Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಕರ್ವ್‌ ವಾಹನದ ಕೂಪೆ ವಿನ್ಯಾಸದ ಕುರಿತು ಮಾಹಿತಿ ಹೊರಗೆಡಹಿರುವ ಸ್ಪೈ ಶಾಟ್‌ ಗಳು

published on ಅಕ್ಟೋಬರ್ 24, 2023 01:48 pm by rohit for ಟಾಟಾ ಕರ್ವ್‌

ಇದನ್ನು ICE (ಇಂಟರ್‌ ನ್ಯಾಷನಲ್‌ ಕಂಬಷನ್‌ ಎಂಜಿನ್)‌ ಮಾದರಿ ಮತ್ತು EV ಆಗಿಯೂ ಹೊರತರಲಾಗುತ್ತಿದ್ದು, 2024ರಲ್ಲಿ ಬಿಡುಗಡೆ ಮಾಡಲಾಗುತ್ತದೆ

  • ಟಾಟಾ ಕರ್ವ್‌ ಅನ್ನು ಅಟೋ ಎಕ್ಸ್ಪೊ 2023ರಲ್ಲಿ ಅದರ ಪರಿಕಲ್ಪನೆಯ ರೂಪದಲ್ಲಿ ಪ್ರದರ್ಶಿಸಲಾಗಿತ್ತು.
  • ಇತ್ತೀಚಿನ ಚಿತ್ರಗಳು, ಹೊಸ ನೆಕ್ಸನ್‌ ವಾಹನದಲ್ಲಿರುವಂತೆ ಸ್ಪ್ಲಿಟ್‌ ಹೆಡ್‌ ಲೈಟ್‌ ಗಳೊಂದಿಗೆ ಇರುವ LED ಲೈಟಿಂಗ್‌ ವ್ಯವಸ್ಥೆಯನ್ನು ಬಹಿರಂಗಪಡಿಸಿವೆ.
  • ಒಳಗಡೆಗೆ ಇದು ಡ್ಯುವಲ್ ಡಿಸ್ಪ್ಲೇಗಳು,‌ ಬ್ಯಾಕ್‌ ಲಿಟ್‌ ಟಾಟಾ ಲೋಗೊ ಜೊತೆಗೆ 2 ಸ್ಪೋಕ್‌ ಸ್ಟಿಯರಿಂಗ್‌ ವೀಲ್ ಮತ್ತು ಸ್ಪರ್ಶ ಆಧರಿತ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನ್ಲ ಅನ್ನು ಹೊಂದಿದೆ.
  • ವೆಂಟಿಲೇಟೆಡ್‌ ಸೀಟುಗಳು, 6 ಏರ್‌ ಬ್ಯಾಗುಗಳು, ಮತ್ತು 360 ಡಿಗ್ರಿ ಕ್ಯಾಮರಾ ಇತ್ಯಾದಿ ವೈಶಿಷ್ಟ್ಯಗಳನ್ನು ಸಹ ಇದು ಹೊಂದಿದೆ.
  • ಹೊಸ 1.2 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಮೂಲಕ ಇದನ್ನು ಚಲಾಯಿಸಲಾಗುತ್ತದೆ ಹಾಗೂ ನೆಕ್ಸನ್‌ ಕಾರಿನ 7 ಸ್ಪೀಡ್‌ DCT ಯನ್ನು ಇದು ಪಡೆಯಲಿದೆ.
  • ಟಾಟಾ ಕರ್ವ್‌ ವಾಹನದ ಬೆಲೆಯು ರೂ. 10.5 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ.

