ಭಾರತದಲ್ಲಿ Tata Punchನಿಂದ ಹೊಸ ಸಾಧನೆ: ತಲುಪಿದೆ 4 ಲಕ್ಷ ಮಾರಾಟದ ಮೈಲಿಗಲ್ಲು..!
EV ಸೇರಿದಂತೆ ಅದು ನೀಡುತ್ತಿರುವ ವಿವಿಧ ಪವರ್‌ಟ್ರೇನ್‌ಗಳ ಆಯ್ಕೆಯಿಂದಾಗಿ ಟಾಟಾ ಪಂಚ್ ಸತತವಾಗಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ
2021 ರಲ್ಲಿ ಪ್ರಾರಂಭವಾದಾಗಿನಿಂದ, ಟಾಟಾ ಪಂಚ್ ಮೈಕ್ರೋ-SUV ಸೆಗ್ಮೆಂಟ್ ಅನ್ನು ಸೃಷ್ಟಿಸಿದೆ ಮತ್ತು ವ್ಯಾಪಕವಾದ ಜನಪ್ರಿಯತೆಯನ್ನು ಗಳಿಸಿದೆ. 2024 ರ ಕಳೆದ ಕೆಲವು ತಿಂಗಳುಗಳಲ್ಲಿ, ಇದು ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ (ಪಂಚ್ EV ಸೇರಿದಂತೆ). ಈಗ, ಈ ಮೈಕ್ರೋ SUVಯು ದೇಶದಲ್ಲಿ 4 ಲಕ್ಷ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಭಾರತದಲ್ಲಿ ಪಂಚ್‌ನ ಮಾರಾಟ ಶುರುವಾದಾಗಿನಿಂದ ಮಾಡಿರುವ ಸೇಲ್ಸ್ ಅನ್ನು ನೋಡೋಣ:
ವರ್ಷ |
ಮಾರಾಟ |
ಅಕ್ಟೋಬರ್ 2021 |
ಲಾಂಚ್ |
ಆಗಸ್ಟ್ 2022 |
1 ಲಕ್ಷ |
ಮೇ 2023 |
2 ಲಕ್ಷ |
ಡಿಸೆಂಬರ್ 2023 |
3 ಲಕ್ಷ |
ಜುಲೈ 2024 |
4 ಲಕ್ಷ |
ಟಾಟಾ ಪಂಚ್ 10 ತಿಂಗಳಲ್ಲಿ ತನ್ನ ಮೊದಲ 1 ಲಕ್ಷ ಮಾರಾಟವನ್ನು ತಲುಪಿತು ಮತ್ತು ಅದರ ನಂತರ ಸುಮಾರು 9 ತಿಂಗಳುಗಳಲ್ಲಿ 2 ಲಕ್ಷ ಮಾರಾಟವನ್ನು ಮುಟ್ಟಿತು. ಪಂಚ್‌ನ ಮಾರಾಟವು ಮೇ 2023 ರ ನಂತರ ಹೆಚ್ಚಾಯಿತು, ಮತ್ತು ಡಿಸೆಂಬರ್ 2023 ರ ವೇಳೆಗೆ ಕೇವಲ 7 ತಿಂಗಳಲ್ಲಿ 1 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡುವ ಮೂಲಕ, ಒಟ್ಟು 3 ಲಕ್ಷ ಯುನಿಟ್‌ಗಳ ಸೇಲ್ಸ್ ಸಂಖ್ಯೆಯನ್ನು ತಲುಪಿದೆ. ಕೊನೆಯ 1 ಲಕ್ಷ ಮಾರಾಟವನ್ನು ಕೇವಲ 7 ತಿಂಗಳಲ್ಲಿ ಸಾಧಿಸಲಾಗಿದೆ.
ಟಾಟಾ ಪಂಚ್ ಬಗ್ಗೆ ಇನ್ನಷ್ಟು ವಿವರಗಳು
ಟಾಟಾ ಪಂಚ್‌ನ ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ವೇರಿಯಂಟ್ ಪೆಟ್ರೋಲ್ ಮತ್ತು CNG ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಅವುಗಳ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ:
ಇಂಜಿನ್ |
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
1.2-ಲೀಟರ್ ಪೆಟ್ರೋಲ್-CNG |
ಪವರ್ |
86 PS |
73.5 PS |
ಟಾರ್ಕ್ |
113 Nm |
103 Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT, 5-ಸ್ಪೀಡ್ AMT |
5-ಸ್ಪೀಡ್ MT |
ಫೀಚರ್ ಗಳ ವಿಷಯದಲ್ಲಿ, ಟಾಟಾ ಪಂಚ್ ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮ್ಯಾಟಿಕ್ AC, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಕೂಲ್ಡ್ ಗ್ಲೋವ್ ಬಾಕ್ಸ್‌ನೊಂದಿಗೆ ಬರುತ್ತದೆ. ಪಂಚ್‌ನಲ್ಲಿರುವ ಸುರಕ್ಷತಾ ಫೀಚರ್ ಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ಸ್ (TPMS), ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.
ಪಂಚ್ ನ ಆಲ್-ಎಲೆಕ್ಟ್ರಿಕ್ ವರ್ಷನ್ ಅನ್ನು 2024 ರಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ ಸ್ಪೆಸಿಫಿಕೇಷನ್ ಗಳು ಇಲ್ಲಿವೆ:
ವೇರಿಯಂಟ್ |
ಮೀಡಿಯಂ ರೇಂಜ್ |
ಲಾಂಗ್ ರೇಂಜ್ |
ಬ್ಯಾಟರಿ ಪ್ಯಾಕ್ |
25 kWh |
35 kWh |
ಪವರ್ |
82 PS |
122 PS |
ಟಾರ್ಕ್ |
114 Nm |
190 Nm |
ಕ್ಲೇಮ್ ಮಾಡಿರುವ ರೇಂಜ್ (MIDC) |
315 ಕಿ.ಮೀ |
421 ಕಿ.ಮೀ |
ಪಂಚ್ ICE ಗೆ ಹೋಲಿಸಿದರೆ ಪಂಚ್ EV ಕೆಲವು ಹೆಚ್ಚಿನ ಪ್ರೀಮಿಯಂ ಫೀಚರ್ ಗಳೊಂದಿಗೆ ಬರುತ್ತದೆ. ಇದರಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಮತ್ತು ಏರ್ ಪ್ಯೂರಿಫೈಯರ್ ಅನ್ನು ನೀಡಲಾಗಿದೆ. ಒಳಗೆ ಕುಳಿತವರ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ನೀಡಲಾಗಿದೆ.
ಇದನ್ನು ಕೂಡ ಓದಿ: ಟಾಟಾ ಪಂಚ್ EV ಲಾಂಗ್ ರೇಂಜ್ ಪರ್ಫಾರ್ಮೆನ್ಸ್ ಟೆಸ್ಟ್: ಆನ್ ರೋಡ್ ನಲ್ಲಿ ಹೇಗಿದೆ ಎಲ್ಲಾ ಮೂರು ಡ್ರೈವ್ ಮೋಡ್‌ಗಳ ಕಾರ್ಯಕ್ಷಮತೆ
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಪಂಚ್ ICE |
ಟಾಟಾ ಪಂಚ್ EV |
ರೂ. 6.13 ಲಕ್ಷದಿಂದ ರೂ. 10.20 ಲಕ್ಷ |
ರೂ. 10.99 ಲಕ್ಷದಿಂದ ರೂ. 15.49 ಲಕ್ಷ |
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ
ಪಂಚ್ ICE ಹ್ಯುಂಡೈ ಎಕ್ಸ್‌ಟರ್ ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್ ಸಬ್-4m ಕ್ರಾಸ್‌ಒವರ್‌ಗಳಿಗೆ ಪರ್ಯಾಯ ಆಯ್ಕೆಯಾಗಿದೆ. ಮತ್ತೊಂದೆಡೆ, ಪಂಚ್ EV ಸಿಟ್ರೊಯೆನ್ eC3 ನೊಂದಿಗೆ ಸ್ಪರ್ಧಿಸುತ್ತದೆ, ಮತ್ತು ಟಾಟಾ ಟಿಯಾಗೊ EV ಮತ್ತು MG ಕಾಮೆಟ್ EV ಗೆ ಹೋಲಿಸಿದರೆ ಪ್ರೀಮಿಯಂ ಬೆಲೆಯ ಪರ್ಯಾಯ ಆಯ್ಕೆಯಾಗಿದೆ.
ನಿರಂತರ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಪಂಚ್ AMT