Login or Register ಅತ್ಯುತ್ತಮ CarDekho experience ಗೆ
Login

ಟಾಟಾ Tiago, ಟಿಯಾಗೊ NRG ಮತ್ತು Tigor ಗೆ ಹೊಸ ಕಲರ್ ಆಯ್ಕೆಗಳ ಸೇರ್ಪಡೆ

ಟಾಟಾ ಟಿಯಾಗೋ ಗಾಗಿ shreyash ಮೂಲಕ ಜನವರಿ 29, 2024 03:47 pm ರಂದು ಪ್ರಕಟಿಸಲಾಗಿದೆ

ಟಿಯಾಗೊ ಮತ್ತು ಟಿಯಾಗೊ NRG ನೀಲಿ ಮತ್ತು ಹಸಿರು ಬಣ್ಣಗಳ ಅಪ್ಡೇಟ್ ಪಡೆದರೆ, ಟಿಗೊರ್ ಹೊಚ್ಚ ಹೊಸ ಶೇಡ್ ಅನ್ನು ಪಡೆದಿದೆ

ಟಾಟಾ ಟಿಯಾಗೊ ಮತ್ತು ಟಾಟಾ ಟಿಗೊರ್ ಶೀಘ್ರದಲ್ಲೇ ತಮ್ಮ CNG ಪವರ್‌ಟ್ರೇನ್ ವೇರಿಯಂಟ್ ಗಳಿಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಆಯ್ಕೆಯನ್ನು ಪಡೆಯಲಿವೆ ಮತ್ತು ಇವುಗಳನ್ನು ರೂ 21,000 ಟೋಕನ್ ಮೊತ್ತದೊಂದಿಗೆ ಬುಕ್ ಮಾಡುವ ಅವಕಾಶವನ್ನು ಟಾಟಾ ಈಗಾಗಲೇ ಶುರುಮಾಡಿದೆ. CNG ಆಟೋಮ್ಯಾಟಿಕ್ ಪರಿಚಯದ ಜೊತೆಗೆ, ಟಾಟಾ ತನ್ನ ಟಿಯಾಗೊ ಮತ್ತು ಟಿಗೊರ್ ಎರಡಕ್ಕೂ ಹೊಸ ಎಕ್ಸ್ಟೀರಿಯರ್ ಕಲರ್ ಆಯ್ಕೆಗಳನ್ನು ಪರಿಚಯಿಸಿದೆ, ಇದನ್ನು ಅದರ ರೆಗ್ಯುಲರ್ ಪೆಟ್ರೋಲ್ ವೇರಿಯಂಟ್ ಗಳಿಗೆ ಕೂಡ ನೀಡಲಾಗುವುದು.

ಹೊಸ ಬಣ್ಣಗಳ ಚಿತ್ರಗಳು ಇಲ್ಲಿವೆ:

ಟಾಟಾ ಟಿಯಾಗೊ

ಟೊರ್ನಾಡೊ ಬ್ಲೂ (XT, XT CNG, XZ, XZ+, ಮತ್ತು XZ+ CNG ವೇರಿಯಂಟ್ ಗಳೊಂದಿಗೆ ಲಭ್ಯವಿದೆ)

ಟಾಟಾ ತನ್ನ ಟಿಯಾಗೊದ ಅರಿಜೋನಾ ಬ್ಲೂ ಬಣ್ಣವನ್ನು ಹೊಸ ಟೊರ್ನಾಡೊ ಬ್ಲೂ ಎಕ್ಸ್ಟೀರಿಯರ್ ಶೇಡ್ ನೊಂದಿಗೆ ಬದಲಾಯಿಸಿದೆ. ಹಿಂದಿನ ಬ್ಲೂ ಬಣ್ಣಕ್ಕೆ ಹೋಲಿಸಿದರೆ, ಈ ಹೊಸ ಶೇಡ್ ಪ್ರಕಾಶಮಾನವಾಗಿ ಕಾಣುತ್ತದೆ. ಟಾಟಾ ಈ ಬಣ್ಣವನ್ನು ತನ್ನ ಹ್ಯಾಚ್‌ಬ್ಯಾಕ್‌ನ ಟಾಪ್-ಸ್ಪೆಕ್ XZ+ ವೇರಿಯಂಟ್ ನೊಂದಿಗೆ ಡ್ಯುಯಲ್-ಟೋನ್ ಶೇಡ್‌ನಲ್ಲಿ ಕೂಡ ನೀಡುತ್ತಿದೆ.

