Login or Register ಅತ್ಯುತ್ತಮ CarDekho experience ಗೆ
Login

ಭಾರತ್‌ NCAP ಆರಂಭಿಕ ಪ್ರಯಾಣದಲ್ಲಿ 5 ಸ್ಟಾರ್‌ ಶ್ರೇಯಾಂಕ ಪಡೆದ Tata Harrier ಮತ್ತು Safari

ಟಾಟಾ ಹ್ಯಾರಿಯರ್ ಗಾಗಿ ansh ಮೂಲಕ ಡಿಸೆಂಬರ್ 22, 2023 04:13 pm ರಂದು ಪ್ರಕಟಿಸಲಾಗಿದೆ

ಎರಡೂ ಟಾಟಾ SUVಗಳು ಈ ವರ್ಷದ ಆರಂಭದಲ್ಲಿ ಗ್ಲೋಬಲ್ NCAP‌ ಕ್ರ್ಯಾಶ್‌ ಟೆಸ್ಟ್‌ ನಲ್ಲಿಯೂ 5 ಸ್ಟಾರ್‌ ರೇಟಿಂಗ್‌ ಗಳನ್ನು ಪಡೆದಿದ್ದವು.

  • ಎರಡೂ SUVಗಳು ಆಡಿಟ್‌ ಒಕುಪಂಟ್‌ ಪ್ರೊಟೆಕ್ಷನ್‌ ನಲ್ಲಿ 32ರಲ್ಲಿ 30.08 ಅಂಕಗಳನ್ನು ಪಡೆದಿವೆ.

  • ಅವು ಚೈಲ್ಡ್ ಒಕುಪಂಟ್‌ ಪ್ರೊಟೆಕ್ಷನ್‌ ನಲ್ಲಿ 49ರಲ್ಲಿ 44.54 ಅಂಕಗಳನ್ನು ಪಡೆದಿವೆ.

  • ಈ ವರದಿಯು ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC)‌ ಮತ್ತು ಪೆಡೆಸ್ಟ್ರಿಯನ್‌ ಪ್ರೊಟೆಕ್ಷನ್‌ ಕುರಿತ ಫಲಿತಾಂಶಗಳ ಕುರಿತು ಯಾವುದೇ ಮಾಹಿತಿ ನೀಡುವುದಿಲ್ಲ.

  • ಟಾಟಾ ಹ್ಯಾರಿಯರ್‌ ರೂ. 15.49 ಲಕ್ಷದಿಂದ ರೂ. 26.44 ಲಕ್ಷದವರೆಗಿನ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದರೆ, ಸಫಾರಿಯು ರೂ. 16.19 ಲಕ್ಷದಿಂದ ರೂ. 27.34 ಲಕ್ಷದತನಕದ (ಎಕ್ಸ್-ಶೋರೂಂ) ಬೆಲೆಯಲ್ಲಿ ಲಭ್ಯ.

ಭಾರತ್‌ ನ್ಯೂ ಕಾರ್‌ ಅಸೆಸ್ಮೆಂಟ್‌ ಪ್ರೋಗ್ರಾಂ (BNCAP) ಅನ್ನು ಭಾರತದ ತನ್ನದೇ ಆದ ಕ್ರ್ಯಾಶ್‌ ಟೆಸ್ಟ್‌ ಅಸೆಸ್ಮೆಂಟ್‌ ಸಂಸ್ಥೆಯಾಗಿ ಅಕ್ಟೋಬರ್‌ 1ರಂದು ಸ್ಥಾಪಿಸಲಾಗಿದ್ದು, ತದನಂತರ ಅನೇಕ ಕಾರು ತಯಾರಕರು ಇಲ್ಲಿ ತಮ್ಮ ವಾಹನಗಳ ಮೌಲ್ಯಮಾಪನ ನಡೆಸಿ ರೇಟಿಂಗ್‌ ಅನ್ನು ಪಡೆಯಲು ಮುಂದೆ ಬಂದಿದ್ದಾರೆ. ಈಗ, ಅನುಷ್ಠಾನಕ್ಕೆ ಬಂದ 3 ತಿಂಗಳುಗಳ ನಂತರ, BNCAP ಯು ಅಂತಿಮವಾಗಿ ತನ್ನ ಸುರಕ್ಷಾ ರೇಟಿಂಗ್‌ ಅನ್ನು ಬಿಡುಗಡೆ ಮಾಡಿದ್ದು, ಇತ್ತೀಗಷ್ಟೇ ಬಿಡುಗಡೆಯಾದ ಪರಿಷ್ಕೃತ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಗಳಿಗೆ 5 ಸ್ಟಾರ್‌ ಗಳನ್ನು ನೀಡಿದೆ.

ಆಸಕ್ತಿಯ ವಿಷಯವೆಂದರೆ, ಈ ಎರಡೂ SUVಗಳು ಈಗಾಗಲೇ ಗ್ಲೋಬಲ್ NCAPಯಿಂದ 5 ಸ್ಟಾರ್‌ ಸುರಕ್ಷಾ ರೇಟಿಂಗ್‌ ಅನ್ನು ಪಡೆದಿವೆ. BNCAPಯಲ್ಲಿ ಎರಡೂ SUVಗಳ ಅಡ್ವೆಂಚರ್‌ + ವೇರಿಯಂಟ್‌ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಎರಡೂ SUV ಗಳು ಹೇಗೆ ಅಂಕಗಳನ್ನು ಪಡೆದಿವೆ ಎಂಬುದನ್ನು ನೋಡೋಣ.

ಅಡಲ್ಟ್‌ ಒಕ್ಯುಪೆಂಟ್‌ ಪ್ರೊಟೆಕ್ಷನ್ (AOP)

ಅಡಲ್ಟ್‌ ಒಕ್ಯುಪೆಂಟ್‌ ಪ್ರೊಟೆಕ್ಷನ್ ನಲ್ಲಿ ಎರಡೂ SUV ಗಳು ಫ್ರಂಟಲ್‌ ಇಂಪ್ಯಾಕ್ಟ್‌ ಟೆಸ್ಟ್‌ ನಲ್ಲಿ 14.08/16 ಮತ್ತು ಸೈಡ್‌ ಇಂಪ್ಯಾಕ್ಟ್‌ ಟೆಸ್ಟ್‌ ನಲ್ಲಿ 16/16 ಅಂಕಗಳನ್ನು ಪಡೆದಿವೆ. ಹ್ಯಾರಿಯರ್‌ ಮತ್ತು ಸಫಾರಿಗಳು ಅಡಲ್ಟ್‌ ಒಕ್ಯುಪೆಂಟ್‌ ಪ್ರೊಟೆಕ್ಷನ್‌ ನಲ್ಲಿ 5 ಸ್ಟಾರ್‌ ಗಳನ್ನು ಪಡೆದಿವೆ.

ಫ್ರಂಟ್‌ ಇಂಪ್ಯಾಕ್ಟ್

ಫ್ರಂಟಲ್‌ ಆಫ್ಸೆಟ್‌ ಡಿಫೋರ್ಮೇಬಲ್‌ ಬ್ಯಾರಿಯರ್‌ ಟೆಸ್ಟ್‌ ನಲ್ಲಿ ಚಾಲಕನ ತಲೆ, ಕುತ್ತಿಗೆ, ಶ್ರೋಣಿಕುಹರ, ತೊಡೆಗಳು, ಪಾದಗಳು ಮತ್ತು ಎಡ ಕಣಕಾಲಿಗೆ ಉತ್ತಮ ರಕ್ಷಣೆ ದೊರೆತಿದೆ. ಬಾಗಿಲ ಪಕ್ಕದಲ್ಲಿ ಬಲಗಾಲಿಗೆ ಸಾಕಷ್ಟು ರಕ್ಷಣೆ ದೊರೆತಿದ್ದು, ಎದೆಗೆ ಸಾಮಾನ್ಯ ಮಟ್ಟದ ರಕ್ಷಣೆ ದೊರೆತಿದೆ. ಮುಂದಿನ ಪ್ರಯಾಣಿಕನಿಗೆ, ಈ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ರಕ್ಷಣೆ ದೊರೆತಿದೆ.

ಸೈಡ್‌ ಇಂಪ್ಯಾಕ್ಟ್

ಹ್ಯಾರಿಯರ್‌ ಮತ್ತು ಸಫಾರಿ ಎರಡರಲ್ಲೂ ಚಾಲಕನಿಗೆ ತಲೆ, ಎದೆ, ಮುಂಡ ಮತ್ತು ಸೊಂಟಕ್ಕೆ ಉತ್ತಮ ರಕ್ಷಣೆ ದೊರೆತಿದೆ. ಈ ಇಂಪ್ಯಾಕ್ಟ್‌ ಟೆಸ್ಟ್‌ ಅನ್ನು ವಿರೂಪಗೊಳ್ಳಬಲ್ಲ ಪ್ರತಿಬಂಧಕಕ್ಕೆ ವಿರುದ್ಧವಾಗಿ 50 kmph ವೇಗದಲ್ಲಿ ನಡೆಸಲಾಯಿತು.

ಸೈಡ್‌ ಪೋಲ್ ಇಂಪ್ಯಾಕ್ಟ್

ಸೈಡ್‌ ಪೋಲ್‌ ಟೆಸ್ಟ್‌ ನಲ್ಲಿ (at 29 kmph), ಫಲಿತಾಂಶಗಳು ಸೈಡ್‌ ಇಂಪ್ಯಾಕ್ಟ್‌ ಟೆಸ್ಟ್‌ ನಿಂದ ಭಿನ್ನವಾಗಿರಲಿಲ್ಲ. ಚಾಲಕನು ತಲೆ, ಎದೆ, ಮುಂಡ ಮತ್ತು ಸೊಂಟಕ್ಕೆ ಉತ್ತಮ ರಕ್ಷಣೆಯನ್ನು ಪಡೆದಿದ್ದಾನೆ.

ಚೈಲ್ಡ್ ಒಕ್ಯುಪೆಂಟ್ ಪ್ರೊಟೆಕ್ಷನ್ (COP)

ಹ್ಯಾರಿಯರ್‌ ಮತ್ತು ಸಫಾರಿ ಎರಡೂ ಚೈಲ್ಡ್‌ ಒಕ್ಯುಪೆಂಟ್‌ ಪ್ರೊಟೆಕ್ಷನ್‌ ಪರೀಕ್ಷೆಗಳನ್ನು ಉತ್ತಮ ಸಾಧನೆ ಮಾಡಿದ್ದು 5 ಸ್ಟಾರ್‌ ರೇಟಿಂಗ್‌ ಪಡೆದಿವೆ. ಎರಡೂ SUV ಗಳಲ್ಲಿ ಎರಡನೇ ಸಾಲಿನ ಔಟರ್‌ ಸೀಟ್‌ ಗಳಿಗೆ ISOFIX ಆಂಕರೇಜ್‌ ಗಳನ್ನು ಒದಗಿಸಲಾಗಿದ್ದು, ಮಗುವಿನ ಸೀಟ್‌ ಅನ್ನು ಹಿಂಭಾಗಕ್ಕೆ ಮುಖ ಮಾಡಿ ಅಳವಡಿಸಲಾಗಿದೆ. ಈ ಕುರಿತ ವಿವರಗಳು ಇಲ್ಲಿವೆ:

ಡೈನಾಮಿಕ್‌ ಸ್ಕೋರ್ – 23.54/24

CRS ಇನ್ಸ್ಟಾಲೇಶನ್‌ ಸ್ಕೋರ್ – 12/12

ವೆಹಿಕಲ್‌ ಅಸೆಸ್ಮೆಂಟ್‌ ಸ್ಕೋರ್ – 9/13

18‌ ತಿಂಗಳ ಮಗು

18 ತಿಂಗಳ ಮಗುವಿನ ನೀಡುವ ರಕ್ಷಣೆಯನ್ನು ಪರೀಕ್ಷೆಗೆ ಒಳಪಡಿಸಿದಾಗ, ಹ್ಯಾರಿಯರ್‌ ಮತ್ತು ಸಫಾರಿ ಎರಡೂ ವಾಹನಗಳು 12ರಲ್ಲಿ 11.54 ಅಂಕಗಳನ್ನು ಪಡೆದವು.

3‌ ವರ್ಷದ ಮಗು

3 ವರ್ಷ ವಯಸ್ಸಿನ ಮಗುವಿನ ರಕ್ಷಣೆಯ ವಿಚಾರದಲ್ಲಿ ಎರಡೂ SUV ಗಳು 12ರಲ್ಲಿ ಎಲ್ಲಾ 12 ಅಂಕಗಳನ್ನು ಪಡೆದವು

ಇದನ್ನು ಸಹ ಓದಿರಿ: ಶೀಘ್ರದಲ್ಲಿಯೇ 6 ಏರ್‌ ಬ್ಯಾಗ್‌ ಗಳನ್ನು ಹೊಂದಲಿರುವ ಟಾಟಾ ಪಂಚ್

GNCAP ವರದಿಯಲ್ಲಿ ಮಗುವಿನ ತಲೆ, ಎದೆ ಅಥವಾ ಕುತ್ತಿಗೆಗೆ ದೊರೆಯುವ ರಕ್ಷಣೆಯ ಪ್ರಮಾಣದ ಕುರಿತು ಸಾಕಷ್ಟು ವಿವರಗಳು ದೊರೆತರೆ, BNCAP ವರದಿಯಲ್ಲಿ ಈ ವಿವರಗಳು ದೊರೆಯುವುದಿಲ್ಲ.

ಸುರಕ್ಷಾ ಸಾಧನ

ಟಾಟಾ ಸಂಸ್ಥೆಯು ಹ್ಯಾರಿಯರ್‌ ಮತ್ತು ಸಫಾರಿ ಎರಡೂ ವಾಹನಗಳು 6 ಏರ್‌ ಬ್ಯಾಗ್‌ ಗಳು, ಐಚ್ಛಿಕ ಕ್ನೀ ಏರ್‌ ಬ್ಯಾಗ್, ISOFIX‌ ಚೈಲ್ಡ್‌ ಸೀಟ್‌ ಆಂಕರ್‌ ಗಳು, ಸೀಟ್‌ ಬೆಲ್ಟ್‌ ರಿಮೈಂಡರ್‌ ಗಳು (ಎಲ್ಲಾ ಪ್ರಯಾಣಿಕರಿಗಾಗಿ), EBD ಜೊತೆಗೆ ABS, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ ಇತ್ಯಾದಿಗಳನ್ನು ಹೊಂದಿದ್ದರೆ, ಟಾಪ್‌ ವೇರಿಯಂಟ್‌ ಗಳು ಮಾತ್ರ ಲೇನ್‌ ಕೀಪ್‌ ಅಸಿಸ್ಟ್‌, ಬ್ಲೈಂಡ್‌ ಸ್ಪಾಟ್‌ ಮಾನಿಟರಿಂಗ್‌, ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌, ಮತ್ತು ಅಟೋ ಎಮರ್ಜೆನ್ಸಿ ಬ್ರೇಕಿಂಗ ಸೇರಿದಂತೆ ಒಂದಷ್ಟು ADAS ವೈಶಿಷ್ಟ್ಯಗಳನ್ನು ಪಡೆದಿವೆ.

ಇದನ್ನು ಸಹ ಓದಿರಿ: ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 7 ಟಾಟಾ ಕಾರುಗಳು ಇಲ್ಲಿವೆ

ಹೆಚ್ಚಿನ ಇತರ ಕಾರು ಮೌಲ್ಯಮಾಪನ ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್‌ ಸುರಕ್ಷಾ ವೈಶಿಷ್ಟ್ಯಗಳ ಕುರಿತ ಫಲಿತಾಂಶ ಮತ್ತು ಕಾರ್ಯಕ್ಷಮತೆಯ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರೆ, BNCAP ವರದಿಯಲ್ಲಿ ಮಾತ್ರ ಇದು ಕಾಣಸಿಗುವುದಿಲ್ಲ. SUV ಗಳು ಪ್ರಮಾಣಿತವಾಗಿ ESCಯನ್ನು ಒದಗಿಸುತ್ತಿವೆಯೇ ಅಥವಾ ಇಲ್ಲವೇ ಎಂಬ ಕುರಿತು ಮಾತ್ರವಲ್ಲದೆ AIS-100 ಪ್ರಕಾರ ಪಾದಚಾರಿಗೆ ಯಾವ ರೀತಿಯ ರಕ್ಷಣೆ ದೊರೆಯುತ್ತದೆ ಎಂಬ ವಿಚಾರದಲ್ಲಿ ಸಹ BNCAP ವರದಿಯು ಏನನ್ನೂ ಹೇಳುವುದಿಲ್ಲ.

ಈ ರೇಟಿಂಗ್‌ ಅಡಿಯಲ್ಲಿ ಬರುವ ವೇರಿಯಂಟ್‌ ಗಳು

ಹ್ಯಾರಿಯರ್‌ ಮತ್ತು ಸಪಾರಿಯ ಮಿಡ್‌ ಸ್ಪೆಕ್‌ ವೇರಿಯಂಟ್‌ ಗಳನ್ನು ಈ ಢಿಕ್ಕಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹ್ಯಾರಿಯರ್‌ ನ ಸ್ಮಾರ್ಟ್‌ ಮ್ಯಾನುವಲ್‌ ನಿಂದ ಫಿಯರ್‌ ಲೆಸ್ +‌ ಡಾರ್ಕ್‌ ಅಟೋಮ್ಯಾಟಿಕ್‌ ತನಕ ಹಾಗೂ ಸಫಾರಿಯ 7 ಸೀಟರ್‌ ಸ್ಮಾರ್ಟ್‌ ಮ್ಯಾನುವಲ್‌ ನಿಂದ 7 ಸೀಟರ್‌ ಅಕಂಪ್ಲಿಷ್ಡ್ +‌ ಡಾರ್ಕ್‌ ಅಟೋಮ್ಯಾಟಿಕ್‌ ತನಕ 5 ಸ್ಟಾರ್‌ ಸುರಕ್ಷತೆಯು ಅನ್ವಯವಾಗುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಟಾಟಾ ಹ್ಯಾರಿಯರ್‌ ವಾಹನವು ರೂ. 15.49 ಲಕ್ಷದಿಂದ ರೂ. 26.44 ಲಕ್ಷದವರೆಗಿನ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು ಮಹೀಂದ್ರಾ XUV700, MG ಹೆಕ್ಟರ್, ಮತ್ತು ಜೀಪ್‌ ಕಂಪಾಸ್ ಜೊತೆಗೆ ಸ್ಪರ್ಧಿಸುತ್ತಿದೆ. ಟಾಟಾ ಸಫಾರಿಯು ರೂ. 16.19 ಮತ್ತು ರೂ. 27.34 ಲಕ್ಷದ (ಎಕ್ಸ್-ಶೋರೂಂ) ನಡುವಿನ ಬೆಲೆಯನ್ನು ಹೊಂದಿದ್ದು, MG ಹೆಕ್ಟರ್‌ ಪ್ಲಸ್, ಹ್ಯುಂಡೈ ಅಲ್ಕಜಾರ್, ಮತ್ತು ಮಹೀಂದ್ರಾ XUV700 ಜೊತೆಗೆ ಸ್ಪರ್ಧಿಸುತ್ತಿದೆ.

ಯಾವ BNCAP ಸುರಕ್ಷಾ ರೇಟಿಂಗ್‌ ಕುರಿತು ನೀವು ಹೆಚ್ಚು ಆಸಕ್ತರಾಗಿದ್ದೀರಿ? ನಿಮ್ಮ ಪ್ರತಿಕ್ರಿಯೆಗಳನ್ನು ಈ ಕೆಳಗೆ ಹಂಚಿಕೊಳ್ಳಿರಿ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯಾರಿಯರ್‌ ಡೀಸೆಲ್

Share via

Write your Comment on Tata ಹ್ಯಾರಿಯರ್

A
anjan ghosh
Dec 21, 2023, 3:58:06 PM

Govt. should ban 0 Star or 1 Star vehicles in India?

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