2 ವರ್ಷ ಪೂರ್ಣಗೊಳಿಸಿದ ಟಾಟಾ ಪಂಚ್: ಇಲ್ಲಿಯವರೆಗಿನ ಪ್ರಯಾಣದ ಒಂದು ನೋಟ ಇಲ್ಲಿದೆ
ಬಿಡುಗಡೆಯ ಸಮಯಕ್ಕೆ ಹೋಲಿಸಿದರೆ ಟಾಟಾ ಪಂಚ್‌ನ ಪ್ರಸ್ತುತ ಬೆಲೆಗಳು ರೂ 50,000ದಷ್ಟು ಹೆಚ್ಚಳವಾಗಿದೆ
ಅಕ್ಟೋಬರ್ 18, 2021 ರಲ್ಲಿ ಭಾರತದ ಮೊಟ್ಟ ಮೊದಲ ಮೈಕ್ರೋ- SUVಯಾಗಿ ಟಾಟಾ ಪಂಚ್ ಅನ್ನು ಬಿಡುಗಡೆ ಮಾಡಲಾಯಿತು, ಹ್ಯಾಚ್‌ಬ್ಯಾಕ್ ಅನುಪಾತಗಳಲ್ಲಿ ಇದು ಹೆಚ್ಚು ಕೈಗೆಟುಕುವ ಮತ್ತು ಆಕರ್ಷಕ SUVಯಾಗಿದೆ. ಈ ಪಂಚ್ ಗ್ಲೋಬಲ್ NCAPಯ ಹಳೆಯ ಕ್ರ್ಯಾಶ್‌ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿರುವ ಮೊದಲನೇ ಚಿಕ್ಕ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಎರಡು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಪಂಚ್‌ನ ಪಯಣದ ಹಾದಿಯ ಹಿನ್ನೋಟವನ್ನು ಪಡೆಯೋಣ.
ಬೆಲೆ ಹೆಚ್ಚಳಗಳು
ಬಿಡುಗಡೆ ಸಂದರ್ಭದಲ್ಲಿ ಪಂಚ್ ಬೆಲೆಯನ್ನು ರೂ 5.49 ಲಕ್ಷದಿಂದ ರೂ 9.39 ಲಕ್ಷದ ತನಕ ನಿಗದಿಪಡಿಸಲಾಗಿತ್ತು (ಎಕ್ಸ್-ಶೋರೂಂ). ನಂತರದ ವರ್ಷಗಳಲ್ಲಿ, ಈ ಮೈಕ್ರೋ-SUV 4 ಬಾರಿ ಬೆಲೆ ಹೆಚ್ಚಳವನ್ನು ಕಂಡಿದ್ದು, ಗರಿಷ್ಠ ರೂ 50,000 ದ ತನಕ ಬೆಲೆ ಹೆಚ್ಚಳವನ್ನು ಕಂಡಿದೆ.
1.2-ಲೀಟರ್ ಪೆಟ್ರೋಲ್ ಮ್ಯಾನುವಲ್ |
||
ವೇರಿಯೆಂಟ್‌ಗಳು |
ಆರಂಭಿಕ ಬೆಲೆ |
ಪ್ರಸ್ತುತ ಬೆಲೆ |
ಪ್ಯೂರ್ |
ರೂ 5.49 ಲಕ್ಷ |
ರೂ 6 ಲಕ್ಷ |
ಪ್ಯೂರ್ + ರಿದಮ್ ಪ್ಯಾಕ್ |
ರೂ 5.85 ಲಕ್ಷ |
ರೂ 6.35 ಲಕ್ಷ |
ಅಡ್ವೆಂಚರ್ |
ರೂ 6.39 ಲಕ್ಷ |
ರೂ 6.90 ಲಕ್ಷ |
ಅಡ್ವೆಂಚರ್ ಕ್ಯಾಮೋ |
ರೂ 7 ಲಕ್ಷ |
|
ಅಡ್ವೆಂಚರ್ + ರಿದಮ್ ಪ್ಯಾಕ್ |
ರೂ 6.74 ಲಕ್ಷ |
ರೂ 7.25 ಲಕ್ಷ |
ಅಡ್ವೆಂಚರ್ ಕ್ಯಾಮೋ + ರಿದಮ್ ಪ್ಯಾಕ್ |
ರೂ 7.35 ಲಕ್ಷ |
|
ಅಕಾಂಪ್ಲಿಶ್ಡ್ |
ರೂ 7.29 ಲಕ್ಷ |
ರೂ 7.75 ಲಕ್ಷ |
ಅಕಾಂಪ್ಲಿಶ್ಡ್ ಕ್ಯಾಮೋ |
ರೂ 7.80 ಲಕ್ಷ |
|
ಅಕಾಂಪ್ಲಿಶ್ಡ್ + ಡ್ಯಾಝಲ್ ಪ್ಯಾಕ್ |
ರೂ 7.74 ಲಕ್ಷ |
ರೂ 8.15 l ಲಕ್ಷ |
ಅಕಾಂಪ್ಲಿಶ್ಡ್ ಕ್ಯಾಮೋ + ಡ್ಯಾಝಲ್ ಪ್ಯಾಕ್ |
ರೂ 8.18 ಲಕ್ಷ |
|
ಅಕಾಂಪ್ಲಿಶ್ಡ್ ಸನ್‌ರೂಫ್ |
ರೂ 8.25 ಲಕ್ಷ |
|
ಅಕಾಂಪ್ಲಿಶ್ಡ್ ಸನ್‌ರೂಫ್ + ಡ್ಯಾಝಲ್ ಪ್ಯಾಕ್ |
ರೂ 8.65 ಲಕ್ಷ |
|
ಕ್ರಿಯೇಟಿವ್ DT |
ರೂ 8.49 ಲಕ್ಷ |
ರೂ 8.75 ಲಕ್ಷ |
ಕ್ರಿಯೇಟಿವ್ DT ಸನ್‌ರೂಫ್ |
ರೂ 9.20 ಲಕ್ಷ |
|
ಕ್ರಿಯೇಟಿವ್ DT + I-RA ಪ್ಯಾಕ್ |
ರೂ 8.79 ಲಕ್ಷ |
|
ಕ್ರಿಯೇಟಿವ್ DT ಫ್ಲ್ಯಾಗ್‌ಶಿಪ್ |
ರೂ 9.50 ಲಕ್ಷ |
|
1.2-ಲೀಟರ್ ಪೆಟ್ರೋಲ್ AMT |
||
ಅಡ್ವೆಂಚರ್ |
ರೂ 6.99 ಲಕ್ಷ |
ರೂ 7.50 ಲಕ್ಷ |
ಅಡ್ವೆಂಚರ್ ಕ್ಯಾಮೋ |
ರೂ 7.60 ಲಕ್ಷ |
|
ಅಡ್ವೆಂಚರ್ + ರಿದಮ್ ಪ್ಯಾಕ್ |
ರೂ 7.34 l ಲಕ್ಷ |
ರೂ 7.85 ಲಕ್ಷ |
ಅಡ್ವೆಂಚರ್ ಕ್ಯಾಮೋ + ರಿದಮ್ ಪ್ಯಾಕ್ |
ರೂ 7.95 ಲಕ್ಷ |
|
ಅಕಾಂಪ್ಲಿಶ್ಡ್ |
ರೂ 7.89 ಲಕ್ಷ |
ರೂ 8.35 ಲಕ್ಷ |
ಅಕಾಂಪ್ಲಿಶ್ಡ್ ಕ್ಯಾಮೋ |
ರೂ 8.40 ಲಕ್ಷ |
|
ಅಕಾಂಪ್ಲಿಶ್ಡ್ + ಡ್ಯಾಝಲ್ ಪ್ಯಾಕ್ |
ರೂ 8.34 ಲಕ್ಷ |
ರೂ 8.75 ಲಕ್ಷ |
ಅಕಾಂಪ್ಲಿಶ್ಡ್ ಕ್ಯಾಮೋ + ಡ್ಯಾಝಲ್ ಪ್ಯಾಕ್ |
ರೂ 8.78 ಲಕ್ಷ |
|
ಅಕಾಂಪ್ಲಿಶ್ಡ್ ಸನ್‌ರೂಫ್ |
ರೂ 8.85 ಲಕ್ಷ |
|
ಅಕಾಂಪ್ಲಿಶ್ಡ್ ಸನ್‌ರೂಫ್ + ಡ್ಯಾಝಲ್ ಪ್ಯಾಕ್ |
ರೂ 9.25 ಲಕ್ಷ |
|
ಕ್ರಿಯೇಟಿವ್ DT |
ರೂ 9.09 ಲಕ್ಷ |
ರೂ 9.35 ಲಕ್ಷ |
ಕ್ರಿಯೇಟಿವ್ DT ಸನ್‌ರೂಫ್ |
ರೂ 9.80 ಲಕ್ಷ |
|
ಕ್ರಿಯೇಟಿವ್ DT + I-RA ಪ್ಯಾಕ್ |
ರೂ 9.39 ಲಕ್ಷ |
|
ಕ್ರಿಯೇಟಿವ್ ಫ್ಲ್ಯಾಗ್‌ಶಿಪ್ DT |
ರೂ 10.10 ಲಕ್ಷ |
ಅಲ್ಲದೇ ಈ ಸಮಯಾವಧಿಯಲ್ಲಿ ಟಾಟಾ ಕೆಲವು ಹೊಸ ವೇರಿಯೆಂಟ್‌ಗಳನ್ನೂ ಪರಿಚಯಿಸಿದ್ದು, ಬೆಲೆ ಬದಲಾವಣೆಗೆ ಇದೂ ಒಂದು ಕಾರಣವಾಗಿದೆ.
