• English
  • Login / Register

1 ಲಕ್ಷಕ್ಕೂ ಮಿಕ್ಕಿ XUV700 ಮತ್ತು XUV400 EV ಕಾರುಗಳನ್ನು ವಾಪಾಸ್‌ ಕರೆಸಿದ ಮಹೀಂದ್ರಾ

ಮಹೀಂದ್ರ ಎಕ್ಸ್‌ಯುವಿ 700 ಗಾಗಿ shreyash ಮೂಲಕ ಆಗಸ್ಟ್‌ 22, 2023 05:06 pm ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

XUV700 ಬಿಡುಗಡೆ ಮಾಡಿದ ನಂತರ ಇದನ್ನು ಎರಡನೇ ಬಾರಿ ವಾಪಾಸ್‌ ಕರೆಸಿದ್ದರೆ XUV400 EV ಪಾಲಿಗೆ ಇದು ಮೊದಲನೇ ಬಾರಿಯ ಘಟನೆಯಾಗಿದೆ

Mahindra XUV700 and XUV400 EV

  •  ಎಂಜಿನ್‌ ಬೇಯಲ್ಲಿ ವೈರಿಂಗ್‌ ಲೂಮ್‌ ತುಂಡಾಗುವ ಸಂಭಾವ್ಯ ಅಪಾಯದ ಕಾರಣ XUV700 ಅನ್ನು ಹಿಂದಕ್ಕೆ ಕರೆಯಲಾಗಿದೆ.
  •  XUV400 EV ಯಲ್ಲಿ ಬ್ರೇಕ್‌ ಪೊಟೆಂಶಿಯೋಮೀಟರ್‌ ನ ರಿಟರ್ನ್‌ ಸ್ಪ್ರಿಂಗ್‌ ನಲ್ಲಿ ದೋಷವಿರುವುದನ್ನು ಶಂಕಿಸಲಾಗಿದೆ.
  •  ಸುಮಾರು ಓಂದು ಲಕ್ಷಕ್ಕಿಂತಲೂ ಹೆಚ್ಚು XUV700 ಗಳು ಇದರಿಂದಾಗಿ ಬಾಧಿಸಲ್ಪಡಲಿದ್ದು, 3,500 ಕ್ಕಿಂತಲೂ ಹೆಚ್ಚಿನ XUV400 EV ಗಳನ್ನು ವಾಪಾಸ್‌ ಕರೆಸಲಾಗಿದೆ.
  •  ಸಂಬಂಧಿತ ತಪಾಸಣೆ ಮತ್ತು ಸರಿಪಡಿಸುವಿಕೆಯನ್ನು ಉಚಿತವಾಗಿ ನಡೆಸಲಾಗುವುದು.

 ಮಹೀಂದ್ರಾ ಸಂಸ್ಥೆಯು ತನ್ನ ಎರಡು SUVಗಳಾದ XUV700 ಮತ್ತು XUV400 EV ಹಿಂದಕ್ಕೆ ಕರೆಸಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ, ಅಂದರೆ ಜೂನ್ 8, 2021 ರಿಂದ ಜೂನ್ 28, 2023‌ ರ ತನಕ ತಯಾರಿಸಿದ ಸುಮಾರು 1 ಲಕ್ಷಕ್ಕೂ ಮಿಕ್ಕಿದ ಮಹೀಂದ್ರಾ XUV700 ವಾಹನಗಳು ಇದರಿಂದ ಬಾಧಿಸಲ್ಪಡಲಿವೆ. ಇನ್ನೊಂದೆಡೆ, ಫೆಬ್ರುವರಿ 16, 2023 ಮತ್ತು ಜೂನ್ 5, 2023ರ ನಡುವೆ ತಯಾರಿಸಿದ 3,500ಕ್ಕೂ ಮಿಕ್ಕಿದ XUV400 EV ವಾಹನಗಳು ಸಹ ಹಿಂದಕ್ಕೆ ಕರೆಯಲಾದ ವಾಹನಗಳ ಪಟ್ಟಿಯಲ್ಲಿ ಸೇರಿವೆ.

