• English
  • Login / Register

ಆಗಸ್ಟ್‌ನ ಅನಾವರಣಕ್ಕೆ ಮುಂಚಿತವಾಗಿ ಮೊದಲ ಬಾರಿಗೆ Citroen Basalt ಇಂಟೀರಿಯರ್ ಟೀಸರ್‌ ಔಟ್‌

ಸಿಟ್ರೊನ್ ಬಸಾಲ್ಟ್‌ ಗಾಗಿ samarth ಮೂಲಕ ಜುಲೈ 22, 2024 08:04 pm ರಂದು ಪ್ರಕಟಿಸಲಾಗಿದೆ

  • 66 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಟೀಸರ್ ಮುಂಬರುವ ಸಿಟ್ರೊಯೆನ್ ಬಸಾಲ್ಟ್‌ನ ಕ್ಯಾಬಿನ್ ಥೀಮ್ ಮತ್ತು ಸೌಕರ್ಯದ ಫೀಚರ್‌ಗಳು ಸೇರಿದಂತೆ ಕೆಲವು ಆಂತರಿಕ ವಿವರಗಳನ್ನು ಬಹಿರಂಗಪಡಿಸುತ್ತದೆ

Citroen Basalt Interior Teased

  • ಟೀಸರ್ ಮರಳು ಬಣ್ಣದ ಕ್ಯಾಬಿನ್ ಥೀಮ್ ಮತ್ತು ಸಿ3 ಮತ್ತು ಸಿ3 ಏರ್‌ಕ್ರಾಸ್‌ಗೆ ಹೋಲುವ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ.
  • ಇದು 10.2-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಫೀಚರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.
  • ಎಸ್‌ಯುವಿ-ಕೂಪ್ ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಎರಡೂ ಆಯ್ಕೆಗಳೊಂದಿಗೆ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 ಪಿಎಸ್‌ ಮತ್ತು 205 ಎನ್‌ಎಮ್‌) ನಿಂದ ನಿಯಂತ್ರಿಸಲ್ಪಡುವ ನಿರೀಕ್ಷೆಯಿದೆ.
  • ಬೆಲೆಗಳು 10 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ಸಿಟ್ರೊಯೆನ್ ಬಸಾಲ್ಟ್ ಅನ್ನು 2024ರ ಮಾರ್ಚ್‌ನಲ್ಲಿ ಪರಿಕಲ್ಪನೆಯಾಗಿ ಅನಾವರಣಗೊಳಿಸಲಾಯಿತು ಮತ್ತು ಈಗ ಆಗಸ್ಟ್‌ನಲ್ಲಿ ಅದರ ಚೊಚ್ಚಲ ಪ್ರವೇಶವನ್ನು ಮಾಡಲು ದಿನಗಣನೆ ಪ್ರಾರಂಭವಾಗಿದೆ. ಈಗ, ತನ್ನ ಚೊಚ್ಚಲ ಬಿಡುಗಡೆಗೆ ಮುಂಚಿತವಾಗಿ, ಸಿಟ್ರೊಯೆನ್ ಇಂಡಿಯಾವು ಎಸ್‌ಯುವಿ-ಕೂಪ್‌ನ ಟೀಸರ್‌ನ ಸರಣಿಯನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಹಾಗೆಯೇ, ಇತ್ತೀಚಿನ ಟೀಸರ್ ಅದರ ಒಳಭಾಗದ ಬಗ್ಗೆ ನಮಗೆ ಒಂದು ನೋಟವನ್ನು ನೀಡುತ್ತದೆ.

A post shared by Citroën India (@citroen_india)

ನಾವು ಕಂಡದ್ದು ಏನು ?

