Login or Register ಅತ್ಯುತ್ತಮ CarDekho experience ಗೆ
Login

Skoda Kushaq And Skoda Slavia ಬೆಲೆಗಳಲ್ಲಿ ಬದಲಾವಣೆ, ಏನಿರಬಹುದು ಇದಕ್ಕೆ ಕಾರಣ ?

ಸ್ಕೋಡಾ ಸ್ಕೋಡಾ ಕುಶಾಕ್ ಗಾಗಿ dipan ಮೂಲಕ ಮಾರ್ಚ್‌ 24, 2025 07:15 pm ರಂದು ಪ್ರಕಟಿಸಲಾಗಿದೆ

ಒಟ್ಟು ಬಣ್ಣಗಳ ಆಯ್ಕೆಗಳು ಒಂದೇ ಆಗಿದ್ದರೂ, ಕೆಲವು ಬಣ್ಣಗಳು ಐಚ್ಛಿಕ ಹೆಚ್ಚುವರಿಗಳಾಗಿ ಮಾರ್ಪಟ್ಟಿವೆ, ಇದಕ್ಕೆ 10,000 ರೂ.ಅನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ

ಈ ತಿಂಗಳ ಆರಂಭದಲ್ಲಿ 2025 ರ ಮೊಡೆಲ್‌ ಇಯರ್‌ (MY25) ಆಪ್‌ಡೇಟ್‌ಗಳನ್ನು ಪಡೆದ ನಂತರ, ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾದ ವೇರಿಯೆಂಟ್‌-ವಾರು ಬಣ್ಣ ಆಯ್ಕೆಗಳನ್ನು ಈಗ ಮರುಜೋಡಿಸಲಾಗಿದೆ. ಸದ್ಯ ಲಭ್ಯವಿರುವ ಬಣ್ಣದ ಆಯ್ಕೆಗೆ ಯಾವುದೇ ಹೊಸ ಬಣ್ಣವನ್ನು ಸೇರಿಸಲಾಗಿಲ್ಲವಾದರೂ, ಕೆಲವು ಬಣ್ಣಗಳು ಈಗ ಐಚ್ಛಿಕ ಹೆಚ್ಚುವರಿಗಳಾಗಿ ಲಭ್ಯವಿದೆ, ಇವುಗಳಿಗೆ ಅನುಗುಣವಾದ ವೇರಿಯೆಂಟ್‌ ಬೆಲೆಗಳಿಗಿಂತ 10,000 ರೂ.ಗಳಷ್ಟು ಪಾವತಿ ಅಗತ್ಯವಿರುತ್ತದೆ. ಸ್ಕೋಡಾ ಎರಡೂ ಕಾರುಗಳ ವೇರಿಯೆಂಟ್‌-ವಾರು ಬಣ್ಣ ಆಯ್ಕೆಗಳನ್ನು ಅವುಗಳ ಬೆಲೆಗಳೊಂದಿಗೆ ನೋಡೋಣ:

ವೇರಿಯಂಟ್-ವಾರು ಬಣ್ಣದ ವಿತರಣೆ

ವೇರಿಯೆಂಟ್‌

ಸದ್ಯ ಲಭ್ಯವಿರುವ ಬಣ್ಣಗಳೊಂದಿಗೆ ಬೆಲೆ ರೇಂಜ್‌

ಬಣ್ಣದ ಆಯ್ಕೆಗಳು

ಸ್ಕೋಡಾ ಕುಶಾಕ್‌

ಸ್ಕೋಡಾ ಸ್ಲಾವಿಯಾ

ಲಭ್ಯವಿರುವ ಬಣ್ಣಗಳು

ಹೆಚ್ಚುವರಿ ಬಣ್ಣಗಳು*

ಕ್ಲಾಸಿಕ್‌

10.99 ಲಕ್ಷ ರೂ

10.34 ಲಕ್ಷ ರೂ.

ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್, ಟೊರ್ನಾಡೊ ರೆಡ್, ಕಾರ್ಬನ್ ಸ್ಟೀಲ್, ಡೀಪ್ ಬ್ಲಾಕ್

ಲಾವಾ ಬ್ಲೂ

ಒನಿಕ್ಸ್‌

13.59 ಲಕ್ಷ ರೂ

ಲಭ್ಯವಿಲ್ಲ

ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್, ಟೊರ್ನಾಡೊ ರೆಡ್, ಕಾರ್ಬನ್ ಸ್ಟೀಲ್

ಲಾವಾ ಬ್ಲೂ, ಡೀಪ್ ಬ್ಲಾಕ್

ಸಿಗ್ನೇಚರ್‌

14.88 ಲಕ್ಷ ರೂ.ನಿಂದ 15.98 ಲಕ್ಷ ರೂ.

13.59 ಲಕ್ಷ ರೂ. ನಿಂದ 14.69 ಲಕ್ಷ ರೂ.

ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್, ಟೊರ್ನಾಡೊ ರೆಡ್, ಕಾರ್ಬನ್ ಸ್ಟೀಲ್

ಲಾವಾ ಬ್ಲೂ, ಡೀಪ್ ಬ್ಲಾಕ್, ಕಾರ್ಬನ್ ಸ್ಟೀಲ್ ಮ್ಯಾಟ್

ಸ್ಪೋರ್ಟ್‌ಲೈನ್‌

14.91 ಲಕ್ಷ ರೂ.ನಿಂದ 17.61 ಲಕ್ಷ ರೂ.

13.69 ಲಕ್ಷ ರೂ. ನಿಂದ 16.39 ಲಕ್ಷ ರೂ.

ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್, ಟೊರ್ನಾಡೊ ರೆಡ್, ಕಾರ್ಬನ್ ಸ್ಟೀಲ್

ಲಾವಾ ಬ್ಲೂ, ಡೀಪ್ ಬ್ಲಾಕ್, ಕಾರ್ಬನ್ ಸ್ಟೀಲ್ ಮ್ಯಾಟ್, ಕ್ಯಾಂಡಿ ವೈಟ್ ಡ್ಯುಯಲ್ ಟೋನ್, ಟೊರ್ನಾಡೊ ರೆಡ್ ಡ್ಯುಯಲ್ ಟೋನ್, ಬ್ರಿಲಿಯಂಟ್ ಸಿಲ್ವರ್ ಡ್ಯುಯಲ್ ಟೋನ್, ಲಾವಾ ಬ್ಲೂ ಡ್ಯುಯಲ್ ಟೋನ್

ಮಾಂಟೆ ಕಾರ್ಲೋ

16.12 ಲಕ್ಷ ರೂ.ನಿಂದ 18.82 ಲಕ್ಷ ರೂ.

15.34 ಲಕ್ಷ ರೂ. ನಿಂದ 18.04 ಲಕ್ಷ ರೂ.

ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್, ಟೊರ್ನೆಡೊ ರೆಡ್, ಕಾರ್ಬನ್ ಸ್ಟೀಲ್, ಲಾವಾ ಬ್ಲೂ, ಡೀಪ್ ಬ್ಲಾಕ್, ಕ್ಯಾಂಡಿ ವೈಟ್ ಡ್ಯುಯಲ್ ಟೋನ್, ಟೊರ್ನೆಡೊ ರೆಡ್ ಡ್ಯುಯಲ್ ಟೋನ್

ಕಾರ್ಬನ್ ಸ್ಟೀಲ್ ಮ್ಯಾಟ್, ಬ್ರಿಲಿಯಂಟ್ ಸಿಲ್ವರ್ ಡ್ಯುಯಲ್ ಟೋನ್, ಲಾವಾ ಬ್ಲೂ ಡ್ಯುಯಲ್ ಟೋನ್

ಪ್ರೆಸ್ಟಿಜ್‌

16.31 ಲಕ್ಷ ರೂ.ನಿಂದ 19.01 ಲಕ್ಷ ರೂ.

15.54 ಲಕ್ಷ ರೂ. ನಿಂದ 18.24 ಲಕ್ಷ ರೂ.

ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್, ಟೊರ್ನೆಡೊ ರೆಡ್, ಕಾರ್ಬನ್ ಸ್ಟೀಲ್, ಲಾವಾ ಬ್ಲೂ, ಡೀಪ್ ಬ್ಲಾಕ್, ಕ್ಯಾಂಡಿ ವೈಟ್ ಡ್ಯುಯಲ್ ಟೋನ್, ಟೊರ್ನೆಡೊ ರೆಡ್ ಡ್ಯುಯಲ್ ಟೋನ್

ಕಾರ್ಬನ್ ಸ್ಟೀಲ್ ಮ್ಯಾಟ್, ಬ್ರಿಲಿಯಂಟ್ ಸಿಲ್ವರ್ ಡ್ಯುಯಲ್ ಟೋನ್, ಲಾವಾ ಬ್ಲೂ ಡ್ಯುಯಲ್ ಟೋನ್

ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ.

*ಒಪ್ಶನಲ್‌ ಬಣ್ಣಗಳು ಅನುಗುಣವಾದ ವೇರಿಯೆಂಟ್‌ ಬೆಲೆಗಿಂತ 10,000 ರೂ.ಗಳಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ. ಆದರೆ, ಸ್ಟ್ಯಾಂಡರ್ಡ್‌ ವೇರಿಯೆಂಟ್‌ಗಳ ಬೆಲೆಗಳು ಹಿಂದಿನಂತೆಯೇ ಇರುತ್ತವೆ.

ಇದನ್ನೂ ಓದಿ: MG Comet EVಗೆ ಮೊಡೆಲ್‌ ಇಯರ್‌ನ ಆಪ್‌ಡೇಟ್‌ಗಳ ಸೇರ್ಪಡೆ; ಬೆಲೆಯಲ್ಲಿಯೂ 27,000 ರೂ.ವರೆಗೆ ಏರಿಕೆ

ಪವರ್‌ಟ್ರೈನ್‌ ಆಯ್ಕೆಗಳು

ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಎರಡೂ ಒಂದೇ ರೀತಿಯ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ, ಇವುಗಳ ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಪವರ್‌

115 ಪಿಎಸ್‌

150 ಪಿಎಸ್‌

ಟಾರ್ಕ್‌

178 ಎನ್‌ಎಮ್‌

250 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನ್ಯುವಲ್‌ / 6-ಸ್ಪೀಡ್ AT*

7-ಸ್ಪೀಡ್‌ DCT^

*AT = ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

^DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಪ್ರತಿಸ್ಪರ್ಧಿಗಳು

ಸ್ಕೋಡಾ ಕುಶಾಕ್ ಮಾರುಕಟ್ಟೆಯಲ್ಲಿ ಹುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಟೊಯೋಟಾ ಹೈರೈಡರ್, ಎಂಜಿ ಆಸ್ಟರ್ ಮತ್ತು ವೋಕ್ಸ್‌ವ್ಯಾಗನ್ ಟೈಗುನ್‌ಗಳಿಗೆ ಪೈಪೋಟಿ ನೀಡುತ್ತದೆ. ಮತ್ತೊಂದೆಡೆ, ಸ್ಕೋಡಾ ಸ್ಲಾವಿಯಾವು ವೋಕ್ಸ್‌ವ್ಯಾಗನ್ ವರ್ಟಸ್, ಹೋಂಡಾ ಸಿಟಿ, ಹುಂಡೈ ವೆರ್ನಾ ಮತ್ತು ಮಾರುತಿ ಸಿಯಾಜ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

Share via

Write your Comment on Skoda ಸ್ಕೋಡಾ ಕುಶಾಕ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್ಫೇಸ್ ಲಿಫ್ಟ್
Rs.65.90 ಲಕ್ಷ*
ಹೊಸ ವೇರಿಯೆಂಟ್
Rs.6.10 - 11.23 ಲಕ್ಷ*
ಹೊಸ ವೇರಿಯೆಂಟ್
Rs.18.99 - 32.41 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