ಎಂಎಸ್ ಧೋನಿ ಪ್ರೇರಿತ Citroen C3 ಮತ್ತು C3 Aircross ವಿಶೇಷ ಆವೃತ್ತಿಗಳು ಶೀಘ್ರದಲ್ಲೇ ಬಿಡುಗಡೆ
ಸಿಟ್ರೊನ್ ಸಿ3 ಗಾಗಿ ansh ಮೂಲಕ ಜೂನ್ 06, 2024 06:22 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಈ ವಿಶೇಷ ಎಡಿಷನ್‌ಗಳು ಎಕ್ಸಸ್ಸರಿಗಳು ಮತ್ತು ಧೋನಿ-ಪ್ರೇರಿತ ಡಿಕಾಲ್‌ಗಳೊಂದಿಗೆ ಬರುತ್ತವೆ, ಆದರೆ ಫೀಚರ್‌ಗಳ ಸೇರ್ಪಡೆಯಾಗುವ ಸಾಧ್ಯತೆ ತೀರ ಕಡಿಮೆ
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಇತ್ತೀಚೆಗೆ ಸಿಟ್ರೊಯೆನ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಮತ್ತು ಈ ಪಾಲುದಾರಿಕೆಯೊಂದಿಗೆ, ಕಾರು ತಯಾರಕರು ಈ ಕ್ರಿಕೆಟಿಗನಿಂದ ಪ್ರೇರಿತವಾದ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಸಿಟ್ರೊಯೆನ್ ಸಿ 3 ಮತ್ತು ಸಿಟ್ರೊಯೆನ್ ಸಿ 3 ಏರ್‌ಕ್ರಾಸ್‌ನ ಸ್ಪೇಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ಈ ವಿಶೇಷ ಆವೃತ್ತಿಗಳು ಏನನ್ನು ನೀಡಬಹುದು ಎಂಬುವುದರ ಬಗ್ಗೆ ನಮಗಿರುವ ನಿರೀಕ್ಷೆಯನ್ನು ಕೆಳಗೆ ತಿಳಿಸಲಾಗಿದೆ:
ಕಾಸ್ಮೆಟಿಕ್ ಬದಲಾವಣೆಗಳು
ಕಾರು ತಯಾರಕರ ಪ್ರಕಾರ, ಈ ಎರಡು ಮೊಡೆಲ್‌ಗಳ ವಿಶೇಷ ಆವೃತ್ತಿಗಳು ಕೆಲವು ಬಿಡಿಭಾಗಗಳೊಂದಿಗೆ ಮತ್ತು M.S. ಧೋನಿ ಪ್ರೇರಿತ ಸ್ಟಿಕ್ಕರ್‌ಗಳೊಂದಿಗೆ ಬರುತ್ತದೆ. ಕಾರು ತಯಾರಕರು ಹೇಳಲಾದ ವಿಶೇಷ ಎಡಿಷನ್‌ಗಳ ಬಗ್ಗೆ ಯಾವುದೇ ವಿವರಗಳು ಅಥವಾ ಚಿತ್ರಗಳನ್ನು ಬಹಿರಂಗಪಡಿಸಿಲ್ಲ, ಆದರೆ ಅವರು "7" ಸಂಖ್ಯೆಯನ್ನು ಡೆಕಾಲ್ ಆಗಿ (ಧೋನಿಯ ಜರ್ಸಿ ಸಂಖ್ಯೆಯನ್ನು) ನೀಡಬಹುದು ಮತ್ತು 2024ರ ಟಿ-20 ವಿಶ್ವಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಬೆಂಬಲಿಸಲು ಕೆಲವು ಬ್ಲೂ ಮತ್ತು ಆರೆಂಜ್ ಇನ್ಸರ್ಟ್‌ಗಳೊಂದಿಗೆ ಬರಬಹುದು.