Citroen Basalt Front Armrest
Citroen Basalt Beige Cabin Theme

ಟೀಸರ್ ಕ್ಯಾಬಿನ್ ಸೀಟ್‌ಗಳು ಮತ್ತು ಹೊಸ ಡ್ಯಾಶ್‌ಬೋರ್ಡ್ ಟ್ರಿಮ್‌ನ ಒಂದು ನೋಟವನ್ನು ನೀಡಿದೆ. ಇದು ಮರಳು-ಬಣ್ಣದ ಕ್ಯಾಬಿನ್ ಥೀಮ್ ಮತ್ತು ಮುಂಭಾಗದಲ್ಲಿ ಸೆಂಟರ್ ಆರ್ಮ್‌ರೆಸ್ಟ್ ಅನ್ನು ಒಳಗೊಂಡಿರುತ್ತದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಸೀಟುಗಳು ಎಡ್ಜಸ್ಟ್‌ ಮಾಡಬಹುದಾದ ಹೆಡ್‌ರೆಸ್ಟ್‌ಗಳನ್ನು ಪಡೆಯುತ್ತವೆ. ಟೀಸರ್ ಸಿ3 ಹ್ಯಾಚ್‌ಬ್ಯಾಕ್ ಮತ್ತು ಸಿ3 ಏರ್‌ಕ್ರಾಸ್ ಎಸ್‌ಯುವಿಯಲ್ಲಿ ಕಂಡುಬರುವಂತೆಯೇ ಡ್ಯಾಶ್‌ಬೋರ್ಡ್‌ನ ಪೂರ್ವವೀಕ್ಷಣೆಯನ್ನು ಮತ್ತು ಫ್ಲೋಟಿಂಗ್ ಪ್ರಕಾರದ ಇನ್ಫೋಟೈನ್‌ಮೆಂಟ್ ಯುನಿಟ್ ಅನ್ನು ಬಹಿರಂಗಪಡಿಸಿದೆ (ಬಹುಶಃ ಭಾರತದಲ್ಲಿನ ಇತರ ಸಿಟ್ರೊಯೆನ್ ಕಾರುಗಳಲ್ಲಿ ಕಂಡುಬರುವ ಅದೇ 10.2-ಇಂಚಿನ ಸ್ಕ್ರೀನ್‌).

Citroen Basalt Rear Centre Armrest

ಹಿಂಭಾಗದಲ್ಲಿ, ಮಧ್ಯದ ಆರ್ಮ್‌ರೆಸ್ಟ್ ಕಪ್ ಹೋಲ್ಡರ್‌ಗಳನ್ನು ಮತ್ತು ಕೆಲವು ಸಣ್ಣ-ಸಣ್ಣ ವಸ್ತುಗಳನ್ನು ಇರಿಸಲು ಸಣ್ಣ ಸ್ಟೋರೆಜ್‌ ಅನ್ನು ಪಡೆಯುತ್ತದೆ.

ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತೆ

Citroen C3 Aircross cabin

ಫ್ರೆಂಚ್ ಮೂಲದ ಈ ಕಾರು ತಯಾರಕ ಕಂಪೆನಿ ಎಸ್‌ಯುವಿ-ಕೂಪ್‌ನ ಒಳಾಂಗಣದ ಬಗ್ಗೆ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದಿದ್ದರೂ, 7-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇ ಸೇರಿದಂತೆ ಸಿ3 ಏರ್‌ಕ್ರಾಸ್‌ನಿಂದ ಕೆಲವು ಫೀಚರ್‌ಗಳನ್ನು ಎರವಲು ಪಡೆದುಕೊಳ್ಳಬಹುದೆಂದು ನಾವು ನಿರೀಕ್ಷಿಸಬಹುದು. ಇದು ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್‌ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಸುರಕ್ಷತೆಯ ದೃಷ್ಟಿಯಿಂದ, ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ನಿರೀಕ್ಷಿತ ಪವರ್‌ಟ್ರೇನ್

Citroen C3 Aircross 1.2-litre turbo-petrol engine

ಸಿ3 ಏರ್‌ಕ್ರಾಸ್ ಮತ್ತು ಸಿ3 ಹ್ಯಾಚ್‌ಬ್ಯಾಕ್‌ನಲ್ಲಿ ಕಂಡುಬರುವ ಅದೇ ಪೆಟ್ರೋಲ್ ಎಂಜಿನ್‌ನಿಂದ ಬಸಾಲ್ಟ್ ಚಾಲಿತವಾಗುವ ಸಾಧ್ಯತೆಯಿದೆ, ಸಿ3 ಜೋಡಿಗಳು 1.2-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ 110 ಪಿಎಸ್‌ ಮತ್ತು 205 ಎನ್‌ಎಮ್‌ವರೆಗೆ ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಗೇರ್‌ಬಾಕ್ಸ್‌ನೊಂದಿಗೆ ನೀಡಬಹುದು.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಆಗಸ್ಟ್‌ನಲ್ಲಿ ಚೊಚ್ಚಲ ಅನಾವರಣದ ನಂತರ ಸಿಟ್ರೊಯೆನ್ ತನ್ನ ಬಸಾಲ್ಟ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಅದರ ಬೆಲೆಗಳು 10 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಟಾಟಾ ಕರ್ವ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದರೂ, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗುನ್, ಟೊಯೊಟಾ ಹೈರೈಡರ್‌, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಮತ್ತು ಹೋಂಡಾ ಎಲಿವೇಟ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಸ್ಟೈಲಿಶ್ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ. 

 ಇತ್ತೀಚಿನ ಎಲ್ಲಾ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

was this article helpful ?

Write your Comment on Citroen ಬಸಾಲ್ಟ್‌

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience