ತನ್ನ ಮಾಡೆಲ್ ಗಳ ಮೇಲೆ 45,000 ರೂ ತನಕ ಭರ್ಜರಿ ರಿಯಾಯಿತಿ ನೀಡುತ್ತಿರುವ ಟಾಟಾ
ಟಾಟಾ ಟಿಯಾಗೋ ಗಾಗಿ ansh ಮೂಲಕ ಮಾರ್ಚ್ 11, 2023 09:00 pm ರಂದು ಮಾರ್ಪಡಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಎಲೆಕ್ಟ್ರಿಕ್ ಲೈನ್‌ಅಪ್‌ನಲ್ಲಿ ಯಾವುದೇ ಆಫರ್‌ಗಳು ಇರುವುದಿಲ್ಲವಾದರೂ ಈ ಪ್ರಯೋಜನಗಳು ಪೆಟ್ರೋಲ್ ಮತ್ತು CNG ವೇರಿಯೆಂಟ್ ಮಾಡೆಲ್‌ಗಳ ಸುತ್ತ ಕೇಂದ್ರೀಕೃತವಾಗಿವೆ.
- ರೂ 45,000 ದ ಅತ್ಯಂತ ಹೆಚ್ಚಿನ ರಿಯಾಯಿತಿಯನ್ನು ಹ್ಯಾರಿಯರ್ ಮತ್ತು ಸಫಾರಿಗೆ ನೀಡಲಾಗಿದೆ.
- ಟಿಯಾಗೋ ಮತ್ತು ಟಿಗೋರ್ ರೂ 28,000 ತನಕದ ಪ್ರಯೋಜನಗಳನ್ನು ಪಡೆಯುತ್ತಿವೆ
- ನೆಕ್ಸಾನ್ ರೂ 3,000 ತನಕದ ಅತ್ಯಂತ ಕಡಿಮೆ ರಿಯಾಯಿತಿ ಹೊಂದಿದ್ದು ಇದು ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ಇದೆ.
- ಈ ಎಲ್ಲಾ ಆಫರ್‌ಗಳು ಮಾರ್ಚ್ ಕೊನೆ ತನಕ ಮಾತ್ರ ಇರುತ್ತದೆ.
ಇತರ ಬ್ರ್ಯಾಂಡ್‌ಗಳಾದ ರೆನಾಲ್ಟ್ ಮತ್ತು ಹ್ಯುಂಡೈ ನಂತರ ಟಾಟಾ ಕೂಡಾ ತನ್ನ ಮಾಸಿಕ ಆಫರ್‌ಗಳನ್ನು ಕೈಬಿಟ್ಟಿದೆ. ಮಾಡೆಲ್ ಮತ್ತು ವೇರಿಯೆಂಟ್‌ಗಳನ್ನು ಅವಲಂಬಿಸಿ, ಈ ಕಾರುತಯಾರಕ ಸಂಸ್ಥೆ ತನ್ನ ಗ್ರಾಹಕರಿಗೆ ನಗದು, ಎಕ್ಸ್‌ಚೇಂಜ್ ಮತ್ತು ಕಾರ್ಪೋರೇಟ್ ರಿಯಾಯಿತಿಗಳನ್ನು ನೀಡುತ್ತಿದ್ದು ಇದು ಮಾರ್ಚ್ ಕೊನೆಯ ತನಕ ಮಾನ್ಯವಾಗಿರುತ್ತದೆ.
ಮಾಡೆಲ್‌ವಾರು ಆಫರ್ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ:
ಟಿಯಾಗೋ
ಆಫರ್‌ಗಳು |
ಮೊತ್ತ |
|
ಪೆಟ್ರೋಲ್ ವೇರಿಯೆಂಟ್‌ಗಳು |
CNG ವೇರಿಯೆಂಟ್‌ಗಳು |
|
ನಗದು ರಿಯಾಯಿತಿ |
ರೂ 15,000 ತನಕ |
ರೂ 10,000 ತನಕ |
ಎಕ್ಸ್‌ಚೇಂಜ್ ಬೋನಸ್ |
ರೂ 10,000 ತನಕ |
ರೂ 10,000 ತನಕ |
ಕಾರ್ಪೋರೇಟ್ ರಿಯಾಯಿತಿ |
ರೂ 3,000 ತನಕ |
ರೂ 5,000 ತನಕ |
ಒಟ್ಟು ಪ್ರಯೋಜನಗಳು |
ರೂ 28,000 ತನಕ |
ರೂ 25,000 ತನಕ |
- ಟಿಯಾಗೋನ ಪೆಟ್ರೋಲ್ ವೇರಿಯೆಂಟ್‌ಗಳು ಹೆಚ್ಚಿನ ನಗದು ರಿಯಾಯಿತಿ ಹೊಂದಿದ್ದರೆ, CNG ವೇರಿಯೆಂಟ್‌ಗಳು ಹೆಚ್ಚು ಕಾರ್ಪೋರೇಟ್ ರಿಯಾಯಿತಿ ಹೊಂದಿವೆ.
- ಎಲ್ಲಾ ವೇರಿಯೆಂಟ್‌ಗಳು ರೂ 10,000 ತನಕದ ಎಕ್ಸ್‌ಚೇಂಜ್ ಬೋನಸ್ ಹೊಂದಿವೆ.
- ಟಿಯಾಗೋ ಬೆಲೆಗಳು ರೂ 5.54 ಲಕ್ಷದಿಂದ ರೂ 8.05 ಲಕ್ಷದ ತನಕ ಇದೆ.
ಟಿಗೋರ್
ಆಫರ್‌ಗಳು |
ಮೊತ್ತ |
|
ಪೆಟ್ರೋಲ್ ವೇರಿಯೆಂಟ್‌ಗಳು |
CNG ವೇರಿಯೆಂಟ್‌ಗಳು |
|
ನಗದು ರಿಯಾಯಿತಿ |
ರೂ 15,000 ತನಕ |
ರೂ 15,000 ತನಕ |
ಎಕ್ಸ್‌ಚೇಂಜ್ ಬೋನಸ್ |
ರೂ 10,000 ತನಕ |
ರೂ 10,000 ತನಕ |
ಕಾರ್ಪೋರೇಟ್ ರಿಯಾಯಿತಿ |
ರೂ 3,000 ತನಕ |
ರೂ 5,000 ತನಕ |
ಒಟ್ಟು ಪ್ರಯೋಜನಗಳು |
ರೂ 28,000 ತನಕ |
ರೂ 30,000 ತನಕ |
- ಟಿಗೋರ್‌ನ ಎಲ್ಲಾ ವೇರಿಯೆಂಟ್‌ಗಳು ಒಂದೇ ರೀತಿಯ ನಗದು ಮತ್ತು ಎಕ್ಸ್‌ಚೇಂಜ್ ಪ್ರಯೋಜನಗಳನ್ನು ಹೊಂದಿದ್ದು CNG ವೇರಿಯೆಂಟ್‌ಗಳು ಹೆಚ್ಚಿನ ಕಾರ್ಪೋರೇಟ್ ರಿಯಾಯಿತಿಯನ್ನು ಹೊಂದಿವೆ.
- ಟಿಗೋರ್ ಮತ್ತು ಟಿಯಾಗೋನ ಪೆಟ್ರೋಲ್ ವೇರಿಯೆಂಟ್‌ಗಳ ಮೇಲಿನ ರಿಯಾಯಿತಿಗಳು ಒಂದೇ ರೀತಿಯಾಗಿವೆ.
- ಟಿಗೋರ್ ಬೆಲೆಯನ್ನು ಟಾಟಾ ರೂ 6.20 ಲಕ್ಷದಿಂದ ರೂ 8.90 ಲಕ್ಷದ ತನಕ ನಿಗದಿಪಡಿಸಿದೆ.
ಅಲ್ಟ್ರೋಝ್
ಆಫರ್‌ಗಳು |
ಮೊತ್ತ |
ನಗದು ರಿಯಾಯಿತಿ |
ರೂ 15,000 ತನಕ |
ಎಕ್ಸ್‌ಚೇಂಜ್ ಬೋನಸ್ |
ರೂ 10,000 ತನಕ |
ಕಾರ್ಪೋರೇಟ್ ರಿಯಾಯಿತಿ |
ರೂ 3,000 ತನಕ |
ಒಟ್ಟು ಪ್ರಯೋಜನಗಳು |
ರೂ 28,000 ತನಕ |
- ಈ ಆಫರ್‌ಗಳು ಅಲ್ಟ್ರೋಝ್‌ನ DCA ವೇರಿಯೆಂಟ್‌ಗಳಲ್ಲಿ ಇದ್ದು 1.2-ಲೀಟರ್ ಪೆಟ್ರೋಲ್ ಇಂಜಿನ್‌ಗೆ ಮಾತ್ರ ನೀಡಲಾಗಿದೆ.
- ಉಳಿದ ವೇರಿಯೆಂಟ್‌ಗಳಿಗೆ ರೂ 10,000 ಕಡಿಮೆ ನಗದು ರಿಯಾಯಿತಿ ಪಡೆದಿವೆ.
- ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೋರೇಟ್ ರಿಯಾಯಿತಿ ಎಲ್ಲಾ ವೇರಿಯೆಂಟ್‌ಗಳಿಗೂ ಒಂದೇ ರೀತಿಯಾಗಿವೆ.
- ಆಲ್ಟ್ರೋಝ್ ಬೆಲೆ ರೂ 6.45 ಲಕ್ಷದಿಂದ ರೂ 10.40 ತನಕ ನಿಗದಿಪಡಿಸಲಾಗಿದೆ.
ಹ್ಯಾರಿಯರ್
ಆಫರ್‌ಗಳು |
ಮೊತ್ತ |
|
BS6 ಫೇಸ್ 1 ಯೂನಿಟ್‌ಗಳು |
BS6 ಫೇಸ್ 2 ಯೂನಿಟ್‌ಗಳು |
|
ನಗದು ರಿಯಾಯಿತಿ |
ರೂ 10,000 ತನಕ |
- |
ಎಕ್ಸ್‌ಚೇಂಜ್ ಬೋನಸ್ |
ರೂ 25,000 ತನಕ |
ರೂ 25,000 ತನಕ |
ಕಾರ್ಪೋರೇಟ್ ಡಿಸ್ಕೌಂ ರಿಯಾಯಿತಿ ಟ್ |
ರೂ 10,000 ತನಕ |
ರೂ 10,000 ತನಕ |
ಒಟ್ಟು ಪ್ರಯೋಜನಗಳು |
ರೂ 45,000 ತನಕ |
ರೂ 35,000 ತನಕ |
- ಹ್ಯಾರಿಯರ್ನ BS6 ಫೇಸ್ 1 ಯೂನಿಟ್‌ಗಳು ರೂ 10,000 ನಗದು ರಿಯಾಯಿತಿ ಹೊಂದಿದೆ. BS6 ಫೇಸ್ 2 ಯೂನಿಟ್‌ಗಳು ಯಾವುದೇ ನಗದು ಪ್ರಯೋಜನಗಳನ್ನು ಹೊಂದಿರುವುದಿಲ್ಲ.
- ಎಲ್ಲಾ ವೇರಿಯೆಂಟ್‌ಗಳು ಒಂದೇ ರೀತಿಯ ಎಕ್ಸ್‌ಚೇಂಜ್ ಮತ್ತು ಕಾರ್ಪೋರೇಟ್ ಪ್ರಯೋಜನಗಳನ್ನು ಹೊಂದಿವೆ.
- ಹ್ಯಾರಿಯರ್ ಬೆಲೆ ರೂ 15 ಲಕ್ಷದಿಂದ ರೂ 24.07 ತನಕ ಇದೆ. ಇದು ಇತ್ತೀಚೆಗೆ ಹೊಸ ಫೀಚರ್ಗಳಾದ ADAS ಮತ್ತು 10.25-ಇಂಚಿನ ಇನ್ಫೋಟೈನ್ಮೆಂಟ್ ಟಚ್ಸ್ಕ್ರೀನ್ ಯೂನಿಟ್ನೊಂದಿಗೆ ನವೀಕೃತಗೊಂಡಿದೆ.
