Kia Sonet Facelift ಕಾರಿನ ಬುಕಿಂಗ್ ದಿನಾಂಕ, ಡೆಲಿವೆರಿಯ ವಿವರಗಳ ಘೋಷಣೆ
ಪರಿಷ್ಕೃತ ಸೋನೆಟ್ ಕಾರಿನ ವಿತರಣೆಯ 2024ರ ಜನವರಿಯಿಂದ ಪ್ರಾರಂಭಗೊಳ್ಳಲಿದ್ದು, ಕಿಯಾ K-ಕೋಡ್ ಮೂಲಕ ಮಾಡಿದ ಬುಕಿಂಗ್ ಗಳಿಗೆ ವಿತರಣೆಯಲ್ಲಿ ಆದ್ಯತೆ ದೊರೆಯಲಿದೆ
- ಕಿಯಾ ಸಂಸ್ಥೆಯು ಪರಿಷ್ಕೃತ ಸೋನೆಟ್ ಅನ್ನು ಭಾರತದಲ್ಲಿ ಡಿಸೆಂಬರ್ 14, 2023ರಂದು ಅನಾವರಣಗೊಳಿಸಿತು.
- ಬುಕಿಂಗ್ ಗಳು ಡಿಸೆಂಬರ್ 20ರಂದು ನಡುರಾತ್ರಿ 12 ಗಂಟೆಗೆ ಪ್ರಾರಂಭಗೊಂಡಿವೆ.
- ‘K-ಕೋಡ್’ ಪರಿಕಲ್ಪನೆಯು ಮತ್ತೆ ವಾಪಾಸಾಗಿದೆ; ಬುಕಿಂಗ್ ಗಾಗಿ ಇದನ್ನು ಬಳಸುವ ಗ್ರಾಹಕರಿಗೆ ವಿತರಣೆಯಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ.
- ಹೊಸ ಸೋನೆಟ್ ಕಾರಿನ ಒಳಗಡೆ ಮತ್ತು ಹೊರಗಡೆ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸಹ ಸೇರ್ಪಡೆಗೊಳಿಸಲಾಗಿದೆ.
- ಹುಡ್ ಅಡಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ; ಡೀಸೆಲ್-MT ಕೋಂಬೊ ಮತ್ತೆ ಮರಳಿದೆ.
- ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ.
ಒಂದು ವೇಳೆ ಪರಿಷ್ಕೃತ ಕಿಯಾ ಸೋನೆಟ್ ಅನ್ನು ಈ ವಾರದಲ್ಲಿ ನೀವು ಬುಕ್ ಮಾಡಲು ಇಚ್ಛಿಸುವುದಾದರೆ, ಈ ಕಾರು ತಯಾರಕ ಸಂಸ್ಥೆಯು ಅವುಗಳನ್ನು ಡಿಸೆಂಬರ್ 20, 2023ರಂದು ನಡುರಾತ್ರಿ 12 ಗಂಟೆಯಿಂದ ಸ್ವೀಕರಿಸಲಿದೆ. ಬುಕಿಂಗ್ ಗಳು ಕಿಯಾ ವೆಬ್ ಸೈಟ್, ಆ್ಯಪ್, ಮತ್ತು ಅಖಿಲ ಭಾರತ ಮಟ್ಟದಲ್ಲಿ ಕಿಯಾ ಡೀಲರ್ ಗಳಲ್ಲಿ ತೆರೆದಿವೆ. ಹೊಸ ಸೋನೆಟ್ ಕಾರಿನ ವಿತರಣೆಯು 2024ರ ಜನವರಿಯಿಂದ ಪ್ರಾರಂಭಗೊಳ್ಳಲಿದೆ ಎಂದು ಕೊರಿಯಾದ ಈ ಕಾರು ತಯಾರಕ ಸಂಸ್ಥೆಯು ಹೇಳಿದೆ. ಆದರೆ ಡೀಸೆಲ್ - ಮ್ಯಾನುವಲ್ ವೇರಿಯಂಟ್ ಗಳು ಗ್ರಾಹಕರಿಗೆ 2024ರ ಫೆಬ್ರುವರಿಯಿಂದ ದೊರೆಯಲಿವೆ. ಡೆಲಿವರಿಯಲ್ಲಿ ಆದ್ಯತೆಯನ್ನು ಪಡೆಯಲು ಇಚ್ಛಿಸುವವರಿಗಾಗಿ ಕಿಯಾ ಸಂಸ್ಥೆಯು ‘K-ಕೋಡ್’ ಪರಿಕಲ್ಪನೆಯನ್ನು ಮತ್ತೆ ಪರಿಚಯಿಸಿದ್ದು, ಇದು ಡಿಸೆಂಬರ್ 20ರ ರಾತ್ರಿ 11:59 ತನಕ ಮಾತ್ರವೇ ಅನ್ವಯಿಸುತ್ತದೆ.
ಹೊಸ ಸೋನೆಟ್ ಕಾರನ್ನು ಹೇಗೆ ಬುಕ್ ಮಾಡಬಹುದು?
ಬುಕಿಂಗ್ ನ ಆರಂಭಕ ಹಂತದ ಅಂಗವಾಗಿ ಈಗಿನ ಕಿಯಾ ಮಾಲೀಕರು ನಿರ್ದಿಷ್ಟ ಸಂಖ್ಯೆಯ K-ಕೋಡ್ ಗಳನ್ನು ಸೃಷ್ಟಿಸಬಹುದು. ಪ್ರತೀಯೊಂದನ್ನು ಒಂದು ಬುಕಿಂಗ್ ಗೆ ಮಾತ್ರವೇ ಬಳಸಬಹುದು. ಆದರೆ ಹೊಸ ಸೋನೆಟ್ ಅನ್ನು ಖರೀದಿಸಲು ಎದುರು ನೋಡುತ್ತಿರುವ ಗೆಳೆಯರು ಅಥವಾ ಕುಟುಂಬದ ಸದಸ್ಯರಿಗೆ ಇದನ್ನು ವರ್ಗಾಯಿಸಬಹುದು. ಕಿಯಾ ಸಂಸ್ಥೆಯು ‘K-ಕೋಡ್’ ಪರಿಕಲ್ಪನೆಯನ್ನು ಪರಿಷ್ಕೃತ ಸೆಲ್ಟೋಸ್ ವಾಹನದ ಬಿಡುಗಡೆಗೆ ಮೊದಲು ಪರಿಚಯಿಸಿತ್ತು. ಅದರೆ ಪರಿಷ್ಕರಣೆಗೆ ಮೊದಲಿನ ಸೆಲ್ಟೋಸ್ ಕಾರನ್ನು ಹೊಂದಿದ್ದ ಮಾಲೀಕರು ಮಾತ್ರವೇ ಈ ಕೋಡ್ ಅನ್ನು ಸೃಷ್ಟಿಸಬಹುದಾಗಿತ್ತು. ಈ ವ್ಯವಸ್ಥೆಯು ಈಗ ಬದಲಾಗಿದ್ದು, ಈ ಕಾರು ತಯಾರಕ ಸಂಸ್ಥೆಯು ಎಲ್ಲಾ ಕಿಯಾ ಕಾರುಗಳ ಮಾಲೀಕರಿಗೆ ಈ ಅವಕಾಶವನ್ನು ಒದಗಿಸಿದೆ.
ಗಮನಿಸಿ: ಈ K-ಕೋಡ್, ಡಿಸೆಂಬರ್ 20ರಂದು ಮಾಡಿದ ಬುಕಿಂಗ್ ಗಳಿಗೆ ಮಾತ್ರವೇ ಅನ್ವಯಿಸುತ್ತದೆ.
2024 ಕಿಯಾ ಸೋನೆಟ್ ಕಂಡಿರುವ ಪ್ರಮುಖ ಬದಲಾವಣೆಗಳು
ಸೋನೆಟ್ ಸಬ್ ಕಾಂಪ್ಯಾಕ್ಟ್ SUV ಯಲ್ಲಿ ಸಮಗ್ರ ಬದಲಾವಣೆಗಳನ್ನು ಮಾಡಲಾಗಿದ್ದು, 2020ರಲ್ಲಿ ಇದು ಬಿಡುಗಡೆಯಾದ ನಂತರ ಈ ವಾಹನಕ್ಕೆ ಮಾಡಲಾದ ಮೊದಲ ಪರಿಷ್ಕರಣೆ ಇದಾಗಿದೆ. ಇದು ಈಗ ಮರುವಿನ್ಯಾಸಕ್ಕೆ ಒಳಪಟ್ಟ ಗ್ರಿಲ್, ಆಕರ್ಷಕ LED ಹೆಡ್ ಲೈಟ್ ಗಳು, ಕೋರೆಹಲ್ಲಿನಾಕಾರದ ಉದ್ದನೆಯ LED DRL ಮತ್ತು ನುಣುಪಾದ LED ಫಾಗ್ ಲ್ಯಾಂಪ್ ಗಳು, ಹೊಸ ಸಂಪರ್ಕಿತ LED ಟೇಲ್ ಲೈಟ್ ಗಳು, ಮತ್ತು ಪರಿಷ್ಕೃತ ಬಂಪರ್ ಗಳೊಂದಿಗೆ ಬರಲಿದೆ.
ಇದರ ಕ್ಯಾಬಿನ್ ವಿನ್ಯಾಸವು ಹೊರಹೋಗುವ ಮಾದರಿಯ ಕ್ಯಾಬಿನ್ ವಿನ್ಯಾಸಕ್ಕಿಂತ ಭಿನ್ನವಾಗಿಲ್ಲ. ಆದರೆ ಪರಿಷ್ಕೃತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಇದು ಹೊಂದಿರಲಿದೆ. ಈ SUV ಯು ಸನ್ ರೂಫ್, ವೈರ್ ಲೆಟ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಉಳಿಸಿಕೊಂಡಿದೆ. ಅಲ್ಲದೆ ಕಿಯಾ ಸಂಸ್ಥೆಯು ಪರಿಷ್ಕೃತ ಸೋನೆಟ್ ನಲ್ಲಿ ಸೆಲ್ಟೋಸ್ ನಲ್ಲಿರುವಂತಹ 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ಮತ್ತು ಹ್ಯುಂಡೈ ವೆನ್ಯು ಮಾದರಿಯಲ್ಲಿರುವಂತಹ 4-ವೇ ಪವರ್ಡ್ ಡ್ರೈವರ್ ಸೀಟ್ ಅನ್ನು ಒದಗಿಸಿದೆ.
ಜತೆಗೆ 360-ಡಿಗ್ರಿ ಕ್ಯಾಮರಾ ಮತ್ತು 10 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳನ್ನು (ADAS) ಇದು ಪಡೆದಿದೆ. ಜತೆಗೆ ಆರು ಏರ್ ಬ್ಯಾಗ್ ಗಳು (ಈಗ ಪ್ರಮಾಣಿತ), ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮುಂತಾದ ಇತರ ಸುರಕ್ಷಾ ಸೌಲಭ್ಯಗಳನ್ನು ಇದರಲ್ಲಿ ನೀಡಲಾಗಿದೆ.
ಸಂಬಂಧಿತ: ಇಲ್ಲಿದೆ ಮಾಹಿತಿ: ಕಿಯಾ ಸೋನೆಟ್ ಫೇಟ್ ಲಿಫ್ಟ್ ಕಾರಿನ ಎಲ್ಲಾ ಬಣ್ಣಗಳ ಆಯ್ಕೆಗಳು
ಅದೇ ಎಂಜಿನ್-ಗೇರ್ ಬಾಕ್ಸ್ ಆಯ್ಕೆಗಳು
ಪರಿಷ್ಕರಣೆಗೆ ಮೊದಲ ಮಾದರಿಯಲ್ಲಿ ಇದ್ದಂತೆಯೇ ಹೊಸ ಕಿಯಾ ಸೋನೆಟ್ ನಲ್ಲಿಯೂ ಬೇರೆ ಬೇರೆ ಪವರ್ ಟ್ರೇನ್ ಗಳನ್ನು ನೀಡಲಾಗಿದೆ. ಸಾಕಷ್ಟು ಹೊಸತನಗಳೊಂದಿಗೆ ಕಿಯಾ ಸಂಸ್ಥೆಯು ಡೀಸೆಲ್ ಮ್ಯಾನುವಲ್ ಕೋಂಬೊವನ್ನು ಮರುಪರಿಚಯಿಸಿದೆ. ವಿಸ್ತೃತ ತಾಂತ್ರಿಕ ವಿವರಗಳು ಇಲ್ಲಿವೆ:
ವಿವರಗಳು |
1.2-ಲೀಟರ್ N.A. ಪೆಟ್ರೋಲ್ |
1-ಲೀಟರ್ ಟರ್ಬೊ ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 PS |
120 PS |
116 PS |
ಟಾರ್ಕ್ |
115 Nm |
172 Nm |
250 Nm |
ಟ್ರಾನ್ಸ್ ಮಿಶನ್ |
5-ಸ್ಪೀಡ್ MT |
6-ಸ್ಪೀಡ್ iMT, 7-ಸ್ಪೀಡ್ DCT |
6-ಸ್ಪೀಡ್ MT (ಹೊಸತು), 6-ಸ್ಪೀಡ್ iMT, 6-ಸ್ಪೀಡ್ AT |
ನಿರೀಕ್ಷಿತ ಬೆಲೆ ಮತ್ತು ಸ್ಪರ್ಧೆ
ಪರಿಷ್ಕೃತ ಕಿಯಾ ಸೋನೆಟ್ ವಾಹನವು ಸುಮಾರು ರೂ. 8 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ. ಇದು ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯು, ಟಾಟಾ ನೆಕ್ಸನ್, ಮಹೀಂದ್ರಾ XUV300, ನಿಸಾನ್ ಮ್ಯಾಗ್ನೈಟ್, ರೆನೋ ಕೈಗರ್, ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್ ಜೊತೆಗೆ ಸ್ಪರ್ಧಿಸಲಿದೆ.
ಇದನ್ನು ಸಹ ನೋಡಿರಿ: ಭಿನ್ನತೆಗಳನ್ನು ಭೇದಿಸುವುದು: ಹೊಸ ಮತ್ತು ಹಳೆಯ ಕಿಯಾ ಸೋನೆಟ್
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೋನೆಟ್ ಅಟೋಮ್ಯಾಟಿಕ್