ದೊಡ್ಡ ಟಚ್ ಸ್ಕ್ರೀನ್ ಸಿಸ್ಟಂನೊಂದಿಗೆ ಕಾಣಿಸಿಕೊಂಡಿರುವ Tata Harrier Facelift
ಹ್ಯರಿಯರ್ ಫೇಸ್ ಲಿಫ್ಟ್ ಪರೀಕ್ಷಾರ್ಥ ವಾಹನವು ಲ್ಯಾಂಡ್ ರೋವರ್ ಎಸ್‌ಯುವಿ ಗಳಲ್ಲಿ ಇರುವಂತೆಯೇ ಹೆಚ್ಚು ಪ್ರೀಮಿಯಂ ಟಚ್ ಸ್ಕ್ರೀನ್ ಸಿಸ್ಟಂ ಅನ್ನು ಹೊಂದಿರಲಿದೆ.
- ಅಭಿವೃದ್ಧಿ ಹಂತದಲ್ಲಿರುವ ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ವಾಹನವು ಮರೆಮಾಚಿದ ರೀತಿಯಲ್ಲಿ ಪರೀಕ್ಷೆಗೆ ಒಳಪಡುತ್ತಿರುವಾಗ ಜನರ ಕಣ್ಣಿಗೆ ಬಿದ್ದಿದೆ.
- ಇದರ ಸದ್ಯದ 10.25 ಇಂಚಿನ ಡಿಸ್ಪ್ಲೇಗಿಂತ ದೊಡ್ಡದಾದ ಲ್ಯಾಂಡ್ ಸ್ಕೇಪ್ ಶೈಲಿಯ ಟಚ್ ಸ್ಕ್ರೀನ್ ಜೊತೆ ಇದು ಕಾಣಿಸಿಕೊಂಡಿದೆ..
- ಆಧುನಿಕ ಶೈಲಿಯೊಂದಿಗೆ ಒಳಗಡೆ ಮತ್ತು ಹೊರಗಡೆ ಹೊಸ ನೋಟವನ್ನು ಹೊಂದಿರಲಿದೆ.
- ಈಗ ಇರುವ 2 ಲೀಟರ್ ಡೀಸೆಲ್ ಮೋಟಾರ್ ನೊಂದಿಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ ಇದು ಹೊರಬರುವ ಸಾಧ್ಯತೆ ಇದೆ.
- 2024ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಟಾಟಾ ನೆಕ್ಸನ್ ಮತ್ತು ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ನ ನಂತರ, ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಹೊರಬರಲಿದೆ. ಇದು ಮತ್ತೆ ಜನರ ಕಣ್ಣಿಗೆ ಬಿದ್ದಿದ್ದು, ಈ ಬಾರಿ ಹೊಸ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂನೊಂದಿಗೆ ಕಾಣಿಸಿಕೊಂಡಿದೆ. ಪರಿಷ್ಕೃತ ಹ್ಯರಿಯರ್ 2024ರ ಆರಂಭದಲ್ಲಿ ರಸ್ತೆಗಿಳಿಯುವ ಸಾಧ್ಯತೆ ಇದೆ.
ಇದರಲ್ಲಿ ಹೊಸತೇನಿದೆ?
ಕ್ಯಾಬಿನ್ ಒಳಗಡೆ ಇನ್ನೂ ಸುಧಾರಿತ ನೋಟವನ್ನು ಒಳಗೊಂಡಿರುವ ಹ್ಯರಿಯರ್ ಫೇಸ್ ಲಿಫ್ಟ್, ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಜೊತೆಗೆ ಕಾಣಿಸಿಕೊಂಡಿದ್ದು, ಈ ಟಚ್ ಸ್ಕ್ರೀನ್ ಖಂಡಿತವಾಗಿಯೂ ಈಗಿನ 10.25 ಇಂಚ್ ಡಿಸ್ಪ್ಲೇಗಿಂತಲೂ ದೊಡ್ಡದಾಗಿದೆ. ಇದು ಸ್ಪಷ್ಟವಾಗಿ, 13.1 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಹೊಂದಿರುವ ಐಷಾರಾಮಿ ರೇಂಜ್ ರೋವರ್ ಸ್ಪ್ರೋಟ್ ವಾಹನದಲ್ಲಿರುವ ಟಚ್ ಸ್ಕ್ರೀನ್ ನಂತೆಯೇ ಕಾಣಿಸಿಕೊಳ್ಳುತ್ತದೆ.
ಟಾಟಾ ಕಾರು ತಯಾರಕ ಸಂಸ್ಥೆಗೆ ಇತ್ತೀಚೆಗಷ್ಟೇ 10.25 ಇಂಚಿನ ಟಚ್ ಸ್ಕ್ರೀನ್ ಅನ್ನು ಬಿಡುಗಡೆ ಮಾಡಿದ್ದರೂ, ನೆಕ್ಸನ್ ಮತ್ತು ಆಲ್ಟ್ರೋಜ್ ಮಾದರಿಗಳಲ್ಲಿ ಇದು ದೊರೆಯುತ್ತಿರುವುದರಿಂದ, ಫ್ಲ್ಯಾಗ್ ಶಿಪ್ SUV ಗಳಾದ ಹ್ಯರಿಯರ್ ಮತ್ತು ಸಫಾರಿಗಳಲ್ಲಿ ಈಗ ಇದು ಸೇರಿಕೊಂಡಿರುವುದರಿಂದ ಈ ವಾಹನಗಳಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯ ದೊರೆತಂತಾಗುತ್ತದೆ.
ಅಲ್ಲದೆ ಇಷ್ಟು ದೊಡ್ಡದ ಟಚ್ ಸ್ಕ್ರೀನ್ ಇದರಲ್ಲಿ ಅಳವಡಿಸುವ ಕಾರಣ, ಈ ವಿಭಾಗದಲ್ಲಿ 14 ಇಂಚಿನಷ್ಟು ಅತ್ಯಂತ ದೊಡ್ಡದಾದ ಡಿಸ್ಪ್ಲೇ ಹೊಂದಿರುವ MG ಹೆಕ್ಟರ್ ಇತ್ಯಾದಿ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸುವುದು ಈ ವಾಹನಕ್ಕೆ ಸುಲಭವೆನಿಸಲಿದೆ. ಈ ಹೊಸ ಇನ್ಫೋಟೈನ್ ಮೆಂಟ್ ಸಿಸ್ಟಂ, ಸಂಪರ್ಕಿತ ಕಾರ್ ತಂತ್ರಜ್ಞಾನ, ವೈರ್ ಲೆಸ್ ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಮತ್ತು ಇತರ ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರಲಿದೆ.
ಇದನ್ನು ಸಹ ಓದಿರಿ: ಟಾಟಾ ನೆಕ್ಸನ್ ಫೇಸ್ ಲಿಫ್ಟ್ ನಲ್ಲಿರುವ 10 ಹೊಸ ವೈಶಿಷ್ಟ್ಯಗಳು
ತಿಳಿದಿರುವ ಇತರ ವೈಶಿಷ್ಟ್ಯಗಳು
ಪರಿಷ್ಕೃತ ಟಾಟಾ ಹ್ಯರಿಯರ್ ವಾಹನವು ಮೊನಚಾದ ಮತ್ತು ಆಕರ್ಷಕ ನೋಟವನ್ನು ಪಡೆಯುವುದಕ್ಕಾಗಿ ಸಂಪೂರ್ಣವಾಗಿ ಮರುವಿನ್ಯಾಸಕ್ಕೆ ಒಳಪಡಲಿದೆ. ನವೀನ ಗ್ರಿಲ್, ಹೊಸ ಅಲೋಯ್ ವೀಲ್ ಗಳು, ಸಂಪರ್ಕಿತ LED ದೀಪಗಳು, ಮತ್ತು ಸೀಕ್ವೆನ್ಶಿಯಲ್ ಟರ್ನ್ ಇಂಡಿಕೇಟರ್ ಗಳು ಇತ್ಯಾದಿ ಬದಲಾವಣೆಗಳೊಂದಿಗೆ ಇದು ಹೊರಬರಲಿದೆ.
(ಉಲ್ಲೇಖಕ್ಕಾಗಿ ಟಾಟಾ ಹ್ಯರಿಯರ್ ವಾಹನದ ಒಳಭಾಗದ ಚಿತ್ರ)
ಇನ್ನಷ್ಟು ಆಧುನಿಕ ನೋಟವನ್ನು ನೀಡುವುದಕ್ಕಾಗಿ ಒಳಭಾಗದಲ್ಲಿಯೂ ಬದಲಾವಣೆಯನ್ನು ಮಾಡಲಾಗಿದೆ. ದೊಡ್ಡದಾದ ಟಚ್ ಸ್ಕ್ರೀನ್ ಜೊತೆಗೆ ಹೆಚ್ಚುವರಿಯಾಗಿ ಅನೇಕ ವೈಶಿಷ್ಟ್ಯಗಳನ್ನು ಇದು ಪಡೆಯಲಿದೆ. ಇದು ಈಗಾಗಲೇ 7 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ಪ್ಯಾನೊರಾಮಿಕ್ ಸನ್ ರೂಫ್, ವೆಂಟಿಲೇಟೆಡ್ ಮುಂದಿನ ಮತ್ತು ಎರಡನೇ ಮತ್ತು ಮೂರನೇ ಸಾಲಿನ ಸೀಟುಗಳು (ಟಾಟಾ ಸಫಾರಿ 6-ಸೀಟರ್ ನಂತರ ಇದರಲ್ಲಿ ಮಾತ್ರವೇ ಇದೆ), ಮತ್ತು ವೈರ್ ಲೆಸ್ ಫೋನ್ ಚಾರ್ಜರ್ ಅನ್ನು ಹೊಂದಿದೆ.
ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ ಆರು ಏರ್ ಬ್ಯಾಗುಗಳು, 360-ಡಿಗ್ರಿ ಕ್ಯಾಮರಾ, ESP, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳು, ಮತ್ತು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ಅನ್ನು ಇದು ಹೊಂದಿದೆ.
ಇದನ್ನು ಸಹ ಓದಿರಿ: 2024 ರ ಆರಂಭದಲ್ಲಿ 4 ಹೊಸ SUV ಗಳನ್ನು ಬಿಡುಗಡೆ ಮಾಡಲಿರುವ ಟಾಟಾ ಸಂಸ್ಥೆ
ಪರಿಷ್ಕೃತ ಪವರ್ ಟ್ರೇನ್
ಹ್ಯರಿಯರ್ ಫೇಸ್ ಲಿಫ್ಟ್ ವಾಹನವು 6 ಸ್ಪೀಡ್ ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ 2 ಲೀಟರ್ ಡೀಸೆಲ್ ಎಂಜಿನ್ ಅನ್ನು ಉಳಿಸಿಕೊಳ್ಳಲಿದೆ. ಟಾಟಾ ಸಂಸ್ಥೆಯು ಪರಿಷ್ಕೃತ SUV ಯಲ್ಲಿ 170PS ಮತ್ತು 280Nm ಜೊತೆಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ ಮ್ಯಾನುವಲ್ ಮತ್ತು DCT ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಬರಲಿದೆ.
ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ವಾಹನವು ತನ್ನ ಪ್ರಸ್ತುತ ಬೆಲೆ ರೂ. 15.85 ಲಕ್ಷದಿಂದ ರೂ. 25.21 ಲಕ್ಷ (ಎಕ್ಸ್-ಶೋರೂಂ) ಶ್ರೇಣಿಗಿಂತಲೂ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ. ಇದು ತನ್ನ ಪ್ರತಿಸ್ಪರ್ಧಿಗಳಾದ ಮಹೀಂದ್ರಾ XUV700, MG ಹೆಕ್ಟರ್ ಮತ್ತು ಜೀಪ್ ಕಂಪಾಸ್, ಹಾಗೂ ಟಾಪ್ ಸ್ಪೆಕ್ ವೇರಿಯಂಟ್ ಗಳಾದ ಹ್ಯುಂಡೈ ಕ್ರೆಟ ಮತ್ತು ಕಿಯಾ ಸೆಲ್ಟೊಸ್ ಜತೆಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯರಿಯರ್ ಡೀಸೆಲ್