ಮಹೀಂದ್ರ ಬೊಲೆರೋ ನಿಯೋ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1493 ಸಿಸಿ |
ground clearance | 160 mm |
ಪವರ್ | 98.56 ಬಿಹೆಚ್ ಪಿ |
ಟಾರ್ಕ್ | 260 Nm |
ಆಸನ ಸಾಮರ್ಥ್ಯ | 7 |
ಡ್ರೈವ್ ಟೈಪ್ | ಹಿಂಬದಿ ವೀಲ್ |
- ಪಾರ್ಕಿಂಗ್ ಸೆನ್ಸಾರ್‌ಗಳು
- ಕ್ರುಯಸ್ ಕಂಟ್ರೋಲ್
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಬೊಲೆರೋ ನಿಯೋ ಇತ್ತೀಚಿನ ಅಪ್ಡೇಟ್
ಬೆಲೆ: ದೆಹಲಿಯಲ್ಲಿ ಬೊಲೆರೊ ನಿಯೊದ ಎಕ್ಸ್ ಶೋರೂಂ ಬೆಲೆ 9.64 ಲಕ್ಷ ರೂ.ನಿಂದ ಪ್ರಾರಂಭವಾಗಿ 12.15 ಲಕ್ಷ ರೂ.ವರೆಗೆ ಇರಲಿದೆ.
ವೇರಿಯೆಂಟ್‌ಗಳು: ಇದು N4, N8, N10, ಮತ್ತು N10(O) ಎಂಬ 4 ಆವೃತ್ತಿಗಳಲ್ಲಿ ಲಭ್ಯವಿದೆ.
ಬಣ್ಣದ ಆಯ್ಕೆಗಳು: ಇದು ನಾಪೋಲಿ ಬ್ಲ್ಯಾಕ್, ಮೆಜೆಸ್ಟಿಕ್ ಸಿಲ್ವರ್, ಹೈವೇ ರೆಡ್, ಪರ್ಲ್ ವೈಟ್, ಡೈಮಂಡ್ ವೈಟ್ ಮತ್ತು ರಾಕಿ ಬೀಜ್ ಎಂಬ 6 ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.
ಆಸನ ಸಾಮರ್ಥ್ಯ: ಬೊಲೆರೊ ನಿಯೊದಲ್ಲಿ 5 ಪ್ರಯಾಣಿಕರು ಕುಳಿತು ಪ್ರಯಾಣಿಸಬಹುದು.
ಎಂಜಿನ್ ಮತ್ತು ಟ್ರಾನ್ಸ್‌ಮಿಶನ್: ಇದು 1.5-ಲೀಟರ್ ಡೀಸೆಲ್ ಎಂಜಿನ್ (100 ಪಿಎಸ್/260 ಎನ್‌ಎಮ್) ನಿಂದ ನಡೆಸಲ್ಪಡುತ್ತಿದೆ, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಎನ್10 (ಒಪ್ಶನಲ್) ವೇರಿಯೆಂಟ್ ಯಾಂತ್ರಿಕ ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಹೊಂದಿದೆ.
ವೈಶಿಷ್ಟ್ಯಗಳು: ಪ್ರಮುಖ ವೈಶಿಷ್ಟ್ಯಗಳು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (N10 [O] ಮೊಡೆಲ್‌ಗೆ ಎಕ್ಸ್‌ಕ್ಲೂಸಿವ್ ಆಗಿ), ಕ್ರೂಸ್ ಕಂಟ್ರೋಲ್, ಎತ್ತರ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್ ಮತ್ತು ಕೀಲೆಸ್ ಪ್ರವೇಶವನ್ನು ಒಳಗೊಂಡಿದೆ.
ಸುರಕ್ಷತೆ: ಸುರಕ್ಷತಾ ವೈಶಿಷ್ಟ್ಯಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ರಿವರ್ಸ್ ಅಸಿಸ್ಟ್‌ನೊಂದಿಗೆ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ISOFIX ಚೈಲ್ಡ್ ಮೌಂಟ್‌ಗಳನ್ನು ಒಳಗೊಂಡಿದೆ.
ಪ್ರತಿಸ್ಪರ್ಧಿಗಳು: ಬೊಲೆರೊ ನಿಯೊವು ಮಾರುಕಟ್ಟೆಯಲ್ಲಿ ನಿಸ್ಸಾನ್ ಮ್ಯಾಗ್ನೈಟ್, ಕಿಯಾ ಸೋನೆಟ್, ರೆನಾಲ್ಟ್ ಕಿಗರ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ನಂತಹ ಮೊನೊಕೊಕ್ ಸಬ್-4ಎಮ್ ಎಸ್‌ಯುವಿಗಳಿಗೆ ರಗಡ್ ಆದ ಪರ್ಯಾಯವಾಗಿ ನಿಂತಿದೆ.
ಮಹೀಂದ್ರಾ ಬೊಲೆರೊ ನಿಯೊ ಪ್ಲಸ್: ಬೊಲೆರೊ ನಿಯೊ ಪ್ಲಸ್ ಅನ್ನು ಆಂಬ್ಯುಲೆನ್ಸ್ ವೇರಿಯೆಂಟ್ ಆಗಿ ಪರಿಚಯಿಸಲಾಗಿದೆ.
ಬೊಲೆರೊ neo ಎನ್4(ಬೇಸ್ ಮಾಡೆಲ್)1493 ಸಿಸಿ, ಮ್ಯಾನುಯಲ್, ಡೀಸಲ್, 17.29 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹9.95 ಲಕ್ಷ* | ನೋಡಿ ಏಪ್ರಿಲ್ offer | |
ಬೊಲೆರೊ neo ಎನ್81493 ಸಿಸಿ, ಮ್ಯಾನುಯಲ್, ಡೀಸಲ್, 17.29 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹10.64 ಲಕ್ಷ* | ನೋಡಿ ಏಪ್ರಿಲ್ offer | |
ಅಗ್ರ ಮಾರಾಟ ಬೊಲೆರೊ neo ಎನ್10 ಆರ್1493 ಸಿಸಿ, ಮ್ಯಾನುಯಲ್, ಡೀಸಲ್, 17.29 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹11.47 ಲಕ್ಷ* | ನೋಡಿ ಏಪ್ರಿಲ್ offer | |
ಬೊಲೆರೊ neo ಎನ್10 ಒಪ್ಶನ್(ಟಾಪ್ ಮೊಡೆಲ್)1493 ಸಿಸಿ, ಮ್ಯಾನುಯಲ್, ಡೀಸಲ್, 17.29 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹12.15 ಲಕ್ಷ* | ನೋಡಿ ಏಪ್ರಿಲ್ offer |
ಮಹೀಂದ್ರ ಬೊಲೆರೋ ನಿಯೋ ವಿಮರ್ಶೆ
Overview
ಟಿವಿಯು 300 ಪ್ರಮುಖ ಮೇಕ್ ಓವರ್ ನೊಂದಿಗೆ ಬೊಲೆರೋ ಕುಟುಂಬವನ್ನು ಸೇರಿಕೊಂಡಿದೆ ಇದು ಐತಿಹ್ಯದ ಹೆಸರನ್ನು ಹೊಂದಿರುವಷ್ಟು ಯೋಗ್ಯವಾಗಿದೆಯೇ?
ಬೊಲೆರೋ ತನ್ನ ನೈಜ ಸ್ವರೂಪದಲ್ಲಿ ಭಾರತಕ್ಕೆ ಎಸ್ ಯುವಿ ಆಗಿದೆ. ಇದು ಸಾಮರ್ಥ್ಯದಲ್ಲಿ ಎತ್ತರದಲ್ಲಿದ್ದು ನಿರ್ವಹಣೆ ಕಡಿಮೆಯಾಗಿದೆ.
ಆದಾಗ್ಯೂ, ಅದರ ಮೂಲ ಸ್ವಭಾವದಿಂದಾಗಿ ಇದು ಆಧುನಿಕ ಭಾರತೀಯ ಕುಟುಂಬಗಳಿಗೆ ಅಸಮರ್ಪಕವಾಗಿದೆ. ನಿಮಗೆ ಅದೇ ಬೊಲೆರೋ ಗಟ್ಟಿತನವನ್ನು ನೀಡಲು ಆದರೆ ಸ್ವೀಕಾರಾರ್ಹ ಕ್ಯಾಬಿನ್ ಅನುಭವದೊಂದಿಗೆ ಮಹೀಂದ್ರಾ ಟಿವಿಯು 300 ಅನ್ನು ಬೊಲೆರೋ ನಿಯೋ ಎಂದು ಮರುನಾಮಕರಣ ಮಾಡಿದೆ. ನಮ್ಮ ಅಭಿಪ್ರಾಯದ ಪ್ರಕಾರ ಇದನ್ನು 6 ವರ್ಷಗಳ ಹಿಂದೆಯೇ ಟಿವಿಯು ಅನ್ನು ಮೊದಲು ಲಾಂಚ್ ಮಾಡಿದಾಗಲೇ ಮಾಡಬೇಕಾಗಿತ್ತು.
ಆದರೂ, ಬೊಲೆರೋ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಅಪ್ ಡೇಟ್ ಹೊಸ ಹೆಸರನ್ನು ಮಾತ್ರ ತರುವುದಲ್ಲ, ಕಾಸ್ಮೆಟಿಕ್ ಮತ್ತು ಯಾಂತ್ರಿಕ ಸುಧಾರಣೆಗಳನ್ನೂ ತರುತ್ತದೆ. ಇದು ಸಾಧ್ಯವೇ?
ಎಕ್ಸ್‌ಟೀರಿಯರ್
ಅಂತಿಮವಾಗಿ, TUV300 ಗೆ ಆಪ್‌ಡೇಟ್‌ಗಳನ್ನು ನೀಡಲಾಗಿದೆ. ಇದರಲ್ಲಿ ಆಕ್ರಮಣಕಾರಿ ರೀತಿಯಲ್ಲಿ ಅಥವಾ ಭಯಂಕರವಾಗಿ ಕಾಣಲು ಪ್ರಯತ್ನಿಸುತ್ತಿಲ್ಲ, ಆದರೆ ಸರಳವಾಗಿದೆ. ವಾಸ್ತವವಾಗಿ, ಈ ಬಾರಿ ಬೊಲೆರೊ ನಿಯೊವನ್ನು ಸ್ನೇಹಪರವಾಗಿ ಕಾಣುವಂತೆ ಮಾಡಲು ಪ್ರಯತ್ನಗಳನ್ನು ಮಾಡಲಾಗಿದೆ. ಬಾನೆಟ್‌ನಿಂದ ಪ್ರಾರಂಭಿಸುವುದಾದರೆ, ಈ ಎಸ್‌ಯುವಿ ಕಡಿಮೆ ಬೆದರಿಸುವಂತೆ ಕಾಣಲು ಸಹಾಯ ಮಾಡಲು 20mm ಕಡಿಮೆ ಮಾಡಲಾಗಿದೆ. ಇದು ಕ್ಲಾಸಿಯಾಗಿ ಕಾಣುವ ಗ್ರಿಲ್, ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಉತ್ತಮವಾಗಿ ಕಾಣುವ ಫಾಗ್ ಲ್ಯಾಂಪ್‌ನಿಂದ ಸಹಾಯ ಮಾಡುತ್ತದೆ. ಹೆಡ್‌ಲ್ಯಾಂಪ್‌ಗಳು ಮೇಲ್ಭಾಗದಲ್ಲಿ ಪರಿಷ್ಕೃತ DRL ಅನ್ನು ಪಡೆಯುತ್ತವೆ ಮತ್ತು ಅವುಗಳ ಸ್ಥಿರವಾಗಿ ಬಾಗುವ ಸಾಮರ್ಥ್ಯಗಳನ್ನು ಉಳಿಸಿಕೊಳ್ಳುತ್ತವೆ.
ಬದಿಯಿಂದ ನೋಡುವಾಗ, ನೀವು ಗಮನಿಸದೇ ಇರುವ ಒಂದು ದೊಡ್ಡ ವ್ಯತ್ಯಾಸವಿದೆ. ಕ್ಯಾಬಿನ್‌ನ ಒಳಗೆ ಪ್ರವೇಶ/ಹೊರಬರುವಿಕೆಯನ್ನು ಸುಲಭಗೊಳಿಸಲು ಮತ್ತು ಗುರುತ್ವಾಕರ್ಷಣೆಯ ಕೇಂದ್ರವನ್ನು ಕಡಿಮೆ ಮಾಡಲು ಈ ಎಸ್‌ಯುವಿಯ ಎತ್ತರವನ್ನು 20mm ರಷ್ಟು ಕಡಿಮೆ ಮಾಡಲಾಗಿದೆ. ಆದಾಗಿಯೂ, ಇದು 1817mm ನಷ್ಟು ಎತ್ತರವನ್ನು ಹೊಂದಿದ್ದು, 1786mm ಎತ್ತರವಿರುವ ಟಾಟಾ ಸಫಾರಿಗಿಂತಲೂ ಇದು ಹೆಚ್ಚಿನದಾಗಿದೆ. ಚಕ್ರಗಳು 15-ಇಂಚಿನ ಅಲಾಯ್ ಆಗಿದ್ದು, 215/75 ರಬ್ಬರ್‌ನ ದಪ್ಪದ ಪದರವು ರಸ್ತೆಯಲ್ಲಿರುವ ಪ್ರತಿ ಗುಂಡಿಗಳಲ್ಲಿ ನಗುವಿನೊಂದಿಗೆ ಸಾಗುತ್ತದೆ. ಹೊಸದಾದ ಬೆಲ್ಟ್‌ಲೈನ್ ಕ್ಲಾಡಿಂಗ್ ಇದು ಬೊಲೆರೊ ಮತ್ತು ಡಿ-ಪಿಲ್ಲರ್ ನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ, ಅದು ಈಗ ದೇಹದ ಬಣ್ಣದಲ್ಲಿ ಇದನ್ನು ಫಿನಿಶ್ ಮಾಡಲಾಗಿದೆ. ಸೈಡ್ ಸ್ಟೆಪ್ ಮತ್ತು ರೂಫ್ ರೈಲ್‌ಗಳು ಸ್ಕ್ವೇರ್-ಇಶ್ ಸಿಲೂಯೆಟ್‌ಗೆ ಅಂತಿಮ ಎಸ್‌ಯುವಿ ಟಚ್‌ಗಳನ್ನು ಸೇರಿಸುತ್ತವೆ.
ಹಿಂಭಾಗದಲ್ಲಿ, ಸ್ಪಷ್ಟವಾದ ಟೈಲ್ ಲ್ಯಾಂಪ್‌ಗಳನ್ನು ಮತ್ತೆ ಕೆಂಪು ಬಣ್ಣಕ್ಕೆ ಮಾಡಲಾಗಿದೆ ಮತ್ತು ಸ್ಪೇರ್ ವೀಲ್ ಕವರ್ ಈ ಕಾರಿಗೆ ಹೊಸ ಗುರುತನ್ನು ನೀಡುತ್ತದೆ. ಒಟ್ಟಾರೆಯಾಗಿ, ಬದಲಾವಣೆಗಳು ಬೊಲೆರೊ ನಿಯೊವನ್ನು ಹೆಚ್ಚು ಆಧುನಿಕವಾಗಿ ಕಾಣುವಂತೆ ಮಾಡುತ್ತದೆ ಮತ್ತು ಹಲವು ರೀತಿಯ ಮೊಡೆಲ್‌ಗಳಿಂದ ಕಿಕ್ಕಿರಿದಂತಾಗಿರುವ ಕ್ರಾಸ್‌ಒವರ್ ವಿಭಾಗದಲ್ಲಿ ಹೆಚ್ಚು ವಿಶ್ಚಾಸಾರ್ಹವಾದದ್ದನ್ನು ಹುಡುಕುತ್ತಿರುವ ಬಹಳಷ್ಟು ಖರೀದಿದಾರರಲ್ಲಿ ಈ ಎಸ್‌ಯುವಿ ಆಸಕ್ತಿಯನ್ನು ಹುಟ್ಟುಹಾಕುತ್ತದೆ.
ಇಂಟೀರಿಯರ್
ನಿಯೋದ ಇಂಟಿರೀಯರ್‌ನಲ್ಲಿ ಒಂದು ನಿರ್ದಿಷ್ಟವಾದ ಮೋಡಿ ಇದೆ. ವಿಶಾಲವಾದ ಕ್ಯಾಬಿನ್, ಲೈಟ್ ಅಪ್ಹೋಲ್ಸ್‌ಟೆರಿ ಮತ್ತು ಸರಳವಾದ ಡ್ಯಾಶ್‌ಬೋರ್ಡ್ ಸರಳತೆಯ ಅಂಶವನ್ನು ಪರಿಚಯಿಸುತ್ತದೆ. ಮ್ಯಾನುಯಲ್ ಬಟನ್‌ಗಳು ಮತ್ತು ಕಂಟ್ರೋಲ್‌ಗಳನ್ನೆ ಹೆಚ್ಚಾಗಿ ಬಳಸಲಾಗಿದ್ದು, ಮತ್ತು ಟಚ್‌ಸ್ಕ್ರೀನ್ ಲೇಔಟ್‌ನ ಒಂದು ಭಾಗವಾಗಿದೆ ಅಷ್ಟೆ. ಇದರಲ್ಲಿ ಯಾವುದೇ ವಿಶೇಷತೆ ಅಡಗಿಲ್ಲ. ಹಾಗಾಗಿ ಹೊಸ ಜನರೇಶನ್‌ನ ಖರೀದಿದಾರರಿಗೆ ಇದು ಸ್ವಲ್ಪ ಬೇಸಿಕ್ ಆಗಿ ತೋರುತ್ತದೆಯಾದರೂ, ಈ ಸರಳತೆಯನ್ನು ಹೆಚ್ಚು ಸುಧಾರಿಸಲು ಖಂಡಿತವಾಗಿಯೂ ಮನವಿ ಇದೆ.
ಕಪ್ಪು ಕಾಂಟ್ರಾಸ್ಟ್ ಪ್ಯಾನೆಲ್‌ನ ಗುಣಮಟ್ಟ ಮತ್ತು ವಿನ್ಯಾಸವು ಉತ್ತಮವಾಗಿದೆ. ಆದರೆ ಉಳಿದ ಪ್ಲಾಸ್ಟಿಕ್‌ಗಳು ಆಕರ್ಷನೀಯವಲ್ಲದಿದ್ದರೂ ಪ್ರಯೋಜನಕಾರಿಯಾಗಿದೆ. ಸೀಟ್ ಫ್ಯಾಬ್ರಿಕ್ ಮತ್ತು ಡೋರ್ ಪ್ಯಾಡ್‌ಗಳಿಗೆ ಹೆಚ್ಚಿನ ಶ್ರಮ ನೀಡಲು ನಿರ್ಮಿಸಲಾಗಿದೆ ಎಂದು ಅನಿಸುತ್ತದೆ. ಆದರೆ ನೋಡಲು ಮತ್ತು ಅನುಭವಿಸಲು ಉತ್ತಮವಾಗಿದೆ. ಸೀಟ್‌ಗಳು ಆರಾಮದಾಯಕವಾಗಿರುತ್ತವೆ ಮತ್ತು ಮುಂಭಾಗದ ಚಾಲಕ ಮತ್ತು ಪ್ರಯಾಣಿಕರು ಪ್ರತ್ಯೇಕ ಮಧ್ಯದ ಆರ್ಮ್‌ರೆಸ್ಟ್‌ಗಳನ್ನು ಪಡೆಯುತ್ತಾರೆ. ಆದರೆ, ಡೋರ್ ಆರ್ಮ್ ರೆಸ್ಟ್ ಮತ್ತು ಮಧ್ಯದ ಆರ್ಮ್ ರೆಸ್ಟ್ ಮೇಲಿನ ಎತ್ತರ ಒಂದೇ ಆಗಿದ್ದರೆ ಚೆನ್ನಾಗಿರುತ್ತಿತ್ತು.
