Login or Register ಅತ್ಯುತ್ತಮ CarDekho experience ಗೆ
Login

ಹ್ಯಾರಿಯರ್ ಮತ್ತು ಸಫಾರಿಯಿಂದ ಪ್ರಮುಖ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ Tata Curvv

ಟಾಟಾ ಕರ್ವ್‌ ಗಾಗಿ rohit ಮೂಲಕ ಡಿಸೆಂಬರ್ 06, 2023 11:36 am ರಂದು ಪ್ರಕಟಿಸಲಾಗಿದೆ

ಟಾಟಾ ಕರ್ವ್ ಕಾಂಪ್ಯಾಕ್ಟ್ ಎಸ್‌ಯುವಿ ಕೆಲವು ADAS ಫೀಚರ್‌ಗಳನ್ನು ಸಹ ಪಡೆಯುತ್ತಿದ್ದು, ಉದಾಹರಣೆಗೆ ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

  • ಟಾಟಾ ಆಟೋ ಎಕ್ಸ್‌ಪೋ 2023 ರಲ್ಲಿ ಕರ್ವ್ ICE ಪರಿಕಲ್ಪನೆಯನ್ನು ಪ್ರದರ್ಶಿಸಿತು.
  • ಇದು 2024 ರಲ್ಲಿ, ಈಗಾಗಲೇ ತುಂಬಿ ಹೋಗಿರುವ ಕಾಂಪ್ಯಾಕ್ಟ್ ಎಸ್‌ಯುವಿ ಜಾಗಕ್ಕೆ ಟಾಟಾದ ಕೊಡುಗೆಯಾಗಿದೆ.
  • ಸ್ಪೈ ಮಾಡಿದಾಗ ಕಂಡುಬಂದ ಎಕ್ಸ್‌ಟೀರಿಯರ್ ವಿವರಗಳೆಂದರೆ ಎಲ್‌ಇಡಿ ಲೈಟಿಂಗ್, ಅಲಾಯ್ ವ್ಹೀಲ್‌ಗಳು ಮತ್ತು ಕೂಪ್ ರೂಫ್‌ಲೈನ್.
  • 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಟಚ್ ಬೇಸ್ಡ್ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್ ಅನ್ನು ಇದು ಪಡೆಯಲಿದೆ.
  • ವೆಂಟಿಲೇಟೆಡ್ ಮುಂಭಾಗದ ಸೀಟುಗಳು, 12.3-ಇಂಚಿನ ಟಚ್‌ಸ್ಕ್ರೀನ್ ಮತ್ತು 6 ಏರ್‌ಬ್ಯಾಗ್‌ಗಳನ್ನು ಇದು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.
  • 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿರುವ ಪವರ್‌ಟ್ರೇನ್ ಆಯ್ಕೆಗಳು; EV ಆವೃತ್ತಿಯ ನಂತರ ನಾವು ICE ಮಾಡೆಲ್ ಅನ್ನು ಕಾಣಬಹುದು.
  • 2024 ರ ಮಧ್ಯದಲ್ಲಿ ಇದು ಬಿಡುಗಡೆಯಾಗಬಹುದು; ಮತ್ತು ಇದರ ಆರಂಭಿಕ ಬೆಲೆಯನ್ನು ರೂ. 10.50 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸಬಹುದಾಗಿದೆ.

ಮುಂಬರುವ ಟಾಟಾ ಕರ್ವ್ ನ ಪರೀಕ್ಷಾ ವಾಹನಗಳನ್ನು ಈಗ ಹೆಚ್ಚಾಗಿ ಗುರುತಿಸಲಾಗುತ್ತಿದೆ. ಇತ್ತೀಚಿಗೆ ಅದರ ಮತ್ತೊಂದು ಮಾದರಿಯು ಪರೀಕ್ಷೆಯ ಸಮಯದಲ್ಲಿ ನಮಗೆ ಕಂಡುಬಂದಿದ್ದು ಅದು ಎಸ್‌ಯುವಿ-ಕೂಪ್‌ನ ಪ್ರಮುಖ ಫೀಚರ್‌ಗಳನ್ನು ಒಳಗೊಂಡಿದೆ.

