ಭಾರತದಲ್ಲಿ Skoda Kushaq ಮತ್ತು Skoda Slaviaದ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆ ಯಾವ ವರ್ಷದಲ್ಲಿ ?
ಸ್ಕೋಡಾ ಸ್ಲಾವಿಯಾ ಗಾಗಿ shreyash ಮೂಲಕ ಜುಲೈ 17, 2024 06:26 pm ರಂದು ಪ್ರಕಟಿಸಲಾಗಿದೆ
- 223 Views
- ಕಾಮೆಂಟ್ ಅನ್ನು ಬರೆಯಿರಿ
2026 ಸ್ಲಾವಿಯಾ ಮತ್ತು ಕುಶಾಕ್ ಹೊಸ ಡಿಸೈನ್ ಗಳು ಮತ್ತು ಫೀಚರ್ ಗಳನ್ನು ಪಡೆಯಲಿದೆ, ಆದರೆ ಈಗಿರುವ ಮಾಡೆಲ್ ಗಳ ಎಂಜಿನ್ ಗಳನ್ನೇ ಮುಂದುವರಿಸುವ ಸಾಧ್ಯತೆಯಿದೆ
- ಹೊರಭಾಗದ ಅಪ್ಡೇಟ್ ಗಳಲ್ಲಿ ಕನೆಕ್ಟೆಡ್ LED DRL ಗಳು, ಹೊಸ LED ಹೆಡ್‌ಲೈಟ್‌ಗಳು ಮತ್ತು ಕನೆಕ್ಟೆಡ್ LED ಟೈಲ್ ಲೈಟ್‌ಗಳಂತಹ ಆಧುನಿಕ ಡಿಸೈನ್ ಫೀಚರ್ ಗಳು ಸೇರಿವೆ.
- ಒಳಭಾಗದಲ್ಲಿ, ಕುಶಾಕ್ ಮತ್ತು ಸ್ಲಾವಿಯಾ ಎರಡೂ ಅಪ್ಡೇಟ್ ಆಗಿರುವ ಡಿಸೈನ್ ಮತ್ತು ಹೊಸ ಕಲರ್ ಥೀಮ್‌ಗಳನ್ನು ಪಡೆಯಬಹುದು.
- ಹೊಸ ಫೀಚರ್ ಗಳಲ್ಲಿ 360-ಡಿಗ್ರಿ ಕ್ಯಾಮರಾ ಮತ್ತು ADAS ಒಳಗೊಂಡಿರಬಹುದು.
- ಈಗಾಗಲೇ ಇರುವ 1-ಲೀಟರ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಬಳಸುವ ಸಾಧ್ಯತೆಯಿದೆ.
- ಇದು ಪ್ರಸ್ತುತ ಮಾಡೆಲ್ ಗಳಿಗಿಂತ ಹೆಚ್ಚು ದುಬಾರಿಯಾಗುವ ನಿರೀಕ್ಷೆಯಿದೆ.
ಸ್ಕೋಡಾ ಕುಶಾಕ್ ಅನ್ನು ಜೂನ್ 2021 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಯಿತು, ನಂತರದ ವರ್ಷ ಮಾರ್ಚ್ 2022 ರಲ್ಲಿ ಸ್ಲಾವಿಯಾವನ್ನು ಕೂಡ ಬಿಡುಗಡೆ ಮಾಡಲಾಯಿತು. ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಎರಡೂ ಅಪ್ಡೇಟ್ ಗಳಿಗೆ ಕಾಯುತ್ತಿವೆ ಮತ್ತು 2026 ರ ವೇಳೆಗೆ ಸ್ಕೋಡಾ ಫೇಸ್‌ಲಿಫ್ಟ್ ಮಾಡಲಾದ ಮಾಡೆಲ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ನಮ್ಮ ಮೂಲಗಳು ಹೇಳುತ್ತಿವೆ. ಈ ಫೇಸ್‌ಲಿಫ್ಟ್ ಆಗಿರುವ ಸ್ಕೋಡಾ ಕಾರುಗಳು ಯಾವ ಅಪ್ಡೇಟ್ ಗಳನ್ನು ಪಡೆಯಬಹುದು, ಅದರ ವಿವರಗಳು ಇಲ್ಲಿವೆ.
ಹೊಚ್ಚಹೊಸ ಡಿಸೈನ್
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್‌ನ ಮೂಲ ಆಕಾರವನ್ನು ಉಳಿಸಿಕೊಳ್ಳಲಿದೆ, ಆದರೆ ಈಗಿರುವ ಮಾಡೆಲ್ ಗಳಿಗೆ ಹೋಲಿಸಿದರೆ ಎರಡೂ ಕಾರುಗಳು ಹೊಸ ಡಿಸೈನ್ ಗಳನ್ನು ಪಡೆಯಲಿವೆ. ಅಪ್ಡೇಟ್ ಗಳಲ್ಲಿ ರೀಸ್ಟೈಲ್ ಮಾಡಿರುವ ಬಂಪರ್‌ಗಳು, ಅಪ್ಡೇಟ್ ಆಗಿರುವ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು ಮತ್ತು ಹೊಸ ಅಲೊಯ್ ವೀಲ್ ಗಳನ್ನು ಒಳಗೊಂಡಿರಬಹುದು. ಇಂದಿನ ಹಲವಾರು ಆಧುನಿಕ ಕಾರುಗಳಲ್ಲಿ ಕಂಡುಬರುವ ಕನೆಕ್ಟೆಡ್ LED ಲೈಟಿಂಗ್ ನಂತಹ ಆಧುನಿಕ ಡಿಸೈನ್ ಅಂಶಗಳನ್ನು ಕೂಡ ಪಡೆಯಬಹುದು.
ಹೊರಭಾಗದ ಜೊತೆಗೆ, ಕುಶಾಕ್ ಮತ್ತು ಸ್ಲಾವಿಯಾದ ಕ್ಯಾಬಿನ್ ಕೂಡ ಕೆಲವು ಅಪ್ಡೇಟ್ ಗಳನ್ನು ಪಡೆಯುವ ನಿರೀಕ್ಷೆಯಿದೆ. ಈ ಅಪ್‌ಡೇಟ್‌ಗಳು ರಿವೈಸ್ ಆಗಿರುವ ಡ್ಯಾಶ್‌ಬೋರ್ಡ್ ಲೇಔಟ್, ಹೊಸ ಥೀಮ್‌ಗಳು ಮತ್ತು ವಿವಿಧ ಬಣ್ಣದ ಸೀಟ್ ಅಪ್ಹೋಲ್‌ಸ್ಟರಿಯನ್ನು ಒಳಗೊಂಡಿರಬಹುದು.
ಹೊಸ ಫೀಚರ್ ಗಳು
ಸ್ಕೋಡಾ ಭಾರತದಲ್ಲಿರುವ ಕುಶಾಕ್ ಮತ್ತು ಸ್ಲಾವಿಯಾಗೆ 10-ಇಂಚಿನ ಟಚ್‌ಸ್ಕ್ರೀನ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮ್ಯಾಟಿಕ್ AC, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಪವರ್ಡ್ ಫ್ರಂಟ್ ಸೀಟ್‌ಗಳಂತಹ ಫೀಚರ್ ಗಳನ್ನು ಈಗಾಗಲೇ ನೀಡುತ್ತಿದೆ. ಈ ಫೇಸ್ ಲಿಫ್ಟ್ ನೊಂದಿಗೆ ಸ್ಕೋಡಾ ಕುಶಾಕ್‌ಗೆ ಪನರೋಮಿಕ್ ಸನ್‌ರೂಫ್ ಅನ್ನು ಪರಿಚಯಿಸಬಹುದು, ಹಾಗೆಯೇ ಸ್ಲಾವಿಯಾ ಮತ್ತು ಕುಶಾಕ್ ಎರಡೂ ಕೂಡ 360-ಡಿಗ್ರಿ ಕ್ಯಾಮೆರಾದೊಂದಿಗೆ ಬರುವ ನಿರೀಕ್ಷೆಯಿದೆ.
ಎರಡೂ ಮಾಡೆಲ್ ಗಳಲ್ಲಿ ಇರುವ ಸುರಕ್ಷತಾ ಫೀಚರ್ ಗಳಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಸೇರಿವೆ. ಅಪ್‌ಡೇಟ್‌ನೊಂದಿಗೆ, ಸ್ಕೋಡಾ ತನ್ನ ಕುಶಾಕ್ ಮತ್ತು ಸ್ಲಾವಿಯಾಗೆ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಅನ್ನು ನೀಡಬಹುದು. ಇದು ಅವುಗಳ ಸೆಗ್ಮೆಂಟ್ ನ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿಯಲ್ಲಿ ಕೂಡ ನೀಡಲಾಗಿದೆ.
ಇದನ್ನು ಕೂಡ ಓದಿ: 2025 ರ ಆರಂಭದಲ್ಲಿ ಭಾರತಕ್ಕೆ ಬರಲಿರುವ ಸ್ಕೋಡಾದ ಸಬ್-4m SUV ಮತ್ತೊಂದು ಟೀಸರ್ - ಹಿಂಭಾಗದ ಲುಕ್ ಔಟ್
ಪವರ್‌ಟ್ರೇನ್‌ಗೆ ಯಾವುದೇ ಬದಲಾವಣೆಗಳಿಲ್ಲ
ಸ್ಕೋಡಾ ತನ್ನ ಕುಶಾಕ್ ಮತ್ತು ಸ್ಲಾವಿಯಾ ಫೇಸ್‌ಲಿಫ್ಟ್‌ಗೆ ಈಗಿರುವ ಪವರ್‌ಟ್ರೇನ್ ಆಯ್ಕೆಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಅವುಗಳ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ನೀಡಲಾಗಿದೆ:
ಇಂಜಿನ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
115 ಪಿಎಸ್ |
150 ಪಿಎಸ್ |
Torque ಟಾರ್ಕ್ |
178 ಎನ್‌ಎಮ್ |
250 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, 6-ಸ್ಪೀಡ್ AT* |
6-ಸ್ಪೀಡ್ MT, 7-ಸ್ಪೀಡ್ DCT** |
*AT: ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
**DCT: ಡುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಪ್ರಸ್ತುತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಕುಶಾಕ್ |
ಸ್ಕೋಡಾ ಸ್ಲಾವಿಯಾ |
ರೂ. 10.89 ಲಕ್ಷದಿಂದ ರೂ. 18.79 ಲಕ್ಷ |
ರೂ. 10.69 ಲಕ್ಷದಿಂದ ರೂ. 18.69 ಲಕ್ಷ |
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಯಾಗಿದೆ
ಕುಶಾಕ್ ಮತ್ತು ಸ್ಲಾವಿಯಾ ಫೇಸ್‌ಲಿಫ್ಟ್ ವರ್ಷನ್ ಗಳು ಈಗಿರುವ ಮಾಡೆಲ್ ಗಳಿಗಿಂತ ಹೆಚ್ಚು ದುಬಾರಿಯಾಗುವ ಸಾಧ್ಯತೆಯಿದೆ. ಫೇಸ್‌ಲಿಫ್ಟ್ ಆಗಿರುವ ಸ್ಕೋಡಾ ಕುಶಾಕ್ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರ್ಡರ್, ಫೋಕ್ಸ್‌ವ್ಯಾಗನ್ ಟೈಗನ್, ಹೋಂಡಾ ಎಲಿವೇಟ್ ಮತ್ತು MG ಆಸ್ಟರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಮತ್ತೊಂದೆಡೆ, 2026 ರ ಸ್ಲಾವಿಯಾ ಹೋಂಡಾ ಸಿಟಿ, ಫೋಕ್ಸ್‌ವ್ಯಾಗನ್ ವರ್ಟಸ್, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸಿಯಾಜ್‌ನೊಂದಿಗೆ ತನ್ನ ಪೈಪೋಟಿಯನ್ನು ಮುಂದುವರಿಸುತ್ತದೆ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ : ಸ್ಲಾವಿಯಾ ಆನ್ ರೋಡ್ ಬೆಲೆ