Tata Curvvನ ಎದ್ದು ಕಾಣುವಂತೆ ಮಾಡುವ 7 ಫೀಚರ್ ಗಳು, ಇದು Kia Seltosನಲ್ಲಿಯೂ ಇಲ್ಲ
ಕರ್ವ್ ನಲ್ಲಿ ಪವರ್ಡ್ ಟೈಲ್‌ಗೇಟ್ ಮತ್ತು ದೊಡ್ಡ ಟಚ್‌ಸ್ಕ್ರೀನ್‌ನಂತಹ ಫೀಚರ್ ಗಳ ಜೊತೆಗೆ ADAS ನಲ್ಲಿ ಹೆಚ್ಚುವರಿ ಫೀಚರ್ ಗಳನ್ನು ಕೂಡ ನೀಡಲಾಗಿದೆ
ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ SUV ಗಳೊಂದಿಗೆ ಸ್ಪರ್ಧಿಸಲಿರುವ SUV-ಕೂಪ್ ಟಾಟಾ ಕರ್ವ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಟಾಟಾ ಕೆಲವು ಹೊಸ ಫೀಚರ್ ಗಳನ್ನು ಕರ್ವ್ EV (ಆಗಸ್ಟ್ 7 ರಂದು ಮೊದಲು ಬರಲಿದೆ) ಮತ್ತು ಕರ್ವ್ ICE (ಇಂಟರ್ನಲ್ ಕಮ್ಬಾಷನ್ ಎಂಜಿನ್‌ನೊಂದಿಗೆ) ಎರಡರಲ್ಲೂ ಸೇರಿಸುವ ನಿರೀಕ್ಷೆಯಿದೆ. ಈ ಫೀಚರ್ ಗಳು ಸುಸಜ್ಜಿತ ಸೆಲ್ಟೋಸ್‌ಗೆ ಹೋಲಿಸಿದರೆ ಕರ್ವ್ ಅನ್ನು ಎದ್ದು ಕಾಣುವಂತೆ ಮಾಡುತ್ತದೆ. ಈ ಸ್ಟೋರಿಯಲ್ಲಿ, ಸೆಲ್ಟೋಸ್ ಗೆ ಹೋಲಿಸಿದರೆ ಕರ್ವ್ ಪಡೆಯಬಹುದಾದ ಏಳು ಪ್ರಮುಖ ಫೀಚರ್ ಗಳನ್ನು ನೋಡೋಣ.
ದೊಡ್ಡದಾದ ಟಚ್‌ಸ್ಕ್ರೀನ್
ಟಾಟಾ ಕರ್ವ್ ಅನ್ನು 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ನೀಡಲಾಗುವುದು, ಇದು ಈಗಾಗಲೇ ಇತರ ಟಾಟಾ ಎಸ್‌ಯುವಿಗಳಾದ ನೆಕ್ಸಾನ್ EV, ಹ್ಯಾರಿಯರ್ ಮತ್ತು ಸಫಾರಿಗಳಲ್ಲಿ ಲಭ್ಯವಿದೆ. ಈ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಸಪೋರ್ಟ್ ಮಾಡಲಿದೆ. ಮತ್ತೊಂದೆಡೆ, ಕಿಯಾ ಸೆಲ್ಟೋಸ್ ವೈರ್ಡ್ ಕನೆಕ್ಟಿವಿಟಿ ಹೊಂದಿರುವ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ.
ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಲ್ಲಿ ಮ್ಯಾಪ್ ನ್ಯಾವಿಗೇಶನ್
ಕಿಯಾ ಮತ್ತು ಟಾಟಾ ಎರಡೂ ಕಾರುಗಳು 10.25 ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇಗಳನ್ನು ಹೊಂದಿವೆ. ಆದರೆ, ಕರ್ವ್ ನ ಡಿಸ್ಪ್ಲೇ ನೆಕ್ಸಾನ್‌ನಲ್ಲಿರುವಂತೆ ನ್ಯಾವಿಗೇಷನ್ ಮಾಹಿತಿಯನ್ನು ಕೂಡ ತೋರಿಸುತ್ತದೆ. ಈ ಫೀಚರ್ ನ ಮೂಲಕ ಚಾಲಕರು ರಸ್ತೆಯಿಂದ ಕಣ್ಣು ತೆಗೆಯದೆ ನ್ಯಾವಿಗೇಷನ್ ಸೂಚನೆಗಳನ್ನು ನೋಡಬಹುದು.
9-ಸ್ಪೀಕರ್ ಸಿಸ್ಟಮ್
ಇದು ಅಷ್ಟೇನೂ ದೊಡ್ಡ ವ್ಯತ್ಯಾಸವಾಗಿ ಕಾಣುವುದಿಲ್ಲ. ಬೋಸ್‌ನ 8-ಸ್ಪೀಕರ್ ಸೆಟಪ್ ಅನ್ನು ಒದಗಿಸುವ ಕಿಯಾ ಸೆಲ್ಟೋಸ್‌ಗೆ ಹೋಲಿಸಿದರೆ ಟಾಟಾ ಕರ್ವ್ ಟ್ವೀಟರ್‌ಗಳು ಮತ್ತು ಸಬ್‌ವೂಫರ್ ಸೇರಿದಂತೆ JBLನಿಂದ ಪಡೆದ 9-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಇದು ಸಂಗೀತ ಪ್ರಿಯರಿಗೆ ಉತ್ತಮ ಆಡಿಯೊ ಅನುಭವವನ್ನು ಒದಗಿಸಬಹುದು.