ಇದನ್ನೂ ಓದಿ: ಇಲ್ಲಿವೆ ಟಾಟಾ SUVಯ ರೆಡ್ ಡಾರ್ಕ್ ಆವೃತ್ತಿಗಳು
ಸಫಾರಿ
ಆಫರ್‌ಗಳು |
ಮೊತ್ತ |
|
BS6 ಫೇಸ್ 1 ಯೂನಿಟ್‌ಗಳು |
BS6 ಫೇಸ್ 2 ಯೂನಿಟ್‌ಗಳು |
|
ನಗದು ರಿಯಾಯಿತಿ |
ರೂ 10,000 ತನಕ |
- |
ಎಕ್ಸ್‌ಚೇಂಜ್ ಬೋನಸ್ |
ರೂ 25,000 ತನಕ |
ರೂ 25,000 ತನಕ |
ಕಾರ್ಪೋರೇಟ್ ರಿಯಾಯಿತಿ |
ರೂ 10,000 ತನಕ |
ರೂ 10,000 ತನಕ |
ಒಟ್ಟು ಪ್ರಯೋಜನಗಳು |
ರೂ 45,000 ತನಕ |
ರೂ 35,000 ತನಕ |
- ಸಫಾರಿ ಹಳೆಯ BS6 ಫೇಸ್ 1 ಯೂನಿಟ್‌ಗಳಿಗೆ ಹೆಚ್ಚುವರಿ ನಗದು ರಿಯಾಯಿತಿಗಳೊಂದಿಗೆ ಹ್ಯಾರಿಯರ್‌ನಷ್ಟೇ ರಿಯಾಯಿತಿ ಪಡೆಯುತ್ತಿದೆ.
- ಇದರ ಬೆಲೆಯನ್ನು ರೂ 15.65 ಲಕ್ಷದಿಂದ 25.02 ಲಕ್ಷದ ತನಕ ನಿಗದಿಪಡಿಸಲಾಗಿದೆ. ಸಫಾರಿ ಹ್ಯಾರಿಯರ್‌ನಂತೆಯೇ ಫೀಚರ್ ನವೀಕರಣಗಳನ್ನು ಹೊಂದಿದೆ.
ನೆಕ್ಸಾನ್
ಆಫರ್‌ಗಳು |
ಮೊತ್ತ |
ಕಾರ್ಪೋರೇಟ್ ರಿಯಾಯಿತಿ |
ರೂ 3,000 ತನಕ |
ಒಟ್ಟು ಪ್ರಯೋಜನಗಳು |
ರೂ 3,000 ತನಕ |
- ನೆಕ್ಸಾನ್ ತನ್ನ ಪೆಟ್ರೋಲ್ ವೇರಿಯೆಂಟ್‌ಗಳಲ್ಲಿ ರೂ 3,000 ತನಕದ ಕಾರ್ಪೋರೇಟ್ ರಿಯಾಯಿತಿ ಹೊಂದಿದೆ.
- ಇದರ ಬೆಲೆಗಳನ್ನು ರೂ 7.80 ಲಕ್ಷದಿಂದ ರೂ 14.35 ತನಕ ನಿಗದಿಪಡಿಸಲಾಗಿದೆ.
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿಯ ಪ್ರಕಾರ ಇರುತ್ತದೆ.
ಇದನ್ನೂ ಓದಿ: ಹೊಸ ಸ್ಪೈ ಶಾಟ್‌ಗಳ ಮೂಲಕ ನೋಡಲಾಗಿದೆ ನವೀಕೃತ ಟಾಟಾ ನೆಕ್ಸಾನ್‌ನ ಫ್ರಂಟ್ ಪ್ರೊಫೈಲ್
ಗಮನಿಸಿ: ಈ ಆಫರ್‌ಗಳು ನೀವಿರುವ ಸ್ಥಳ ಮತ್ತು ಆಯ್ಕೆ ಮಾಡಿದ ವೇರಿಯೆಂಟ್‌ಗಳನ್ನು ಅವಲಂಬಿಸಿ ವ್ಯಾತ್ಯಾಸ ಹೊಂದಿರಬಹುದು. ನಿಮ್ಮ ಆದ್ಯತೆಯ ಮಾಡೆಲ್ ಬಗಗಿನ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಟಾಟಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
ಇನ್ನಷ್ಟು ಓದಿ : ಟಿಯಾಗೋ AMT