ಯಾವುದೇ ಫೀಚರ್‌ಗಳ ಸೇರ್ಪಡೆಗಳಿಲ್ಲ
ಕಾರು ತಯಾರಕರು ಈ ಮೊಡೆಲ್‌ಗಳ ಕ್ಯಾಬಿನ್‌ಗಳಿಗೆ ಕೆಲವು ಎಕ್ಸಸ್ಸರಿಗಳನ್ನು ನೀಡಬಹುದಾದರೂ, ಈ ವಿಶೇಷ ಎಡಿಷನ್‌ನ ಭಾಗವಾಗಿ ಯಾವುದೇ ಹೊಸ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗುವುದಿಲ್ಲ. ಎರಡು ಮೊಡೆಲ್‌ಗಳ ಫೀಚರ್‌ಗಳ ಪಟ್ಟಿಯು ಒಂದೇ ಆಗಿರುತ್ತದೆ.
C3 ಮತ್ತು C3 ಏರ್‌ಕ್ರಾಸ್ ಎರಡೂ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಮ್ಯಾನ್ಯುವಲ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಮ್‌ಗಳನ್ನು ನೀಡುತ್ತವೆ.
ಇದನ್ನೂ ಓದಿ: ಭಾರತದಲ್ಲಿ ನಿಮ್ಮ ದೊಡ್ಡ ಕುಟುಂಬಕ್ಕೆ ಸೂಕ್ತವಾದ ಸಿಗುವ 7 ಅತ್ಯಂತ ಕೈಗೆಟುಕುವ ಬೆಲೆಯ 7-ಸೀಟರ್ SUV ಗಳು
ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಅವುಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಮತ್ತು ರಿಯರ್‌ವ್ಯೂ ಕ್ಯಾಮೆರಾದೊಂದಿಗೆ ಬರುತ್ತವೆ.
ಅದೇ ಪವರ್‌ಟ್ರೇನ್‌ಗಳು
ವೈಶಿಷ್ಟ್ಯಗಳಂತೆಯೇ, ಪವರ್‌ಟ್ರೇನ್‌ಗಳು ಸಹ ಒಂದೇ ಆಗಿರುತ್ತವೆ. ಎರಡೂ ಮೊಡೆಲ್‌ಗಳು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತವೆ, ಅದು 110 ಪಿಎಸ್ ಮತ್ತು 190 ಎನ್‌ಎಮ್ ಅನ್ನು ಉತ್ಪಾದಿಸುತ್ತದೆ, ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿದೆ. ಸಿ3 ಏರ್‌ಕ್ರಾಸ್‌ನಲ್ಲಿ, ಈ ಎಂಜಿನ್ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ.
ಇದನ್ನೂ ಓದಿ: MG Gloster Snowstorm ಮತ್ತು Desertstorm ಎಡಿಷನ್ ಬಿಡುಗಡೆ, ಬೆಲೆಗಳು 41.05 ಲಕ್ಷ ರೂ.ನಿಂದ ಪ್ರಾರಂಭ
ಮತ್ತೊಂದೆಡೆ, ಸಿ3ಯು 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ, ಇದು 82 ಪಿಎಸ್ ಮತ್ತು 115 ಎನ್‌ಎಮ್ ಅನ್ನು ಹೊರಹಾಕುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಮಾತ್ರ ಜೋಡಿಸಲಾಗಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
C3 ಮತ್ತು C3 ಏರ್‌ಕ್ರಾಸ್‌ನ ಸ್ಪೇಷಲ್ ಎಡಿಷನ್‌ಗಳು ರೆಗುಲರ್ ಆವೃತ್ತಿಗಳ ಮೇಲೆ ಹೆಚ್ಚುವರಿ ಬೆಲೆಯನ್ನು ಹೊಂದಿರುತ್ತದೆ. ಸಿಟ್ರೊಯೆನ್ ಸಿ3 ಬೆಲೆಗಳು 6.16 ಲಕ್ಷ ರೂ.ನಿಂದ 9 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ), ಮತ್ತು ಸಿ3 ಏರ್‌ಕ್ರಾಸ್‌ನ ಬೆಲೆಗಳು 9.99 ಲಕ್ಷ ರೂ.ನಿಂದ 14.11 ಲಕ್ಷ ರೂ.(ಎಕ್ಸ್ ಶೋ ರೂಂ) ವರೆಗೆ ಇರುತ್ತದೆ.
ಇನ್ನಷ್ಟು ಓದಿ: ಸಿಟ್ರೊಯೆನ್ C3 ಆನ್‌ರೋಡ್ ಬೆಲೆ