• English
  • Login / Register

ಭಾರತದಲ್ಲಿ 1 ಲಕ್ಷ ಮನೆಗಳನ್ನು ತಲುಪಿದ ಮಹೀಂದ್ರಾ XUV700

ಮಹೀಂದ್ರ ಎಕ್ಸ್‌ಯುವಿ 700 ಗಾಗಿ shreyash ಮೂಲಕ ಜುಲೈ 05, 2023 10:08 pm ರಂದು ಪ್ರಕಟಿಸಲಾಗಿದೆ

  • 79 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹೀಂದ್ರಾ XUV700 ಯ ಕೊನೆಯ 50,000 ಯೂನಿಟ್‌ಗಳನ್ನು ಕಳೆದ 8 ತಿಂಗಳುಗಳಲ್ಲಿ ಡೆಲಿವರಿ ಮಾಡಲಾಗಿದೆ

Mahindra XUV700 Reaches 1 Lakh Homes In India ಮಹೀಂದ್ರಾ XUV700 ಇನ್ನೂ ಬಹುಶಃ ದೇಶದ ಅತ್ಯಂತ ಜನಪ್ರಿಯ ಮಧ್ಯಮ-ಗಾತ್ರದ ಎಸ್‌ಯುವಿ ಆಗಿದ್ದು 1 ಲಕ್ಷ ಯೂನಿಟ್‌ ಡಿಲಿವರಿ ಮೈಲಿಗಲ್ಲನ್ನು ಸಾಧಿಸಿದೆ. ಇದು ಈ ಕಾರು ತಯಾರಕರ 2021 ರಲ್ಲಿ ಬಿಡುಗಡೆಯಾದ ಮಹೀಂದ್ರಾ XUV500 ಗೆ ಪ್ರಮುಖ ಎಸ್‌ಯುವಿ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಈ XUV700 ಕೇವಲ 20 ತಿಂಗಳ ಅತ್ಯಲ್ಪ ಅವಧಿಯಲ್ಲಿ  ಈ ಮೈಲಿಗಲ್ಲನ್ನು ಸಾಧಿಸಿದೆ, ಇದು ಸುಮಾರು 20 ಲಕ್ಷ ಬೆಲೆಯನ್ನು ಹೊಂದಿರುವ ಅತ್ಯಂತ ಜನಪ್ರಿಯ ವೇರಿಯೆಂಟ್‌ಗಳೊಂದಿಗೆ ಸಾಕಷ್ಟು ಪ್ರೀಮಿಯಂ ಕೊಡುಗೆಯಾಗಿದೆ. ಬಿಡುಗಡೆಯಾದಾಗಿನಿಂದ, ಈ XUV700 ಗಮನಾರ್ಹ ಕಾಯುವಿಕೆಯ ಅವಧಿಯನ್ನು ಹೊಂದಿದೆ. ಮಹೀಂದ್ರಾ ಮೊದಲ ಮೂರು ಗಂಟೆಗಳಲ್ಲಿ 50,000 ಬುಕ್ಕಿಂಗ್‌ಗಳನ್ನು ಪಡೆದು ಆ ಯೂನಿಟ್‌ಗಳನ್ನು ಡೆಲಿವರಿ ಮಾಡಲು 12 ತಿಂಗಳುಗಳ ಸಮಯವನ್ನು ತೆಗೆದುಕೊಂಡರೆ, ಮುಂದಿನ 50,000 ಯೂನಿಟ್‌ಗಳನ್ನು 8 ತಿಂಗಳುಗಳಲ್ಲಿ ಹಸ್ತಾಂತರಿಸಲಾಯಿತು. XUV700 ನ ಕಾಯುವಿಕೆ ಅವಧಿಯು ಇನ್ನೂ ಹೆಚ್ಚಿವೆ ಮತ್ತು ಮಹೀಂದ್ರಾ ಈಗ ತಮ್ಮ ಹೇಳಿಕೆಯ ಪ್ರಕಾರ ಮುಂದಿನ 50,000 ಯೂನಿಟ್‌ಗಳ ವಿತರಣೆಯನ್ನು ತ್ವರಿತಗೊಳಿಸಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನಹರಿಸಿದೆ.

ಇದು ಏನನ್ನು ನೀಡುತ್ತಿದೆ

Mahindra XUV700 Reaches 1 Lakh Homes In India

ಈ XUV700 ಬಿಡುಗಡೆಯಾದಾಗಿನಿಂದ ಯಾವುದೇ ಪ್ರಮುಖ ಬದಲಾವಣೆಗಳನ್ನು ಪಡೆದಿಲ್ಲ, ಮತ್ತು ಅದರ ಫೀಚರ್‌ ಲಿಸ್ಟ್  ಆ್ಯಂಡ್ರಾಯ್ಡ್ ಆಟೋ ಡಿಸ್‌ಪ್ಲೇ ಮತ್ತು ಆ್ಯಪಲ್ ಕಾರ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್, ವಿಹಂಗಮವಾದ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಸೋನಿಯ 12-ಸ್ಪೀಕರ್ 3D ಸೌಂಡ್ ಸಿಸ್ಟಮ್‌ನೊಂದಿಗೆ ಸಂಯೋಜಿತ 10.25-ಇಂಚಿನ ಸ್ಕ್ರೀನ್ ಸೆಟಪ್ ಅನ್ನು ಒಳಗೊಂಡಿದೆ.

ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಇದು ಏಳು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮರಾ, ರಿವರ್ಸಿಂಗ್ ಕ್ಯಾಮರಾ, ಇಷ್ಟು ಮಾತ್ರವಲ್ಲದೇ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಮತ್ತು ಹೈ-ಬೀಮ್ ಅಸಿಸ್ಟ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಯನ್ನು ಒಳಗೊಂಡಿದೆ.

ಇದನ್ನೂ ಓದಿ: 9 ಲಕ್ಷ ಉತ್ಪಾದನಾ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ ಸ್ಕಾರ್ಪಿಯೋ

 

 ಪವರ್‌ಟ್ರೇನ್ ವಿವರಗಳು

Mahindra XUV700 Reaches 1 Lakh Homes In India

 ಮಹೀಂದ್ರಾ XUV700 ಎರಡು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ: 2-ಲೀಟರ್ ಪೆಟ್ರೋಲ್ ಎಂಜಿನ್ (200PS/380Nm) ಮತ್ತು 2.2-ಲೀಟರ್ ಡಿಸೇಲ್ ಎಂಜಿನ್ (185PS/450Nm ವರೆಗೆ), ಎರಡೂ 6-ಸ್ಪೀಡ್ ಮ್ಯಾನ್ಯುವಲ್ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೊತೆಯಾಗಿವೆ. ಟಾಪ್-ಸ್ಪೆಕ್ ಡಿಸೇಲ್ ವೇರಿಯೆಂಟ್‌ಗಳನ್ನು ಆಲ್-ವ್ಹೀಲ್ ಡ್ರೈವ್ ಡ್ರೈವ್‌ಟ್ರೇನ್‌ನೊಂದಿಗೆ ನೀಡುಲಾಗುತ್ತದೆ.

 ಬೆಲೆ ಮತ್ತು ಪ್ರತಿಸ್ಪರ್ಧಿಗಳು

 XUV700 ಯ ಬೆಲೆಯನ್ನು ರೂ.14.04 ಲಕ್ಷದಿಂದ ರೂ 26.18 ಲಕ್ಷಗಳ ನಡುವೆ (ಎಕ್ಸ್‌-ಶೋರೂಮ್, ಪ್ಯಾನ್ ಇಂಡಿಯಾ) ನಿಗದಿಪಡಿಸಲಾಗಿದೆ. ಇದು ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಝರ್‌ಗೆ ಪ್ರತಿಸ್ಪರ್ಧಿಯಾಗಲಿದೆ. XUV700 ನ ಕೆಳಮಟ್ಟದ ವೇರಿಯೆಂಟ್‌ಗಳು 5-ಸೀಟರ್ ಸಂರಚನೆಯನ್ನು ಹೊಂದಿದ್ದು, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾದಂತಹ 5-ಸೀಟರ್ ಎಸ್‌ಯುವಿಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.

ಇನ್ನಷ್ಟು ಇಲ್ಲಿ ಓದಿ : ಮಹೀಂದ್ರಾ XUV700 ಆನ್ ರೋಡ್ ಬೆಲೆ


 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಎಕ್ಸ್‌ಯುವಿ 700

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience