• English
  • Login / Register

Tata Curvv ಮತ್ತು Curvv EV ಮಾರುಕಟ್ಟಗೆ ಬರಲು ರೆಡಿ: ಬಿಡುಗಡೆಗೆ ದಿನಾಂಕ ಫಿಕ್ಸ್

ಟಾಟಾ ಕರ್ವ್‌ ಇವಿ ಗಾಗಿ shreyash ಮೂಲಕ ಜುಲೈ 17, 2024 06:53 pm ರಂದು ಪ್ರಕಟಿಸಲಾಗಿದೆ

  • 229 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಕರ್ವ್ ಮತ್ತು ಕರ್ವ್ ಇವಿಯನ್ನು ಜುಲೈ 19 ರಂದು ಅನಾವರಣ ಮಾಡಲಾಗುವುದು ಮತ್ತು EV ಯ ಬೆಲೆಯನ್ನು ಆಗಸ್ಟ್ 7, 2024 ರಂದು ಪ್ರಕಟಿಸಲಾಗುವುದು

Tata Curvv

  •  ಟಾಟಾ ಕರ್ವ್ ಭಾರತದಲ್ಲಿ ಲಭ್ಯವಾಗಲಿರುವ ಮೊದಲ ಮಾಸ್-ಮಾರ್ಕೆಟ್ SUV-ಕೂಪ್ ಆಗಲಿದೆ
  •  ಕೂಪ್ ಶೈಲಿಯ ರೂಫ್‌ಲೈನ್ ಮತ್ತು ಕನೆಕ್ಟೆಡ್ LED DRL ಗಳು ಮತ್ತು ಟೈಲ್ ಲೈಟ್‌ಗಳನ್ನು ಪಡೆಯಲಿದೆ
  •  ಕ್ಯಾಬಿನ್ ಒಳಗೆ ಇದು ಟಾಟಾ ನೆಕ್ಸಾನ್ EV ಯಲ್ಲಿರುವ ಡ್ಯಾಶ್‌ಬೋರ್ಡ್ ಅನ್ನು ಪಡೆಯಬಹುದು.
  •  12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಪನರೋಮಿಕ್ ಸನ್‌ರೂಫ್‌ನಂತಹ ಫೀಚರ್ ಗಳೊಂದಿಗೆ ಬರಬಹುದು.
  •  ಸುರಕ್ಷತೆಯ ವಿಷಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಪಡೆಯಬಹುದು.
  •  ಕರ್ವ್ ICE-ಮಾಡೆಲ್ 1.2-ಲೀಟರ್ T-GDI ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಹೊಂದುವ ನಿರೀಕ್ಷೆಯಿದೆ.
  •  ಮತ್ತೊಂದೆಡೆ ಕರ್ವ್ EV ಸುಮಾರು 500 ಕಿಮೀ ರೇಂಜ್ ಅನ್ನು ನೀಡಬಹುದು.
  •  ಕರ್ವ್ ICE ವರ್ಷನ್ ಬೆಲೆಯು ರೂ 11 ಲಕ್ಷ ಮತ್ತು ಕರ್ವ್ EV ಬೆಲೆಯು ರೂ 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.

 ಟಾಟಾ ಕರ್ವ್ ಮತ್ತು ಕರ್ವ್ EV ಇನ್ನು ಕೇವಲ ಮೂರು ದಿನಗಳಲ್ಲಿ ಅಂದರೆ ಜುಲೈ 19 ರಂದು ಲಾಂಚ್ ಆಗಲಿದೆ. ಟಾಟಾ ಕರ್ವ್ ಭಾರತದ ಮೊದಲ ಮಾಸ್-ಮಾರುಕಟ್ಟೆ SUV-ಕೂಪ್ ಆಗಿದೆ ಮತ್ತು ಜನಪ್ರಿಯ ಕಾಂಪ್ಯಾಕ್ಟ್ SUV ಸೆಗ್ಮೆಂಟ್ ನಲ್ಲಿ ಫಿಟ್ ಆಗಲಿದೆ. ಟಾಟಾದ ಮೊದಲ SUV-ಕೂಪ್‌ನ ಎಲೆಕ್ಟ್ರಿಕ್ ವರ್ಷನ್ ಬೆಲೆಯನ್ನು ಮಾತ್ರ ಆಗಸ್ಟ್ 7, 2024 ರಂದು ಘೋಷಿಸಲಾಗುವುದು. ಕರ್ವ್ ನ ICE ವರ್ಷನ್ ಅನ್ನು ಕರ್ವ್ EV ನಂತರ ಬಿಡುಗಡೆ ಮಾಡಲಾಗುವುದು. ಲಾಂಚ್ ಆಗಲು ಸಿದ್ದವಾಗಿರುವ ಕರ್ವ್ ನ ಇನ್ನಷ್ಟು ವಿವರಗಳು ಇಲ್ಲಿದೆ.

ಈಗಿರುವ ಟಾಟಾ ಕಾರುಗಳಿಂದ ಪಡೆದ ಡಿಸೈನ್ ಫೀಚರ್ ಗಳು

Tata Curvv front

 ಟಾಟಾ ಕರ್ವ್ ಮೊದಲ ಮಾಸ್ ಮಾರುಕಟ್ಟೆ SUV-ಕೂಪ್ ಆಗಿದ್ದರೂ ಕೂಡ ಇತ್ತೀಚೆಗೆ ಫೇಸ್‌ಲಿಫ್ಟ್ ಆಗಿರುವ ಟಾಟಾ SUVಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯಲ್ಲಿರುವ ಅನೇಕ ಡಿಸೈನ್ ಅಂಶಗಳನ್ನು ಪಡೆಯುತ್ತದೆ. ಮುಂಭಾಗದಲ್ಲಿ, ಇದು ಕನೆಕ್ಟೆಡ್ LED DRL ಸೆಟಪ್ ಅನ್ನು ಒಳಗೊಂಡಿದೆ, ಮುಂಭಾಗದ ಬಂಪರ್‌ನಲ್ಲಿ ಹೆಡ್‌ಲೈಟ್‌ಗಳನ್ನು ಇರಿಸಲಾಗಿದೆ ಮತ್ತು ICE ವರ್ಷನ್ ಗೆ ಗ್ರಿಲ್ ಅನ್ನು ನೀಡಲಾಗಿದೆ (ಇದು EV ಯಲ್ಲಿ ಕ್ಲೋಸ್ಡ್ ಆಫ್ ಆಗಿದೆ)

Tata Curvv Rear

 ಸೈಡ್ ನಲ್ಲಿ, ಕರ್ವ್ ಉತ್ತಮ ಏರೋಡೈನಾಮಿಕ್ಸ್‌ಗಾಗಿ ಸ್ಪೋರ್ಟಿ ಅಲೊಯ್ ವೀಲ್ ಗಳನ್ನು (ನೆಕ್ಸಾನ್‌ನಲ್ಲಿರುವಂತೆ) ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಪಡೆಯುತ್ತದೆ (ಇದನ್ನು ಟಾಟಾದಲ್ಲಿ ಮೊದಲ ಬಾರಿಗೆ ನೀಡಲಾಗಿದೆ). ಹಿಂಭಾಗದಲ್ಲಿ, ಕರ್ವ್ ಕನೆಕ್ಟೆಡ್ LED ಟೈಲ್ ಲೈಟ್‌ಗಳನ್ನು ಪಡೆಯುತ್ತದೆ ಮತ್ತು ಎರಡೂ ಕನೆಕ್ಟೆಡ್ LED ಸೆಟಪ್‌ಗಳು ವೆಲ್ಕಮ್ ಮತ್ತು ಗುಡ್ ಬೈ ಫಂಕ್ಷನ್ ನೊಂದಿಗೆ ಬರುತ್ತವೆ. ಕರ್ವ್ EV ನಲ್ಲಿ ಕನೆಕ್ಟೆಡ್ LED DRL ಪಂಚ್ EV ಮತ್ತು ನೆಕ್ಸನ್ EV ಯಲ್ಲಿ ಇರುವಂತೆ ಚಾರ್ಜಿಂಗ್ ಇಂಡಿಕೇಟರ್ ಕೂಡ ಆಗಿ ಕೆಲಸ ಮಾಡುತ್ತವೆ.

ಕ್ಯಾಬಿನ್ ಮತ್ತು ನಿರೀಕ್ಷಿಸಲಾಗಿರುವ ಫೀಚರ್ ಗಳು

Tata Curvv cabin

 ಟಾಟಾ ಇನ್ನೂ ಕೂಡ ಕರ್ವ್ ನ ಒಳಭಾಗವನ್ನು ಸಂಪೂರ್ಣವಾಗಿ ತೋರಿಸಿಲ್ಲ, ಆದರೆ ಸ್ಪೈ ಫೋಟೋಗಳು ಮತ್ತು ಟೀಸರ್‌ಗಳು ಟಾಟಾ ನೆಕ್ಸಾನ್‌ಗೆ ಹೋಲುವ ಡಿಸೈನ್ ಅನ್ನು ಹೊಂದಿದೆ ಎಂದು ಸೂಚಿಸುತ್ತವೆ. ನೆಕ್ಸಾನ್‌ನಲ್ಲಿ 2-ಸ್ಪೋಕ್ ಸ್ಟೀರಿಂಗ್ ವೀಲ್‌ ಅನ್ನು ನೀಡಲಾಗಿದೆ, ಆದರೆ ಕರ್ವ್ ನಲ್ಲಿ ಬಹುಶಃ ಹ್ಯಾರಿಯರ್‌ನಂತೆ ಮಧ್ಯದಲ್ಲಿ ಹೊಳೆಯುವ ಟಾಟಾ ಲೋಗೋದೊಂದಿಗೆ 4-ಸ್ಪೋಕ್ ವೀಲ್ ಅನ್ನು ನೀಡಬಹುದು.

 ಟಾಟಾ ಕರ್ವ್ 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಪವರ್ಡ್ ಡ್ರೈವರ್ ಸೀಟ್, ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಫೀಚರ್ ಗಳೊಂದಿಗೆ ಬರಲಿದೆ. ಇದು ಸುರಕ್ಷತಾ ವಿಷಯದಲ್ಲಿ 6 ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಲೇನ್ ಕೀಪ್ ಅಸಿಸ್ಟ್, ಆಟೊನೊಮಸ್ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನಂತಹ ಲೆವೆಲ್ 2 ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಒಳಗೊಂಡಿರುತ್ತದೆ.

 ಕರ್ವ್ EV ಹೆಚ್ಚುವರಿಯಾಗಿ ಟಾಟಾ ನೆಕ್ಸಾನ್ EV ಯಲ್ಲಿ ನೋಡಬಹುದಾದ V2L (ವೆಹಿಕಲ್ ಟು ಲೋಡ್) ಮತ್ತು V2V (ವೆಹಿಕಲ್ ಟು ವೆಹಿಕಲ್) ಫಂಕ್ಷನಾಲಿಟಿಗಳನ್ನು ಪಡೆಯಬಹುದು.

ನಿರೀಕ್ಷಿಸಲಾಗಿರುವ ಪವರ್‌ಟ್ರೇನ್

 ಟಾಟಾ ಹೊಸ 1.2-ಲೀಟರ್ T-GDi ಟರ್ಬೊ-ಪೆಟ್ರೋಲ್ ಮತ್ತು ಈಗಾಗಲೇ ನೆಕ್ಸಾನ್ ನಲ್ಲಿರುವ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಕರ್ವ್ ಅನ್ನು ನೀಡಲಿದೆ:

 ಇಂಜಿನ್

 1.2-ಲೀಟರ್ T-GDi ಟರ್ಬೊ-ಪೆಟ್ರೋಲ್

 1.5-ಲೀಟರ್ ಡೀಸೆಲ್

 ಪವರ್

125 PS

115 PS

 ಟಾರ್ಕ್

225 Nm

260 Nm

 ಟ್ರಾನ್ಸ್‌ಮಿಷನ್

 6-ಸ್ಪೀಡ್ MT, 7-ಸ್ಪೀಡ್ DCT (ನಿರೀಕ್ಷಿಸಲಾಗಿದೆ)

 6-ಸ್ಪೀಡ್ MT

 DCT: ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

 ಕರ್ವ್ EV ಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್ ಬಗ್ಗೆ ಟಾಟಾ ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ, ಮತ್ತು ಸುಮಾರು 500 ಕಿಮೀ ಗರಿಷ್ಠ ರೇಂಜ್ ಅನ್ನು ನೀಡಬಹುದು. ಟಾಟಾ ಕರ್ವ್ EV ಅನ್ನು ಟಾಟಾ ಪಂಚ್ EV ನಲ್ಲಿ ಕೂಡ ಬಳಸಲಾಗಿರುವ Acti.ev ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.

ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಟಾಟಾ ಕರ್ವ್ ICE ಬೆಲೆಯು ರೂ 10.50 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುವಾಗಬಹುದು. ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಹೋಂಡಾ ಎಲಿವೇಟ್, MG ಆಸ್ಟರ್ ಮತ್ತು ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಮತ್ತು ಮುಂಬರುವ ಸಿಟ್ರೊಯೆನ್ ಬಸಾಲ್ಟ್‌ನಂತಹ ಕಾಂಪ್ಯಾಕ್ಟ್ SUVಗಳಿಗೆ ಪ್ರತಿಸ್ಪರ್ಧಿಯಾಗಿದೆ. ಮತ್ತೊಂದೆಡೆ ಕರ್ವ್ EV ಬೆಲೆಯು 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು MG ZS EV ಮತ್ತು ಮುಂಬರುವ ಹ್ಯುಂಡೈ ಕ್ರೆಟಾ EV ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

 ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಕರ್ವ್‌ EV

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience