇಟ್‌: Sonet ಮತ್ತು Seltos ಜಿಟಿಎಕ್ಸ್ವೇರಿಯಂಟ್ ಮಾರುಕಟ್ಟೆಗೆ, ಎಕ್ಸ್‌-ಲೈನ್ ಗೆ ಹೊಸ ಕಲರ್ ಸೇರ್ಪಡೆ

modified on ಜುಲೈ 09, 2024 06:13 pm by samarth for ಕಿಯಾ ಸೆಲ್ಟೋಸ್

ಹೊಸದಾಗಿ ಪರಿಚಯಿಸಲಾದ ವೇರಿಯಂಟ್ ಅನ್ನು ಸಂಪೂರ್ಣವಾಗಿ ಲೋಡ್ ಆಗಿರುವ GTX+ ಟ್ರಿಮ್‌ನ ಕೆಳಗೆ ಇರಿಸಲಾಗಿದೆ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಮಾತ್ರ ನೀಡಲಾಗುತ್ತದೆ

  • ಕಿಯಾ ಸೊನೆಟ್ ಮತ್ತು ಸೆಲ್ಟಸ್ ಈಗ ಹೊಸ GTX ವೇರಿಯಂಟ್ ಅನ್ನು ಪರಿಚಯಿಸಿದೆ, ಇದು ಸೊನೆಟ್ ನಲ್ಲಿ HTX+ ಮತ್ತು GTX+ ಟ್ರಿಮ್‌ಗಳ ನಡುವೆ ಮತ್ತು ಸೆಲ್ಟೋಸ್‌ನಲ್ಲಿ HTX+ ಮತ್ತು GTX+(S) ಟ್ರಿಮ್‌ಗಳ ನಡುವೆ ಇರಿಸಲಾಗಿದೆ.

  • ಸೊನೆಟ್ GTX 4-ವೇ ಪವರ್ಡ್ ಡ್ರೈವರ್ ಸೀಟ್, ಏರ್ ಪ್ಯೂರಿಫೈಯರ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಫೀಚರ್ ಗಳನ್ನು ಪಡೆಯುತ್ತದೆ.

  • ಸೆಲ್ಟೋಸ್ GTX ಲೆವೆಲ್ 2 ADAS, ಪನರೋಮಿಕ್ ಸನ್‌ರೂಫ್ ಮತ್ತು ಫ್ರಂಟ್ ವೆಂಟಿಲೇಟೆಡ್ ಸೀಟ್ ಗಳೊಂದಿಗೆ ಬರುತ್ತದೆ.

  • ಎರಡೂ SUVಗಳ X-ಲೈನ್ ಟ್ರಿಮ್ ಈಗಾಗಲೇ ಇರುವ ಮ್ಯಾಟ್ ಗ್ರ್ಯಾಫೈಟ್ ಜೊತೆಗೆ ಹೊಸ ಅರೋರಾ ಬ್ಲ್ಯಾಕ್ ಪರ್ಲ್ ಕಲರ್ ಆಯ್ಕೆಯನ್ನು ನೀಡುತ್ತದೆ.

  • ಹೊಸದಾಗಿ ಪರಿಚಯಿಸಲಾದ ವೇರಿಯಂಟ್ ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯವಿದೆ ಆದರೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಮಾತ್ರ.

  • ಸೊನೆಟ್ GTX ನ ಬೆಲೆಯು ರೂ 13.71 ಲಕ್ಷದಿಂದ ಪ್ರಾರಂಭವಾಗುತ್ತದೆ ಹಾಗೆಯೇ ಸೆಲ್ಟೋಸ್ GTX ಬೆಲೆಯು ರೂ 19 ಲಕ್ಷದಿಂದ ಶುರುವಾಗುತ್ತದೆ (ಎಕ್ಸ್ ಶೋರೂಂ).

ಕಿಯಾ ಮೋಟಾರ್ ಇಂಡಿಯಾ ತನ್ನ ಜನಪ್ರಿಯ SUVಗಳಾದ ಸೋನೆಟ್ ಮತ್ತು ಸೆಲ್ಟೋಸ್‌ಗಳ ಲೈನ್ ಅಪ್ ಅನ್ನು ಅಪ್ಡೇಟ್ ಮಾಡಿದೆ. ಅದು GTX ಎಂಬ ಹೊಸ ಟಾಪ್-ಸ್ಪೆಕ್ ವೇರಿಯಂಟ್ ಅನ್ನು ಸೇರಿಸಿದೆ, ಮತ್ತು ಇದನ್ನು ಸೋನೆಟ್‌ನಲ್ಲಿ HTX+ ಮತ್ತು GTX+ ಟ್ರಿಮ್‌ಗಳ ನಡುವೆ ಮತ್ತು ಸೆಲ್ಟೋಸ್‌ನಲ್ಲಿ HTX+ ಮತ್ತು GTX+(S) ಟ್ರಿಮ್‌ಗಳ ನಡುವೆ ಇರಿಸಲಾಗಿದೆ. ಇದರ ಜೊತೆಗೆ, ಎರಡೂ ಮಾಡೆಲ್ ಗಳ X-ಲೈನ್ ವೇರಿಯಂಟ್ ಗಳು ಹೊಸ ಕಲರ್ ಆಯ್ಕೆಯನ್ನು ಕೂಡ ಪಡೆದುಕೊಂಡಿವೆ. ಹೊಸದಾಗಿ ಪರಿಚಯಿಸಲಾದ ವೇರಿಯಂಟ್ ಕುರಿತು ಎಲ್ಲಾ ವಿವರಗಳನ್ನು ಇಲ್ಲಿದೆ:

X-ಲೈನ್‌ನಲ್ಲಿ ಹೊಸ ಕಲರ್

ಗ್ರಾಹಕರು ಈಗ ಎರಡು SUV ಗಳ X-ಲೈನ್ ವೇರಿಯಂಟ್ ಅನ್ನು ಎರಡು ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದು: ಮ್ಯಾಟ್ ಗ್ರ್ಯಾಫೈಟ್ ಮತ್ತು ಅರೋರಾ ಬ್ಲ್ಯಾಕ್ ಪರ್ಲ್ (ಹೊಸದು).

ಸೋನೆಟ್ GTX ನ ಪ್ರಮುಖ ಫೀಚರ್ ಗಳು

ಸೋನೆಟ್‌ನ ಹೊಸದಾಗಿ ಪರಿಚಯಿಸಲಾದ GTX ವೇರಿಯಂಟ್ ನ ಪ್ರಮುಖ ಫೀಚರ್ ಗಳು ಇಲ್ಲಿವೆ:

ಹೊರಭಾಗ

  • ಫಾಲೋ ಮಿ ಹೋಮ್ ಫಂಕ್ಷನ್‌ನೊಂದಿಗೆ LED ಹೆಡ್‌ಲೈಟ್‌ಗಳು

  • LED DRL ಗಳು

  • ಕನೆಕ್ಟೆಡ್ LED ಟೈಲ್ ಲೈಟ್‌ಗಳು

  • LED ಫಾಗ್ ಲ್ಯಾಂಪ್ ಗಳು

  • 16-ಇಂಚಿನ ಅಲೊಯ್ ವೀಲ್ ಗಳು

ಒಳಭಾಗ

  • ವೈಟ್ ಇನ್ಸರ್ಟ್ ಗಳೊಂದಿಗೆ ಆಲ್ ಬ್ಲಾಕ್ ಇಂಟೀರಿಯರ್ ಗಳು

  • ವೈಟ್ ಇನ್ಸರ್ಟ್ ಗಳೊಂದಿಗೆ ಬ್ಲಾಕ್ ಲೆಥೆರೆಟ್ ಸೀಟುಗಳು

ಆರಾಮ ಮತ್ತು ಅನುಕೂಲತೆ

  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ (ಮಾನ್ಯುಯಲ್)
  • ಫ್ರಂಟ್ ವೆಂಟಿಲೇಟೆಡ್ ಸೀಟ್ ಗಳು
  • 4-ವೇ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್
  • ಸ್ಟೀರಿಂಗ್ ವೀಲ್ ಗೆ ಟಿಲ್ಟ್ ಅಡ್ಜಸ್ಟ್ಮೆಂಟ್
  • ಕ್ರೂಸ್ ಕಂಟ್ರೋಲ್
  • ಹಿಂಭಾಗದ ವೆಂಟ್ ಗಳೊಂದಿಗೆ ಆಟೋ AC
  • ಏರ್ ಪ್ಯೂರಿಫೈಯರ್

