Login or Register ಅತ್ಯುತ್ತಮ CarDekho experience ಗೆ
Login

2023ರ ನವೆಂಬರ್‌ನಿಂದ ಮತ್ತೆ ದುಬಾರಿಯಾಗಲಿದೆ MG ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್

ಎಂಜಿ ಹೆಕ್ಟರ್ ಗಾಗಿ shreyash ಮೂಲಕ ಅಕ್ಟೋಬರ್ 28, 2023 09:04 pm ರಂದು ಪ್ರಕಟಿಸಲಾಗಿದೆ

ಎರಡೂ SUVಗಳ ಬೆಲೆಗಳನ್ನು ಕಾರುತಯಾರಕರು ಅಕ್ಟೋಬರ್ 2023 ಕ್ಕಿಂತ ಮುನ್ನ ರೂ 1.37 ಲಕ್ಷದಷ್ಟು ಕಡಿತಗೊಳಿಸಿದ್ದರು.

  • MG ಹೆಕ್ಟರ್ ಮತ್ತು MG ಹೆಕ್ಟರ್ ಪ್ಲಸ್‌ನ ಪ್ರಸ್ತುತ ಬೆಲೆಗಳು ಅಕ್ಟೋಬರ್ 31ರ ತನಕ ಮಾನ್ಯವಾಗಿರುತ್ತದೆ.
  • ಹಬ್ಬದ ಋತುವಿನ ಇನ್ಸೆಂಟಿವ್‌ಗಳ ಭಾಗವಾಗಿ ಬೆಲೆಗಳನ್ನು ಕಡಿತಗೊಳಿಸಲಾಗಿತ್ತು.
  • ನವೆಂಬರ್ 1 ರಿಂದ ಈ ಎರಡೂ SUVಗಳು ತಮ್ಮ ಮೂಲ ಬೆಲೆಗಳಿಗೆ ಮರಳಲಿವೆ.
  • ಪ್ರಸ್ತುತ, MG ಹೆಕ್ಟರ್ ಬೆಲೆ ರೂ 14.73 ಲಕ್ಷದಿಂದ ರೂ 21.73 ಲಕ್ಷದ ತನಕ ಇರುತ್ತದೆ.
  • MG ಹೆಕ್ಟರ್ ಪ್ಲಸ್ ಬೆಲೆಗಳು ರೂ 17.50 ಲಕ್ಷ ಮತ್ತು ರೂ 22.43 ಲಕ್ಷದ ನಡುವೆ ಇದೆ.

ಸೆಪ್ಟೆಂಬರ್ 2023ರ ಅಂತ್ಯದಲ್ಲಿ MG ಹೆಕ್ಟರ್ ಮತ್ತು MG ಹೆಕ್ಟರ್ ಪ್ಲಸ್ ಬೆಲೆಗಳನ್ನು ರೂ 1.37 ಲಕ್ಷಗಳಷ್ಟು ಕಡಿತಗೊಳಿಸಿದ್ದ, ಈ ಕಾರುತಯಾರಕ ಸಂಸ್ಥೆಯು ನವೆಂಬರ್ 1 ರಿಂದ ಈ SUVಗಳ ಬೆಲೆಗಳನ್ನು ಏರಿಸುವ ಯೋಜನೆಯಲ್ಲಿದೆ. ವರದಿಗಳ ಪ್ರಕಾರ, ಹಬ್ಬದ ಋತುವಿನಿಂದ ತುಸು ಮೊದಲು ಈ ಬ್ರ್ಯಾಂಡ್‌ನ 100ನೇ ವಾರ್ಷಿಕೋತ್ಸವ ಆಚರಣೆಯ ಭಾಗವಾಗಿ ಬೆಲೆ ಕಡಿತವನ್ನು ಪರಿಚಯಿಸಲಾಗಿತ್ತು.

ಬೆಲೆ ಏರಿಕೆ ವಿವರಗಳು ಬಾಕಿ

ಈ SUVಗಳ ಬೆಲೆ ಏರಿಕೆಯ ವಿವರಗಳನ್ನು MG ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, MG ಹೆಕ್ಟರ್ ಮತ್ತು MG ಹೆಕ್ಟರ್ ಪ್ಲಸ್ ತಮ್ಮ ಮೂಲ ಬೆಲೆಗಳಿಗೆ ಮರಳಬಹುದು ಅಥವಾ ಅದಕ್ಕಿಂತಲೂ ತುಸು ಹೆಚ್ಚಾಗಬಹುದು. ಈ SUVಗಳ ಡೀಸೆಲ್ ವೇರಿಯೆಂಟ್‌ಗಳು ಹೆಚ್ಚಿನ ಬೆಲೆ ಕಡಿತಕ್ಕೆ ಒಳಗಾದುದರಿಂದ ಇವುಗಳ ಬೆಲೆಗಳಲ್ಲಿ ಗಣನೀಯ ಹೆಚ್ಚಳ ಉಂಟಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಆಫರ್‌ನಲ್ಲಿರುವ ಸಾಮಾನ್ಯ ಫೀಚರ್‌ಗಳು

MG ಹೆಕ್ಟರ್ (5-ಸೀಟರ್ SUV) ಮತ್ತು MG ಹೆಕ್ಟರ್ ಪ್ಲಸ್ (3-ಸಾಲಿನ SUV) 14-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚು ಸಂಪೂರ್ಣ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವಿಹಂಗಮ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪವರ್ ಚಾಲಿತ ಟೇಲ್‌ಗೇಟ್‌ನಂತಹ ಫೀಚರ್‌ಗಳಿಂದ ಸಜ್ಜುಗೊಂಡಿದೆ.

ಪ್ರಯಾಣಿಕ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಅಡ್ವಾನ್ಸ್‌ಡ್ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್‌ (ADAS) ಕಾರ್ಯಗಳಾದ ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಕೊಲಿಶನ್ ವಾರ್ನಿಂಗ್ ಮತ್ತು ಎಮರ್ಜೆನ್ಸಿ ಬ್ರೇಕಿಂಗ್‌ ಇವುಗಳಿಂದ ಭದ್ರಗೊಳಿಸಲಾಗಿದೆ.

ಇದನ್ನೂ ಪರಿಶೀಲಿಸಿ: ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ MG ಹೆಕ್ಟರ್‌ಗಿಂತ ಹೇಗೆ ಉತ್ತಮ ಎಂಬ ವಿವರಗಳು

ಆಫರ್‌ನಲ್ಲಿರುವ ಪವರ್‌ಟ್ರೇನ್‌ಗಳು

ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್, ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ ಅವುಗಳೆಂದರೆ, 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ (143PS/250Nm) ಮತ್ತು 2-ಲೀಟರ್ ಡೀಸೆಲ್ ಯೂನಿಟ್ (170PS/350Nm). ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳೆರಡಕ್ಕೂ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್ ನೀಡಲಾಗಿದ್ದು, ಮೊದಲನೆಯದು CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

ಇದನ್ನೂ ಪರಿಶೀಲಿಸಿ: ನವೆಂಬರ್ 29 ಕ್ಕೆ ನಿಗದಿಪಡಿಸಲಾದ ಹೊಸ-ತಲೆಮಾರಿನ ರೆನಾಲ್ಟ್ ಡಸ್ಟರ್ ಜಾಗತಿಕ ಬಿಡುಗಡೆ

ಪ್ರಸ್ತುತ ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು

ಅಕ್ಟೋಬರ್ 2023ರ ತನಕ, MG ಹೆಕ್ಟರ್ ಬೆಲೆ ರೂ 14.73 ಲಕ್ಷದಿಂದ ರೂ 21.73 ಲಕ್ಷದ ನಡುವೆ ಇದ್ದರೆ, MG ಹೆಕ್ಟರ್ ಪ್ಲಸ್ ಬೆಲೆ ರೂ 17.50 ಲಕ್ಷ ಮತ್ತು ರೂ 22.43 ಲಕ್ಷದ ನಡುವೆ ಇರುತ್ತದೆ. ಹೆಕ್ಟರ್ ಟಾಟಾ ಹ್ಯಾರಿಯರ್, ಮಹೀಂದ್ರಾ XUV700 ನ 5-ಸೀಟರ್ ವೇರಿಯೆಂಟ್‌ಗಳು ಮತ್ತು ಕಿಯಾ ಸೆಲ್ಟೋಸ್ ಮತ್ತು ಹ್ಯುಂಡೈ ಕ್ರೆಟಾ ಗೆ ಪೈಪೋಟಿ ನೀಡಿದರೆ, ಹೆಕ್ಟರ್ ಪ್ಲಸ್ ಟಾಟಾ ಸಫಾರಿ , ಮಹೀಂದ್ರಾ XUV700 ನ 7-ಸೀಟರ್ ವೇರಿಯೆಂಟ್‌ಗಳು ಮತ್ತು ಹ್ಯುಂಡೈ ಅಲ್ಕಾಝಾರ್‌ ಗೆ ಪ್ರತಿಸ್ಪರ್ಧಿಯಾಗಿದೆ.

ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರವಾಗಿ ಇರುತ್ತದೆ

ಇನ್ನಷ್ಟು ಓದಿ : MG ಹೆಕ್ಟರ್‌ನ ಆನ್‌ ರೋಡ್ ಬೆಲೆ

Share via

Write your Comment on M g ಹೆಕ್ಟರ್

explore similar ಕಾರುಗಳು

ಎಂಜಿ ಹೆಕ್ಟರ್ ಪ್ಲಸ್

ಡೀಸಲ್15.58 ಕೆಎಂಪಿಎಲ್
ಪೆಟ್ರೋಲ್12.34 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಎಂಜಿ ಹೆಕ್ಟರ್

ಡೀಸಲ್13.79 ಕೆಎಂಪಿಎಲ್
ಪೆಟ್ರೋಲ್13.79 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.10 - 11.23 ಲಕ್ಷ*
ಹೊಸ ವೇರಿಯೆಂಟ್
Rs.18.99 - 32.41 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.2.84 - 3.12 ಸಿಆರ್*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