ಈ ವರ್ಷದಲ್ಲಿ ಮೊದಲ ಬಾರಿಗೆ ಜುಲೈ ತಿಂಗಳಿನಲ್ಲಿ ಕ್ಯಾಮರಾದ ಕಣ್ಣಿಗೆ ಬಿದ್ದ ನಂತರ ಟಾಟಾ ಕರ್ವ್ ವಾಹನವು ಪರೀಕ್ಷಾರ್ಥ ಚಾಲನೆಯ ಸಂದರ್ಭದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಈ SUV ಯು ಉತ್ಪಾದನೆಗೆ ಸಿದ್ಧವಾಗಿರುವುದು ಸ್ಪಷ್ಟವಾಗುತ್ತಿದೆ. ಇತ್ತೀಚೆಗೆ ಕಾಣಿಸಿಕೊಂಡಿರುವ ಈ ಪರೀಕ್ಷಾರ್ಥ ವಾಹನವನ್ನು ಹೆಚ್ಚಿನ ಪ್ರಮಾಣದಲ್ಲಿ ಮರೆಮಾಚಿಲ್ಲ. ಅಲ್ಲದೆ ಮುಂದಿನ ಪ್ರತಿಸ್ಪರ್ಧಿ ಎನಿಸಿರುವ ಹ್ಯುಂಡೈ ಕ್ರೆಟಾ ಕಾರಿನ ಹೊಸ ವಿನ್ಯಾಸಗಳ ಅನೇಕ ವಿವರಗಳನ್ನು ಹೊರಗೆಡಹಿದೆ.

ಹೊಸ ವಿವರಗಳು

ಹೊಸ ಪರೀಕ್ಷಾರ್ಥ ವಾಹನವು, ಈ ಕಾರಿನ ಕೂಪೆ ರೂಪದ ರೂಫ್‌ ಲೈನ್‌ ಅನ್ನು ಮೊದಲ ಬಾರಿಗೆ ತೋರಿಸಿದ್ದು, ಇದು BMW ಮತ್ತು ಮರ್ಸಿಡಿಸ್‌ ಬೆಂಜ್‌ ಮುಂತಾದ SUV ಕೂಪೆಗಳಲ್ಲಿರುವ ವಿನ್ಯಾಸವನ್ನು ಹೋಲುತ್ತವೆ. ಇದು ಮೊದಲ ಬಾರಿಗೆ LED ಹೆಡ್‌ ಲೈಟ್‌ ಸೆಟಪ್‌ ಅನ್ನು ತೋರಿಸಿದ್ದು, ಇತ್ತೀಚೆಗೆ ಬಿಡುಗಡೆ ಮಾಡಿದ ಟಾಟಾ ಮಾದರಿಗಳಾದ ನೆಕ್ಸನ್, ಹ್ಯಾರಿಯರ್ ಮತ್ತು ಸಫಾರಿಗಳಲ್ಲಿರುವ ಸೆಟಪ್‌ ಅನ್ನೇ ಹೋಲುತ್ತವೆ. ಅಲ್ಲದೆ ಹೆಡ್‌ ಲೈಟ್‌ ಗಳನ್ನು ಲಂಬಾಂತರವಾಗಿ ಇಡಲಾಗಿದೆ.

ಪ್ರೊಫೈಲ್‌ ನಲ್ಲಿ ಇದು, ಅಟೋ ಎಕ್ಸ್ಪೊ 2023ರಲ್ಲಿ ಪ್ರದರ್ಶಿಸಿದ ಕರ್ವ್‌ ಕಾನ್ಸೆಪ್ಟ್‌ ಗಿಂತಲೂ ಭಿನ್ನವಾದ ಅಲೋಯ್‌ ವೀಲ್‌ ಸೆಟಪ್‌ ಅನ್ನು ಹೊಂದಿತ್ತು. ಹಿಂದುಗಡೆಯಿಂದ ಹೆಚ್ಚೇನೂ ಕಾಣಿಸದೆ ಇದ್ದರೂ, ಈ ಭಾಗವು ಕರ್ವ್‌ ಕಾನ್ಸೆಪ್ಟ್‌ ನಂತೆಯೇ ಇದ್ದು, ಉದ್ದನೆಯ ಮತ್ತು ಕೋನೀಯ LED ಟೇಲ್‌ ಲೈಟ್‌ ಗಳು ಮತ್ತು ದೊಡ್ಡ ಗಾತ್ರದ ಟೇಲ್‌ ಗೇಟ್‌ ಅನ್ನು ಇದು ಹೊಂದಿರಲಿದೆ.

ಒಳಗಡೆ ಹೇಗಿರಲಿದೆ?

ಇತ್ತೀಚಿನ ಸ್ಪೈ ಶಾಟ್‌ ಗಳು ಟಾಟಾದ SUV-ಕೂಪೆ ವಾಹನದ ಕುರಿತು ಯಾವುದೇ ಮಾಹಿತಿಯನ್ನು ನೀಡದಿದ್ದರೂ ಇದು ಹೊಸ ನೆಕ್ಸನ್ ಜೊತೆಗೆ ಸಾಮ್ಯತೆಯನ್ನು ಹೊಂದಿದೆ ಎನ್ನಲಾಗಿದೆ. ಇದು 2 ದೊಡ್ಡ ಡಿಸ್ಪ್ಲೇಗಳು, ಬ್ಯಾಕ್‌ ಲಿಟ್‌ ʻಟಾಟಾʼ ಲೋಗೊ ಜೊತೆಗೆ ಆಧುನಿಕ 2 ಸ್ಪೋಕ್‌ ಸ್ಟಿಯರಿಂಗ್‌ ವೀಲ್‌, ಮತ್ತು ಹೊಸ ಸ್ಪರ್ಶ ಆಧರಿತ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಅನ್ನು ಹೊಂದಿರಲಿದೆ.

ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಟಾಟಾ ಕರ್ವ್‌ ವಾಹನವು 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೆ (ನೆಕ್ಸನ್‌ ಮತ್ತು ನೆಕ್ಸನ್‌ EV), ವೆಂಟಿಲೇಟೆಡ್‌ ಸೀಟುಗಳು, ಕ್ರೂಸ್‌ ಕಂಟ್ರೋಲ್‌, ಮತ್ತು ಪುಶ್‌ ಬಟನ್‌ ಸ್ಟಾರ್ಟ್/‌ಸ್ಟಾಪ್‌ ಗಳನ್ನು ಪಡೆಯಲಿದೆ. ಇದರ ಸುರಕ್ಷತಾ ಪಟ್ಟಿಯು 6 ಏರ್‌ ಬ್ಯಾಗ್‌ ಗಳು, ISOFIX ಚೈಲ್ಡ್‌ ಸೀಟ್‌ ಮೌಂಟ್‌ ಗಳು, ಮುಂದಿನ ಮತ್ತು ಹಿಂದಿನ ಪಾರ್ಕಿಂಗ್‌ ಸೆನ್ಸಾರ್‌ ಗಳು, 360 ಡಿಗ್ರಿ ಕ್ಯಾಮರಾವನ್ನು ಒಳಗೊಂಡಿದೆ. ಜತೆಗೆ ಅಟೋನೋಮಸ್‌ ಎಮರ್ಜೆನ್ಸಿ ಬ್ರೇಕಿಂಗ್‌ ಮತ್ತು ಬ್ಲೈಂಡ್‌ ಸ್ಪಾಟ್‌ ಅಸಿಸ್ಟ್‌ ಇತ್ಯಾದಿಗಳು ಸೇರಿದಂತೆ ಕೆಲವು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಗಳನ್ನು ಒದಗಿಸಲಿದೆ.

ಇದನ್ನು ಸಹ ಓದಿರಿ: ಟಾಟಾ ಹ್ಯಾರಿಯರ್‌ ಅಥವಾ ಹ್ಯಾರಿಯರ್‌ ಪೆಟ್ರೋಲ್‌ - ಯಾವುದು ಮೊದಲಿಗೆ ಬಿಡುಗಡೆಯಾಗಲಿದೆ?

ಪವರ್‌ ಟ್ರೇನ್‌ ವಿವರಗಳು

ಟಾಟಾ ಕರ್ವ್‌ ವಾಹನವನ್ನು ಹೊಸ ಟರ್ಬೊಚಾರ್ಜ್ಡ್ 1.2-ಲೀಟರ್‌ ಪೆಟ್ರೋಲ್‌ ಎಂಜಿನ್ (125PS/225Nm)‌ ಜೊತೆಗೆ ಹೊರತರಲಿದೆ. ಇದರ ಗೇರ್‌ ಬಾಕ್ಸ್‌ ಆಯ್ಕೆಗಳ ಕುರಿತು ಇನ್ನೂ ಸ್ಪಷ್ಟ ಮಾಹಿತಿ ದೊರೆಯದೆ ಇದ್ದರೂ ನೆಕ್ಸನ್‌ ಫೇಸ್‌ ಲಿಫ್ಟ್‌ ನಲ್ಲಿ ಇರುವಂತೆಯೇ 7 ಸ್ಪೀಡ್‌ ಡ್ಯುವಲ್‌ ಕ್ಲಚ್‌ ಟ್ರಾನ್ಸ್‌ ಮಿಶನ್ (DCT)‌ ಅನ್ನು ಸಹ ಇದು ಒಳಗೊಂಡಿರುವ ಸಾಧ್ಯತೆ ಇದೆ. ಇತರ ಎಂಜಿನ್‌ ಗಳು ಏನೆಲ್ಲ ಹೊಂದಿರಲಿವೆ ಎನ್ನುವ ಕುರಿತು ಮಾಹಿತಿ ದೊರೆತಿಲ್ಲ.

ಇದು ಟಾಟಾದ ಜೆನ್2 ಪ್ಲಾಟ್‌ ಫಾರ್ಮ್‌ ಮೇಲೆ ನಿರ್ಮಿಸಲಾದ ಎಲೆಕ್ಟ್ರಿಕ್‌ ಇಟರೇಶನ್‌ ಅನ್ನು ಹೊಂದಿದ್ದು, 500km ಶ್ರೇಣಿಯನ್ನು ಕೊಡುವ ನಿರೀಕ್ಷೆ ಇದೆ. ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ಕುರಿತು ಸೀಮಿತ ಮಾಹಿತಿಯಷ್ಟೇ ದೊರೆತಿದೆ. EV ಕಾರು, ಇಂಟರ್ನಲ್‌ ಕಂಬಶನ್‌ ಎಂಜಿನ್ (ICE) ಮಾದರಿ ಹೊರಬರುವ ಮೊದಲೇ ರಸ್ತೆಗಿಳಿಯಲಿದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧೆ

ಟಾಟಾ ಕರ್ವ್ ವಾಹನವು ಸುಮಾರು ರೂ. 10.5 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ. ಇದು ಮಾರುತಿ ಗ್ರಾಂಡ್‌ ವಿಟಾರ, ಕಿಯಾ ಸೆಲ್ಟೋಸ್, ಫೋಕ್ಸ್‌ ವ್ಯಾಗನ್‌ ಟೈಗುನ್,‌ ಸ್ಕೋಡಾ ಕುಶಕ್,‌ ಹ್ಯುಂಡೈ ಕ್ರೆಟಾ, ಹೋಂಡಾ ಎಲೆವೇಟ್, ಟೊಯೊಟಾ ಅರ್ಬನ್‌ ಕ್ರೂಸರ್ ಹೈರೈಡರ್, ಸಿಟ್ರನ್ C3 ಏರ್‌ ಕ್ರಾಸ್, ಮತ್ತು MG ಆಸ್ಟರ್‌ ಇತ್ಯಾದಿ ಕಾಂಪ್ಯಾಕ್ಟ್‌ SUV ಗಳಿಗೆ ಸಾಟಿ ಎನಿಸುವ SUV ಕೂಪೆ ಕಾರು ಎನಿಸಲಿದೆ. ಕರ್ವ್ ಕಾರು 2024ರ ಮಧ್ಯದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

ಚಿತ್ರದ ಮೂಲ

r
ಅವರಿಂದ ಪ್ರಕಟಿಸಲಾಗಿದೆ

rohit

  • 91 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಕರ್ವ್‌

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