- + 45ಚಿತ್ರಗಳು
- + 8ಬಣ್ಣಗಳು
ಟಾಟಾ ನೆಕ್ಸಾನ್ ಇವಿ
change carಟಾಟಾ ನೆಕ್ಸಾನ್ ಇವಿ ನ ಪ್ರಮುಖ ಸ್ಪೆಕ್ ಸ್
ರೇಂಜ್ | 390 - 489 km |
ಪವರ್ | 127 - 148 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 40.5 - 46.08 kwh |
ಚಾರ್ಜಿಂಗ್ time ಡಿಸಿ | 40min-(10-100%)-60kw |
ಚಾರ್ಜಿಂಗ್ time ಎಸಿ | 6h 36min-(10-100%)-7.2kw |
ಬೂಟ್‌ನ ಸಾಮರ್ಥ್ಯ | 350 Litres |
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
- ಹಿಂಭಾಗದ ಕ್ಯಾಮೆರಾ
- ಕೀಲಿಕೈ ಇಲ್ಲದ ನಮೂದು
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಏರ್ ಪ್ಯೂರಿಫೈಯರ್
- voice commands
- ಪಾರ್ಕಿಂಗ್ ಸೆನ್ಸಾರ್‌ಗಳು
- ಪವರ್ ವಿಂಡೋಸ್
- advanced internet ಫೆಅತುರ್ಸ್
- ರಿಯರ್ ಏಸಿ ವೆಂಟ್ಸ್
- wireless charger
- ಆಟೋ ಡಿಮ್ಮಿಂಗ್ ಐಆರ್‌ವಿಎಮ್
- ಕ್ರುಯಸ್ ಕಂಟ್ರೋಲ್
- ಸನ್ರೂಫ್
- key ವಿಶೇಷಣಗಳು
- top ವೈಶಿಷ್ಟ್ಯಗಳು
ನೆಕ್ಸಾನ್ ಇವಿ ಇತ್ತೀಚಿನ ಅಪ್ಡೇಟ್
ಟಾಟಾ ನೆಕ್ಸಾನ್ ಇವಿ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಟಾಟಾ ನೆಕ್ಸಾನ್ ಇವಿ ಇದೀಗ ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಒಂದೆರಡು ಹೊಸ ಫೀಚರ್‌ಗಳನ್ನು ಪಡೆದುಕೊಂಡಿದೆ. ಟಾಟಾ ಈ ಸಂಪೂರ್ಣ-ಎಲೆಕ್ಟ್ರಿಕ್ ಸಬ್-4ಎಮ್ ಎಸ್‌ಯುವಿಯ ರೆಡ್ ಡಾರ್ಕ್ ಎಡಿಷನ್ ಅನ್ನು ಸಹ ಬಿಡುಗಡೆ ಮಾಡಿದೆ.
ಟಾಟಾ ನೆಕ್ಸಾನ್ ಇವಿಯ ಬೆಲೆ ಎಷ್ಟು?
ಟಾಟಾ ನೆಕ್ಸಾನ್‌ನ ಎಂಟ್ರಿ-ಲೆವೆಲ್ ಕ್ರಿಯೇಟಿವ್ ಪ್ಲಸ್ ಮೀಡಿಯಂ ರೇಂಜ್ (ಎಂಆರ್) ವೇರಿಯೆಂಟ್ 12.49 ಲಕ್ಷ ರೂ.ನಿಂದ(ಪರಿಚಯಾತ್ಮಕ ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ ಮತ್ತು ಇದರ ಟಾಪ್ ಮೊಡೆಲ್ ಆಗಿರುವ ಎಂಪವರ್ಡ್ ಪ್ಲಸ್ 45 ನ ಪರಿಚಯಾತ್ಮಕ ಎಕ್ಸ್-ಶೋರೂಂ ಬೆಲೆ 16.99 ಲಕ್ಷ ರೂ.ನಷ್ಟಿದೆ. ಟಾಟಾ ವಿಸ್ತೃತ ಬ್ಯಾಟರಿ ಪ್ಯಾಕ್‌ನೊಂದಿಗೆ (45 ಕಿ.ವ್ಯಾಟ್) ಎರಡು ಹೊಸ ವೇರಿಯೆಂಟ್‌ಗಳನ್ನು ಸೇರಿಸಿದೆ, ಅವುಗಳೆಂದರೆ ಎಂಪವರ್ಡ್ ಪ್ಲಸ್ 45 ರೆಡ್ ಡಾರ್ಕ್ ಮತ್ತು ಎಂಪವರ್ಡ್ ಪ್ಲಸ್ 45.