ಹೊಸದೇನಿದೆ?

ಇತ್ತೀಚಿನ ಸ್ಪೈ ಶಾಟ್‌ಗಳಲ್ಲಿ, ಕರ್ವ್‌ನ ಪರೀಕ್ಷಾ ವಾಹನವು, ಸುಧಾರಿತ ಚಾಲಕ ಸಹಾಯ ವ್ಯವಸ್ಥೆ(ADAS) ಗಳ ನಿಬಂಧನೆಯಲ್ಲಿ ವಿಂಡ್‌ಶೀಲ್ಡ್ –ಮೌಂಟೆಡ್ ಕ್ಯಾಮರಾ ಪಡೆದಿರುವುದನ್ನು ನಾವು ಗಮನಿಸಬಹುದು, ಇದು ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಸಹ ಒಳಗೊಂಡಿರುತ್ತದೆ. ಪರೀಕ್ಷಾ ವಾಹನವು ಅದರ ಉತ್ಪಾದನಾ-ಸಿದ್ಧ ರೂಪಕ್ಕೆ ಹತ್ತಿರದಲ್ಲಿದೆ ಎಂಬುದನ್ನು ಕರ್ವ್ ತೋರಿಸಿದೆ ಏಕೆಂದರೆ ಇದು ಎಲ್‌ಇಡಿ ಲೈಟಿಂಗ್ (ಮುಂಭಾಗದ ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್) ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ.

ಹಿಂದಿನ ಸ್ಪೈಶಾಟ್‌ಗಳು ಈಗಾಗಲೇ ಹೊಸ ಟಾಟಾ ಕಾರಿನ ಕೂಪ್ ರೂಫ್‌ಲೈನ್ ಮತ್ತು ಫ್ಲಶ್‌ಡೋರ್ ಹ್ಯಾಂಡಲ್‌ಗಳನ್ನು ತೋರಿಸಿವೆ. ಕರ್ವ್ ಕಾಂಪ್ಯಾಕ್ಟ್ ಎಸ್‌ಯುವಿ ಸ್ಥಳಕ್ಕೆ ಟಾಟಾದ ಚೊಚ್ಚಲ ಪ್ರವೇಶವಾಗಿದೆ.

ನಿರೀಕ್ಷಿತ ಕ್ಯಾಬಿನ್ ಅಪ್‌ಡೇಟ್‌ಗಳು

ಉತ್ಪಾದನಾ-ಸಿದ್ಧ ಟಾಟಾ ಕರ್ವ್‌ನ ಇಂಟೀರಿಯರ್ ಇನ್ನೂ ಕಾಣಿಸದಿದ್ದರೂ, ಇತ್ತೀಚಿನ ನವೀಕರಿಸಿದ ಟಾಟಾ ಮಾಡೆಲ್‌ಗಳ ಆಧಾರದ ಮೇಲೆ ನಾವು ಗಮನಿಸಿದಾಗ ಇದು ಪ್ರಕಾಶಿತ ಟಾಟಾ ಲೋಗೋ ಹಾಗೂ ಟಚ್-ಆಧಾರಿತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್‌ನೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್‌ನೊಂದಿಗೆ ಬರುತ್ತದೆ ಎಂಬುದನ್ನು ನಾವು ನಿರೀಕ್ಷಿಸಿದ್ದೇವೆ.

ಲಭ್ಯವಿರುವ ಇತರ ಫೀಚರ್‌ಗಳು 12.3-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಸನ್‌ರೂಫ್, ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ. ADAS ಹೊರತುಪಡಿಸಿ, ಟಾಟಾ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮಾರಾ, ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಗಳೊಂದಿಗೆ ಸಜ್ಜುಗೊಳಿಸಬಹುದು.