ಹಿಲ್ ಡಿಸೆಂಟ್ ಕಂಟ್ರೋಲ್
ಟಾಟಾ ಕರ್ವ್ ಅನ್ನು ಹಿಲ್-ಸ್ಟಾರ್ಟ್ ಅಸಿಸ್ಟ್, ಹಿಲ್-ಅಸೆಂಟ್ ಕಂಟ್ರೋಲ್ ಮತ್ತು ಹಿಲ್-ಡಿಸೆಂಟ್ ಕಂಟ್ರೋಲ್ ಜೊತೆಗೆ ನೀಡುವ ನಿರೀಕ್ಷೆಯಿದೆ. ಆದರೆ ಕಿಯಾ ಸೆಲ್ಟೋಸ್ ನಲ್ಲಿ ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಮಾತ್ರ ಒದಗಿಸಲಾಗಿದೆ.
ಇದನ್ನು ಕೂಡ ಓದಿ: ಸ್ಟೈಲಿಶ್ ಆಗಿರುವ ಹೊಸ ರೇಂಜ್ ರೋವರ್ SVಯೊಂದಿಗೆ ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಹಿಂದಿ ಚಿತ್ರನಟ ಸಂಜಯ್ ದತ್
ಪವರ್ಡ್ ಟೈಲ್‌ಗೇಟ್
ಟಾಟಾ ಕರ್ವ್, ಟಾಟಾ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಈಗಾಗಲೇ ಇರುವ ಪವರ್ಡ್ ಟೈಲ್‌ಗೇಟ್ ಫೀಚರ್ ಅನ್ನು ಪಡೆಯಲಿದೆ. ಈ ಫೀಚರ್ ಕೇವಲ ಒಂದು ಬಟನ್‌ನೊಂದಿಗೆ ಬೂಟ್ ಅನ್ನು ತೆರೆಯಲು ಅಥವಾ ಮುಚ್ಚಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಅನುಕೂಲಕ್ಕಾಗಿ ಗೆಸ್ಚರ್ ಕಂಟ್ರೋಲ್ ಅನ್ನು ಕೂಡ ಒಳಗೊಂಡಿದೆ. ಈ ಫೀಚರ್ ಅನ್ನು ಕಿಯಾ ಸೆಲ್ಟೋಸ್‌ನಲ್ಲಿ ನೀಡಲಾಗಿಲ್ಲ.
ಟ್ರಾಫಿಕ್ ಸೈನ್ ರೆಕಗ್ನಿಷನ್
ಎರಡೂ ಕಾರುಗಳು ಲೇನ್ ಕೀಪಿಂಗ್ ಅಸಿಸ್ಟ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್ ಗಳನ್ನು ಒಳಗೊಂಡಿರುವ ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ನೊಂದಿಗೆ (ADAS) ಬರುತ್ತವೆ. ಇದರ ಜೊತೆಗೆ ಕರ್ವ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಎಂಬ ಹೆಚ್ಚುವರಿ ಫೀಚರ್ ಅನ್ನು ಕೂಡ ಪಡೆಯಲಿದೆ.
ವೆಲ್‌ಕಮ್ ಮತ್ತು ಗುಡ್-ಬೈ ಲೈಟ್ಸ್ ಫಂಕ್ಷನಾಲಿಟಿ
ಕೆಲವರು ಇದನ್ನು ಕೇವಲ ಗಿಮಿಕ್ ಎಂದು ನೋಡಬಹುದು, ಆದರೆ ಕಾರನ್ನು ಲಾಕ್ ಮಾಡುವಾಗ ಅಥವಾ ಅನ್ಲಾಕ್ ಮಾಡುವಾಗ LED ಲೈಟ್ ಗಳಲ್ಲಿ ಬರುವ ವೆಲ್ಕಮ್ ಮತ್ತು ಗುಡ್ ಬೈ ಅನಿಮೇಷನ್ ಗಳು ಅದನ್ನು ಎದ್ದು ಕಾಣುವಂತೆ ಮಾಡಬಹುದು. ಆಧುನಿಕ ಟಾಟಾ ಕಾರುಗಳಲ್ಲಿ ಇರುವ ಈ ಫೀಚರ್ ಕರ್ವ್ ನಲ್ಲಿಯೂ ಲಭ್ಯವಿರುತ್ತದೆ. ಕಿಯಾ ಸೆಲ್ಟೋಸ್ ನ LED ಲೈಟ್ ಸೆಟಪ್ ನಲ್ಲಿ ಅಂತಹ ಯಾವುದೇ ಫಂಕ್ಷನ್ ಅನ್ನು ನೀಡಲಾಗಿಲ್ಲ.
ಕಿಯಾ ಸೆಲ್ಟೋಸ್‌ಗೆ ಹೋಲಿಸಿದರೆ ಮುಂಬರುವ ಟಾಟಾ ಕರ್ವ್ ನಲ್ಲಿ ನೀಡಲಾಗಿರುವ ಯಾವ ಫೀಚರ್ ಗಳು ನಿಮಗೆ ಇಷ್ಟವಾಗಿವೆ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.