ಟಾಟಾ ಟಿಯಾಗೋ NRG

ಗ್ರಾಸ್‌ಲ್ಯಾಂಡ್ ಬೀಜ್ (XT NRG, XT NRG CNG, XZ NRG, ಮತ್ತು XZ NRG CNG ವೇರಿಯಂಟ್ ಗಳೊಂದಿಗೆ ಲಭ್ಯವಿದೆ)

ಹಿಂದೆ ಲಭ್ಯವಿದ್ದ ಫಾರೆಸ್ಟಾ ಗ್ರೀನ್ ಬಣ್ಣದ ಬದಲಿಗೆ, ಟಿಯಾಗೊ NRG ಈಗ ಈ ಗ್ರಾಸ್‌ಲ್ಯಾಂಡ್ ಬೀಜ್ ಎಕ್ಸ್ಟೀರಿಯರ್ ಆಯ್ಕೆಯ ರೂಪದಲ್ಲಿ ಲೈಟರ್ ಕಲರ್ ಅನ್ನು ಪಡೆಯುತ್ತದೆ, ಮತ್ತು ಇದನ್ನು ಮೊನೊಟೋನ್ ಮತ್ತು ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ಟಾಟಾ ಟಿಗೋರ್

ಮಿಟಿಯೊರ್ ಬ್ರೊನ್ಜ್ (XZ, XZ CNG, XZ+ ಮತ್ತು XZ+ CNG ವೇರಿಯಂಟ್ ಗಳೊಂದಿಗೆ ಲಭ್ಯವಿದೆ)

ಟಾಟಾ ಟಿಗೋರ್ ಹೊಸ ಮಿಟಿಯೊರ್ ಬ್ರೊನ್ಜ್ ಎಕ್ಸ್ಟೀರಿಯರ್ ಕಲರ್ ಆಯ್ಕೆಯೊಂದಿಗೆ ಕಡಿಮೆ ರೋಮಾಂಚಕಾರಿ ಶೇಡ್ ಅನ್ನು ಪಡೆಯುತ್ತದೆ. ಈ ಎಕ್ಸ್ಟೀರಿಯರ್ ತಿಳಿ ಕಂದು ಬಣ್ಣವನ್ನು ಹೊಂದಿದ್ದು, ಟಿಗೋರ್ ಗೆ ಪ್ರಬುದ್ಧ ಲುಕ್ ಅನ್ನು ನೀಡುತ್ತದೆ. ಆದರೆ, ಇದು ಮೊನೊಟೋನ್ ಸ್ಕೀಮ್ ನಲ್ಲಿ ಮಾತ್ರ ಲಭ್ಯವಿದೆ.

ಫೀಚರ್ ಗಳು ಮತ್ತು ಸುರಕ್ಷತೆ

ಟಾಟಾ ಟಿಯಾಗೊ ಮತ್ತು ಟಿಗೊರ್ ಎರಡೂ, 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮ್ಯಾಟಿಕ್ AC ಮತ್ತು 8-ಸ್ಪೀಕರ್ ಸೌಂಡ್ ಸಿಸ್ಟಮ್‌ನಂತಹ ಫೀಚರ್ ಗಳನ್ನು ಪಡೆಯುತ್ತವೆ. ಸುರಕ್ಷತಾ ಫೀಚರ್ ಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಸೇರಿವೆ.

ಇದನ್ನು ಕೂಡ ಓದಿ: ಸಿಟ್ರೋನ್ eC3 ಹೊಸ ಟಾಪ್-ಸ್ಪೆಕ್ ಶೈನ್ ವೇರಿಯಂಟ್‌ನೊಂದಿಗೆ ಹೆಚ್ಚಿನ ಫೀಚರ್ ಗಳನ್ನು ಪಡೆದಿದೆ

ಪವರ್‌ಟ್ರೇನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು

ಎರಡೂ ಕಾರುಗಳನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ (86 PS / 113 Nm) 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಗೆ ಜೋಡಿಸಲಾಗಿದೆ. ಅದೇ ಎಂಜಿನ್ ಅನ್ನು 73.5 PS ಮತ್ತು 95 Nm ನ ಕಡಿಮೆ ಔಟ್ಪುಟ್ ನೊಂದಿಗೆ CNG ವೇರಿಯಂಟ್ ಗಳೊಂದಿಗೆ ಕೂಡ ನೀಡಲಾಗುತ್ತಿದೆ, ಆದರೆ ಇಲ್ಲಿಯವರೆಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ. ಟಿಯಾಗೊ ಮತ್ತು ಟಿಗೊರ್ ನ CNG ವೇರಿಯಂಟ್ ಗಳು ಶೀಘ್ರದಲ್ಲೇ 5-ವೇಗದ AMT ಟ್ರಾನ್ಸ್‌ಮಿಷನ್‌ ನೊಂದಿಗೆ ಬರಲಿವೆ, ಅದರೊಂದಿಗೆ ಅವುಗಳು ಭಾರತದಲ್ಲಿ ಬರುತ್ತಿರುವ ಮೊಟ್ಟ ಮೊದಲ CNG ಆಟೋಮ್ಯಾಟಿಕ್ ಕಾರುಗಳಾಗಲಿವೆ.

ಟಿಯಾಗೊ ಮತ್ತು ಟಿಗೊರ್ ನ CNG ವೇರಿಯಂಟ್ ಗಳು CNG ಸಿಲಿಂಡರ್‌ಗಳನ್ನು ಅಳವಡಿಸಿದಾಗ ಕೂಡ ಬೂಟ್ ಸ್ಪೇಸ್‌ ಬಳಕೆಗಾಗಿ ಟ್ವಿನ್-ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುತ್ತಿವೆ.

ಬೆಲೆ ಶ್ರೇಣಿ

ಟಾಟಾ ಟಿಯಾಗೊ ಬೆಲೆಗಳು ರೂ. 5.60 ಲಕ್ಷದಿಂದ ರೂ. 8.20 ಲಕ್ಷದವರೆಗೆ ಇರುತ್ತದೆ, ಹಾಗೆಯೇ ಟಾಟಾ ಟಿಗೊರ್ ಬೆಲೆಯು ರೂ. 6.30 ಲಕ್ಷದಿಂದ ಶುರುವಾಗಿ ರೂ. 8.95 ಲಕ್ಷದವರೆಗೆ ಇದೆ (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಆಗಿದೆ). ಟಿಯಾಗೊ ಮಾರುತಿ ಸೆಲೆರಿಯೊ, ಮಾರುತಿ ವ್ಯಾಗನ್ R ಮತ್ತು ಸಿಟ್ರೋನ್ C3 ಗೆ ಪ್ರತಿಸ್ಪರ್ಧಿಯಾಗಿದೆ, ಹಾಗೆಯೇ ಟಿಗೊರ್ ಮಾರುತಿ ಡಿಜೈರ್, ಹೋಂಡಾ ಅಮೇಜ್ ಮತ್ತು ಹ್ಯುಂಡೈ ಔರಾದೊಂದಿಗೆ ಸ್ಪರ್ಧಿಸಲಿದೆ.

ಇನ್ನಷ್ಟು ಓದಿ: ಟಾಟಾ ಟಿಯಾಗೊ AMT

Share via

Write your Comment on Tata ಟಿಯಾಗೋ

explore similar ಕಾರುಗಳು

ಟಾಟಾ ಟಿಯಾಗೋ

ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.49 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