 

ಹಿಂದಕ್ಕೆ ಕರೆಯಲು ಕಾರಣ

Mahindra XUV400

 XUV700 ವಾಹನದಲ್ಲಿ, ಉಜ್ಜಿ ಹೋಗುವಿಕೆಯ ಕಾರಣ ಎಂಜಿನ್‌ ಬೇಯ ವೈರಿಂಗ್‌ ಲೂಮ್‌ ರೂಟಿಂಗ್‌ ನಲ್ಲಿ ತುಂಡಾಗುವ ಅಪಾಯವಿದ್ದು, ಅಧಿಕ ವಿದ್ಯುತ್‌ ಪ್ರವಾಹದ ಕಾರಣ ಅತಿಯಾದ ತಾಪ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ XUV400 ನಲ್ಲಿ, ಬ್ರೇಕ್‌ ಪೊಟೆಂಶಿಯೋಮೀಟರ್‌ ನ ಸ್ಪ್ರಿಂಗ್‌ ರಿಟರ್ನ್‌ ಆಕ್ಷನ್‌ ನಲ್ಲಿ ಪರಿಣಾಮಕಾರಿತ್ವದ ಕುರಿತು ಶಂಕೆ ವ್ಯಕ್ತವಾಗಿದೆ. ಸರಳವಾಗಿ ಹೇಳುವುದಾದರೆ, XUV400 EV ಯಲ್ಲಿರುವ ಸಂಭಾವ್ಯ ದೋಷವು ಬ್ರೇಕಿಂಗ್‌ ನಲ್ಲಿ ಚಾಲಕನ ಅನುಭವದ ಮೇಲೆ ಪ್ರಭಾವ ಬೀರಬಹುದು.

 ಇದನ್ನು ಸರಿಪಡಿಸುವುದಕ್ಕಾಗಿ ಮಹೀಂದ್ರಾ ಸಂಸ್ಥೆಯು ಈ ಬಾಧಿತ ವಾಹನಗಳ ಗ್ರಾಹಕರನ್ನು ವೈಯಕ್ತಿಕವಾಗಿ ಸಂಪರ್ಕಿಸಲಿದ್ದು, ಉಚಿತವಾಗಿ ಇವುಗಳ ತಪಾಸಣೆ ಮತ್ತು ಸರಿಪಡಿಸುವಿಕೆಯನ್ನು ಕೈಗೊಳ್ಳಲಿದೆ. 

 ಇದನ್ನು ಸಹ ಓದಿರಿ: ಮಹೀಂದ್ರಾ XUV400 EV ಈಗ 5 ಹೊಸ ಸುರಕ್ಷಾ ವೈಶಿಷ್ಟ್ಯಗಳೊಂದಿಗೆ!

 

ಈ ಹಿಂದೆ XUV700 ವಾಪಾಸ್‌ ಕರೆದಾಗ...

Mahindra XUV700

 ನವೆಂಬರ್‌ 2022ರಲ್ಲಿ ಮಹೀಂದ್ರಾ ಸಂಸ್ಥೆಯು ಮಹೀಂದ್ರಾ XUV700 ನ ಸುಮಾರು 12,500ಕ್ಕೂ ವಾಹನಗಳನ್ನು ಸ್ಕೋರ್ಪಿಯೊ N ಜೊತೆಗೆ ಹಿಂದಕ್ಕೆ ಕರೆದಿತ್ತು. SUV ಯ ಮ್ಯಾನುವಲ್‌ ವೇರಿಯೆಂಟ್‌ ಗಳಲ್ಲಿ ಕ್ಲಚ್‌ ಬೆಲ್‌ ಹೌಸಿಂಗ್‌ ಒಳಗಡೆ ಇರುವ ದೋಷಪೂರಿತ ರಬ್ಬರ್‌ ಬೆಲ್ಲೋ ಕಾರಣ ಈ ವಾಹನಗಳನ್ನು ವಾಪಾಸ್‌ ಕರೆಯಲಾಗಿತ್ತು. ಬಿಡಿಭಾಗದ ಉಚಿತ ಬದಲಾವಣೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಗಿತ್ತು.

 ಇದನ್ನು ಸಹ ಓದಿರಿ: ಭಾರತದಲ್ಲಿ 1 ಮನೆಗಳಿಗೆ ಪ್ರವೇಶಿಸಿದ ಮಹೀಂದ್ರಾ XUV700

 

XUV700 ಮತ್ತು XUV400: ಪವರ್‌ ಟ್ರೇನ್‌ ರಿಕ್ಯಾಪ್

Mahindra XUV700 engine

 XUV700‌ ವಾಹನವು ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಗಳೆರಡರ ಜೊತೆ ಬರುತ್ತದೆ: 2-ಲೀಟರ್ (200PS/380Nm) ಮತ್ತು 2.2-ಲೀಟರ್‌ ಡೀಸೆಲ್‌ ಎಂಜಿನ್ (185PS/450Nm‌ ತನಕ). ಎರಡೂ ಯೂನಿಟ್‌ ಗಳು 6-ಸ್ಪೀಡ್‌ ಮ್ಯಾನುವಲ್‌ ಅಥವಾ 6-ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಲಭ್ಯವಿದ್ದು, ಟಾಪ್‌ ಸ್ಪೆಕ್‌ ಡೀಸೆಲ್‌ ವೇರಿಯಂಟ್‌ ಗಳು ಐಚ್ಛಿಕ ಆಲ್‌ - ವೀಲ್‌ ಡ್ರೈಡ್‌ (AWD) ಡ್ರೈವ್‌ ಟ್ರೇನ್‌ ಜೊತೆಗೆ ದೊರೆಯುತ್ತವೆ.

 XUV400 EV ವಾಹನವು SUV ಯಾಗಿದ್ದು ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳೊಂದಿಗೆ ಬರುತ್ತದೆ: 34.5kWh ಮತ್ತು 39.4kWh. ಎರಡೂ ಯೂನಿಟ್‌ ಗಳನ್ನು 150PS ಮತ್ತು 310Nm ಸಿಂಗಲ್‌ ಎಲೆಕ್ಟ್ರಿಕ್‌ ಮೋಟಾರ್‌ ಜೊತೆಗೆ ಸರಿಹೊಂದಿಸಲಾಗಿದ್ದು, ಸಣ್ಣ ಬ್ಯಾಟರಿಯು MIDC ಕ್ಲೇಮು ಮಾಡುವ 375km ಚಾಲನಾ ಶ್ರೇಣಿ, ದೊಡ್ಡ ಬ್ಯಾಟರಿಯು 456km ದೂರದ ಶ್ರೇಣಿಯನ್ನು ಒದಗಿಸುತ್ತದೆ.

ಬೆಲೆ ಶ್ರೇಣಿ

 ಮಹೀಂದ್ರಾವು XUV700 ವಾಹನದ ಬೆಲೆಯನ್ನು ರೂ 14.01 ಲಕ್ಷದಿಂದ ರೂ 26.18 ಲಕ್ಷದ ನಡುವೆ ನಿಗದಿಪಡಿಸಿದರೆ, XUV400 EV ವಾಹನವು ರೂ. 15.99 ಲಕ್ಷದಿಂದ ರೂ. 19.39 ಲಕ್ಷದ ನಡುವೆ ಲಭ್ಯ (ಎಲ್ಲಾ ಬೆಲೆಗಳು ಎಕ್ಸ್‌ - ಶೋರೂಂ ಬೆಲೆಗಳಾಗಿವೆ). ಮೊದಲನೆಯ ವಾಹನವು ಹ್ಯುಂಡೇಯ ಅಲ್ಕಜಾರ್, MG ಹೆಕ್ಟರ್‌ ಪ್ಲಸ್ ಮತ್ತು ಟಾಟಾ ಸಫಾರಿ ಇತ್ಯಾದಿ ವಾಹನಗಳೊಂದಿಗೆ ಸ್ಪರ್ಧಿಸಿದರೆ, 5-ಸೀಟರ್‌ ಆವೃತ್ತಿಯು MG ಹೆಕ್ಟರ್, ಟಾಟಾ ಹ್ಯರಿಯರ್, ಮತ್ತು ಹ್ಯುಂಡೇ ಕ್ರೆಟಾದೊಂದಿಗೆ ಸ್ಪರ್ಧಿಸುತ್ತದೆ. ಎಲೆಕ್ಟ್ರಿಕ್ SUV‌ ವಾಹನವು ಟಾಟಾ ನೆಕ್ಸನ್‌ EV ಪ್ರೈಮ್ ಮತ್ತು ನೆಕ್ಸನ್ EV ಮ್ಯಾಕ್ಸ್‌ ವಾಹನಗಳ ಎದುರಾಳಿಯಾಗಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಹೀಂದ್ರಾ XUV700 ಆನ್‌ ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಎಕ್ಸ್‌ಯುವಿ 700

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience