Kia Sonet, ಹೊಸತು vs ಹಳೆಯದು: ವ್ಯತ್ಯಾಸಗಳ ಅವಲೋಕನ
ಬಹುತೇಕ ಡಿಸೈನ್ ಬದಲಾವಣೆಗಳನ್ನು SUV ಯ ಹೊರಭಾಗದಲ್ಲಿ ಅಳವಡಿಸಲಾಗಿದ್ದು, ಕ್ಯಾಬಿನ್ ಕೂಡಾ ಕೆಲವು ಅನುಕೂಲತೆಗಳು ಮತ್ತು ಫೀಚರ್ ಅಪ್‌ಗ್ರೇಡ್‌ಗಳನ್ನು ಪಡೆದಿದೆ
ಕಿಯಾ ಸೋನೆಟ್ ಫೇಸ್‌ಲಿಫ್ಟ್ ಅನ್ನು ಈಗಾಗಲೇ ಅನಾವರಣಗೊಳಿಸಲಾಗಿದ್ದರೂ, ಇದರ ಬೆಲೆಗಳಿಗಾಗಿ 2024 ರ ವರ್ಷಾರಂಭದ ತನಕ ಕಾಯಬೇಕಾಗಿದೆ. ಮಧ್ಯಂತರ ನವೀಕರಣ ಹೊಂದಿರುವ ಈ SUV ಯ ಫೂಟ್‌ಪ್ರಿಂಟ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ, ಆದರೆ ಒಳಗೂ ಹೊರಗೂ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳು ಯಾವುವು ಮತ್ತು ಹೊಸ ಹಾಗೂ ಹಳೆಯ ಕಿಯಾ ಸೋನೆಟ್ SUV ನಡುವಿನ ವ್ಯತ್ಯಾಸಗಳೇನೆಂಬುದನ್ನು ನಾವೀಗ ನೋಡೋಣ.
ಮುಂಭಾಗ
SUV ಯ ಫ್ರಂಟ್ ಫೇಸಿಯಾಗೆ ಹೆಚ್ಚಿನ ಸಂಖ್ಯೆಯ ಸ್ಟೈಲಿಂಗ್ ಬದಲಾವಣೆ ಮಾಡಲಾಗಿದೆ. ಈ ಅಪ್‌ಡೇಟ್‌ನೊಂದಿಗೆ, ಸೋನೆಟ್ ಚೂಪಾದ 3-ಪೀಸ್ LED ಹೆಡ್‌ಲೈಟ್‌ಗಳ ಸೆಟ್ ಮತ್ತು ಉದ್ದನೆಯ ಫ್ಯಾಂಗ್-ಆಕಾರದ LED DRLಗಳನ್ನು ಪಡೆದಿದೆ. ಗ್ರಿಲ್‌ಗೂ ಕಿಯಾ ಬದಲಾವಣೆ ನೀಡಿದ್ದು, ಈಗ ಇದು ಸಿಲ್ವರ್ ಇನ್‌ಸರ್ಟ್‌ಗಳನ್ನು ಹೊಂದಿದೆ ಮತ್ತು ಹೊಸ ಸೋನೆಟ್‌ನಲ್ಲಿ, ಸ್ಲೀಕ್ LED ಫಾಗ್ ಲ್ಯಾಂಪ್‌ಗಳನ್ನು ಪಡೆದಿದೆ. ಈ ನವೀಕೃತ ಮಾಡೆಲ್ ವಿಭಿನ್ನ ಶೈಲಿಯ ಏರ್ ಡ್ಯಾಮ್ ಜೊತೆಗೆ ಟ್ವೀಕ್ ಬಂಪರ್ ಅನ್ನೂ ಪಡೆದಿದೆ
ಸೈಡ್
