ಪರೀಕ್ಷಾ ವೇಳೆಯಲ್ಲಿ ಮತ್ತೆ ಪ್ರತ್ಯಕ್ಷವಾದ Mahindra XUV.e9, ಈ ಬಾರಿ ಕೆಲವು ಡೈನಾಮಿಕ್ ಅಂಶಗಳು ಬಹಿರಂಗ
ಹೊಸ ಸ್ಪೈ ಶಾಟ್‌ಗಳು ಸ್ಪ್ಲಿಟ್-ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಮತ್ತು ಅಲೊಯ್ ವೀಲ್ ಡಿಸೈನ್ ಅನ್ನು ಕೂಡ ತೋರಿಸುತ್ತವೆ, ಇದು 2023 ರಲ್ಲಿ ತೋರಿಸಲಾದ ಕಾನ್ಸೆಪ್ಟ್ ಮಾಡೆಲ್ ಅನ್ನು ಹೋಲುತ್ತದೆ
-
XUV.e9 XUV.e8 ನ ಎಸ್‌ಯುವಿ-ಕೂಪ್ ವರ್ಷನ್ ಆಗಿದ್ದು, ಇದು ಎಕ್ಸ್‌ಯುವಿ700 ನ ಆಲ್-ಎಲೆಕ್ಟ್ರಿಕ್ ವರ್ಷನ್ ಆಗಿದೆ.
-
ಮೂರು ಸ್ಕ್ರೀನ್‌ಗಳನ್ನು ಹೊಂದಿರುವ ಡ್ಯಾಶ್‌ಬೋರ್ಡ್‌ನೊಂದಿಗೆ ಇದರ ಒಳಭಾಗವನ್ನು ಮೊದಲು ನೋಡಲಾಗಿತ್ತು.
-
ನಿರೀಕ್ಷಿಸಲಾಗಿರುವ ಫೀಚರ್‌ಗಳಲ್ಲಿ ಮಲ್ಟಿ-ಝೋನ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪ್ರೀಮಿಯಂ ಆಡಿಯೊ ಸಿಸ್ಟಮ್ ಸೇರಿವೆ.
-
ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು ಮತ್ತು ಟಿಪಿಎಮ್‌ಎಸ್‌ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದು ADAS ಫಂಕ್ಷನ್‌ಗಳನ್ನು ಕೂಡ ಪಡೆಯಬಹುದು.
-
ಇದನ್ನು INGLO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದ್ದು, ಇದು 500 ಕಿಮೀ ರೇಂಜ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ.
-
ಇದರ ಬೆಲೆಯು 38 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದ್ದು, 2025 ರ ಮೊದಲಾರ್ಧದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಮಹೀಂದ್ರಾ XUV.e9 ಈ ಭಾರತೀಯ ಕಾರು ತಯಾರಕರು ಬಿಡುಗಡೆ ಮಾಡಲಿರುವ ಮುಂದಿನ ಒಂದೆರಡು ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. ಇದನ್ನು ಮೊದಲು 2023 ರಲ್ಲಿ ಬಹಿರಂಗಪಡಿಸಲಾಯಿತು ಮತ್ತು ಕಾರು ತಯಾರಕರು ಈಗ ನಗರದ ರಸ್ತೆಗಳಲ್ಲಿ ಇದನ್ನು ವ್ಯಾಪಕವಾಗಿ ಪರೀಕ್ಷಿಸುತ್ತಿದ್ದಾರೆ. ಮಹೀಂದ್ರಾ XUV.e9 XUV.e8 ನ ಎಸ್‌ಯುವಿ-ಕೂಪ್ ವರ್ಷನ್ ಆಗಿದ್ದು, ಇದು XUV700 ನ ಆಲ್-ಎಲೆಕ್ಟ್ರಿಕ್ ವರ್ಷನ್ ಆಗಿದೆ. ಇದು ಡಿಸೆಂಬರ್ 2024 ರ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಇಲ್ಲಿ ಈಗ ಮತ್ತೊಮ್ಮೆ ಕೆಲವು ಹೊರಭಾಗದ ಫೀಚರ್‌ಗಳನ್ನು ತೋರಿಸಲಾಗಿದೆ. ಬನ್ನಿ, ಇದರಲ್ಲಿ ನೋಡಲಾಗಿರುವ ಎಲ್ಲಾ ಫೀಚರ್‌ಗಳನ್ನು ನೋಡೋಣ:
ಹೊಸತು ಏನೇನಿದೆ?
ನಾವು ನೋಡಿದ ಟೆಸ್ಟ್ ವಾಹನವು ಕೆಮಫ್ಲೇಜ್ ಆಗಿದ್ದರೂ ಕೂಡ, ನಾವು ಒಂದು ಪ್ರಮುಖ ಫೀಚರ್ ಅನ್ನು ಗಮನಿಸಿದ್ದೇವೆ: ಮುಂಭಾಗ ಮತ್ತು ಹಿಂಭಾಗದಲ್ಲಿರುವ ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳು. ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆಯಲ್ಲಿ, ಈ ಇಂಡಿಕೇಟರ್‌ಗಳು ತಲೆಕೆಳಗಾದ L ಆಕಾರವನ್ನು ಹೊಂದಿರುತ್ತವೆ. ಮುಂಭಾಗದ ಇಂಡಿಕೇಟರ್‌ಗಳು ಕನೆಕ್ಟೆಡ್ LED DRL ಗಳಾಗಿ ಮತ್ತು ಹಿಂಭಾಗದ ಇಂಡಿಕೇಟರ್‌ಗಳು ಲೈಟ್ ಬಾರ್‌ನಿಂದ ಸಂಪರ್ಕಿಸಲಾದ ಟೈಲ್ ಲೈಟ್‌ಗಳಾಗಿ ಕೆಲಸ ಮಾಡುತ್ತವೆ.
ಇಲ್ಲಿ ಸ್ಪ್ಲಿಟ್-LED ಹೆಡ್‌ಲೈಟ್ ಸೆಟಪ್ ಮತ್ತು ಕೆಳಭಾಗದ ಗ್ರಿಲ್‌ನಲ್ಲಿ ಎರಡು ಏರ್ ಇನ್‌ಲೆಟ್‌ಗಳನ್ನು ಕೂಡ ನೋಡಬಹುದು. ಟೆಸ್ಟ್ ವಾಹನವು 2023 ರಲ್ಲಿ ತೋರಿಸಿರುವ XUV.e9 ಕಾನ್ಸೆಪ್ಟ್‌ನಂತೆ ಕಾಣುವ ಅಲೊಯ್ ವೀಲ್‌ಗಳನ್ನು ಹೊಂದಿದೆ.
ಮುಂಭಾಗದ ಬಂಪರ್‌ನ ಮಧ್ಯದಲ್ಲಿ ADAS ರಾಡಾರ್ ಅನ್ನು ಗುರುತಿಸಲಾಗಿದೆ, ಮತ್ತು ಪ್ರೊಡಕ್ಷನ್ ಮಾಡೆಲ್ ಕೂಡ ಅದನ್ನು ಪಡೆಯಬಹುದು.
ಇದನ್ನು ಕೂಡ ಓದಿ: 2024ರ ಕೊನೆಯಲ್ಲಿ ಬಿಡುಗಡೆಗೊಳ್ಳಲಿರುವ ಕಾರುಗಳ ಪಟ್ಟಿ ಇಲ್ಲಿದೆ.
ಮಹೀಂದ್ರಾ XUV.e9 ಒಳಭಾಗ
ಕೆಲವು ಹಿಂದಿನ ಸ್ಪೈ ಶಾಟ್‌ಗಳು ಅದರ ಡ್ಯಾಶ್‌ಬೋರ್ಡ್ ಡಿಸೈನ್ ಅನ್ನು ತೋರಿಸಿವೆ, ಇದು ಹೊಸ ಟಾಟಾ ಎಸ್‌ಯುವಿಗಳಲ್ಲಿ ನೋಡಲು ಸಿಗುವ ಟ್ರೈ-ಸ್ಕ್ರೀನ್ ಸೆಟಪ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿತ್ತು. ಕಾನ್ಸೆಪ್ಟ್‌ನಲ್ಲಿ ತೋರಿಸಿರುವಂತೆ ಸೆಮಿ-ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಗೇರ್ ಲಿವರ್ ಕೂಡ XUV.e9 ನ ಕ್ಯಾಬಿನ್‌ನ ಭಾಗವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಮಹೀಂದ್ರಾ XUV.e9 ನಲ್ಲಿ ನಿರೀಕ್ಷಿಸಲಾಗಿರುವ ಫೀಚರ್ ಗಳು
XUV.e9 ನಲ್ಲಿ ಮಹೀಂದ್ರಾ ಮಲ್ಟಿ-ಝೋನ್ AC, ವೈರ್‌ಲೆಸ್ ಫೋನ್ ಚಾರ್ಜರ್, ಪ್ರೀಮಿಯಂ ಆಡಿಯೊ ಸಿಸ್ಟಮ್ ಮತ್ತು ವೆಂಟಿಲೇಟೆಡ್ ಮತ್ತು ಪವರ್ಡ್ ಸೀಟುಗಳಂತಹ ಫೀಚರ್‌ಗಳನ್ನು ನೀಡುವ ಸಾಧ್ಯತೆಯಿದೆ. ಇದು ಇವಿ ಆಗಿರುವ ಕಾರಣ, ಇದು ವೆಹಿಕಲ್-ಟು-ಲೋಡ್ (V2L) ಮತ್ತು ಮಲ್ಟಿಪಲ್ ರೀಜನರೇಷನ್ ಮೋಡ್‌ಗಳಂತಹ ತಂತ್ರಜ್ಞಾನವನ್ನು ಕೂಡ ಪಡೆಯಬಹುದು.
ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಹೊಂದಿರುವ ಸಾಧ್ಯತೆಯಿದೆ. ಇದು ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್-ಕೊಲಿಷನ್ ವಾರ್ನಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ತಂತ್ರಜ್ಞಾನವನ್ನು ಕೂಡ ಪಡೆಯಬಹುದು.
ಇದನ್ನು ಕೂಡ ಓದಿ: ಮಾನೇಸರ್ ಉತ್ಪಾದನಾ ಘಟಕದಲ್ಲಿ 1 ಕೋಟಿ ಕಾರುಗಳನ್ನು ಉತ್ಪಾದಿಸಿ ದಾಖಲೆ ಬರೆದ ಮಾರುತಿ
ಮಹೀಂದ್ರಾ XUV.e9: ಬ್ಯಾಟರಿ ಪ್ಯಾಕ್ ಮತ್ತು ರೇಂಜ್
ಮಾಡೆಲ್ ನಿರ್ದಿಷ್ಟ ವಿವರಗಳು ಇನ್ನೂ ಹೊರಬಿದ್ದಿಲ್ಲ, ಆದರೆ XUV.e9 ಅನ್ನು INGLO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಮಹೀಂದ್ರಾ ಹೇಳುವಂತೆ ಇದು 60 kWh ಮತ್ತು 80 kWh ಬ್ಯಾಟರಿ ಪ್ಯಾಕ್‌ಗಳನ್ನು ಸಪೋರ್ಟ್ ಮಾಡುತ್ತದೆ, ಮತ್ತು ಇದು ಒಟ್ಟು 500 ಕಿಮೀ ರೇಂಜ್ ಅನ್ನು ನೀಡುತ್ತದೆ. ಈ ಪ್ಲಾಟ್‌ಫಾರ್ಮ್ ಅನ್ನು ರಿಯರ್-ವೀಲ್-ಡ್ರೈವ್ (RWD) ಮತ್ತು ಆಲ್-ವೀಲ್-ಡ್ರೈವ್ (AWD) ಈ ಎರಡೂ ಸೆಟಪ್‌ಗಳಿಗೆ ಅಳವಡಿಸಿಕೊಳ್ಳಬಹುದು.
ಮಹೀಂದ್ರಾ ಪ್ರಕಾರ, ಇದು 175 kW ವರೆಗಿನ ಫಾಸ್ಟ್ ಚಾರ್ಜಿಂಗ್ ಅನ್ನು ಕೂಡ ಸಪೋರ್ಟ್ ಮಾಡುತ್ತದೆ, ಮತ್ತು ಇದು ಕೇವಲ 30 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡುತ್ತದೆ.
ಮಹೀಂದ್ರಾ XUV.e9: ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ XUV.e9 ಅನ್ನು ಭಾರತದಲ್ಲಿ ಮಹೀಂದ್ರಾ XUV e.8 (ಮಹೀಂದ್ರಾ XUV700 ನ EV ವರ್ಷನ್) ನಂತರ ಮಾರುಕಟ್ಟೆಗೆ ತರಲಾಗುವುದು. ಆದ್ದರಿಂದ, ಇದನ್ನು ಏಪ್ರಿಲ್ 2025 ರ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ, ಮತ್ತು ಇದರ ಬೆಲೆಗಳು ರೂ 38 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋರೂಂ). ಇದು ಮುಂಬರುವ ಟಾಟಾ ಹ್ಯಾರಿಯರ್ ಇವಿ ಮತ್ತು ಟಾಟಾ ಸಫಾರಿ ಇವಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ.
ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.