ಇನ್ಫೋಟೈನ್ಮೆಂಟ್

  • 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • ಕನೆಕ್ಟೆಡ್ ಕಾರ್ ತಂತ್ರಜ್ಞಾನ

  • 6 ಸ್ಪೀಕರ್‌ಗಳು

ಸುರಕ್ಷತೆ

  • ಆರು ಏರ್ ಬ್ಯಾಗ್ ಗಳು

  • ಬ್ಲೈಂಡ್ ಸ್ಪಾಟ್ ಮಾನಿಟರ್ ಜೊತೆಗೆ 360-ಡಿಗ್ರಿ ಕ್ಯಾಮೆರಾ

  • ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

ಇದನ್ನು ಕೂಡ ಓದಿ: ಕೇಂದ್ರೀಯ ಪೊಲೀಸ್ ಕಲ್ಯಾಣ್ ಭಂಡಾರ್‌ನಲ್ಲಿ ಕಿಯಾ ಕಾರುಗಳು ಲಭ್ಯ: ಸಂಪೂರ್ಣ ಪ್ರೈಸ್ ಲಿಸ್ಟ್ ಇಲ್ಲಿದೆ

ಸೆಲ್ಟೋಸ್ GTX ನ ಪ್ರಮುಖ ಫೀಚರ್ ಗಳು

ಸೆಲ್ಟೋಸ್ GTX ನ ಪ್ರಮುಖ ಫೀಚರ್ ಗಳು ಇಲ್ಲಿವೆ:

ಹೊರಭಾಗ

  • LED ಹೆಡ್ ಲೈಟ್ ಗಳು

  • LED DRL ಗಳು

  • ಕನೆಕ್ಟೆಡ್ LED ಟೈಲ್ ಲೈಟ್‌ಗಳು

  • LED ಫಾಗ್ ಲ್ಯಾಂಪ್ ಗಳು

  • 18-ಇಂಚಿನ ಅಲೊಯ್ ವೀಲ್ ಗಳು

ಒಳಭಾಗ

  • ವೈಟ್ ಇನ್ಸರ್ಟ್ ಗಳೊಂದಿಗೆ ಆಲ್ ಬ್ಲಾಕ್ ಇಂಟೀರಿಯರ್ ಗಳು

  • ವೈಟ್ ಇನ್ಸರ್ಟ್ ಗಳೊಂದಿಗೆ ಬ್ಲಾಕ್ ಲೆಥೆರೆಟ್ ಸೀಟುಗಳು

ಆರಾಮ ಮತ್ತು ಅನುಕೂಲತೆ

  • ಪನೋರಮಿಕ್ ಸನ್‌ರೂಫ್

  • ಫ್ರಂಟ್ ವೆಂಟಿಲೇಟೆಡ್ ಸೀಟ್ ಗಳು

  • ಡ್ಯುಯಲ್ ಝೋನ್ ಸಂಪೂರ್ಣ ಆಟೋಮ್ಯಾಟಿಕ್ ಏರ್ ಕಂಡಿಷನರ್

  • ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್

  • ಕ್ರೂಸ್ ಕಂಟ್ರೋಲ್

ಇನ್ಫೋಟೈನ್ಮೆಂಟ್

  • 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • ಕನೆಕ್ಟೆಡ್ ಕಾರ್ ತಂತ್ರಜ್ಞಾನ

ಸುರಕ್ಷತೆ

  • ಆರು ಏರ್ ಬ್ಯಾಗ್ ಗಳು

  • ಲೆವೆಲ್ 2 ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳು (ADAS)

  • ಬ್ಲೈಂಡ್ ಸ್ಪಾಟ್ ಮಾನಿಟರ್ ಜೊತೆಗೆ 360 ಡಿಗ್ರಿ ಕ್ಯಾಮೆರಾ

  • ಆಟೋ ಹೋಲ್ಡ್ ಜೊತೆಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ಎಲ್ಲಾ ವೀಲ್ ಗಳಿಗೆ ಡಿಸ್ಕ್ ಬ್ರೇಕ್ ಗಳು

ಪವರ್‌ಟ್ರೇನ್

ಹೊಸದಾಗಿ ಪರಿಚಯಿಸಲಾದ ಸೋನೆಟ್ ಮತ್ತು ಸೆಲ್ಟೋಸ್‌ನ GTX ಟ್ರಿಮ್ ಅನ್ನು ಎರಡು ಪವರ್‌ಟ್ರೇನ್‌ಗಳಲ್ಲಿ ನೀಡಲಾಗುತ್ತದೆ:

ಮಾಡೆಲ್

ಲಭ್ಯವಿರುವ ಪವರ್‌ಟ್ರೇನ್

ಸೋನೆಟ್ GTX

  • 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (120 PS/172 Nm)

  • 1.5-ಲೀಟರ್ ಡೀಸೆಲ್ ಎಂಜಿನ್ (116 PS/250 Nm)

ಸೆಲ್ಟೋಸ್ GTX

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS/253 Nm)

  • 1.5-ಲೀಟರ್ ಡೀಸೆಲ್ ಎಂಜಿನ್ (116 PS/250Nm)

  • ಎರಡೂ SUV ಗಳ GTX ವೇರಿಯಂಟ್ ಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಮಾತ್ರ ಲಭ್ಯವಿದೆ.

  • ಸೊನೆಟ್ GTX ಮತ್ತು ಸೆಲ್ಟಸ್ GTX ಎರಡೂ ತಮ್ಮ ಟರ್ಬೊ-ಪೆಟ್ರೋಲ್ ಇಂಜಿನ್‌ಗಳಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (DCT) ಅನ್ನು ಪಡೆಯುತ್ತವೆ ಮತ್ತು ಅವುಗಳಲ್ಲಿರುವ ಒಂದೇ ಡೀಸೆಲ್ ಎಂಜಿನ್‌ಗಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (AT) ಅನ್ನು ಜೋಡಿಸಲಾಗಿದೆ.

  • ಕಿಯಾ ತನ್ನ ಸೊನೆಟ್ ಮತ್ತು ಸೆಲ್ಟಸ್ ನ ಕೆಳಮಟ್ಟದ ವೇರಿಯಂಟ್ ಗಳಲ್ಲಿ 1.2-ಲೀಟರ್ ಮತ್ತು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪವರ್‌ಟ್ರೇನ್ ಆಯ್ಕೆಯನ್ನು ಕ್ರಮವಾಗಿ ನೀಡುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹೊಸ ವೇರಿಯಂಟ್ ನ ಬೆಲೆಗಳನ್ನು ನೋಡೋಣ:

ಟರ್ಬೊ-ಪೆಟ್ರೋಲ್ DCT

ಡೀಸೆಲ್ AT

ಸೋನೆಟ್ GTX

ರೂ. 13.71 ಲಕ್ಷ

ರೂ. 14.56 ಲಕ್ಷ

ಸೆಲ್ಟೋಸ್ GTX

ರೂ. 19 ಲಕ್ಷ

ರೂ. 19 ಲಕ್ಷ

ಕಿಯಾ ಸೆಲ್ಟೋಸ್ ಹ್ಯುಂಡೈ ಕ್ರೆಟಾ, ಹೋಂಡಾ ಎಲಿವೇಟ್, MG ಆಸ್ಟರ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಸಿಟ್ರೊಯೆನ್ C3 ಏರ್‌ಕ್ರಾಸ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಮತ್ತೊಂದೆಡೆ, ಸೋನೆಟ್ ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ XUV 3XO, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಸುಜುಕಿ ಬ್ರೆಜ್ಜಾ, ಮಾರುತಿ ಫ್ರಾಂಕ್ಸ್, ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಮತ್ತು ಮುಂಬರುವ ಸ್ಕೋಡಾ ಸಬ್ -4m SUV ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಇತ್ತೀಚಿನ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಕಿಯಾ ಸೆಲ್ಟೋಸ್ ಡೀಸೆಲ್

s
ಅವರಿಂದ ಪ್ರಕಟಿಸಲಾಗಿದೆ

samarth

  • 28 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Kia ಸೆಲ್ಟೋಸ್

Read Full News

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