ಪ್ರೊಫೈಲ್‌ನಲ್ಲಿ , ನೀವು ಗಮನಿಸುವ ಏಕೈಕ ಬದಲಾವಣೆಯೆಂದರೆ, ಹೊಸ ಅಲಾಯ್ ವ್ಹೀಲ್‌ಗಳು (X-ಲೈನ್ ವೇರಿಯೆಂಟ್ ಜೊತೆಗೆ 16-ಇಂಚು ರಿಮ್‌ಗಳು) ಮತ್ತು ORVM ಮೇಲೆ ಮೌಂಟ್ ಮಾಡಲಾದ ಕ್ಯಾಮರಾ (360-ಡಿಗ್ರಿ ಸೆಟಪ್ ಭಾಗವಾಗಿ). ಇನ್ನೊಂದು ಸಣ್ಣ ಬದಲಾವಣೆಯೆಂದರೆ, ಫೇಸ್‌ಲಿಫ್ಟ್ ಪೂರ್ವ ಮಾಡೆಲ್‌ನಲ್ಲಿ ಕಾಣುವ ಕ್ರೋಮ್ ಫಿನಿಷ್ ಡೋರ್ ಹ್ಯಾಂಡಲ್‌ಗೆ ಬದಲಾಗಿ ಹೊಸ ಸೋನೆಟ್‌ನ ಟಾಪ್-ಸ್ಪೆಕ್ ವೇರಿಯೆಂಟ್‌ಗಳು ಈಗ ಬಾಡಿ ಬಣ್ಣದ ಡೋರ್ ಹ್ಯಾಂಡಲ್‌ಗಳನ್ನು ಪಡೆದಿವೆ.
ರಿಯರ್
ಹಿಂಭಾಗದಲ್ಲಿ, ಪ್ರಮುಖ ಸ್ಟೈಲಿಂಗ್ ಬದಲಾವಣೆಗಳು ಸಂಪೂರ್ಣ ಸಂಪರ್ಕಿತ LED ಟೇಲ್‌ಲೈಟ್‌ಗಳು (ಹೊಸ ಸೆಲ್ಟೋಸ್‌ನಲ್ಲಿ ಈಗ ನೇರವಾಗಿ ಜೋಡಿಸಲಾಗಿದೆ), ಮರುಸ್ಥಾನೀಕರಿಸಲಾದ ‘ಸೋನೆಟ್’ ಬ್ಯಾಡ್ಜಿಂಗ್ ಮತ್ತು ಪರಿಷ್ಕೃತ ಬಂಪರ್ ಅನ್ನು ಒಳಗೊಂಡಿದೆ.
ಇದನ್ನೂ ಪರಿಶೀಲಿಸಿ: ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ ಎಲ್ಲಾ ಬಣ್ಣಗಳ ಆಯ್ಕೆಯ ವಿವರಗಳು
ಇಂಟೀರಿಯರ್ ಮತ್ತು ಫೀಚರ್‌ಗಳು
ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ ಒಳಗೆ ಕ್ಯಾಬಿನ್ ಲೇಔಟ್ ನಿರ್ಗಮಿತ ಮಾಡೆಲ್‌ನಲ್ಲಿ ಇರುವಂತೆಯೇ ಇದೆ. ಇಲ್ಲಿ ಹೇಳಲಾಗುವ ಒಂದು ಪ್ರಮುಖ ವ್ಯತ್ಯಾಸವೆಂದರೆ, ಟಚ್‌ಸ್ಕ್ರೀನ್ ಕೆಳಗೆ ಹೊಸ ಕಂಟ್ರೋಲ್ ಪ್ಯಾನೆಲ್ ಅನ್ನು ಅಳವಡಿಸಿರುವುದು.
ಹೊಸ 360-ಡಿಗ್ರಿ ಕ್ಯಾಮರಾ ಹೊರತಾಗಿ, ಕಿಯಾದ ಸಬ್ -4m SUV ಕೂಡಾ ಈಗ ಸಲ್ಟೋಸ್‌ನಲ್ಲಿ ಇರುವಂತಹ 10.25-ಇಂಚು ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬರುತ್ತದೆ. ಪಟ್ಟಿಯಲ್ಲಿರುವ ಇತರ ದುಬಾರಿ ಫೀಚರ್‌ಗಳೆಂದರೆ, 4-ವೇ ಚಾಲಿತ ಡ್ರೈವರ್ ಸೀಟ್ (ಹ್ಯುಂಡೈ ವೆನ್ಯೂನಲ್ಲಿ ಕಾಣುವಂತೆ), ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟಡ್ ಫ್ರಂಟ್ ಸೀಟುಗಳು ಮತ್ತು ಕ್ರೂಸ್ ಕಂಟ್ರೋಲ್.