ಟಾಟಾ ನೆಕ್ಸಾನ್ ಇವಿಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಟಾಟಾ ನೆಕ್ಸಾನ್ ಇವಿ ಒಟ್ಟು 12 ವೇರಿಯೆಂಟ್‌ಗಳಲ್ಲಿ ಬರುತ್ತದೆ. ವೇರಿಯೆಂಟ್‌ಗಳನ್ನು ಕ್ರೀಯೆಟಿವ್, ಫಿಯರ್‌ಲೆಸ್ ಮತ್ತು ಎಂಪವರ್ಡ್ ಎಂದು ವರ್ಗೀಕರಿಸಲಾಗಿದೆ. ಕೊನೆಯ ಎರಡು ವೇರಿಯೆಂಟ್‌ಗಳಾದ ಎಂಪವರ್ಡ್ ಪ್ಲಸ್ ಎಲ್ಆರ್ ಡಾರ್ಕ್ ಮತ್ತು ಎಂಪವರ್ಡ್ ಪ್ಲಸ್ 45 ಹೆಚ್ಚು ರೇಂಜ್ ಮತ್ತು ಫೀಚರ್‌ಗಳನ್ನು ಹೊಂದಿದೆ.
ಟಾಟಾ ನೆಕ್ಸಾನ್ ಇವಿ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಫೀಚರ್ ಕುರಿತ ದೊಡ್ಡ ಅಪ್‌ಡೇಟ್ ಏನೆಂದರೆ, ನೆಕ್ಸಾನ್ ಇವಿ ಈಗ ಪನರೋಮಿಕ್ ಸನ್‌ರೂಫ್ ಅನ್ನು ಮತ್ತು ಟಾಟಾ ನೆಕ್ಸಾನ್ ಇವಿಯಲ್ಲಿ ಹೆಚ್ಚಿನ ಕಂಫರ್ಟ್ ಮತ್ತು ಅನುಕೂಲತೆಯ ಫೀಚರ್‌ಗಳಾದ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಜೊತೆಗೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕನೆಕ್ಟೆಡ್ ಕಾರ್ ಟೆಕ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್‌ನೊಂದಿಗೆ ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಟಾಟಾ ನೆಕ್ಸಾನ್ ಇವಿ ಎಷ್ಟು ವಿಶಾಲವಾಗಿದೆ?
ಟಾಟಾ ನೆಕ್ಸಾನ್ ಇವಿಯಲ್ಲಿ ಐದು ಜನರಿರುವ ಸರಾಸರಿ ಗಾತ್ರದ ಕುಟುಂಬವು ಪ್ರಯಾಣಿಸಬಹುದು. ಹಿಂಬದಿ ಸೀಟಿನಲ್ಲಿ ಕುಳಿತವರಿಗೆ ಮೊಣಕಾಲು ಇಡುವಲ್ಲಿ ಸಾಕಷ್ಟು ಹೆಚ್ಚಿನ ಜಾಗ ಮತ್ತು ಸೀಟ್‌ನ ಕುಶನ್ ಸಹ ಸಮರ್ಪಕವಾಗಿದೆ. ಬ್ಯಾಟರಿ ಪ್ಯಾಕ್ ಅನ್ನು ಕಾರಿನ ಕೆಳಭಾಗದಲ್ಲಿ ಇರಿಸುವುದರಿಂದ ನೀವು ಮೊಣಕಾಲುಗಳ ಮೇಲೆ ಕುಳಿತುಕೊಂಡಂತೆ ಭಾಸವಾಗುವುದು ಇದರ ಅನಾನುಕೂಲತೆಗಳಲ್ಲಿ ಒಂದಾಗಿದೆ. ಇದು ವಿಶೇಷವಾಗಿ ಲಾಂಗ್ ರೇಂಜ್ (LR) ಆವೃತ್ತಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.
ಟಾಟಾ ನೆಕ್ಸಾನ್ ಇವಿಯು ಉತ್ತಮ ಆಕಾರವನ್ನು ಹೊಂದಿರುವ 350-ಲೀಟರ್ ಬೂಟ್‌ನೊಂದಿಗೆ ಬರುತ್ತದೆ. ಇದು ಮುಂಭಾಗದಲ್ಲಿ ಫ್ರಂಕ್ ಅನ್ನು ಕೂಡ ಪಡೆಯುತ್ತದೆ. ನೀವು ಅದರಲ್ಲಿ ನಾಲ್ಕು ಕ್ಯಾಬಿನ್ ಗಾತ್ರದ ಟ್ರಾಲಿ ಬ್ಯಾಗ್‌ಗಳನ್ನು ಇಡಬಹುದು. ಇದಲ್ಲದೆ, ಹಿಂಭಾಗದ ಸೀಟುಗಳನ್ನು 60:40 ಅನುಪಾತದಲ್ಲಿ ಮಡಚಬಹುದು, ಹಿಗಾಗಿ ಹೆಚ್ಚಿನ ಬೂಟ್ ಜಾಗ ಬೇಕಾಗುವ ಸೀಟ್‌ಗಳನ್ನು ಮಡಚಬಹುದು.
ಟಾಟಾ ನೆಕ್ಸಾನ್ ಇವಿಯಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಟಾಟಾ ನೆಕ್ಸಾನ್ ಇವಿಯನ್ನು ಮಿಡಿಯಮ್ ರೇಂಜ್ ಮತ್ತು ಲಾಂಗ್ ರೇಂಜ್ ಎಂಬ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
-
ಮಿಡಿಯಮ್ ರೇಂಜ್(MR): ಈ ಆವೃತ್ತಿಯು 129 ಪಿಎಸ್/215 ಎನ್‌ಎಮ್ ಇ-ಮೋಟಾರ್ ಅನ್ನು ಚಾಲನೆ ಮಾಡುವ 30 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪ್ಯಾಕ್ ಮಾಡುತ್ತದೆ. ನೀವು ವೇಗವನ್ನು ಹೆಚ್ಚಿಸಲು ಬಯಸಿದಂತೆ, ಈ ಆವೃತ್ತಿಯು 0-100 kmph ಅನ್ನು 9.2 ಸೆಕೆಂಡುಗಳಲ್ಲಿ ಮಾಡುತ್ತದೆ.
-
ಲಾಂಗ್ ರೇಂಜ್ (ಎಲ್‌ಆರ್): ಎಲೆಕ್ಟ್ರಿಕ್ ಎಸ್‌ಯುವಿಯ ಈ ಮೊಡೆಲ್ ಈಗ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ, ಅವುಗಳೆಂದರೆ, 40.5 ಕಿ.ವ್ಯಾಟ್ ಮತ್ತು ಹೊಸ 45 ಕಿ.ವ್ಯಾಟ್. ಎರಡೂ ಬ್ಯಾಟರಿ ಪ್ಯಾಕ್‌ಗಳು 143 ಪಿಎಸ್/215 ಎನ್‌ಎಮ್ ಔಟ್‌ಪುಟ್‌ನೊಂದಿಗೆ ಫ್ರಂಟ್-ವೀಲ್ ಡ್ರೈವ್ ಇ-ಮೋಟರ್‌ನೊಂದಿಗೆ ಬರುತ್ತವೆ. ಹೆಚ್ಚುವರಿ ಶಕ್ತಿಯಿಂದಾಗಿ, ಈ ವೇರಿಯೆಂಟ್ MR ಆವೃತ್ತಿಗಿಂತ ಸ್ವಲ್ಪ ವೇಗವಾಗಿದ್ದು, ಕೇವಲ 8.9 ಸೆಕೆಂಡುಗಳಲ್ಲಿ 100 kmph ಅನ್ನು ಮುಟ್ಟುತ್ತದೆ.
