2024 ರಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಕಾರುಗಳು: ಮುಂದಿನ ವರ್ಷ ರಸ್ತೆಗಿಳಿಯಲಿರುವ ಕಾರುಗಳ ಪಟ್ಟಿ ಇಲ್ಲಿದೆ
2024ರಲ್ಲಿ ಸಾಕಷ್ಟು ಹೊಸ ಕಾರುಗಳು ಬಿಡುಗಡೆಯಾಗಲು ಕಾಯುತ್ತಿವೆ, ಅವುಗಳಲ್ಲಿ ಹೆಚ್ಚಿನವು SUV ಗಳಾಗಿದ್ದು, EV ಗಳು ಉತ್ತಮ ಸಂಖ್ಯೆಯನ್ನು ಹೊಂದಿದೆ.
2023ರಲ್ಲಿ ಫೇಸ್‌ಲಿಫ್ಟೆಡ್ ಟಾಟಾ ಎಸ್‌ಯುವಿಗಳು ಮತ್ತು ಹೋಂಡಾ ಎಲಿವೇಟ್‌ನಂತಹ ಬಿಡುಡೆಯೊಂದಿಗೆ ಭಾರತೀಯ ಆಟೋ ಉದ್ಯಮಕ್ಕೆ ಹೊಸ ಜೋಶ್‌ನ್ನು ನೀಡಿದ ನಂತರ ಇದೀಗ 2024 ರಲ್ಲಿ ಸಾಕಷ್ಟು ಹೊಸ ಬಿಡುಗಡೆ ಮತ್ತು ಅನಾವರಣಗಳೊಂದಿಗೆ ಮತ್ತಷ್ಟು ಹುರುಪು ನೀಡುವ ಭರವಸೆಗಳು ಎದ್ದು ಕಾಣುತ್ತಿದೆ. ಇದರಲ್ಲಿ ಸಾಕಷ್ಟು ಆಂತರಿಕ ದಹನಕಾರಿ ಎಂಜಿನ್ (ICE) ಮೊಡೆಲ್‌ಗಳ ಜೊತೆಗೆ ಅನೇಕ ಎಲೆಕ್ಟ್ರಿಕ್ ವಾಹನಗಳು (EV ಗಳು) ಸಹ ಒಳಗೊಂಡಿದೆ. 2024 ರಲ್ಲಿ ಭಾರತೀಯ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆ ಇರುವ/ದೃಢಪಡಿಸಿದ ಎಲ್ಲಾ ಹೊಸ ಕಾರುಗಳ ಪಟ್ಟಿ ಇಲ್ಲಿದೆ:
ಮಾರುತಿ
ಹೊಸ ಮಾರುತಿ ಸ್ವಿಫ್ಟ್
lಮಾರುತಿ ಸ್ವಿಫ್ಟ್ ಹೊಸ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಇಂಟಿರೀಯರ್ ಮತ್ತು ಹೊರಗೆ ತಾಜಾ ನೋಟವನ್ನು ಪಡೆಯುತ್ತಿದ್ದು, ಮುಂದಿನ ವರ್ಷ ಹೊಸ ಜನರೇಶನ್‌ನ ಆಪ್‌ಡೇಟ್‌ಗಳನ್ನು ಪಡೆಯಲು ಸಿದ್ಧವಾಗಿದೆ. ಹೊಸ ಸ್ವಿಫ್ಟ್ ನ ಪರೀಕ್ಷಾ ಕಾರಿನ ಇತ್ತೀಚಿನ ಸ್ಪೈ ಶಾಟ್‌ಗಳಲ್ಲಿ ಕಂಡುಬರುವಂತೆ ಇದು ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್, ಆರು ಏರ್‌ಬ್ಯಾಗ್‌ಗಳು ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನೊಂದಿಗೆ ಬರಲಿದೆ.
ನಿರೀಕ್ಷಿತ ಬೆಲೆ: 6 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: 2024 ರ ಮೊದಲಾರ್ಧ
ಹೊಸ ಮಾರುತಿ ಡಿಜೈರ್
ಪ್ರಸ್ತುತ-ಮಾರುಕಟ್ಟೆಯಲ್ಲಿರುವ ಡಿಜೈರ್ ಅನ್ನು ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.