ಇದರ ಸುರಕ್ಷಾ ಫೀಚರ್‌ಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಪಡೆದಿಲ್ಲವಾದರೂ, ಇದರ ಟಾಪ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಮತ್ತು 10 ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಪಡೆದಿದೆ. ಇತರ ಸುರಕ್ಷತಾ ಸಾಧನಗಳೆಂದರೆ, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಲು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ಗ್ ಸಿಸ್ಟಮ್ (TPMS).
ಇಂಜಿನ್-ಗೇರ್‌ಬಾಕ್ಸ್ ಆಯ್ಕೆಗಳು
2024 ಸೋನೆಟ್, ನಿರ್ಗಮಿತ ಮಾಡಲ್ ಹೊಂದಿದ್ದ ಪವರ್‌ಟ್ರೇನ್ ಆಯ್ಕೆಗಳನ್ನೇ ಪಡೆದಿದೆ. ಆದಾಗ್ಯೂ, ಕಿಯಾ 2023ರಲ್ಲಿ ತೆಗೆದುಹಾಕಲಾದ ಡೀಸೆಲ್-ಮ್ಯಾನುವಲ್ ಕಾಂಬೋ ಅನ್ನು ಮತ್ತೊಮ್ಮೆ ತಂದಿದೆ. ಕಿಯಾ ಸಬ್-4m SUV ಯ ಇಂಜಿನ್‌ವಾರು ಉತ್ಪಾದನೆ ಮತ್ತು ಗೇರ್‌ಬಾಕ್ಸ್ ಆಯ್ಕೆಗಳನ್ನು ಈ ಕೆಳಗೆ ನೀಡಲಾಗಿದೆ:
-
1.2-ಲೀಟರ್ ಪೆಟ್ರೋಲ್ (83 PS/115 Nm): 5-ಸ್ಪೀಡ್ MT
-
1-ಲೀಟರ್ ಟರ್ಬೋ-ಪೆಟ್ರೋಲ್ (120 PS/172 Nm): 6-ಸ್ಪೀಡ್ iMT, 7-ಸ್ಪೀಡ್ DCT
-
1.5-ಲೀಟರ್ ಡೀಸೆಲ್ (116 PS/250 Nm): 6-ಸ್ಪೀಡ್ MT (ಹೊಸತು), 6-ಸ್ಪೀಡ್ iMT, 6-ಸ್ಪೀಡ್ AT
ಬಿಡುಗಡೆ ಮತ್ತು ಸ್ಪರ್ಧೆ
ಕಿಯಾ ಸೋನೆಟ್ ಫೇಸ್‌ಲಿಫ್ಟ್ ಜನವರಿ 2024ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಇದರ ಆರಂಭಿಕ ಬೆಲೆ ರೂ 8 ಲಕ್ಷ (ಎಕ್ಸ್-ಶೋರೂಂ) ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್, ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್.
ಕಿಯಾ ಸೋನೆಟ್‌ಗೆ ಮಾಡಲದ ಡಿಸೈನ್ ಮತ್ತು ಫೀಚರ್ ಬದಲಾವಣೆಗಳು ನಿಮಗೆ ಇಷ್ಟವಾಗಿದೆಯೇ ಎಂಬುದನ್ನು ಕೆಳಗಿನ ಕಮೆಂಟ್ ಮೂಲಕ ತಿಳಿಸಿ.
ಇದನ್ನೂ ಓದಿ: 2023ರಲ್ಲಿ ಭಾರತದ ಕಿಯಾದಲ್ಲಿ ಪಾದಾರ್ಪಣೆಗೊಂಡ ಎಲ್ಲಾ ಹೊಸ ಫೀಚರ್‌ಗಳು
ಇನ್ನಷ್ಟು ಓದಿ : ಕಿಯಾ ಸೋನೆಟ್ ಆಟೋಮ್ಯಾಟಿಕ್