ನೆಕ್ಸಾನ್ ಇವಿ ಎಲೆಕ್ಟ್ರಿಕ್ ಕಾರ್ ಆಗಿರುವುದರಿಂದ, ಎರಡೂ ಆವೃತ್ತಿಗಳು ಸಿಂಗಲ್-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತವೆ.
ಒಮ್ಮೆ ಫುಲ್ ಚಾರ್ಜ್ ಮಾಡಿದಾಗ ಟಾಟಾ ನೆಕ್ಸಾನ್ ಇವಿಯ ರೇಂಜ್ ಎಷ್ಟು ?
ಟಾಟಾ ನೆಕ್ಸಾನ್‌ಗಾಗಿ 30 ಕಿ.ವ್ಯಾಟ್ ಬ್ಯಾಟರಿಯ ಕ್ಲೈಮ್ ಮಾಡಲಾದ ರೇಂಜ್ ಅನ್ನು ಮಿಡ್ ರೇಂಜ್‌ಗಾಗಿ 325 ಕಿಮೀ ಎಂದು ರೇಟ್ ಮಾಡಲಾಗಿದೆ. 40.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ಗಾಗಿ, ಕ್ಲೈಮ್ ಮಾಡಲಾದ ರೇಂಜ್ 465 ಕಿಮೀ, ಮತ್ತು 45 ಕಿ.ವ್ಯಾಟ್ ಬ್ಯಾಟರಿಗೆ ಕ್ಲೈಮ್ ಮಾಡಲಾದ ರೇಂಜ್ 489 ಕಿಮೀ. ಆಗಿದೆ. ಭಾರತೀಯ ರಸ್ತೆಯಲ್ಲಿ, MR ಆವೃತ್ತಿಯು ಸುಮಾರು 200 ಕಿ.ಮೀ ನಿಂದ 220 ಕಿ.ಮೀ ವರೆಗೆ ಸಾಗುತ್ತದೆ ಎಂದು ನೀವು ನಿರೀಕ್ಷಿಸಬಹುದು, ಆದರೆ ನೆಕ್ಸಾನ್ ಇವಿ ಎಲ್‌ಆರ್ 350 ಕಿಮೀ ನಿಂದ 370 ಕಿಮೀ ದೂರದವರೆಗೆ ತಲುಪುತ್ತದೆ. ಚಾಲನಾ ಶೈಲಿ, ಸುತ್ತುವರಿದ ತಾಪಮಾನ ಮತ್ತು ಬ್ರೇಕ್ ಶಕ್ತಿಯ ಪುನರುತ್ಪಾದನೆಯ ಮಟ್ಟವನ್ನು ಆಧರಿಸಿ ನಿಜವಾದ ನೈಜ ಪ್ರಪಂಚದ ರೇಂಜ್ ಬದಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
ಟಾಟಾ ನೆಕ್ಸಾನ್ ಇವಿ ಎಷ್ಟು ಸುರಕ್ಷಿತವಾಗಿದೆ?
ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್-ಸೀಟ್ ಮೌಂಟ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನಂತಹ ಸುರಕ್ಷತಾ ಪ್ಯಾಕೇಜ್‌ಗಳೊಂದಿಗೆ ಟಾಟಾ ನೆಕ್ಸಾನ್ ಇವಿ ಲೋಡ್ ಆಗುತ್ತದೆ.
ಭಾರತ್ ಎನ್‌ಸಿಎಪಿಯಿಂದ ಕ್ರ್ಯಾಶ್ ಟೆಸ್ಟ್ ಮಾಡಿದ ನಂತರ ಟಾಟಾ ನೆಕ್ಸಾನ್ ಇವಿ ಪೂರ್ಣ ಫೈವ್ ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ ಎಂದು ತಿಳಿಯುವುದು ಸಮಾಧಾನಕರವಾಗಿದೆ.
ಟಾಟಾ ನೆಕ್ಸಾನ್ ಇವಿಯಲ್ಲಿ ಎಷ್ಟು ಬಣ್ಣದ ಆಯ್ಕೆಗಳಿವೆ?
