Login or Register ಅತ್ಯುತ್ತಮ CarDekho experience ಗೆ
Login

ನವೀಕೃತ XUV300 ಮತ್ತೆ ಪತ್ತೆ, ಹೊಸ ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಬಹಿರಂಗ

published on ಅಕ್ಟೋಬರ್ 17, 2023 10:19 pm by shreyash for ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ

ಇದೇ ವಿನ್ಯಾಸದ ನವೀಕರಣಗಳನ್ನು ಈ ಎಸ್‌ಯುವಿಯ ನವೀಕೃತ ಎಲೆಕ್ಟ್ರಿಕ್ ಆವೃತ್ತಿಯಾದ XUV400 ಇವಿಗೂ ಅನ್ವಯಿಸಲಾಗುತ್ತಿದೆ.

  • ನವೀಕೃತ XUV300 ಪ್ರಯೋಗಾರ್ಥ ಕಾರು ಹೊಸ ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ.
  • ಮುಂಭಾಗದಲ್ಲಿ ಇದು ನವೀಕೃತ ಗ್ರಿಲ್ ಮತ್ತು ಬಂಪರ್ ವಿನ್ಯಾಸ ಹಾಗೂ ಕೋರೆಹಲ್ಲಿನ ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ.
  • ಹಿಂದಿನ ಸ್ಪೈ ಶಾಟ್‌ಗಳ ಆಧಾರದ ಮೇಲೆ, XUV300 ನ ನವೀಕೃತ ಆವೃತ್ತಿಯು ದೊಡ್ಡ ಫ್ಲೋಟಿಂಗ್ ಟಚ್‌ಸ್ಕ್ರೀನ್ ವ್ಯವಸ್ಥೆಯನ್ನು ಹೊಂದಿರುವ ಸಾಧ್ಯತೆಯಿದೆ.
  • ಮಹೀಂದ್ರಾ 2024 XUV300 ನೊಂದಿಗೆ ಅದೇ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಳ್ಳುತ್ತದೆ, ಆದರೆ ಇದು ಐಚ್ಛಿಕ ಟಾರ್ಕ್ ಕನ್ವರ್ಟರ್ ಅನ್ನು ಪಡೆಯಬಹುದು.
  • 2024 ಆರಂಭದಲ್ಲಿ ರೂ. 9 ಲಕ್ಷದಿಂದ (ಎಕ್ಸ್-ಶೋರೂಮ್) ಬಿಡುಗಡೆ ಮಾಡುವ ಸಾಧ್ಯತೆಯಿದೆ.

2024 ರಲ್ಲಿ, ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ನವೀಕೃತ ಮಹೀಂದ್ರಾ XUV300 ರೂಪದಲ್ಲಿ ಮತ್ತೊಂದು ರಿಫ್ರೆಶ್ ಉತ್ಪನ್ನವನ್ನು ನೀಡುತ್ತಿದೆ. ಹೊಸ ಎಕ್ಸ್‌ಟೀರಿಯರ್ ವಿನ್ಯಾಸವನ್ನು ಬಹಿರಂಗಪಡಿಸುವ ಮೂಲಕ ಅದರ ಪ್ರಯೋಗದ ಕಾರನ್ನು ಮತ್ತೆ ಸ್ಪೈ ಮಾಡಲಾಗಿದೆ; ಮತ್ತೆ ಇದೇ ವಿನ್ಯಾಸದ ನವೀಕರಣಗಳನ್ನು ಅದರ ಎಲೆಕ್ಟ್ರಿಕ್ ಆವೃತ್ತಿಯಾದ, ಮಹೀಂದ್ರಾ XUV400 ಇವಿ ಗೂ ಸಹ ನೀಡಬಹುದೆಂದು ನಿರೀಕ್ಷಿಸಲಾಗಿದೆ. ಇತ್ತೀಚಿನ ಸ್ಪೈ ಶಾಟ್‌ಗಳು ಏನನ್ನು ಬಹಿರಂಗಪಡಿಸಿವೆ ಎಂಬುದನ್ನು ನೋಡೋಣ.

ಮುಂಭಾಗದ ಮತ್ತು ಹಿಂಭಾಗದ ಹೊಸ ಲೈಟಿಂಗ್

ಇತ್ತೀಚಿನ ಸ್ಪೈ ಚಿತ್ರಗಳಲ್ಲಿ, XUV700 ನಲ್ಲಿರುವುದನ್ನು ಹೋಲುವ ಕೋರೆಹಲ್ಲಿನ ಆಕಾರದ ಎಲ್‌ಇಡಿ ಡಿಆರ್‌ಎಲ್ ಸೆಟಪ್ ಅನ್ನು ಪ್ರಯೋಗದ ಕಾರಿನ ಮುಂಭಾಗದಲ್ಲಿ ಕಾಣಬಹುದು. ಇದು ಹೆಚ್ಚು ಆ್ಯರೋಡೈನಾಮಿಕ್ ಆಗಿರುವ ಹೊಸ ವಿನ್ಯಾಸದ ಅಲಾಯ್ ವ್ಹೀಲ್‌ಗಳನ್ನು ಪಡೆಯುತ್ತದೆ

