Login or Register ಅತ್ಯುತ್ತಮ CarDekho experience ಗೆ
Login

ರಾಡಾರ್-ಆಧಾರಿತ ADAS ನೊಂದಿಗೆ ಹೆಚ್ಚು ಸುರಕ್ಷತೆ ಪಡೆಯಲಿದೆ ಮಹೀಂದ್ರಾ ಸ್ಕಾರ್ಪಿಯೋ ಎನ್

ಮೇ 04, 2023 07:27 pm ರಂದು tarun ಮೂಲಕ ಪ್ರಕಟಿಸಲಾಗಿದೆ
20 Views

ಆದಾಗ್ಯೂ, ಈ ಸುರಕ್ಷತಾ ಟೆಕ್ನಾಲಜಿ ಶೀಘ್ರದಲ್ಲಿಯೇ ಬರುವುದಿಲ್ಲ

  • ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಸ್ಕಾರ್ಪಿಯೋ ಎನ್‌ ನ ಡೀಸೆಲ್-ಆಟೋಮ್ಯಾಟಿಕ್ ಆವೃತ್ತಿಯನ್ನು ಪರಿಚಯಿಸಲಾಗಿದೆ.
  • ಇದು ಪ್ರಸ್ತುತ ಸುರಕ್ಷತಾ ಮಾನದಂಡಗಳಿಗೆ ಬದ್ಧವಾಗಿದ್ದರೂ, ಅದನ್ನು 2025ರ ಒಳಗೆ ADAS ನೊಂದಿಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ.
  • ಈ ಸ್ಕಾರ್ಪಿಯೋ ಎನ್ ಅನ್ನು ಭಾರತದಿಂದ ಆಸ್ಟ್ರೇಲಿಯಾಗೆ ರಫ್ತು ಮಾಡಲಾಗಿರುವುದರಿಂದ, ಭವಿಷ್ಯದಲ್ಲಿ ನಾವು ರಾಡಾರ್-ಆಧಾರಿತ ತಂತ್ರಜ್ಞಾನವನ್ನು ಸಹ ಪಡೆಯಬಹುದು.
  • ಈ ಎಸ್‌ಯುವಿಯ ADAS ಸೂಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಅನ್ನು ಒಳಗೊಂಡಿರಬಹುದು.

ಈಗಾಗಲೇ ಸ್ಕಾರ್ಪಿಯೋ ಕ್ಲಾಸಿಕ್ ಆಧಾರಿತ ಪಿಕಪ್ ಟ್ರಕ್‌ನ ಮಾರಾಟವನ್ನು ಹೊಂದಿರುವ ಆಸ್ಟ್ರೇಲಿಯನ್ ಮಾರುಕಟ್ಟೆಯಲ್ಲಿ ಮಹೀಂದ್ರಾ ತನ್ನ ಸ್ಕಾರ್ಪಿಯೋ ಎನ್ ಅನ್ನು ಪರಿಚಯಿಸಿತು. ಈ ಎಸ್‌ಯುವಿ ಅನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಡಿಸೇಲ್-ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತದೆ.

ಆಸ್ಟ್ರೇಲಿಯನ್ ಸುರಕ್ಷತಾ ನಿಯಮಗಳ ಪ್ರಕಾರ, ಪ್ರತಿಯೊಂದು ಕಾರು ಸಹ ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ರಿಯರ್-ಕ್ರಾಸ್ ಟ್ರಾಫಿಕ್ ಅಲರ್ಟ್ ಅನ್ನು ಒಳಗೊಂಡಿರುವುದು ಕಡ್ಡಾಯವಾಗಿದೆ. ಈ ನಿಯಮವು ಏಪ್ರಿಲ್ 2023ರಿಂದ ಮಾರಾಟದಲ್ಲಿ ಪ್ರಮಾಣೀಕರಿಸಲ್ಪಡುವ ಎಲ್ಲಾ ಕಾರುಗಳಿಗೆ ಅನ್ವಯಿಸುತ್ತದೆ, ಆದರೆ ಮಹೀಂದ್ರಾ ಮಾರ್ಚ್‌ನಲ್ಲಿಯೇ ಸ್ಕಾರ್ಪಿಯೋ ಎನ್ ಅನ್ನು ನೋಂದಾಯಿಸಿಕೊಳ್ಳುವ ಮೂಲಕ ಇದರಿಂದ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು. ಪ್ರಸ್ತುತ, ಇದು ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್‌ಗಳನ್ನು ಅದರ ಸುರಕ್ಷತಾ ಫೀಚರ್‌ಗಳಾಗಿ ಹೊಂದಿದೆ.

ಇದನ್ನೂ ಓದಿ: ವೀಕ್ಷಿಸಿ: ಎರಡು ಮಹೀಂದ್ರಾ ಸ್ಕಾರ್ಪಿಯೋಗಳಿಗಿಂತ ಒಂದು ಟೊಯೋಟಾ ಫಾರ್ಚುನರ್ ಉತ್ತಮವೇ? ನಮ್ಮ ಇತ್ತೀಚಿನ ವೀಡಿಯೋ ಮೂಲಕ ಕಂಡುಕೊಳ್ಳಿ

ಏಪ್ರಿಲ್ 2025 ರಿಂದ ಇನ್ನೂ ಕಠಿಣವಾಗುವ ಆಸ್ಟ್ರೇಲಿಯನ್ ನಿಯಮಗಳನ್ನು ಪೂರೈಸಲು, ಮಹೀಂದ್ರಾ ಈ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಫೀಚರ್‌ಗಳೊಂದಿಗೆ ಸ್ಕಾರ್ಪಿಯೋ ಎನ್ ಅನ್ನು ಸಜ್ಜುಗೊಳಿಸಬೇಕಾಗುತ್ತದೆ. ಈ ಬೆಳವಣಿಗೆಯ ಕುರಿತು, ಮಹೀಂದ್ರಾ ಆಟೋಮೋಟಿವ್ ಇಂಟರ್‌ನ್ಯಾಷನಲ್‌ನ ಆಪರೇಷನ್ಸ್ ಮ್ಯಾನೇಜರ್ ಆಗಿರುವ ಶ್ರೀ ಜಯದೀಪ್ ಮೊಯಿತ್ರಾ, "ನಾವು ಈ ಕುರಿತು ಆವರ್ತ ಯೋಜನೆಯನ್ನು ಹೊಂದಿದ್ದೇವೆ ಮತ್ತು ಸರಿಯಾದ ಸಮಯಕ್ಕೆ ಇದು ಸಂಭವಿಸುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಇದರಿಂದ ಭಾರತದ ಮಾಡೆಲ್‌ಗಳಿಗೆ ದೊರಕುವುದೇನು?

ಈ ಬೆಳವಣಿಗೆಯು ಮಹೀಂದ್ರಾ ಸ್ಕಾರ್ಪಿಯೋ ಎನ್ ಈ ರಾಡಾರ್-ಆಧಾರಿತ ಫೀಚರ್‌ಗಳನ್ನು ಪಡೆಯಲಿದೆ ಎಂಬುದನ್ನು ಖಚಿತಪಡಿಸುತ್ತದೆ. ಕಾರನ್ನು ಭಾರತದಿಂದ ರಫ್ತು ಮಾಡಲಾಗುವುದರಿಂದ, ಇಂಡಿಯಾ-ಸ್ಪೆಕ್ ಮಾಡೆಲ್ ಸಹ ಈ ADAS ಫೀಚರ್ ಅನ್ನು ಪಡೆಯುವ ಸಾಧ್ಯತೆಯ ಅಧಿಕವಾಗಿರುತ್ತದೆ.

ಈ ತಂತ್ರಜ್ಞಾನವನ್ನು XUV700 ನಲ್ಲಿ ಈಗಾಗಲೇ ಪರಿಚಯಿಸಿರುವುದರಿಂದ ADAS ಅನ್ನು ಸೇರಿಸುವುದು ಕಷ್ಟಕರ ಕೆಲಸವಾಗಿರಲಾರದು. ಎರಡನೆಯದರ ADAS ಸೂಟ್ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್-ಕೀಪ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ. ಸ್ಕಾರ್ಪಿಯೋ ಎನ್ ನಲ್ಲಿಯೂ ಇದೇ ರೀತಿಯ ಸುರಕ್ಷತಾ ಫೀಚರ್‌ಗಳನ್ನು ನಿರೀಕ್ಷಿಸಬಹುದು.

ಈ ಸ್ಕಾರ್ಪಿಯೋ ಎನ್ ಭಾರತದಲ್ಲಿ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೊತೆಯಾದ 2.2-ಲೀಟರ್ ಡಿಸೇಲ್ ಮತ್ತು 2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಪಡೆಯುತ್ತದೆ. ಆದಾಗ್ಯೂ, ಆಸ್ಟ್ರೇಲಿಯನ್-ಸ್ಪೆಕ್ ಮಾಡೆಲ್ ಡಿಸೇಲ್ ಆಟೋಮ್ಯಾಟಿಕ್ ಸಂಯೋಜನೆಯನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಇಂಡಿಯಾ-ಸ್ಪೆಕ್ ಮಾಡೆಲ್ ರಿಯರ್ ಮತ್ತು ಫೋರ್-ವ್ಹೀಲ್ ಡ್ರೈವ್‌ಟ್ರೇನ್ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ, ಆದರೆ ಆಸ್ಟ್ರೇಲಿಯನ್ ಆವೃತ್ತಿಯು ಎರಡನೆಯದನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಅಲ್ಲದೆ, ಇದರ ಟಾಪ್ ಸ್ಪೆಕ್ Z8 ಮತ್ತು Z8L ವೇರಿಯೆಂಟ್‌ಗಳು ಮಾತ್ರ ಲಭ್ಯವಿದೆಯಾದರೂ ನಾವು ಹೆಚ್ಚುವರಿಯಾಗಿ Z2, Z4, ಮತ್ತು Z6 ವೇರಿಯೆಂಟ್‌ಗಳನ್ನು ಪಡೆಯಬಹುದು.

ಇದನ್ನೂ ಓದಿ: ಕಾರುಪ್ರಿಯರು ರೂ. 15 ಲಕ್ಷದೊಳಗೆ ಖರೀದಿಸಬಹುದಾದ 10 ಟರ್ಬೋ-ಪೆಟ್ರೋಲ್ ಕಾರುಗಳು

ಈ ಸ್ಕಾರ್ಪಿಯೋ ಎನ್ ಆಸ್ಟ್ರೇಲಿಯಾದಲ್ಲಿ ರೂ.22.70 ಲಕ್ಷದಿಂದ ರೂ. 24.31 ಲಕ್ಷದವರೆಗೆ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದ್ದು, ನಮ್ಮ ದೇಶದಲ್ಲಿ ಇದು ರೂ. 13.05 ಲಕ್ಷದಿಂದ ರೂ. 24.52 ಲಕ್ಷದವರೆಗೆ ಮಾರಾಟವಾಗಬಹುದು (ಎಕ್ಸ್-ಶೋರೂಂ).

Source

ಇನ್ನಷ್ಟು ಇಲ್ಲಿ ಓದಿ : ಮಹೀಂದ್ರಾ ಸ್ಕಾರ್ಪಿಯೋ ಎನ್ ಆನ್ ರೋಡ್ ಬೆಲೆ

Share via

Write your Comment on Mahindra ಸ್ಕಾರ್ಪಿಯೊ ಎನ್

ಇನ್ನಷ್ಟು ಅನ್ವೇಷಿಸಿ on ಮಹೀಂದ್ರಾ ಸ್ಕಾರ್ಪಿಯೋ ಎನ್

ಮಹೀಂದ್ರಾ ಸ್ಕಾರ್ಪಿಯೋ ಎನ್

4.5775 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಡೀಸಲ್15.42 ಕೆಎಂಪಿಎಲ್
ಪೆಟ್ರೋಲ್12.17 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.46.89 - 48.69 ಲಕ್ಷ*
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.17.49 - 22.24 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