ಮಾರುತಿ ಡಿಜೈರ್ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಸೆಡಾನ್ ಆವೃತ್ತಿಯಾಗಿದೆ. ಡಿಜೈರ್ ಸಹ ಈಗ ಹೊಸ ಪೀಳಿಗೆಯನ್ನು ಪ್ರವೇಶಿಸುವುದರೊಂದಿಗೆ, ಸೆಡಾನ್ ಕೂಡ ಇದೇ ರೀತಿಯ ಆಪ್‌ಡೇಟ್‌ಗಳನ್ನು ಪಡೆಯಲಿದೆ. ಮೆಕ್ಯಾನಿಕಲ್ ಮತ್ತು ವೈಶಿಷ್ಟ್ಯದ ಸುಧಾರಣೆಗಳು ಹೊಸ ಸ್ವಿಫ್ಟ್‌ಗೆ ಅನುಗುಣವಾಗಿರುತ್ತವೆ ಎಂಬುವುದನ್ನು ನಾವು ನಿರೀಕ್ಷಿಸಬಹುದು, ಹಿಂಭಾಗದಲ್ಲಿ ಡಿಜೈರ್-ನಿರ್ದಿಷ್ಟ ವಿನ್ಯಾಸದಲ್ಲಿ ವ್ಯತ್ಯಾಸಗಳಿವೆ.
ನಿರೀಕ್ಷಿತ ಬೆಲೆ: 7 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಇನ್ನು ಘೋಷಿಸಿಲ್ಲ
ಮಾರುತಿ ಎಸ್-ಪ್ರೆಸ್ಸೋ ಫೇಸ್‌ಲಿಫ್ಟ್
ಪ್ರಸ್ತುತ-ಮಾರುಕಟ್ಟೆಯಲ್ಲಿರುವ ಎಸ್-ಪ್ರೆಸ್ಸೋ ಅನ್ನು ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.
ಮಾರುತಿ ಎಸ್-ಪ್ರೆಸ್ಸೊ ಮಾರುಕಟ್ಟೆಗೆ ಪ್ರವೇಶಿಸಿ ಈಗಾಗಲೇ ನಾಲ್ಕು ವರ್ಷಗಳನ್ನು ಪೂರೈಸಿದ್ದು, ಹಾಗಾಗಿ ಮುಂದಿನ ವರ್ಷ ಮಾರುತಿ ಸಂಸ್ಥೆ ಇದಕ್ಕೆ ಪ್ರಮುಖವಾದ ಸುಧಾರಣೆಯನ್ನು ನೀಡಬಹುದೆಂದು ಎಂದು ನಾವು ಭಾವಿಸುತ್ತೇವೆ. ಬದಲಾವಣೆಗಳ ಬಗ್ಗೆ ಹೆಚ್ಚೇನು ನಿಖರವಾಗಿ ತಿಳಿದಿಲ್ಲವಾದರೂ, ಮಾರುತಿ ಸ್ವಲ್ಪಮಟ್ಟಿಗೆ ಮುಂಭಾಗದ ಲುಕ್‌ನಲ್ಲಿ ಮತ್ತು ಇಂಟಿರೀಯರ್‌ನಲ್ಲಿ ಕೆಲವು ಸೌಮ್ಯವಾದ ಬದಲಾವಣೆಗಳನ್ನು ನೀಡಬಹುದೆಂದು ನಮಗೆ ಅನಿಸುತ್ತದೆ. ಎಸ್-ಪ್ರೆಸ್ಸೋ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್‌ನ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳನ್ನು ಮುಂದುವರಿಸಬಹುದು.
ನಿರೀಕ್ಷಿತ ಬೆಲೆ: 4.5 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಇನ್ನು ಘೋಷಿಸಿಲ್ಲ
ಮಾರುತಿ eVX
ಮೊದಲ ಮಾರುತಿ EV ಯಾಗಿರುವ eVX 2024 ರಲ್ಲಿ ಭಾರತೀಯ ಮಾರುಕಟ್ಟೆಗೆ ಆಗಮನವಾಗಲಿದೆ ಎಂದು ತೋರುತ್ತಿದೆ. ಈ ಹಿಂದೆ 2025 ರಲ್ಲಿ ಆಗಮಿಸಲು ಯೋಜಿಸಲಾಗಿದ್ದರೂ, ಎಲೆಕ್ಟ್ರಿಕ್ SUV ಯ ಪರೀಕ್ಷಾ ಕಾರುಗಳನ್ನು ಈಗಾಗಲೇ ಕೆಲವು ಬಾರಿ ರಸ್ತೆಗಳಲ್ಲಿ ಗುರುತಿಸಲಾಗಿದೆ. ಹಾಗಾಗಿ ಇದು ಶೀಘ್ರದಲ್ಲೇ ಉತ್ಪಾದನೆಗೆ ಸಿದ್ಧವಾಗಬಹುದು ಎಂದು ಸೂಚಿಸುತ್ತದೆ. ಮಾರುತಿ ಇದನ್ನು 60 kWh ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡುವ ಮೂಲಕ ಇದು 550 ಕಿಮೀ ವರೆಗೆ ದೂರವನ್ನು ಕ್ರಮಿಸುವ ರೇಂಜ್‌ನ್ನು ಹೊಂದುವ ಸಾಧ್ಯತೆಯಿದೆ.
ನಿರೀಕ್ಷಿತ ಬೆಲೆ: 22 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಇನ್ನೂ ದೃಢಪಡಿಸಿಲ್ಲ
ಟೊಯೋಟಾ
ಟೊಯೋಟಾ ಟೈಸೋರ್
ಪ್ರಸ್ತುತ-ಮಾರುಕಟ್ಟೆಯಲ್ಲಿರುವ ಮಾರುತಿ ಫ್ರಾಂಕ್ಸ್ ಅನ್ನು ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.
2023 ರ ನವೆಂಬರ್‌ನಲ್ಲಿ, ನಾವು ಮಾರುತಿ ಫ್ರಾಂಕ್ಸ್-ಆಧಾರಿತ ಟೊಯೋಟಾ ಸಬ್-4m ಕ್ರಾಸ್ಒವರ್ ಎಸ್‌ಯುವಿಯಾಗಿರುವ ಟೈಸರ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಎರಡು ಬ್ರ್ಯಾಂಡ್‌ಗಳ ನಡುವಿನ ಎಲ್ಲಾ ಹಂಚಿಕೆಯ ಕಾರುಗಳಂತೆ, ಟೈಸರ್ ಸುತ್ತಲೂ ಬ್ಯಾಡ್ಜ್‌ಗಳ ಅಳವಡಿಕೆಯ ಜೊತೆ ಫ್ರಾಂಕ್ಸ್‌ನಲ್ಲಿ ಸಣ್ಣ ಸ್ಟೈಲಿಂಗ್ ಬದಲಾವಣೆಗಳನ್ನು ಸಹ ಪಡೆಯುತ್ತದೆ. ಆದರೆ, ಇದರ ಸೌಕರ್ಯಗಳು ಮತ್ತು ಪವರ್‌ಟ್ರೇನ್‌ನಲ್ಲಿ ಯಾವುದೇ ರೀತಿಯ ಬದಲಾವಣೆಗಳಿಲ್ಲ ಎಂದು ಟೊಯೋಟಾ ಹೇಳಿದೆ.
ನಿರೀಕ್ಷಿತ ಬೆಲೆ: 8 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಮಾರ್ಚ್ 2024
ಹುಂಡೈ
ಹುಂಡೈ ಕ್ರೆಟಾ ಫೇಸ್‌ಲಿಫ್ಟ್
ಪ್ರಸ್ತುತ-ಮಾರುಕಟ್ಟೆಯಲ್ಲಿರುವ ಕ್ರೇಟಾದ ಫೋಟೋವನ್ನು ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.
ಬಹುಶಃ ಮುಂದಿನ ವರ್ಷ ಹ್ಯುಂಡೈನಲ್ಲಿ ನಾವು ನಿರೀಕ್ಷಿಸಬಹುದಾದ ಅತಿದೊಡ್ಡ ಬಿಡುಗಡೆ ಎಂದರೆ ಕ್ರೆಟಾ ಫೇಸ್‌ಲಿಫ್ಟ್ ಆಗಿರುತ್ತದೆ. ಮಿಡ್‌ಲೈಫ್ ರಿಫ್ರೆಶ್ ಇದರ ಇಂಟಿರೀಯರ್ ಮತ್ತು ಹೊರಗೆ ಹೊಸ ನೋಟವನ್ನು ನೀಡುತ್ತದೆ, ಜೊತೆಗೆ 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಕಾಂಪ್ಯಾಕ್ಟ್ಎಸ್‌ಯುವಿಯು 2023ರ ಕಿಯಾ ಸೆಲ್ಟೋಸ್‌ನಿಂದ ಹೊಸ 160 PS 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ.
ನಿರೀಕ್ಷಿತ ಬೆಲೆ: 10.50 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಜನವರಿ 16
ಹುಂಡೈ ಅಲ್ಕಾಜರ್ ಫೇಸ್‌ಲಿಫ್ಟ್
ಹ್ಯುಂಡೈ ಅಲ್ಕಾಝರ್ ನ್ನು ನೋಡುವಾಗ ಇದು ಸಾಮಾನ್ಯವಾಗಿ 3-ಸಾಲಿನ ಕ್ರೆಟಾದಂತೆ ಕಾಣಬರುತ್ತದೆ. ಇದು ಸಹ 2024 ರಲ್ಲಿ ಫೇಸ್‌ಲಿಫ್ಟ್ ಅನ್ನು ಪಡೆಯಲು ಸಿದ್ಧವಾಗಿದೆ. ADAS ನ ಸೇರ್ಪಡೆಯೊಂದಿಗೆ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಪಡೆಯುವಾಗ, ಇದು ಇಂಟಿರೀಯರ್ ಮತ್ತು ಹೊರಗೆ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ನಾವು ನಿರೀಕ್ಷಿಸಬಹುದು. ಹ್ಯುಂಡೈ ಪ್ರಸ್ತುತ ಅಸ್ತಿತ್ವದಲ್ಲಿರುವ ಅಲ್ಕಾಝರ್ ಮೊಡೆಲ್‌ಗಳ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳನ್ನು ಫೇಸ್‌ಲಿಫ್ಟ್ ಆವೃತ್ತಿಯಲ್ಲಿಯು ಮುಂದುವರಿಸಲಿದೆ.
ನಿರೀಕ್ಷಿತ ಬೆಲೆ: 17 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಇನ್ನೂ ದೃಢಪಡಿಸಿಲ್ಲ
ಹುಂಡೈ ಟಕ್ಸನ್ ಫೇಸ್‌ಲಿಫ್ಟ್
ನಾಲ್ಕನೇ-ಪೀಳಿಗೆಯ ಹ್ಯುಂಡೈ ಟಕ್ಸನ್ ಅನ್ನು ಭಾರತದಲ್ಲಿ 2022 ರಲ್ಲಿಯೇ ಬಿಡುಗಡೆ ಮಾಡಲಾಯಿತು, ಅದರ ಜಾಗತಿಕ-ಆಧಾರಿತ ಆವೃತ್ತಿಯು ಈಗಾಗಲೇ 2023 ರ ಕೊನೆಯಲ್ಲಿ ಆಪ್‌ಡೇಟ್‌ಗಳನ್ನು ಪಡೆದಿದೆ. ಫೇಸ್‌ಲಿಫ್ಟೆಡ್ ಟಕ್ಸನ್ ಹೊರಭಾಗಕ್ಕೆ ಸೌಮ್ಯವಾದ ಸ್ಟೈಲಿಂಗ್ ಬದಲಾವಣೆಗಳನ್ನು ಪಡೆಯುತ್ತದೆ ಮತ್ತು ಸುಧಾರಿಸಿದ ಇಂಟಿರೀಯರ್ (ಕನೆಕ್ಟೆಡ್ ಸ್ಕ್ರೀನ್‌ಗಳ ಸೆಟಪ್ ಅನ್ನು ಒಳಗೊಂಡಿದೆ), ಈಗಾಗಲೇ ವೈಶಿಷ್ಟ್ಯ-ಲೋಡ್ ಮಾಡಲಾದ ಪ್ಯಾಕೇಜ್ ಆಗಿದೆ. ಇದು ಭಾರತೀಯ ಮಾರುಕಟ್ಟೆಗೆ ಬರುವಾಗ, ಈ ಪ್ರೀಮಿಯಂ ಎಸ್‌ಯುವಿ ಪ್ರಸ್ತುತ ಮೊಡೆಲ್‌ನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ನಿರೀಕ್ಷಿತ ಬೆಲೆ: 29.50 ಲಕ್ಷ ರೂ
ನಿರೀಕ್ಷಿತ ಬಿಡುಡೆ: 2024 ರ ದ್ವಿತೀಯಾರ್ಧ
ಹೊಸ ಹುಂಡೈ ಕೋನಾ ಎಲೆಕ್ಟ್ರಿಕ್
2023 ರ ಮೊದಲ ತ್ರೈಮಾಸಿಕದಲ್ಲಿ, ಎರಡನೇ ತಲೆಮಾರಿನ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಅನ್ನು ಅನಾವರಣಗೊಳಿಸಲಾಯಿತು, ಇದು ಪ್ರಸ್ತುತ ಭಾರತ-ಆಧಾರಿತ ಮಾಡೆಲ್‌ಗಿಂತ ಗಮನಾರ್ಹವಾಗಿ ದೊಡ್ಡದಾಗಿದೆ (ಮತ್ತು ಹಲವು ವಿಧಗಳಲ್ಲಿ ಉತ್ತಮವಾಗಿದೆ). ಇದು ಹುಂಡೈನ ಇತ್ತೀಚಿನ ವಿನ್ಯಾಸವು ದೂರದೃಷ್ಟಿಯನ್ನು ಹೊಂದಿದೆ ಮತ್ತು 377 ಕಿಮೀಗಳ WLTP-ರೇಟೆಡ್ ಮೈಲೇಜ್ ರೇಂಜ್‌ಗೆ ಉತ್ತಮವಾದ ಬೇಸ್-ಲೆವೆಲ್ 48.4 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
ನಿರೀಕ್ಷಿತ ಬೆಲೆ: 25 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಇನ್ನೂ ಘೋಷಣೆಯಾಗಿಲ್ಲ
ಹೊಸ ಹುಂಡೈ ಸಾಂಟಾ ಫೆ
2023 ರಲ್ಲಿ, ಹ್ಯುಂಡೈ ತನ್ನ ಪ್ರಮುಖ 3-ಸಾಲು ಎಸ್‌ಯುವಿಯಲ್ಲಿ ಸಾಂಟಾ ಫೆ ಎಂಬ ಹೆಸರಿನಿಂದ ಹೊಸ ಕಾರೊಂದನ್ನು ಜಾಗತಿಕತವಾಗಿ ಪರಿಚಯಿಸಿದೆ. ಇದರ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜಿಂಗ್ ಪ್ಯಾಡ್‌ಗಳು, ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು ಮತ್ತು ADAS ಅನ್ನು ಸಹ ಒಳಗೊಂಡಿದೆ. ಅಂತಾರಾಷ್ಟ್ರೀಯವಾಗಿ, ಇದು 2.5-ಲೀಟರ್ ಟರ್ಬೊ ಮತ್ತು ಹೈಬ್ರಿಡ್ ಪವರ್‌ಟ್ರೇನ್ ಒಳಗೊಂಡಂತೆ ಪೆಟ್ರೋಲ್ ಇಂಧನದ ಆಯ್ಕೆಯನ್ನು ಮಾತ್ರ ನೀಡಲಾಗುತ್ತಿದೆ. ಆದಾಗಿಯೂ, ಈ ದೈತ್ಯಾಕಾರದ ಎಸ್‌ಯುವಿ ನಮ್ಮ ದೇಶದ ಮಾರುಕಟ್ಟೆಗೆ ಬರುವ ಸಾಧ್ಯತೆ ತೀರ ಕಡಿಮೆ ಎನ್ನಬಹುದು.
ನಿರೀಕ್ಷಿತ ಬೆಲೆ: 50 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಇನ್ನೂ ಘೋಷಣೆಯಾಗಿಲ್ಲ
ಹುಂಡೈ ಅಯೋನಿಕ್ 5 N ಮತ್ತು/ಅಥವಾ ಹ್ಯುಂಡೈ ಅಯೋನಿಕ್ 6
2023 ರ ಆಟೋ ಎಕ್ಸ್‌ಪೋದಲ್ಲಿ ಭಾರತವು ಹ್ಯುಂಡೈ ಐಯೋನಿಕ್ 5 ಎಲೆಕ್ಟ್ರಿಕ್ ಕ್ರಾಸ್‌ಒವರ್ ಅನ್ನು ಸ್ಥಳೀಯವಾಗಿ ಜೋಡಿಸಲಾದ ಕೊಡುಗೆಯಾಗಿ ಪಡೆಯಿತು. ಆದರೆ ಅದೇ ವರ್ಷದ ಮಧ್ಯದಲ್ಲಿ, ಕೊರಿಯನ್ ಮಾರ್ಕ್ Ioniq 5 ನ ಪರ್ಫೊರ್ಮೆನ್ಸ್-ಕೇಂದ್ರಿತ N ಆವೃತ್ತಿಯನ್ನು ಬಹಿರಂಗಪಡಿಸಿತು, ಇದು 84 kWh ಬ್ಯಾಟರಿ ಪ್ಯಾಕ್ ಮತ್ತು 600 PS ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಬರುತ್ತದೆ.
ಹಾಪ್-ಅಪ್ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಕ್ರಾಸ್‌ಒವರ್ ಎಸ್‌ಯುವಿಯು ಅನಿಶ್ಚಿತ ಪಂತವಾಗಿದ್ದರೂ, ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲಾದ ಕಿಯಾ EV6 ಮತ್ತು Ioniq 5 ಗೆ ಸೆಡಾನ್ ಪರ್ಯಾಯವಾದ Ioniq 6 ಅನ್ನು ಪಡೆಯುವ ಸಾಮರ್ಥ್ಯವೂ ಇದೆ. ಹಿಂಬದಿ ಚಕ್ರಗಳ ಡ್ರೈವ್‌ನಿಂದ ಚಾಲಿತವಾಗುವ ಈ ಇವಿಯನ್ನು ಓಡಿಸಲು Ioniq 5 ನಿಂದ ಅದೇ 72.6 kWh ಬ್ಯಾಟರಿ ಪ್ಯಾಕ್ ಅನ್ನು ಇದರಲ್ಲಿಯೂ ನೀಡಬಹುದೆಂದು ನಾವು ನಿರೀಕ್ಷಿಸಬಹುದು, ಆದರೆ ಇದರ ನಯವಾದ ಆಕಾರದಿಂದಾಗಿ ಬಹುಶಃ ಹೆಚ್ಚು ಕ್ಲೈಮ್ ಮಾಡಿದ ರೇಂಜ್‌ನ್ನು ನಾವು ಕಾಣುತ್ತೇವೆ.
ನಿರೀಕ್ಷಿತ ಬೆಲೆ: ಐಯೋನಿಕ್ 5 ಎನ್ ದು ಇನ್ನೂ ಘೋಷಣೆಯಾಗಿಲ್ಲ, ಐಯೋನಿಕ್ 6 ದು ಸುಮಾರು 65 ಲಕ್ಷ ರೂ.
ನಿರೀಕ್ಷಿತ ಬಿಡುಗಡೆ: ಎರಡು ಕಾರುಗಳದ್ದು ಇನ್ನೂ ಘೋಷಣೆಯಾಗಿಲ್ಲ
ಟಾಟಾ
ಟಾಟಾ ಪಂಚ್ ಇವಿ
ಎಲೆಕ್ಟ್ರಿಕ್ ಟಾಟಾ ಪಂಚ್‌ನ ಯೋಜನೆಗಳು ಮೈಕ್ರೋ-ಎಸ್‌ಯುವಿಯಾಗಿರುವ ಪಂಚ್ ಬಿಡುಗಡೆಗೆ ಮುಂಚೆಯೇ ಜಾರಿಯಲ್ಲಿವೆ. ಆದರೆ 2023 ರಲ್ಲಿ ಟಾಟಾ ಪಂಚ್ EVಯ ಅನೇಕ ರಹಸ್ಯ ಫೋಟೋಗಳು ಹಲವು ಬಾರಿ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಇದು 2024 ರಲ್ಲಿ ರಿಫ್ರೆಶ್ ಮಾಡಿದ ನೆಕ್ಸಾನ್‌ನಂತೆಯೇ ಹೊಸ ಲುಕ್‌ನೊಂದಿಗೆ ಮಾರಾಟವಾಗಲಿದೆ ಮತ್ತು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ. ಪಂಚ್ EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ 500 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಟಾಟಾ ಹೇಳಿಕೊಂಡಿದೆ ಎನ್ನಲಾಗುತ್ತದೆ.
ನಿರೀಕ್ಷಿತ ಬೆಲೆ: 12 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: 2024 ರ ಜನವರಿ
ಟಾಟಾ ಪಂಚ್ ಫೇಸ್ ಲಿಫ್ಟ್
ಪ್ರಸ್ತುತ-ಮಾರುಕಟ್ಟೆಯಲ್ಲಿರುವ ಪಂಚ್‌ನ ಫೋಟೋವನ್ನು ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.
2021ರಲ್ಲಿ ಟಾಟಾ ಪಂಚ್ ಅನ್ನು ಮೈಕ್ರೋ ಎಸ್‌ಯುವಿಯಾಗಿ ಪರಿಚಯಿಸಲಾಯಿತು ಮತ್ತು ಇದು ಟಾಟಾ ನೆಕ್ಸಾನ್‌ಗಿಂತ ಕೆಳಗಿನ ಮೊಡೆಲ್ ಆಗಿ ಹೊಸ ಸೆಗ್ಮೆಂಟ್‌ನ್ನು ರೂಪಿಸುವಲ್ಲಿ ಯಶಸ್ವಿಯಾಯಿತು. ದೊಡ್ಡ ಟಚ್‌ಸ್ಕ್ರೀನ್ ಸೇರಿದಂತೆ ಕೆಲವು ವೈಶಿಷ್ಟ್ಯಗಳ ವರ್ಧನೆಗಳೊಂದಿಗೆ 2024 ರಲ್ಲಿ ಟಾಟಾ ತನ್ನ ಪಂಚ್‌ನ ಇಂಟಿರೀಯರ್ ಮತ್ತು ಹೊರಗೆ ಸೌಮ್ಯವಾದ ಬದಲಾವಣೆಯನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ. ಎಂಜಿನ್ ಮತ್ತು ಟ್ರಾನ್ಸ್ ಮಿಷನ್‌ನ ಗಮನಿಸುವಾಗ ಈ ಮೈಕ್ರೋ SUV ಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.
ನಿರೀಕ್ಷಿತ ಬೆಲೆ: ಇನ್ನೂ ಘೋಷಣೆಯಾಗಿಲ್ಲ
ನಿರೀಕ್ಷಿತ ಬಿಡುಗಡೆ: ಇನ್ನೂ ಘೋಷಣೆಯಾಗಿಲ್ಲ
ಟಾಟಾ ಕರ್ವ್ ಇವಿ
2024 ರಲ್ಲಿ ಆಗಮಿಸುವ Tata Curvv EV ಭಾರತೀಯ ಕಾರು ತಯಾರಕರಿಂದ ಸಿದ್ಧವಾಗುತ್ತಿರುವ ಎಲ್ಲಾ-ರೀತಿಯಲ್ಲೂ ಹೊಸ ಮಾಡೆಲ್ ಆಗಲಿದೆ. ಈ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಇವಿ ನಡುವೆ ಇರಿಸಲಾಗುತ್ತದೆ. ಇದು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ಟಚ್-ಬೇಸ್ಡ್ ಕ್ಲೈಮೇಟ್ ಕಂಟ್ರೋಲ್ ಮತ್ತು ADAS ನಂತಹ ಅನೇಕ ರೀತಿಯ ವೈಶಿಷ್ಟ್ಯಗಳನ್ನು ಪಡೆಯುತ್ತದೆ. Curvv EV ಯು ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯಬಹುದು ಮತ್ತು 500 ಕಿಮೀಯಷ್ಟು ರೇಂಜ್‌ನ ನೀಡಲು ನೆಕ್ಸಾನ್ EV ಗಿಂತ ಹೆಚ್ಚಿನ ಪರ್ಫೋರ್ಮೆನ್ಸ್‌ನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ನಿರೀಕ್ಷಿತ ಬೆಲೆ: 20 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಮಾರ್ಚ್ 2024
ಟಾಟಾ ಕರ್ವ್
ಟಾಟಾ Cuvv ಅನ್ನು ದಹನಕಾರಿ ಎಂಜಿನ್‌ಗಳೊಂದಿಗೂ ನೀಡಲಾಗುವುದು ಮತ್ತು EVಯ ಬಿಡುಗಡೆಯ ನಂತರ ಮಾರುಕಟ್ಟೆಗೆ ಆಗಮಿಸುತ್ತದೆ. ಇದು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದವುಗಳಿಗೆ ಪ್ರತಿಸ್ಪರ್ಧಿಯಾಗಿ ಎಸ್‌ಯುವಿ-ಕೂಪ್ ಮೊಡೆಲ್ ಆಗಿ ಕಿಕ್ಕಿರಿದ ಕಾಂಪ್ಯಾಕ್ಟ್ SUV ಸೆಗ್ಮೆಂಟ್‌ಗೆ ಟಾಟಾ ಪ್ರವೇಶವನ್ನು ಮಾಡಲಿದೆ. ಇದು ಡಿಜಿಟಲ್ ಡಿಸ್‌ಪ್ಲೇಗಳು ಮತ್ತು ADAS ಸೇರಿದಂತೆ Curvv EV ಯಂತೆಯೇ ಹೊಂದಿಸಲಾದ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.
ನಿರೀಕ್ಷಿತ ಬೆಲೆ: 10.50 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: 2024 ರ ಮಧ್ಯದಲ್ಲಿ
ಟಾಟಾ ನೆಕ್ಸನ್ ಡಾರ್ಕ್
ಪ್ರಸ್ತುತ-ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್‌ನ ಫೋಟೋವನ್ನು ಉದಾಹರಣೆಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗಿದೆ.
ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಈಗಾಗಲೆ ಬಿಡುಗಡೆಯಾಗಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ, ಆದರೆ ಅದರ ಬಿಡುಗಡೆಯ ಸಮಯದಲ್ಲಿ ಯಾವುದೇ ರೀತಿಯ ಡಾರ್ಕ್ ಆವೃತ್ತಿಯ ಬಗ್ಗೆ ಮಾಹಿತಿ ನೀಡಿರಲಿಲ್ಲ. ಆದರೆ ಇದು 2024 ರಲ್ಲಿ ಹೊರಬರಲಿದೆ. ಮೊದಲಿನಂತೆಯೇ, ನೆಕ್ಸಾನ್ ಡಾರ್ಕ್ ಆವೃತ್ತಿಯು ಕಪ್ಪು ಅಲಾಯ್ ಚಕ್ರಗಳು, ಗ್ರಿಲ್ ಮತ್ತು 'ಡಾರ್ಕ್' ಬ್ಯಾಡ್ಜ್‌ಗಳನ್ನು ಹೊಂದಿರುತ್ತದೆ ಮತ್ತು ಇದು ಸಾಮಾನ್ಯ ನೆಕ್ಸಾನ್‌ನಂತೆ, ಅದೇ ರೀತಿಯ ತಂತ್ರಜ್ಞಾನವನ್ನು ಮತ್ತು ಪವರ್‌ಟ್ರೇನ್ ಸೆಟ್‌ಗಳನ್ನು ಹೊಂದಿರಲಿದೆ.
ನಿರೀಕ್ಷಿತ ಬೆಲೆ: 11.30 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಇನ್ನೂ ಘೋಷಣೆಯಾಗಿಲ್ಲ
ಟಾಟಾ ಆಲ್ಟ್ರೋಜ್ ರೇಸರ್
2023 ರ ಆಟೋ ಎಕ್ಸ್‌ಪೋದಲ್ಲಿ, ಟಾಟಾ ಆಲ್ಟ್ರೊಜ್ ರೇಸರ್ ಎಂಬ ಆಲ್ಟ್ರೋಜ್‌ನ ಆಕ್ರಮಣಕಾರಿ ಆವೃತ್ತಿಯನ್ನು ಪ್ರದರ್ಶಿಸಿತು. ಇದು ಇಂಟಿರೀಯರ್ ಮತ್ತು ಹೊರಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದ್ದು, ಫೇಸ್‌ಲಿಫ್ಟೆಡ್ ನೆಕ್ಸಾನ್‌ನಲ್ಲಿ ಈಗ ನೀಡಲಾದ ಕೆಲವು ಹೊಸ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಮೂಲ-ನೆಕ್ಸಾನ್‌ನ 120 PS ಟರ್ಬೊ-ಪೆಟ್ರೋಲ್ ಎಂಜಿನ್ ಹೊರತುಪಡಿಸಿ, ಸ್ಟ್ಯಾಂಡರ್ಡ್ ಅಲ್ಟ್ರೋಜ್ ಮೇಲೆ ಯಾವುದೇ ಪ್ರಮುಖ ಯಾಂತ್ರಿಕ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ.
ನಿರೀಕ್ಷಿತ ಬೆಲೆ: 10 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: ಇನ್ನೂ ನಿರ್ಧರಿಸಿಲ್ಲ
ಟಾಟಾ ಹ್ಯಾರಿಯರ್ ಇವಿ
ಇತ್ತೀಚೆಗೆ ಬಿಡುಗಡೆಯಾದ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಶೀಘ್ರದಲ್ಲೇ ಹ್ಯಾರಿಯರ್ ಇವಿ ರೂಪದಲ್ಲಿ ಆಲ್-ಎಲೆಕ್ಟ್ರಿಕ್ ಆವೃತ್ತಿಯನ್ನು ಹೊಂದಲಿದೆ. ಇದು ಒಂದೇ ರೀತಿಯ ವಿನ್ಯಾಸದ ಥೀಮ್ ಮತ್ತು ಸೌಕರ್ಯಗಳ ಸೆಟ್‌ನೊಂದಿಗೆ ಮುಂದುವರಿಯುತ್ತದೆ ಆದರೆ ಬಹು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರುತ್ತದೆ, ಇದು 500 ಕಿಮೀಗಿಂತ ಹೆಚ್ಚಿನ ದೂರವನ್ನು ಕ್ರಮಿಸಲು ಇದು ಸಾಕಷ್ಟು ಉತ್ತಮವಾಗಿರುತ್ತದೆ. ಟಾಟಾ ಇದಕ್ಕೆ ಆಲ್-ವೀಲ್-ಡ್ರೈವ್ (AWD) ಆಯ್ಕೆಯನ್ನು ಸಹ ಒದಗಿಸುತ್ತದೆ.
ನಿರೀಕ್ಷಿತ ಬೆಲೆ: 30 ಲಕ್ಷ ರೂ
ನಿರೀಕ್ಷಿತ ಬಿಡುಗಡೆ: 2024 ರ ಕೊನೆಯಲ್ಲಿ