ಇದನ್ನೂ ಪರಿಶೀಲಿಸಿ: 2023 ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: ಎಲೆಕ್ಟ್ರಿಫೈಡ್ ಲ್ಯಾಂಬೋ ಮತ್ತು ಎರಡು ಸಣ್ಣ ಎಸ್‌ಯುವಿಗಳು

ಎಂಜಿನ್/ಬ್ಯಾಟರಿ ಆಯ್ಕೆಗಳು

ಟಾಟಾ ಹೊಸ ಟರ್ಬೋ ಚಾರ್ಜ್ಡ್ 1.2-ಲೀಟರ್ ಪೆಟ್ರೋಲ್ ಎಂಜಿನ್ (125 PS/225 Nm) ಅನ್ನು ಕರ್ವ್ ಅಲ್ಲಿ ನೀಡಲಿದೆ. ಅದರ ಗೇರ್‌ಬಾಕ್ಸ್ ಆಯ್ಕೆಗಳು ಇನ್ನೂ ತಿಳಿದಿಲ್ಲವಾದರೂ, ಹೊಸ ಟಾಟಾ ನೆಕ್ಸಾನ್‌ನಂತೆಯೇ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ (DCT) ಇದನ್ನು ನೀಡಬಹುದು ಎಂಬುದು ನಮ್ಮ ಅನಿಸಿಕೆಯಾಗಿದೆ. ಕರ್ವ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳ ಹೆಚ್ಚುವರಿ ಸೆಟ್ ಅನ್ನು ಸಹ ಪಡೆಯಬಹುದು, ಅದರ ವಿವರಗಳು ಇನ್ನೂ ನಮಗೆ ತಿಳಿಯಬೇಕಿದೆ.

ಆದರೆ ಮೊದಲು ನಾವು ಟಾಟಾ ಕರ್ವ್ ಇವಿಯ ಚೊಚ್ಚಲ ಪ್ರವೇಶಕ್ಕೆ ಸಾಕ್ಷಿಯಾಗಲಿದ್ದೇವೆ, ಇದನ್ನು ಟಾಟಾ Gen2 ಪ್ಲಾಟ್‌ಫಾರ್ಮ್‌ನಲ್ಲಿ ಎಲೆಕ್ಟ್ರಿಕ್ ಕೊಡುಗೆಗಳಿಗಾಗಿ ನಿರ್ಮಿಸಲಾಗಿದೆ. ಈ ಹೊಸ ಮಾದರಿಯ ಟಾಟಾ ಇವಿಗಳು 500 ಕಿಮೀ ರೇಂಜ್ ಅನ್ನು ನೀಡುವುದಾಗಿ ಹೇಳಿಕೊಂಡಿವೆ. ಆದಾಗ್ಯೂ, ಎಲೆಕ್ಟ್ರಿಕ್ ಪವರ್‌ಟ್ರೇನ್‌ನ ಇತರ ವಿವರಗಳು ಇಲ್ಲಿಯವರೆಗೆ ತಿಳಿದುಬಂದಿಲ್ಲ.

ಬೆಲೆ ಮತ್ತು ಬಿಡುಗಡೆ

ಈ ಟಾಟಾ ಕರ್ವ್ ಇವಿ 2024 ರ ಮಧ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದ್ದು ಬೆಲೆಗಳು ರೂ. 20 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ, ICE ಮಾದರಿಗೆ ರೂ.10.5 ಲಕ್ಷಗಳನ್ನು (ಎರಡೂ ಎಕ್ಸ್‌-ಶೋರೂಮ್) ನಿಗದಿಪಡಿಸಲಾಗಿದೆ. ಮಾರುತಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಹೋಂಡಾ ಎಲಿವೇಟ್, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಸಿಟ್ರಾನ್ C3 ಏರ್‌ಕ್ರಾಸ್, MG ಆಸ್ಟರ್, ಮತ್ತು ಫೋಕ್ಸ್‌ವ್ಯಾಗನ್‌ನಂತಹ ಸಾಮಾನ್ಯ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಇದು ಎಸ್‌ಯುವಿ-ಕೂಪ್ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತದೆ. ಏತನ್ಮಧ್ಯೆ, ಕರ್ವ್ ಇವಿಯು MG ZS ಇವಿ ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ಗಳಿಗೆ ಪರ್ಯಾಯವಾಗಿದೆ.

ಇನ್ನಷ್ಟು ಇಲ್ಲಿ ಓದಿ : ಟಾಟಾ ಸಫಾರಿ ಡೀಸೆಲ್

Share via

Write your Comment on Tata ಕರ್ವ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