ಕ್ಯಾಬಿನ್ ನಲ್ಲಿ ನೀಡುವ ಸೌಕರ್ಯಗಳಲ್ಲಿ ಎಲ್ಲಾ ಬಾಗಿಲುಗಳಿಗೆ ದೊಡ್ಡ ಡೋರ್ ಪಾಕೆಟ್‌ಗಳು, 2 ಕಪ್ ಹೋಲ್ಡರ್‌ಗಳು ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಬಾಟಲಿ ಹೋಲ್ಡರ್ ಮತ್ತು ಎರಡು ಆಳವಿಲ್ಲದ ಕ್ಯೂಬಿ ಸ್ಪೇಸ್‌ಗಳನ್ನು ಸಹ ನೀಡಲಾಗುತ್ತದೆ. ಅದರೆ ಇದರ ಕುರಿತ ದೂರುಗಳು ಗ್ಲೋವ್ ಬಾಕ್ಸ್‌ನಿಂದ ಪ್ರಾರಂಭವಾಗುತ್ತವೆ, ಅದು ಸ್ವಲ್ಪ ಕಿರಿದಾಗಿದೆ ಮತ್ತು ಮೊಬೈಲ್ ಫೋನ್ ಸಂಗ್ರಹಣೆಗೆ ಯಾವುದೇ ಮೀಸಲಾದ ಜಾಗ ಇಲ್ಲ. ಅಲ್ಲದೆ, ಡ್ರೈವರ್ ಸೀಟ್‌ನ ಕೆಳಗೆ ಮತ್ತು ಟೈಲ್ ಗೇಟ್‌ನಲ್ಲಿನ ಸ್ಟೋರೇಜ್ ಅನ್ನು ತೆಗೆದುಹಾಕಲಾಗಿದೆ. ಮತ್ತು ಹಿಂಭಾಗದಲ್ಲಿ, ಎರಡನೇ ಸಾಲಿನ ಪ್ರಯಾಣಿಕರು ಆರ್ಮ್‌ರೆಸ್ಟ್‌ನಲ್ಲಿ ಕಪ್‌ಹೋಲ್ಡರ್‌ಗಳನ್ನು ಪಡೆಯುವುದಿಲ್ಲ. ನಾವು ಇದರಲ್ಲಿ ಇಷ್ಟಪಟ್ಟದ್ದು ಮುಂಭಾಗದ ಕ್ಯಾಬಿನ್‌ನ ಲೈಟ್‌ಗಳು, ಇವುಗಳನ್ನು ನಮಗೆ ಬೇಕಾದ ಆಂಗಲ್‌ಗೆ ಸರಿಹೊಂದಿಸಬಹುದು. ಆಗತ್ಯವಾದ ಜಾಣತನ! ವೈಶಿಷ್ಟ್ಯಗಳು
ಹೊಸ ಅಪ್‌ಡೇಟ್‌ನಲ್ಲಿ ಈ ಎಸ್‌ಯುವಿ ಥಾರ್‌ನ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮತ್ತು ಹೊಸ MID (ಮಲ್ಟಿ ಇನ್ಫೋರ್ಮೆಶನ್ ಡಿಸ್‌ಪ್ಲೇ) ಅನ್ನು ಪಡೆದುಕೊಂಡಿದೆ. ಇದರ ಹೊರತಾಗಿ, ನೀವು ಸ್ಟೀರಿಂಗ್ ವೀಲ್‌ನಲ್ಲಿ ಕಂಟ್ರೋಲ್‌ಗಳೊಂದಿಗೆ ಕ್ರೂಸ್ ಕಂಟ್ರೋಲ್‌ನ್ನು ಸಹ ಪಡೆಯುತ್ತೀರಿ. ಆದಾಗಿಯೂ, ಉತ್ತಮ ಖರೀದಿದಾರರ ಗಮನವನ್ನು ಸೆಳೆಯಲು ಬೊಲೆರೊದಲ್ಲಿ ಕೆಲವುದನ್ನು ಕಡಿತಗೊಳಿಸಲಾಗಿದೆ. ಲೆಥೆರೆಟ್ ಅಪ್ಹೋಲ್ಸ್‌ಟೆರಿ, ಡೋರ್ ಪ್ಯಾಡ್‌ಗಳ ಮೇಲೆ ಫ್ಯಾಬ್ರಿಕ್ ಕವರ್ ಮತ್ತು ಡ್ರೈವರ್ ಸೀಟ್‌ನ್ನು ಸೊಂಟದಿಂದ ಹೊಂದಾಣಿಕೆ ಮಾಡಬಹುದಾದ ವೈಶಿಷ್ಟ್ಯವು ಮಿಸ್ ಆಗಿದೆ. ಅದಕ್ಕಿಂತ ಹೆಚ್ಚಾಗಿ, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ನೀಡದೆ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಇದರ ವೈಶಿಷ್ಟ್ಯಗಳ ಪಟ್ಟಿಯಲ್ಲಿ 7-ಇಂಚಿನ ಟಚ್‌ಸ್ಕ್ರೀನ್, 6 ಸ್ಪೀಕರ್‌ಗಳು, ಮ್ಯಾನ್ಯುವಲ್ ಎಸಿ, ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಎಲ್ಲಾ 4 ಪವರ್ ವಿಂಡೋಗಳು ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ORVM ಗಳು (ಸೈಡ್ ಮಿರರ್) ಮತ್ತು ಹಿಂಭಾಗದ ವೈಪರ್ ಮತ್ತು ವಾಷರ್ ಅನ್ನು ಒಳಗೊಂಡಿದೆ. ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ರಿಯರ್ ಎಸಿ ವೆಂಟ್‌ಗಳು ಮತ್ತು ಹಿಂಬದಿ ಪಾರ್ಕಿಂಗ್ ಕ್ಯಾಮೆರಾದಂತಹ ಸೌಕರ್ಯಗಳನ್ನು ನೀಡುತ್ತಿದ್ದರೆ ಈ ಪಟ್ಟಿಗೆ ಇನ್ನಷ್ಟು ಮೌಲ್ಯಯುತಗೊಳಿಸಬಹುದಿತ್ತು.
ಎರಡನೇ ಸಾಲು
ಹಿಂಭಾಗದ ಸೀಟ್‌ನಲ್ಲಿ, ಮೂವರು ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಲು ಸಾಕಾಗುವಷ್ಟು ಅಗಲವಿದೆ. ಪಾದ, ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್ ಕೂಡ ಉತ್ತಮವಾಗಿದೆ. ಜೊತೆಗೆ ಇವುಗಳು ಈ ಸೆಗ್ಮೆಂಟ್‌ನಲ್ಲಿ ಹೆಚ್ಚು ಬೆಂಬಲ ನೀಡುವ ಸೀಟುಗಳಾಗಿವೆ. ಅದರೆ ಹಿಂಬದಿ ಸೀಟ್ ಪ್ರತ್ಯೇಕ ಚಾರ್ಜಿಂಗ್ ಪೋರ್ಟ್‌ಗಳನ್ನು ಇಲ್ಲಿ ಸೇರಿಸಬೇಕಾಗಿತ್ತು.
ಬೂಟ್ ಸ್ಪೇಸ್/ಜಂಪ್ ಸೀಟ್‌ಗಳು
ಜಂಪ್ ಸೀಟ್‌ಗಳು ಮಕ್ಕಳಿಗೆ ಅಥವಾ ಸರಾಸರಿ ತೂಕದ/ಎತ್ತರದ ವಯಸ್ಕರಿಗೆ ಮಾತ್ರ ಸೂಕ್ತವಾಗಿದೆ. ಅದರೆ ಇಲ್ಲಿ ಎಸಿ ವೆಂಟ್‌ಗಳಿಲ್ಲದಿದ್ದರೂ, ಗಾಳಿಗಾಗಿ ಎರಡನೇ ಸಾಲಿನ ಕಿಟಕಿಗಳನ್ನು ನೀವು ತೆರೆಯಬಹುದು. ಈ ಜಂಪ್ ಸೀಟ್‌ಗಳು ಸೀಟ್‌ಬೆಲ್ಟ್ ಮತ್ತು ಹೆಡ್‌ರೆಸ್ಟ್‌ಗಳನ್ನು ಹೊಂದಿರುವುದಿಲ್ಲ. ಇದರ ಸವಾರಿ ಗುಣಮಟ್ಟವನ್ನು ಗಮನಿಸುವಾಗ, ಈ ಸೀಟ್‌ನಲ್ಲಿ ಪ್ರಯಾಣಿಸುವವರ ಆನುಭವ ಯಾವತ್ತು ಆರಾಮದಾಯಕವಾಗಿರುವುದಿಲ್ಲ. ಹಾಗೆಯೆ ಈ ಸೀಟ್‌ಗಳನ್ನು ಮಡಚಿದಾಗ ನೀವು ಸುಮಾರು 384 ಲೀಟರ್ ನಷ್ಟು ಬೂಟ್ ಸ್ಪೇಸ್ ಅನ್ನು ಆನಂದಿಸಬಹುದು.
ಸುರಕ್ಷತೆ
ಸುರಕ್ಷತೆಯ ದೃಷ್ಟಿಯಿಂದ, ನೀವು EBD ಜೊತೆಗೆ ABS, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಕಾರ್ನರ್ ಬ್ರೇಕಿಂಗ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿರುವ ಯೋಗ್ಯವಾದ ಸೆಟ್ ಅನ್ನು ಪಡೆಯುತ್ತೀರಿ, ಆದರೆ ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಟಾಪ್ ವೇರಿಯೆಂಟ್ ಆಗಿರುವ N10 ನಲ್ಲಿ ಲಭ್ಯವಿದೆ.
ಕಾರ್ಯಕ್ಷಮತೆ
ಬೊಲೆರೊ ನಿಯೊ ತನ್ನ ಮೊದಲ ಮೆಕ್ಯಾನಿಕಲ್ ನವೀಕರಣವನ್ನು ಎಂಜಿನ್ ರಿಟ್ಯೂನ್ ರೂಪದಲ್ಲಿ ಪಡೆದುಕೊಂಡಿದೆ. 1.5-ಲೀಟರ್ ಡೀಸೆಲ್ ಎಂಜಿನ್ ಈಗ 100PS ಪವರ್ ಮತ್ತು 260Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಅಂಕಿಅಂಶಗಳು ಮೊದಲಿಗಿಂತೇನು ಉತ್ತಮವಾಗಿಲ್ಲ, ಆದರೆ ಇದು ಬೊಲೆರೊಗಿಂತ 24PS ಮತ್ತು 50Nm ಹೆಚ್ಚಿದೆ. ಮತ್ತು ಈ ಅಂಕಿ ಆಂಶಗಳು ಹೆಚ್ಚು ಶಾಂತ ಮತ್ತು ಪ್ರಯತ್ನವಿಲ್ಲದ ಡ್ರೈವ್‌ಗೆ ಸಹಕಾರಿಯಾಗಿದೆ. ಕಡಿಮೆ ವೇಗದಲ್ಲಿ ಸಾಕಷ್ಟು ಟಾರ್ಕ್ ಇದೆ, ಈ 1.5 ಟನ್‌ನ ಎಸ್‌ಯುವಿಯನ್ನು ಆಕರ್ಷಕವಾಗಿ ಸಾಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ಈ ಇಂಜಿನ್ ಹೆಚ್ಚು ಶಕ್ತಿಯನ್ನು ನೀಡುತ್ತದೆಯಾದ್ದರಿಂದ, ಬೊಲೆರೊ ನಿಯೊವು ಬೊಲೆರೊಗಿಂತ ಹೆಚ್ಚು ಸುಲಭವಾಗಿ ವೇಗವನ್ನು ಹೆಚ್ಚಿಸುತ್ತದೆ.
ನೂರಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣ ಮಾಡುವುದು ಶಾಂತವಾಗಿರುತ್ತದೆ ಮತ್ತು ಇದು ಹೆಚ್ಚಿನ ವೇಗದ ಓವರ್‌ಟೇಕ್‌ಗಳಲ್ಲಿ ಹೆಚ್ಚು ಸೌಂಡ್ ಮಾಡುವುದಿಲ್ಲ. ಮತ್ತು ನೀವು ಹೆಚ್ಚಿನ ದಕ್ಷತೆಯನ್ನು ಬಯಸಿದರೆ, ಇಕೋ ಮೋಡ್ ಮತ್ತು ಆಟೋ ಸ್ಟಾರ್ಟ್/ಸ್ಟಾಪ್ ಕೂಡ ಇದೆ. 5-ಸ್ಪೀಡ್ ಟ್ರಾನ್ಸ್‌ಮಿಷನ್ ಸ್ಲಾಟ್ ಮಾಡಲು ಸುಲಭವಾಗಿದೆ ಮತ್ತು ಕ್ಲಚ್ ತುಂಬಾ ಹಗುರವಾಗಿರುತ್ತದೆ. ಇದರಿಂದಾಗಿ ನಗರ ಪ್ರಯಾಣವನ್ನು ಸ್ನೇಹಪರವನ್ನಾಗಿ ಮಾಡುತ್ತದೆ.
TUV300 ಯಲ್ಲಿ ಮಾಡಿದ ಮತ್ತೊಂದು ಯಾಂತ್ರಿಕ ಬದಲಾವಣೆಯು ಹಿಂಭಾಗದ ವ್ಯತ್ಯಾಸದಲ್ಲಿದೆ. ಇದು ಇನ್ನೂ ಹಿಂಬದಿ-ವೀಲ್ ಡ್ರೈವ್‌ನ ಎಸ್‌ಯುವಿ ಆಗಿದೆ. ಆದರೆ ಈಗ ಟಾಪ್ ವೇರಿಯೆಂಟ್ N10 (O) ನಲ್ಲಿ ಮಲ್ಟಿ ಟೆರೈನ್ ಟೆಕ್ನಾಲಜಿ (MMT) ಅನ್ನು ಪಡೆಯುತ್ತದೆ. ಇದು ಯಾಂತ್ರಿಕ ಲಾಕಿಂಗ್ ಡಿಫರೆನ್ಷಿಯಲ್ ಆಗಿದ್ದು, ಹಿಂದಿನ ಚಕ್ರದ ಚಕ್ರವು ಎಳೆತವನ್ನು ಕಳೆದುಕೊಂಡಾಗ ಅದನ್ನು ಗ್ರಹಿಸುತ್ತದೆ. ಮತ್ತು ಇದು ಸಂಭವಿಸಿದಾಗ, ಸ್ಲಿಪ್ ಆಗುವ ಚಕ್ರವನ್ನು ಡಿಫರೆನ್ಷಿಯಲ್ ಲಾಕ್ ಮಾಡುತ್ತದೆ ಮತ್ತು ಹೆಚ್ಚು ಎಳೆತದೊಂದಿಗೆ ಹೆಚ್ಚು ಟಾರ್ಕ್ ಅನ್ನು ಕಳುಹಿಸುತ್ತದೆ. ಹಾಗೆಯೇ ಇಳಿಜಾರು ಪರಿಸ್ಥಿತಿಯಿಂದ ಹೆಚ್ಚು ಸುಲಭವಾಗಿ ಹೊರಬರಲು ನಿಮಗೆ ಸಹಾಯ ಮಾಡುತ್ತದೆ. ಇದು ಒಂದು ಮೋಡಿಯಂತೆ ಕೆಲಸ ಮಾಡುತ್ತದೆ.
ರೈಡ್ ಅಂಡ್ ಹ್ಯಾಂಡಲಿಂಗ್
ಹೆಚ್ಚಿನ ವೇಗದಲ್ಲಿ ನಿಮಗೆ ಉತ್ತಮ ಸ್ಥಿರತೆಯನ್ನು ನೀಡಲು ಸಸ್ಪೆನ್ಸನ್ ನನ್ನು ಸುಧಾರಿಸಲಾಗಿದೆ. ಅದಾಗಿಯೂ ಸಹ, ಇದು ಋಣಾತ್ಮಕ ರೀತಿಯಲ್ಲಿ ಸವಾರಿಯ ಮೇಲೆ ಪ್ರಭಾವ ಬೀರುತ್ತಿದೆ. ಸಸ್ಪೆನ್ಸನ್ ನಲ್ಲಿ ಒಂದು ದೃಢತೆ ಇದೆ, ಇದು ಲೈಟ್ ಲೋಡ್‌ನಲ್ಲಿ, ಕ್ಯಾಬಿನ್‌ನಲ್ಲಿ ಅನುಭವವಾಗುತ್ತದೆ. ಸ್ಪೀಡ್ ಬ್ರೇಕರ್‌ಗಳು ಅಥವಾ ರಸ್ತೆಯ ಉಬ್ಬುಗಳ ಮೇಲೆ ಕ್ಯಾಬಿನ್‌ನ ಹಿಂಭಾಗದಲ್ಲಿ ಸ್ವಲ್ಪಮಟ್ಟಿಗೆ ಕಂಪಿಸುತ್ತದೆ. ಇದಕ್ಕೆ ತ್ವರಿತ ಪರಿಹಾರವೆಂದರೆ ಈ ಎಸ್‌ಯುವಿಯನ್ನು ನಿಧಾನಗೊಳಿಸದಿರುವುದು. ಆ ವೇಗದೊಂದಿಗೆ ಇವುಗಳ ಮೇಲೆ ಹೋಗಿ ಮತ್ತು ನಿಯೋ ಅವುಗಳ ಮೇಲೆ ಸುಗಮವಾಗಿ ಸಾಗುತ್ತದೆ.
ಇನ್ನೊಂದು ಬದಿಯಲ್ಲಿ, ಗಟ್ಟಿಯಾದ ಸ್ಪ್ರಿಂಗ್‌ಗಳು ನಿಯೋಗೆ ಉತ್ತಮ ನಿರ್ವಹಣೆಯ ಗುಣಲಕ್ಷಣಗಳನ್ನು ನೀಡಿವೆ. ಗುರುತ್ವಾಕರ್ಷಣೆಯ ಕೆಳಗಿನ ಸೆಂಟರ್‌ನೊಂದಿಗೆ ಸಂಯೋಜಿಸಲ್ಪಟ್ಟು, ಇದು ಅದರ ತೂಕವನ್ನು ಉತ್ತಮವಾಗಿ ನಿರ್ವಹಿಸುತ್ತದೆ ಮತ್ತು ಹೆಚ್ಚಿನ ವೇಗದ ಲೇನ್ ಬದಲಾವಣೆಗಳು ಮತ್ತು ರಸ್ತೆಯ ಕಾರ್ನರ್‌ಗಳಲ್ಲಿ ಹೆಚ್ಚು ಸ್ಥಿರವಾಗಿರುತ್ತದೆ. ಬಾಡಿ ರೋಲ್ ಆಗುವ ಸಮಸ್ಯೆ ಹಾಗೇ ಇದೆ, ಆದರೆ ಮೊದಲಿಗಿಂತ ಈಗ ಕಡಿಮೆ.
ವರ್ಡಿಕ್ಟ್
TUV300 ಗೆ ಹೊಸ ಹೆಸರು ನೀಡಿದ್ದು ಮಾತ್ರವಲ್ಲದೆ ಹೊಸ ವ್ಯಕ್ತಿತ್ವವನ್ನೂ ನೀಡಲಾಗಿದೆ. ಆದರೆ ಇದರಲ್ಲಿ ಕೆಲವು ನಿಮಗೆ ಇಷ್ಟವಾಗಬಹುದು. ಆದರೆ ಇದು ಯಾವತ್ತು ನಿಮಗೆ ಪ್ರೀಮಿಯಂ ಕ್ಯಾಬಿನ್‌ನ ಅನುಭವವನ್ನು ನೀಡಲು ಪ್ರಯತ್ನಿಸುತ್ತಿಲ್ಲ, ಯಾವುದು ಒಳ್ಳೆಯದು ಎಂಬುದರ ಮೇಲೆ ಕೇಂದ್ರೀಕರಿಸುವ ಬದಲಿಗೆ ಪ್ರಯಾಣಿಕರನ್ನು ಆರಾಮದಾಯಕವಾಗಿಸಲು ಸಾಕಷ್ಟು ಸ್ಥಳಾವಕಾಶ ಮತ್ತು ಸೌಕರ್ಯಗಳೊಂದಿಗೆ ಸರಳ ಮತ್ತು ಸಮರ್ಥ ಎಸ್‌ಯುವಿವಾಗಿದೆ. ಜೊತೆಗೆ, ಲಾಕಿಂಗ್ ರಿಯರ್ ಡಿಫರೆನ್ಷಿಯಲ್ ಇದು ಒರಟು ರಸ್ತೆಗಳಲ್ಲಿ ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ.
ಬೊಲೆರೊ ನಿಯೋ |
ಬೊಲೆರೊ |
N4 - 8.48 ಲಕ್ಷ ರೂ |
B4 - 8.62 ಲಕ್ಷ ರೂ |
N8 - 9.74 ಲಕ್ಷ ರೂ |
B6 - 9.36 ಲಕ್ಷ ರೂ |
N10 - 10 ಲಕ್ಷ ರೂ |
B6 (O) - 9.61 ಲಕ್ಷ ರೂ |
N10 (O)* - ಘೋಷಿಸಲಾಗಿಲ್ಲ |
ಇದರಲ್ಲಿ ಯಂತ್ರಶಾಸ್ತ್ರ ಮಾತ್ರವಲ್ಲ, ಅರ್ಥಶಾಸ್ತ್ರವೂ ಸಹ ಬಹಳಷ್ಟು ಅರ್ಥವನ್ನು ನೀಡುತ್ತದೆ. ಬೊಲೆರೊಗಿಂತ ಆರಂಭಿಕ ಬೆಲೆ ಕಡಿಮೆ ಮತ್ತು ಟಾಪ್ ವೇರಿಯಂಟ್ ಸುಮಾರು ರೂ 40,000 ಹೆಚ್ಚು ಬೆಲೆಯೊಂದಿಗೆ, ನಿಯೋ ಬೆಲೆಯು ಅದರ ವೈಶಿಷ್ಟ್ಯಗಳಿಗೆ ನಂಬಲಾಗದ ಮೌಲ್ಯವನ್ನು ಅನುಭವಿಸುತ್ತದೆ. MMT ಅನ್ನು ಪಡೆಯುವ ಟಾಪ್ ಎಂಡ್ ವೇರಿಯೆಂಟ್ N10 (O) ನ ಬೆಲೆ ಇನ್ನೂ ಹೊರಬಂದಿಲ್ಲ. ಇದರ ಹೊರತಾಗಿ, ಪ್ರತಿ ಬಳಕೆಯ ಸಂದರ್ಭದಲ್ಲೂ ಬೊಲೆರೊಕ್ಕಿಂತ ನಿಯೋವನ್ನು ಆಯ್ಕೆಮಾಡುವುದು ನಿಜವಾಗಲೂ ಅರ್ಥಪೂರ್ಣವಾಗಿದೆ. ಮತ್ತು ಇದು ಗಟ್ಟಿಯಾದ ಸವಾರಿಯ ಗುಣಮಟ್ಟವನ್ನು ಹೊಂದಿಲ್ಲದಿದ್ದರೂ, ಬೊಲೆರೊದಷ್ಟು ಸಾಮರ್ಥ್ಯದ ಅಗತ್ಯವಿರುವ ಮತ್ತು ಅದಕ್ಕಿಂತ ಹೆಚ್ಚಿನ ಆರಾಮದಾಯಕವಾದ ಪ್ಯಾಕೇಜ್‌ನಲ್ಲಿರುವ ಕುಟುಂಬಕ್ಕೆ ಇದನ್ನು ನಾವು ಶಿಫಾರಸು ಮಾಡುತ್ತೆವೆ. ಬೊಲೆರೊ ಅಂತಿಮವಾಗಿ ಹೆಮ್ಮೆಪಡಬಹುದಾದ ಉತ್ತರಾಧಿಕಾರಿಯನ್ನು ಪಡೆದಿದೆ.
ಮಹೀಂದ್ರ ಬೊಲೆರೋ ನಿಯೋ
- ನಾವು ಇಷ್ಟಪಡುವ ವಿಷಯಗಳು
- ನಾವು ಇಷ್ಟಪಡದ ವಿಷಯಗಳು
- ಎತ್ತರದ ಕುಳಿತುಕೊಳ್ಳುವ ಪೊಸಿಷನ್ ಮತ್ತು ಉತ್ತಮ ವಿಸಿಬಿಲಿಟಿ.
- ಟಾರ್ಕಿ ಎಂಜಿನ್ ಮತ್ತು ಸುಲಭ ಸಿಟಿ ಡ್ರೈವ್.
- ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್.
- ಲ್ಯಾಡರ್ ಫ್ರೇಮ್ ಚಾಸಿಸ್, ರಿಯರ್ ವೀಲ್ ಡ್ರೈವ್ ಮತ್ತು ಲಾಕಿಂಗ್ ರಿಯರ್ ಡಿಫರೆನ್ಷಿಯಲ್ನೊಂದಿಗೆ ಅತ್ಯುತ್ತಮ ಆಫ್ ರೋಡ್ ಸಾಮರ್ಥ್ಯ.
- ಕ್ಯಾಬಿನ್ ಜಾಗ.
- ರೈಡ್ ಗುಣಮಟ್ಟ ಸ್ವಲ್ಪ ಗಟ್ಟಿ.
- ಹಿಂಬದಿಯ ಕ್ಯಾಮೆರಾ ಮತ್ತು ಆಂಡ್ರಾಯ್ಡ್ ಅಟೋ / ಆಪಲ್ ಕಾರ್ ಪ್ಲೇ ನಂತಹ ಕೆಲವು ಪ್ರಮುಖ ವೈಶಿಷ್ಟ್ಯಗಳು ಕಾಣೆಯಾಗಿವೆ.
- ಸರಾಸರಿಯ ಕ್ಯಾಬಿನ್ ಗುಣಮಟ್ಟ.
- ಕೊನೆಯ ಸಾಲಿನ ಜಂಪ್ ಸೀಟುಗಳು ವಯಸ್ಕರಿಗೆ ಸೂಕ್ತವಲ್ಲ ಮತ್ತು ಆರಾಮದಾಯಕವಲ್ಲ.
ಮಹೀಂದ್ರ ಬೊಲೆರೋ ನಿಯೋ comparison with similar cars
ಮಹೀಂದ್ರ ಬೊಲೆರೋ ನಿಯೋ Rs.9.95 - 12.15 ಲಕ್ಷ* | ಮಹೀಂದ್ರ ಬೊಲೆರೊ Rs.9.79 - 10.91 ಲಕ್ಷ* | ಮಾರುತಿ ಎರ್ಟಿಗಾ Rs.8.96 - 13.26 ಲಕ್ಷ* | ಮಹೀಂದ್ರ ಬೊಲೆರೋ ನಿಯೋ ಪ್ಲಸ್ Rs.11.39 - 12.49 ಲಕ್ಷ* | ಟಾಟಾ ನೆಕ್ಸಾನ್ Rs.8 - 15.60 ಲಕ್ಷ* | ಮಾರುತಿ ಎಕ್ಸ್‌ಎಲ್ 6 Rs.11.84 - 14.87 ಲಕ್ಷ* | ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ Rs.7.99 - 15.56 ಲಕ್ಷ* | ಮಾರುತಿ ಜಿಮ್ನಿ Rs.12.76 - 14.96 ಲಕ್ಷ* |
Rating213 ವಿರ್ಮಶೆಗಳು | Rating305 ವಿರ್ಮಶೆಗಳು | Rating736 ವಿರ್ಮಶೆಗಳು | Rating40 ವಿರ್ಮಶೆಗಳು | Rating696 ವಿರ್ಮಶೆಗಳು | Rating273 ವಿರ್ಮಶೆಗಳು | Rating278 ವಿರ್ಮಶೆಗಳು | Rating386 ವಿರ್ಮಶೆಗಳು |
Transmissionಮ್ಯಾನುಯಲ್ | Transmissionಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ |
Engine1493 cc | Engine1493 cc | Engine1462 cc | Engine2184 cc | Engine1199 cc - 1497 cc | Engine1462 cc | Engine1197 cc - 1498 cc | Engine1462 cc |
Fuel Typeಡೀಸಲ್ | Fuel Typeಡೀಸಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ |
Power98.56 ಬಿಹೆಚ್ ಪಿ | Power74.96 ಬಿಹೆಚ್ ಪಿ | Power86.63 - 101.64 ಬಿಹೆಚ್ ಪಿ | Power118.35 ಬಿಹೆಚ್ ಪಿ | Power99 - 118.27 ಬಿಹೆಚ್ ಪಿ | Power86.63 - 101.64 ಬಿಹೆಚ್ ಪಿ | Power109.96 - 128.73 ಬಿಹೆಚ್ ಪಿ | Power103 ಬಿಹೆಚ್ ಪಿ |
Mileage17.29 ಕೆಎಂಪಿಎಲ್ | Mileage16 ಕೆಎಂಪಿಎಲ್ | Mileage20.3 ಗೆ 20.51 ಕೆಎಂಪಿಎಲ್ | Mileage14 ಕೆಎಂಪಿಎಲ್ | Mileage17.01 ಗೆ 24.08 ಕೆಎಂಪಿಎಲ್ | Mileage20.27 ಗೆ 20.97 ಕೆಎಂಪಿಎಲ್ | Mileage20.6 ಕೆಎಂಪಿಎಲ್ | Mileage16.39 ಗೆ 16.94 ಕೆಎಂಪಿಎಲ್ |
Airbags2 | Airbags2 | Airbags2-4 | Airbags2 | Airbags6 | Airbags4 | Airbags6 | Airbags6 |
GNCAP Safety Ratings1 Star | GNCAP Safety Ratings- | GNCAP Safety Ratings- | GNCAP Safety Ratings- | GNCAP Safety Ratings- | GNCAP Safety Ratings3 Star | GNCAP Safety Ratings5 Star | GNCAP Safety Ratings3 Star |
Currently Viewing | ಬೊಲೆರೋ ನಿಯೋ vs ಬೊಲೆರೊ | ಬೊಲೆರೋ ನಿಯೋ vs ಎರ್ಟಿಗಾ | ಬೊಲೆರೋ ನಿಯೋ vs ಬೊಲೆರೋ ನಿಯೋ ಪ್ಲಸ್ | ಬೊಲೆರೋ ನಿಯೋ vs ನೆಕ್ಸಾನ್ | ಬೊಲೆರೋ ನಿಯೋ vs ಎಕ್ಸ್‌ಎಲ್ 6 | ಬೊಲೆರೋ ನಿಯೋ vs ಎಕ್ಸ್ ಯುವಿ 3ಎಕ್ಸ್ ಒ | ಬೊಲೆರೋ ನಿಯೋ vs ಜಿಮ್ನಿ |
ಮಹೀಂದ್ರ ಬೊಲೆರೋ ನಿಯೋ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್
ಬುಕಿಂಗ್ ಟ್ರೆಂಡ್‌ಗಳ ಪ್ರಕಾರ, XEV 9e ಗೆ ಶೇ. 59 ರಷ್ಟು ಮತ್ತು BE 6 ಗೆ ಶೇ. 41 ರಷ್ಟು ಬೇಡಿಕೆಯಿದ್ದು, ಎರಡು ಮೊಡೆಲ್‌ಗಳು ಸುಮಾರು ಆರು ತಿಂಗಳ ವೈಟಿಂಗ್ ಪಿರೇಡ್‌ಅನ್ನು ಹೊಂದಿದೆ.
ವಯಸ್ಕ ಮತ್ತು ಸಣ್ಣ ಪ್ರಾಯದ ಪ್ರಯಾಣಿಕರ ರಕ್ಷಣೆಯ ಪರೀಕ್ಷೆಗಳ ನಂತರ, ಫುಟ್‌ವೆಲ್ ಮತ್ತು ಬಾಡಿಶೆಲ್ ಸಮಗ್ರತೆಯನ್ನು ಅಸ್ಥಿರವೆಂದು ರೇಟ್ ಮಾಡಲಾಗಿದೆ
ಎಕ್ಸ್‌ಟ್ರಾ ಸೀಟ್ ಗಳ ಜೊತೆಗೆ, ಬೊಲೆರೊ ನಿಯೋ ಪ್ಲಸ್ ದೊಡ್ಡ ಟಚ್‌ಸ್ಕ್ರೀನ್ ಮತ್ತು ದೊಡ್ಡ ಡೀಸೆಲ್ ಎಂಜಿನ್ ಅನ್ನು ಕೂಡ ನೀಡುತ್ತಿದೆ
ರೆಗುಲರ್ ಸ್ಕಾರ್ಪಿಯೊ ಸುಧಾರಣೆಗೆ ಸಾಕಷ್ಟು ಅವಕಾಶವನ್ನು ಹೊಂದಿದೆ, ಆದರೆ ಈ ಕಾರಿನ ಲುಕ್ ಇದರ ಲಾಜಿಕ್&zwnj...
ಹೊಸ ಹೆಸರು, ಬೋಲ್ಡ್ ಆದ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳ ಸಂಪೂರ್ಣ ಗೊಂಚಲು ಈ ಎಸ್‌ಯುವಿಯನ್ನು ಬಹಳ ಆಕರ್ಷ...
2024ರ ಆಪ್ಡೇಟ್ಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು, ಬಣ್ಣಗಳು ಮತ್ತು ಹೊಸ ಆಸನ ವಿನ್ಯಾಸವನ್ನು ತರುವು...
ಎಲ್ಲಾ ಹೊಸ XUV300, ಮಹೀಂದ್ರಾನ ಉಪ -4 ಮೀಟರ್ ಎಸ್ಯುವಿ, ಅದರ ಹಿರಿಯ ಸಹೋದರ XUV 500 ಮಾದರಿಯಂತೆ, ಪ್ಯಾಚ್ ಮಾಡ...
ಮಹೀಂದ್ರ ಬೊಲೆರೋ ನಿಯೋ ಬಳಕೆದಾರರ ವಿಮರ್ಶೆಗಳು
- All (213)
- Looks (62)
- Comfort (85)
- Mileage (41)
- Engine (22)
- Interior (20)
- Space (20)
- Price (43)
- ಹೆಚ್ಚು ...
- ಇತ್ತೀಚಿನ
- ಸಹಾಯಕವಾಗಿದೆಯೆ
- Critical
- New Car Mahindra
Nice car worth it to buy this car good performance and features and full comfortable car cruise control is working properly and music system is also good in this car I am really prefer to buy this car a new car buy his price range in suv mahindra is the best car maker company of india thank u mahindra itne accha looks k sth kaam budget main aisi car launch kari india main head off.ಮತ್ತಷ್ಟು ಓದು
- Very Super Car And Good Milage Good Streain g Sy
More selling car the best choice for U.P People. And very comfortable and very excellent The car is praised for its ease of handling in city traffic and on highways, The tall-boy design might not appeal to everyone, potentially detracting from the overall appearance Driving experience in the city is good, good commanding position due to high seating. Driving on the expressway at 100-120km/hr the engine responds very well. Post 120Km/hr it does not give a good feel and also ot give that confidence due to the car's aerodynamics.ಮತ್ತಷ್ಟು ಓದು
- Real Suv With Good Performance,mileage,safety,Good Looking Car.Definitely ಗೋ It ಗೆ
I am using N10 since last 2 years and i feel its real suv with real value for ur money.Its comfortable for 5 people.The last row is for ur boot or small kids can sit comfortably. Mileage - 17-22( based on driving style. Max i got 22 (T2T). Linear performance after turbo hit at 1500 rpm till 4000 rom. You will not get power after 4000 rpm. Not feel safe after 120 speed due to its height thats nature of all mahidra vehicles. You will feel like a king due to its height and visibility. Looks is also good(mine is black )Everybody head turn when it passed from road. Interiar needs many improvement.It has old interiar of tuv.There is no ample space to place ur personal accessories like mobile...etc. Also music player given is local no androd/apple.Less function compared to other suv but i am satisfied with the price range it comes. maintenance is also good. Till now i am satisfied with Service.Advice is to get the service done from non- metro city. ಮತ್ತಷ್ಟು ಓದು
- ಅತ್ಯುತ್ತಮ ಕಾರು The Off-road Vehicle ಗೆ
Best car for the off-road and travel to diesel engine car best torque power milege this car is a good for comfort and travel Long distance driving best sound quality for 4 speaker 🔊 mahindra bolero neo is the best car from this budget this car provided heavy duty material and service packages to long timeಮತ್ತಷ್ಟು ಓದು
- ಬೊಲೆರೋ ನಿಯೋ
Bolero neo ek bhut badiya car h apne segment me iska ki mukabla nhi h Or ye ek family budget car h or har trah ke rasto ke liye upukt h merr hisab se bolero neo ek behtrin car h or iska performance bhi lajabab h me to yhi boluga ki neo bolero good car on this segment and this price very good car bying bolero neo and enjoyಮತ್ತಷ್ಟು ಓದು
ಮಹೀಂದ್ರ ಬೊಲೆರೋ ನಿಯೋ ವೀಡಿಯೊಗಳು
- Safety5 ತಿಂಗಳುಗಳು ago |
ಮಹೀಂದ್ರ ಬೊಲೆರೋ ನಿಯೋ ಬಣ್ಣಗಳು
ಮಹೀಂದ್ರ ಬೊಲೆರೋ ನಿಯೋ ಚಿತ್ರಗಳು
ನಮ್ಮಲ್ಲಿ 16 ಮಹೀಂದ್ರ ಬೊಲೆರೋ ನಿಯೋ ನ ಚಿತ್ರಗಳಿವೆ, ಬೊಲೆರೋ ನಿಯೋ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್, ಇಂಟೀರಿಯರ್ ಮತ್ತು 360° ವೀಕ್ಷಣೆ ಸೇರಿದೆ.
ಮಹೀಂದ್ರ ಬೊಲೆರೊ neo ಎಕ್ಸ್‌ಟೀರಿಯರ್
Ask anythin g & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
A ) Yes, Alloy wheels are available in Mahindra Bolero Neo
A ) For this, we'd suggest you please visit the nearest authorized service as they w...ಮತ್ತಷ್ಟು ಓದು
A ) Yes, the Mahindra Bolero Neo has AC.
A ) For this, we'd suggest you please visit the nearest authorized service center of...ಮತ್ತಷ್ಟು ಓದು
A ) No, the Mahindra Bolero Neo is available in a diesel version only.