ಹಿಂಭಾಗದಲ್ಲಿ, ನವೀಕೃತ XUV300 ಸಂಪೂರ್ಣ ಪ್ರಕಾಶಮಾನವಾದ ಸ್ಟ್ರಿಪ್‌ನೊಂದಿಗೆ ಸಂಪರ್ಕಿತ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ. ಮತ್ತೊಂದು ಗಮನಾರ್ಹ ಬದಲಾವಣೆಯೆಂದರೆ ಪರವಾನಗಿ ಪ್ಲೇಟ್ ಅನ್ನು ಹಿಂಬದಿಯ ಬಂಪರ್‌ಗೆ ಮರುಸ್ಥಾಪಿಸಲಾಗಿದೆ, ಆದರೆ ಅಸ್ತಿತ್ವದಲ್ಲಿರುವ XUV300 ನಲ್ಲಿ ಪರವಾನಗಿ ಪ್ಲೇಟ್ ಟೈಲ್‌ಗೇಟ್‌ನಲ್ಲಿಯೇ ಇದೆ.

ಕ್ಯಾಬಿನ್ ಅಪ್‌ಡೇಟ್‌ಗಳು

ಅಸ್ತಿತ್ವದಲ್ಲಿರುವ ಮಹೀಂದ್ರಾ XUV300 ಯ ಇಂಟೀರಿಯರ್ ಚಿತ್ರವನ್ನು ಬಳಸಲಾಗಿದೆ

ಹಿಂದಿನ ಸ್ಪೈ ಶಾಟ್‌ಗಳ, ಆಧಾರದ ಮೇಲೆ ನವೀಕೃತ XUV300 ದೊಡ್ಡ ಫ್ಲೋಟಿಂಗ್ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಅನ್ನು ಪಡೆಯುವ ನಿರೀಕ್ಷೆಯಿದೆ. ಈ ಎಸ್‌ಯುವಿಯು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳನ್ನು ಹೊಂದಿರಬಹುದು. ಸಿಂಗಲ್-ಪೇನ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿಯಂತಹ ಫೀಚರ್‌ಗಳನ್ನು ಉಳಿಸಿಕೊಳ್ಳಲಾಗುತ್ತದೆ. ನವೀಕೃತ XUV300 ವಿಹಂಗಮ ಸನ್‌ರೂಫ್ ಮೂಲಕ ವಿಭಾಗದಲ್ಲೇ ಪ್ರಥಮ ಫೀಚರ್ ಅನ್ನು ಸಹ ಪಡೆಯುವ ನಿರೀಕ್ಷೆಯಿದೆ ಎಂದು ಕೆಲವು ವರದಿಗಳಿವೆ.

ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು (ಪ್ರಮಾಣಿತವಾಗಿ), ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು 360-ಡಿಗ್ರಿ ಕ್ಯಾಮರಾವನ್ನು ಹೊಂದಿರುತ್ತದೆ.

ಪವರ್‌ಟ್ರೇನ್‌ಗಳು

ಮಹೀಂದ್ರಾ, 2024 ರ ಮಹೀಂದ್ರಾ XUV300 ನೊಂದಿಗೆ ಅದೇ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆಯನ್ನು ನೀಡಬಹುದು. ಈ ಆಯ್ಕೆಗಳಲ್ಲಿ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ( 110PS/200Nm) ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ (117PS/300Nm) ಸೇರಿವೆ. ಎರಡೂ ಎಂಜಿನ್ ವೇರಿಯೆಂಟ್‌ಗಳನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಎಎಂಟಿಯೊಂದಿಗೆ ಜೊತೆಯಾಗಿಸಬಹುದು.

ಪ್ರಸ್ತುತ XUV300, 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೊತೆಯಾದ T-GDi (ನೇರ-ಇಂಜೆಕ್ಷನ್) ಟರ್ಬೋ-ಪೆಟ್ರೋಲ್ ಎಂಜಿನ್ (130PS/up to 250Nm) ನೊಂದಿಗೆ ಲಭ್ಯವಿದೆ. ಮಹಿಂದ್ರಾ ಪ್ರಸ್ತುತ ಎಎಂಟಿಯನ್ನು ಟಾರ್ಕ್ ಕನ್ವರ್ಟರ್‌ನೊಂದಿಗೆ ಬದಲಾಯಿಸಬಹುದೆಂದು ನಾವು ನಿರೀಕ್ಷಿಸಿದ್ದೇವೆ.

ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

ಈ ನವೀಕೃತ ಮಹೀಂದ್ರಾ XUV300 2024 ರ ಪ್ರಾರಂಭದಲ್ಲಿ ರೂ 9 ಲಕ್ಷದೊಂದಿಗೆ (ಎಕ್ಸ್-ಶೋರೂಮ್) ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯು, ರೆನಾಲ್ಟ್ ಕೈಗರ್, ನಿಸಾನ್ ಮ್ಯಾಗ್ನೈಟ್, ಮತ್ತು ನವೀಕೃತ ಕಿಯಾ ಸೊನೆಟ್‌ಗಳಿಗೆ ಸ್ಪರ್ಧೆಯನ್ನೊಡ್ಡುತ್ತದೆ.

ಚಿತ್ರ ಕೃಪೆ

ಇನ್ನಷ್ಟು ಇಲ್ಲಿ ಓದಿ : ಮಹೀಂದ್ರಾ XUV300 ಎಎಂಟಿ

s
ಅವರಿಂದ ಪ್ರಕಟಿಸಲಾಗಿದೆ

shreyash

  • 46 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ XUV 3XO

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
Rs.43.81 - 54.65 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