Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R

published on ಡಿಸೆಂಬರ್ 08, 2023 01:52 pm by shreyash for ಮಾರುತಿ ವ್ಯಾಗನ್ ಆರ್‌

ಅಗ್ರ 3 ಮೊಡೆಲ್‌ಗಳು ಮಾರುತಿ ಸಂಸ್ಥೆಗೆಯೇ ಸೇರಿದ್ದು, ಇವುಗಳು 47,000 ದಷ್ಟು ಯೂನಿಟ್‌ ಗಳ ಮಾರಾಟವನ್ನು ದಾಖಲಿಸಿವೆ

ಹಬ್ಬದ ಋತುವಿನ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಪ್ರಮಾಣದ ಇಳಿಕೆ ಉಂಟಾಗಿದೆ ಆದರೆ ನವೆಂಬರ್‌ 2023ರಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು ಮಾರುತಿಗೆ ಸೇರಿದ್ದು, ಟಾಟಾ ನೆಕ್ಸನ್‌ ಮತ್ತು ಟಾಟಾ ಪಂಚ್‌ ಕಾರುಗಳು ಅಗ್ರ 5 ವಾಹನಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿವೆ. ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಅಗ್ರ 15 ಕಾರುಗಳ ವಿಸ್ತೃತ ವರದಿ ಇಲ್ಲಿದೆ.

ಮಾದರಿಗಳು

ನವೆಂಬರ್‌ 2023

ನವೆಂಬರ್‌ 2022

ಅಕ್ಟೋಬರ್‌ 2023

ಮಾರುತಿ ವ್ಯಾಗನ್ R

16,567

14,720

22,080

ಮಾರುತಿ ಡಿಜಾಯರ್

15,965

14,456

14,699

ಮಾರುತಿ ಸ್ವಿಫ್ಟ್‌

15,311

15,153

20,598

ಟಾಟಾ ನೆಕ್ಸನ್

14,916

15,871

16,887

ಟಾಟಾ ಪಂಚ್

14,383

12,131

15,317

ಮಾರುತಿ ಬ್ರೆಜ್ಜಾ

13,393

11,324

16,050

ಮಾರುತಿ ಬಲೇನೊ

12,961

20,945

16,594

ಮಾರುತಿ ಎರ್ಟಿಗಾ

12,857

13,818

14,209

ಮಹೀಂದ್ರಾ ಸ್ಕೋರ್ಪಿಯೊ

12,185

6,455

13,578

ಹ್ಯುಂಡೈ ಕ್ರೆಟಾ

11,814

13,321

13,077

ಕಿಯಾ ಸೆಲ್ಟೋಸ್‌

11,684

9,284

12,362

ಹ್ಯುಂಡೈ ವೆನ್ಯು

11,180

10,738

11,581

ಮಾರುತಿ ಈಕೊ

10,226

7,183

12,975

ಮಾರುತಿ ಫ್ರಾಂಕ್ಸ್

9,867

0

11,357

ಮಹೀಂದ್ರಾ ಬೊಲೇರೊ

9,333

7,984

9,647

ವಿಶೇಷತೆಗಳು

  • ಮಾರುತಿ ವ್ಯಾಗನ್‌ R ಕಾರು ಸತತವಾಗಿ 16,500 ಕ್ಕಿಂತಲೂ ಹೆಚ್ಚಿನ ಯೂನಿಟ್‌ ಗಳನ್ನು ಮಾರುವ ಮೂಲಕ ಸತತ ಎರಡನೇ ತಿಂಗಳಿಗೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಮಾಸಿಕ ಮಾರಾಟದಲ್ಲಿ ದೊಡ್ಡ ಪ್ರಮಾಣದ ಕುಸಿತ ಉಂಟಾಗಿದ್ದರೂ, ತನ್ನ ಈಯರ್‌-ಆನ್‌-ಈಯರ್‌ (YoY) ಮಾರಾಟದಲ್ಲಿ ಶೇಕಡಾ 13ರಷ್ಟು ಹೆಚ್ಚಳವನ್ನು ದಾಖಲಿಸಿದೆ.
  • ಮಾರುತಿಯ ಸಬ್‌ ಕಾಂಪ್ಯಾಕ್ಟ್‌ ಸೆಡಾನ್‌ ಆಗಿರುವ ಡಿಸೈರ್ ಮಾದರಿಯು ಏಳನೇ ಸ್ಥಾನದಿಂದ ಮೇಲಕ್ಕೆ ನೆಗೆದು 2023ರ ನವೆಂಬರ್‌ ನಲ್ಲಿ ಎರಡನೇ ಅತೀ ಹೆಚ್ಚು ಮಾರಾಟದ ಕಾರು ಎನಿಸಿದೆ. ಡಿಸೈರ್‌ ಕಾರು ಮಾಸಿಕ ಹಾಗೂ ವಾರ್ಷಿಕ ಮಾರಾಟದಲ್ಲಿ ಪ್ರಗತಿಯನ್ನು ಸಾಧಿಸಿದ್ದು, ಕಳೆದ ತಿಂಗಳಿನಲ್ಲಿ ಸುಮಾರು 16,000 ಯೂನಿಟ್‌ ಗಳ ಮಾರಾಟವನ್ನು ಕಂಡಿದೆ.
  • ಮಾರುತಿ ಸ್ವಿಫ್ಟ್ ಕಾರು 15,000 ಯೂನಿಟ್‌ ಗಳ ಮಾರಾಟದ ಮೂಲಕ ಮೂರನೇ ಅತೀ ಹೆಚ್ಚು ಮಾರಾಟಗೊಂಡ ಮಾದರಿ ಎನಿಸಿದೆ. ಇದರ ಮಾಸಿಕ ಮಾರಾಟವು ಸುಮಾರು 5,000 ಯೂನಿಟ್‌ ಗಳಷ್ಟು ಇಳಿಕೆಯನ್ನು ಕಂಡಿದೆ.

ಇದನ್ನು ಸಹ ನೋಡಿರಿ: ಮಾರುತಿ eVX ಆಧರಿತ ಟೊಯೊಟಾ ಅರ್ಬನ್ SUV‌ ಪರಿಕಲ್ಪನೆ ಯೂರೋಪಿನಲ್ಲಿ ಅನಾವರಣ

  • ಟಾಟಾ ನೆಕ್ಸನ್ ಮತ್ತು ಟಾಟಾ ಪಂಚ್ ಮಾದರಿಗಳು ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದಿವೆ. ಟಾಟಾ ಸಂಸ್ಥೆಯ ನೆಕ್ಸನ್‌ (ನೆಕ್ಸನ್‌ EV ಸೇರಿದಂತೆ) ಮಾದರಿಯ 15,000 ಟಾಟಾ ಪಂಚ್‌ ನ 14,000 ಘಟಕಗಳನ್ನು ಮಾರಾಟ ಮಾಡಿದೆ. ನೆಕ್ಸನ್‌ ನ ಮಾಸಿಕ ಮಾರಾಟದಲ್ಲಿ ಕುಸಿತ ಉಂಟಾಗಿದ್ದರೂ, ಇದು 2,000 ಯೂನಿಟ್‌ ಗಳಿಂದ ಮಾರುತಿ ಬ್ರೆಜ್ಜಾವನ್ನು ಹಿಂದಿಕ್ಕಿದೆ.
  • ಮಾರುತಿ ಬ್ರೆಜ್ಜಾ ಕಾರು ಸುಮಾರು 2,500 ಯೂನಿಟ್‌ ಗಳಷ್ಟು ಕಡಿಮೆ ಮಾರಾಟವನ್ನು ದಾಖಲಿಸುವ ಮೂಲಕ ಮಂತ್‌-ಆನ್‌-ಮಂತ್‌ (MoM) ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.
  • ಮಾರುತಿಯ ಪ್ರೀಮಿಯಂ ಹ್ಯಾಚ್‌ ಬ್ಯಾಕ್‌ ಎನಿಸಿರುವ ಬಲೇನೊ, ನಾಲ್ಕರಿಂದ ಏಳನೇ ಸ್ಥಾನಕ್ಕೆ ಕುಸಿದಿದ್ದು, ಇದರ MoM ಮಾರಾಟವು 3,600 ಯೂನಿಟ್‌ ಗಳಷ್ಟು ಕುಸಿದಿದೆ. ಬಲೇನೊ ಕಾರು 38 ಶೇಕಡಾದಷ್ಟು YoY ಇಳಿಕೆಯನ್ನು ಕಂಡಿದೆ.
  • ಮಾರುತಿ ಎರ್ಟಿಗಾವು MoM ಮತ್ತು YoY ಮಾರಾಟಗಳೆರಡರಲ್ಲೂ ಕುಸಿತವನ್ನು ಕಂಡಿದ್ದರೂ 12,800 ಯೂನಿಟ್‌ ಗಳ ಮಾರಾಟವನ್ನು ದಾಟಿದೆ.

ಇದನ್ನು ಸಹ ನೋಡಿರಿ: 2024 ಮಾರುತಿ ಸುಜುಕಿ ಸ್ವಿಫ್ಟ್‌ ಕಾರಿನ ಎಂಜಿನ್‌ ಮತ್ತು ಇಂಧನ ದಕ್ಷತೆ ಅಂಕಿಅಂಶಗಳ ವಿವರಣೆ (ಜಪಾನ್‌ ಮಾದರಿ)

  • ಮಹೀಂದ್ರಾ ಸ್ಕೋರ್ಪಿಯೊ ಕಾರು 2023ರ ನವೆಂಬರ್‌ ತಿಂಗಳಿನಲ್ಲಿ 12,000 ಯೂನಿಟ್‌ ಗಳ ಮಾರಾಟವನ್ನು ಕಂಡಿದ್ದು, 89 ಶೇಕಡಾದಷ್ಟು ಪ್ರಬಲ YoY ಮಾರಾಟವನ್ನು ದಾಖಲಿಸಿದೆ. ಈ ಅಂಕಿಅಂಶಗಳು ಸ್ಕೋರ್ಪಿಯೊ N ಮತ್ತು ಸ್ಕೋರ್ಪಿಯೊ ಕ್ಲಾಸಿಕ್ ಇವೆರಡರ ಅಂಕಿಅಂಶಗಳನ್ನು ಒಳಗೊಂಡಿವೆ.
  • ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಮಾದರಿಗಳೆರಡೂ 11,500 ಯೂನಿಟ್‌ ಗಳ ಮಾರಾಟವನ್ನು ದಾಟಿದ್ದು, ಕ್ರೆಟಾವು ತನ್ನ ಈ ವಿಭಾಗದ ಪ್ರತಿಸ್ಪರ್ಧಿಯನ್ನು 130 ಯೂನಿಟ್‌ ಗಳಿಂದ ಹಿಂದಿಕ್ಕಿದೆ.
  • ವೆನ್ಯು ಕಾರಿನ ಬೇಡಿಕೆಯು MoM ಮತ್ತು YoY ಹೋಲಿಕೆಗಳ ವಿಚಾರದಲ್ಲಿ ಸ್ಥಿರತೆಯನ್ನು ಕಾಪಾಡಿದೆ. ಈ ಸಬ್-4m SUV‌ ಯು 2023ರ ನವೆಂಬರ್‌ ತಿಂಗಳಿನಲ್ಲಿ 11,000 ಕ್ಕೂ ಹೆಚ್ಚಿನ ಯೂನಿಟ್‌ ಗಳ ಮಾರಾಟವನ್ನು ಕಂಡಿದೆ.
  • ಮಾರುತಿ ಈಕೊ ಕಾರು ಮಂತ್-ಆನ್-ಮಂತ್ (MoM) ಮಾರಾಟದಲ್ಲಿ ಕುಸಿತವನ್ನು ಕಂಡರೂ 10,000 ಯೂನಿಟ್‌ ಗಳ ಮಾರಾಟವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

  • ಫ್ರಾಂಕ್ಸ್ ಕಾರು ಈ ಪಟ್ಟಿಯಲ್ಲಿರುವ ಮಾರುತಿ ಸಂಸ್ಥೆಯ ಕಾರು ಅಗಿದ್ದು, 10,000 ಯೂನಿಟ್‌ ಗಳ ಗಡಿಯನ್ನು ದಾಖಲಿಸುವಲ್ಲಿ ಹಿಂದೆ ಬಿದ್ದು, MoM ಮಾರಾಟದಲ್ಲಿ ಸುಮಾರು 1,500 ಯೂನಿಟ್‌ ಗಳಷ್ಟು ಕುಸಿತವನ್ನು ದಾಖಲಿಸಿದೆ.
  • ಮಹೀಂದ್ರಾ ಬೊಲೇರೊ ಕಾರು 9,000 ಯೂನಿಟ್‌ ಗಳ ಮಾರಾಟದ ಗಡಿಯನ್ನು ದಾಟುವಲ್ಲಿ ಯಶಸ್ವಿಯಾಗಿದೆ. ಈ ಅಂಕಿಅಂಶಗಳು ಮಹೀಂದ್ರಾ ಬೊಲೇರೊ ಮತ್ತು ಮಹೀಂದ್ರಾ ಬೊಲೇರೊ ನಿಯೋ ವಾಹನಗಳ ಮಾರಾಟವನ್ನು ಒಳಗೊಂಡಿವೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ವ್ಯಾಗನ್‌ R ಆನ್‌ ರೋಡ್‌ ಬೆಲೆ

s
ಅವರಿಂದ ಪ್ರಕಟಿಸಲಾಗಿದೆ

shreyash

  • 50 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ವೇಗನ್ ಆರ್‌

Read Full News

explore similar ಕಾರುಗಳು

ಟಾಟಾ ಪಂಚ್‌

ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.99 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಡಿಜೈರ್

ಪೆಟ್ರೋಲ್22.41 ಕೆಎಂಪಿಎಲ್
ಸಿಎನ್‌ಜಿ31.12 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಟಾಟಾ ನೆಕ್ಸ್ಂನ್‌

ಡೀಸಲ್23.23 ಕೆಎಂಪಿಎಲ್
ಪೆಟ್ರೋಲ್17.44 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಬ್ರೆಜ್ಜಾ

ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಎರ್ಟಿಗಾ

ಪೆಟ್ರೋಲ್20.51 ಕೆಎಂಪಿಎಲ್
ಸಿಎನ್‌ಜಿ26.11 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಕಿಯಾ ಸೆಲ್ಟೋಸ್

ಡೀಸಲ್19.1 ಕೆಎಂಪಿಎಲ್
ಪೆಟ್ರೋಲ್17.7 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ವ್ಯಾಗನ್ ಆರ್‌

ಪೆಟ್ರೋಲ್24.35 ಕೆಎಂಪಿಎಲ್
ಸಿಎನ್‌ಜಿ34.05 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