ಕೇವಲ 5 ತಿಂಗಳುಗಳಲ್ಲಿ Tata Punch EVಯ 10,000 ಕ್ಕೂ ಹೆಚ್ಚು ಕಾರುಗಳ ಮಾರಾಟ, ನೆಕ್ಸಾನ್ ಇವಿಯ ಮಾರಾಟದಲ್ಲೂ ವಿನೂತನ ದಾಖಲೆ!
ಟಾಟಾ ಪಂಚ್ ಇವಿ ಗಾಗಿ samarth ಮೂಲಕ ಜೂನ್ 19, 2024 07:52 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಭಾರತ್ ಎನ್‌ಸಿಎಪಿ ನಡೆಸಿದ ಇತ್ತೀಚಿನ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಎರಡೂಇವಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿವೆ
ಪ್ರಸ್ತುತ, ಕೈಗೆಟುಕುವ ಬೆಲೆಯ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್‌ಗಳಿಂದ ಹಿಡಿದು ಆಲ್-ಎಲೆಕ್ಟ್ರಿಕ್ SUV ಗಳವರೆಗೆ ಎಲ್ಲವನ್ನೂ ಒಳಗೊಂಡಂತೆ ಲಭ್ಯವಿರುವ ಅತ್ಯಂತ ದೊಡ್ಡ EV ಆಯ್ಕೆಯಾಗಿ ಟಾಟಾ ಮುಂಚೂಣಿಯಲ್ಲಿದೆ. SUV ಸೆಗ್ಮೆಂಟ್ ನಲ್ಲಿ, ಎರಡು ಕಾರುಗಳಿವೆ: ಪಂಚ್ EV ಮತ್ತು ನೆಕ್ಸಾನ್ EV. SUVಗಳು ಮತ್ತು ಎಲೆಕ್ಟ್ರಿಕ್ ವಾಹನಗಳ (EVಗಳು) ಹೆಚ್ಚುತ್ತಿರುವ ಬೇಡಿಕೆಯ ಕಾರಣ, ಪಂಚ್ EV ಮತ್ತು ನೆಕ್ಸಾನ್ EVಗಳು ಮಾರುಕಟ್ಟೆಗೆ ಪರಿಚಯಿಸಿದಾಗಿನಿಂದ ಗಮನಾರ್ಹ ಜನಪ್ರಿಯತೆಯನ್ನು ಕಂಡಿವೆ. ಮಾರುಕಟ್ಟೆಗೆ ಬಂದ ಕೇವಲ 5 ತಿಂಗಳುಗಳಲ್ಲಿ, ಪಂಚ್ EV 10,000 ಯೂನಿಟ್‌ಗಳನ್ನು ಮಾರಾಟ ಮಾಡಿದೆ, ಹಾಗೆಯೇ ನೆಕ್ಸಾನ್ EV 2020 ರಲ್ಲಿ ಪ್ರಾರಂಭವಾದಾಗಿನಿಂದ 68,000 ಯುನಿಟ್‌ಗಳನ್ನು ಮಾರಾಟ ಮಾಡಿರುವ ಮೈಲಿಗಲ್ಲನ್ನು ಸಾಧಿಸಿದೆ.
ಫೀಚರ್ ಗಳು ಮತ್ತು ಸುರಕ್ಷತೆ
ಫೀಚರ್ ಗಳ ವಿಷಯದಲ್ಲಿ, ನೆಕ್ಸಾನ್ EVಯು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 9-ಸ್ಪೀಕರ್‌ಗಳ JBL ಸಿಸ್ಟಮ್, ಹಿಂಭಾಗದ ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ AC, ವೈರ್‌ಲೆಸ್ ಫೋನ್ ಚಾರ್ಜರ್, ಸನ್‌ರೂಫ್ ಮತ್ತು ಮುಂಭಾಗದ ವೆಂಟಿಲೇಟೆಡ್ ಸೀಟ್ ಗಳನ್ನು ಪಡೆಯುತ್ತದೆ. ಹಾಗೆಯೇ, ಪಂಚ್ EVಯು ಡ್ಯುಯಲ್-ಸ್ಕ್ರೀನ್ ಸೆಟಪ್ (ಇನ್‌ಸ್ಟ್ರುಮೆಂಟೇಶನ್ ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ 10.25-ಇಂಚಿನ ಸ್ಕ್ರೀನ್ ಗಳು), ಏರ್ ಪ್ಯೂರಿಫೈಯರ್, 6-ಸ್ಪೀಕರ್‌ಗಳು, ಕ್ರೂಸ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ ಮತ್ತು ಸನ್‌ರೂಫ್ ಅನ್ನು ಹೊಂದಿದೆ.
ಸುರಕ್ಷತೆಯ ವಿಷಯದಲ್ಲಿ, ಎರಡೂ SUVಗಳು ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತವೆ. ಇದು ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಕೂಡ ಒಳಗೊಂಡಿದೆ. ನೆಕ್ಸಾನ್ EV ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ಕೂಡ ಪಡೆಯುತ್ತದೆ. ಇತ್ತೀಚೆಗೆ, ನೆಕ್ಸಾನ್ EV ಮತ್ತು ಪಂಚ್ EV ಎರಡನ್ನೂ ಭಾರತ್ ಎನ್‌ಸಿಎಪಿ ಪರೀಕ್ಷಿಸಿದೆ ಮತ್ತು ಕ್ರ್ಯಾಶ್ ಟೆಸ್ಟ್‌ನಲ್ಲಿ ಎರಡೂ SUV ಗಳು 5-ಸ್ಟಾರ್ ರೇಟಿಂಗ್‌ಗಳನ್ನು ಪಡೆದುಕೊಂಡಿದೆ.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ EV ಗೆ ಭಾರತ್ NCAP ನಿಂದ 5 ಸ್ಟಾರ್ ಸುರಕ್ಷತಾ ರೇಟಿಂಗ್
ಪವರ್‌ಟ್ರೇನ್‌ಗಳು
ಎರಡೂ EV ಗಳಲ್ಲಿ ಲಭ್ಯವಿರುವ ಪವರ್‌ಟ್ರೇನ್ ಆಯ್ಕೆಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ:
ಸ್ಪೆಸಿಫಿಕೇಷನ್ಸ್ |
ಟಾಟಾ ಪಂಚ್ EV |
ಟಾಟಾ ನೆಕ್ಸಾನ್ EV |
ಬ್ಯಾಟರಿ ಪ್ಯಾಕ್ |
25 kWh* / 35 kWh (LR)* |
30 kWh (MR)* / 40.5 kWh (LR)* |
ಪವರ್ |
82 PS / 122 PS |
129 PS / 144 PS |
ಟಾರ್ಕ್ |
114 Nm /190 Nm |
215 Nm / 215 Nm |
ಕ್ಲೇಮ್ ಮಾಡಿರುವ ರೇಂಜ್ (ARAI) |
315 ಕಿಮೀ / 421 ಕಿಮೀ |
325 ಕಿಮೀ / 465 ಕಿಮೀ |
*MR- ಮೀಡಿಯಂ ರೇಂಜ್ / LR-ಲಾಂಗ್ ರೇಂಜ್
ಎರಡೂ SUV ಗಳು ಇಕೋ, ಸಿಟಿ ಮತ್ತು ಸ್ಪೋರ್ಟ್ ಮೋಡ್, ಈ ಮೂರು ಮಲ್ಟಿ-ಡ್ರೈವ್ ಮೋಡ್‌ಗಳನ್ನು ಪಡೆಯುತ್ತವೆ. ಅವು 4 ಹಂತದ ಮಲ್ಟಿ-ಮೋಡ್ ರೀಜನರೇಟಿವ್ ಬ್ರೇಕಿಂಗ್ ಅನ್ನು ಕೂಡ ಪಡೆಯುತ್ತವೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಪಂಚ್ EV ಬೆಲೆಯು ರೂ 10.99 ಲಕ್ಷದಿಂದ ರೂ 15.49 ಲಕ್ಷದವರೆಗೆ (ಎಕ್ಸ್-ಶೋರೂಂ) ಇದೆ, ಮತ್ತು ಸಿಟ್ರೊಯೆನ್ eC3 ಗೆ ನೇರ ಪ್ರತಿಸ್ಪರ್ಧಿಯಾಗಿದೆ, ಹಾಗೆಯೇ ಟಾಟಾ ಟಿಯಾಗೊ EV ಮತ್ತು MG ಕಾಮೆಟ್ EVಗೆ ಪ್ರೀಮಿಯಂ ಪರ್ಯಾಯ ಆಯ್ಕೆಯಾಗಿದೆ. ಮತ್ತೊಂದೆಡೆ, ಟಾಟಾ ನೆಕ್ಸಾನ್ EV ಬೆಲೆಯು 14.49 ಲಕ್ಷದಿಂದ 19.49 ಲಕ್ಷದವರೆಗೆ ಇದೆ ಮತ್ತು ಇದು MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ಗಳಿಗೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿದೆ ಮತ್ತು ಮಹೀಂದ್ರಾ XUV400 EV ಗೆ ನೇರ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಓದಿ: ಪಂಚ್ EV ಆಟೋಮ್ಯಾಟಿಕ್
0 out of 0 found this helpful