ಟಾಟಾ ನೆಕ್ಸಾನ್ ಇವಿ ಏಳು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳೆಂದರೆ, ಡೇಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್, ಕ್ರಿಯೇಟಿವ್ ಓಷನ್, ಫಿಯರ್‌ಲೆಸ್ ಪರ್ಪಲ್, ಎಂಪವರ್ಡ್ ಆಕ್ಸೈಡ್ ಮತ್ತು ಓನಿಕ್ಸ್ ಬ್ಲಾಕ್.
ಕ್ರಿಯೇಟಿವ್ ಓಷನ್, ಎಂಪವರ್ಡ್ ಆಕ್ಸೈಡ್ ಮತ್ತು ಫಿಯರ್‌ಲೆಸ್ ಪರ್ಪಲ್‌ನಂತಹ ಬಣ್ಣಗಳು ವೇರಿಯೆಂಟ್‌ಗಳಿಗೆ ನಿರ್ದಿಷ್ಟವಾಗಿವೆ ಎಂಬುದನ್ನು ಗಮನಿಸಿ. ಓನಿಕ್ಸ್ ಬ್ಲ್ಯಾಕ್ ಅನ್ನು #ಡಾರ್ಕ್ ವೇರಿಯೆಂಟ್ ಆಗಿ ಮಾರಾಟ ಮಾಡಲಾಗಿದೆ ಮತ್ತು ಇದು ಟಾಪ್-ಎಂಡ್ ವೇರಿಯೆಂಟ್‌ಗಳಿಗೆ ಸೀಮಿತವಾಗಿದೆ.
ನಾವು ವಿಶೇಷವಾಗಿ ಇಷ್ಟಪಟ್ಟದ್ದು:
ಎಂಪವರ್ಡ್ ಆಕ್ಸೈಡ್: ಈ ವರ್ಣವು ಆಫ್-ವೈಟ್ ಮತ್ತು ಗ್ರೇ ನಡುವಿನ ಮಧ್ಯದ ಬಣ್ಣವಾಗಿದೆ. ಅದರಲ್ಲಿರುವ ಮುತ್ತಿನ ಚುಕ್ಕೆಗಳು ಹೆಚ್ಚುವರಿ ಹೊಳಪನ್ನು ನೀಡುತ್ತದೆ.
ಓನಿಕ್ಸ್ ಬ್ಲ್ಯಾಕ್: ನಿಮಗೆ ಸ್ಟೆಲ್ತ್ ಜೊತೆಗೆ ಸ್ಪೋರ್ಟಿ ಏನಾದರೂ ಬೇಕಾದರೆ, ಇದನ್ನು ಆಯ್ಕೆ ಮಾಡಬಹುದು. ಈ ಬಣ್ಣವನ್ನು ಆರಿಸಿಕೊಂಡರೆ ನೀವು ಸಂಪೂರ್ಣವಾಗಿ ಕಪ್ಪು ಬಣ್ಣದ ಇಂಟಿರಿಯರ್ ಅನ್ನು ಪಡೆಯುತ್ತೀರಿ ಎಂದರ್ಥ! ಅದು ತುಂಬಾ ಸೊಗಸಾಗಿ ಕಾಣುತ್ತದೆ!
ನಾವು ಟಾಟಾ ನೆಕ್ಸಾನ್ ಇವಿಯನ್ನು ಖರೀದಿಸಬಹುದೇ ?
ಉತ್ತರ ಹೌದು! ನಿಮ್ಮ ದೈನಂದಿನ ಬಳಕೆಯ ಮಿತಿಯ ಬಗ್ಗೆ ಮೊದಲೇ ಪ್ಲ್ಯಾನ್ ಆಗಿದ್ದರೆ ಮತ್ತು ಮನೆಯಲ್ಲಿ ಚಾರ್ಜರ್ ಅನ್ನು ಫಿಕ್ಸ್ ಮಾಡುವ ಆಯ್ಕೆಯನ್ನು ಹೊಂದಿದ್ದರೆ ನೀವು ಟಾಟಾ ನೆಕ್ಸಾನ್ ಇವಿಯನ್ನು ಪರಿಗಣಿಸಬಹುದು. ಚಾಲನೆಯು ಇದರ ರಿಯಲ್ ಟೈಮ್ ರೇಂಜ್‌ನಷ್ಟು ಉತ್ತಮವಾಗಿದ್ದರೆ ಪ್ರತಿ ಕಿಲೋಮೀಟರ್ ಡ್ರೈವಿಂಗ್ ವೆಚ್ಚದ ಉಳಿತಾಯವನ್ನು ಬಹುಬೇಗನೇ ಮರುಪಡೆಯಬಹುದು. ಅಲ್ಲದೆ, ನೆಕ್ಸಾನ್ ಅದರ ಬೆಲೆಗೆ ಸಾಕಷ್ಟು ಫೀಚರ್‌ಗಳನ್ನು ಪ್ಯಾಕ್ ಮಾಡುತ್ತದೆ, ಐದು ಜನರಿಗೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ ಮತ್ತು ಆರಾಮದಾಯಕವಾಗಿದೆ.
ಇದಕ್ಕೆ ಪ್ರತಿಸ್ಪರ್ಧಿಗಳು ಯಾರು ?
ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿಯ ಯ ಏಕೈಕ ನೇರ ಪ್ರತಿಸ್ಪರ್ಧಿ ಎಂದರೆ ಅದು ಮಹೀಂದ್ರಾ ಎಕ್ಸ್‌ಯುವಿ400 ಇವಿ ಆಗಿದೆ, ಇದು ದೊಡ್ಡದಾಗಿದೆ ಮತ್ತು ಉತ್ತಮ ಸ್ಥಳಾವಕಾಶ ಮತ್ತು ಬೂಟ್ ಸ್ಥಳವನ್ನು ನೀಡುತ್ತದೆ. ಆದರೆ, ಮಹೀಂದ್ರಾವು ಫೀಚರ್ ಅನ್ನು ಲೋಡ್ ಮಾಡಿಲ್ಲ ಮತ್ತು ಟಾಟಾದಂತೆ ಫ್ಯೂಚರಿಸ್ಟಿಕ್ ಆಗಿ ಕಾಣುತ್ತಿಲ್ಲ. ನಿಮ್ಮ ಬಜೆಟ್ ಅನ್ನು ನೀವು ವಿಸ್ತರಿಸಬಹುದಾದರೆ, ನೀವು ಎಮ್‌ಜಿ ಜೆಡ್‌ಎಸ್ ಇವಿಯನ್ನು ಸಹ ಪರಿಗಣಿಸಬಹುದು.
ಇದೇ ಬೆಲೆಗೆ, ನೀವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಹೋಂಡಾ ಎಲಿವೇಟ್, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳ ICE ಆವೃತ್ತಿಗಳನ್ನು ಪರಿಗಣಿಸಬಹುದು.
ನೆಕ್ಸಾನ್ ಇವಿ ಕ್ರಿಯೇಟಿವ್ ಪ್ಲಸ್ mr(ಬೇಸ್ ಮಾಡೆಲ್)30 kwh, 275 km, 127 ಬಿಹೆಚ್ ಪಿ2 months waiting | Rs.12.49 ಲಕ್ಷ* | ||
ನೆಕ್ಸಾನ್ ಇವಿ ಫಿಯರ್‌ಲೆಸ್ mr30 kwh, 275 km, 127 ಬಿಹೆಚ್ ಪಿ2 months waiting | Rs.13.29 ಲಕ್ಷ* | ||
ನೆಕ್ಸಾನ್ ಇವಿ ಫಿಯರ್‌ಲೆಸ್ ಪ್ಲಸ್ mr30 kwh, 275 km, 127 ಬಿಹೆಚ್ ಪಿ2 months waiting | Rs.13.79 ಲಕ್ಷ* | ||
ನೆಕ್ಸಾನ್ ಇವಿ ಕ್ರಿಯೇಟಿವ್ 4546.08 kwh, 489 km, 148 ಬಿಹೆಚ್ ಪಿ2 months waiting | Rs.13.99 ಲಕ್ಷ* | ||
ನೆಕ್ಸಾನ್ ಇವಿ ಫಿಯರ್‌ಲೆಸ್ ಪ್ಲಸ್ ಎಸ್ mr30 kwh, 275 km, 127 ಬಿಹೆಚ್ ಪಿ2 months waiting | Rs.14.29 ಲಕ್ಷ* | ||