ಇಂಜಿನ್ ನವೀಕರಣಗಳು- ಈಗ CNG ಜೊತೆಗೆ!
ಬಿಡುಗಡೆಯಾದಾಗ ಟಾಟಾ ಪಂಚ್ ಕೇವಲ 86PS ಮತ್ತು 115Nm 1.2 ಲೀಟರ್ ನ್ಯಾಚುರಲಿ ಆಸ್ಪಿರೇಟಡ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿತ್ತು. ಈ ಇಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಜೊತೆಗೆ ಜೋಡಿಸಲಾಗಿತ್ತು.
ಇದನ್ನೂ ಓದಿ: ವೀಕ್ಷಿಸಿ: ನವೀಕೃತ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಯ ಬದಲಾವಣೆಗಳು
ಈಗಲೂ ಅದೇ ಇಂಜಿನ್ ಅನ್ನು ಪಡೆದಿದ್ದು, BS6.2 ಎಮಿಷನ್ ಮಾನದಂಡಗಳನ್ನು ಅಳವಡಿಸಲಾಗಿದೆ ಮತ್ತು 88PS ಹಾಗೂ 115Nm ಅನ್ನು ಉತ್ಪಾದಿಸುತ್ತದೆ. ಅಲ್ಲದೇ ಕ್ಲೈಮ್ ಮಾಡಲಾದ ಇಂಧನ ದಕ್ಷತೆಯು ಸ್ಪಲ್ಪಮಟ್ಟಿಗೆ ಸುಧಾರಿಸಿದೆ.
ಫೆಬ್ರವರಿ 2023 ಆಟೋ ಎಕ್ಸ್ಪೋದಲ್ಲಿನ ತನ್ನ ಪೂರ್ವ-ನಿರ್ಮಾಣ ಪ್ರದರ್ಶನದ ನಂತರ, ಟಾಟಾ ಪಂಚ್ ಈಗ CNG ಆವೃತ್ತಿಯಲ್ಲೂ ಲಭ್ಯವಿದೆ. ರೂ 7.10 (ಎಕ್ಸ್-ಶೋರೂಂ) ಬೆಲೆಯೊಂದಿಗೆ ಆಗಸ್ಟ್‌ನಲ್ಲಿ ಆಗಮಿಸಿದಾಗ ಇದು ಅವಳಿ ಸಿಲಿಂಡರ್ ತಂತ್ರಜ್ಞಾನವನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿನ ಉಳಿದ CNG ವೇರಿಯೆಂಟ್‌ಗಳಿಗೆ ಭಿನ್ನವಾಗಿ ಇದರ ಬಳಸಬಹುದಾದ ಬೂಟ್‌ಸ್ಪೇಸ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಅತ್ಯಂತ ಸುರಕ್ಷಿತ ಭಾರತ-ನಿರ್ಮಿತ ಕಾರುಗಳೆನಿಸಿವೆ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ
ಈ CNG ಪವರ್‌ಟ್ರೇನ್ ಅದೇ 1.2-ಲೀಟರ್ ಪೆಟ್ರೋಲ್ ಇಂಜಿನ್ ಪಡೆದಿದ್ದು, ತುಸು ಕಡಿಮೆ ಅಂದರೆ, 73.5PS ಮತ್ತು 103Nm ಉತ್ಪಾದಿಸುತ್ತದೆ, ಇದನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದರ ಕ್ಲೈಮ್ ಮಾಡಲಾದ ಇಂಧನ ದಕ್ಷತೆಯು 26.99km/kg ನಷ್ಟು ಇದೆ ಎಂದು ಟಾಟಾ ಹೇಳುತ್ತದೆ. ಪಂಚ್ CNG ಅನ್ನು 3 ವಿಶಾಲ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ, ಅವುಗಳೆಂದರೆ, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್, ಇವುಗಳ ಬೆಲೆಗಳು ರೂ 7.10 ಲಕ್ಷದಿಂದ 9.68 ಲಕ್ಷದ (ಎಕ್ಸ್-ಶೋರೂಂ)ತನಕ ಇದೆ.
ಸಜ್ಜುಗೊಳಿಸಲಾದ ಫೀಚರ್‌ಗಳು
ಬಿಡುಗಡೆಯಾದ ನಂತರ ಮೊದಲನೇ ವರ್ಷದಲ್ಲಿ ಈ ಪಂಚ್ ಕೆಲವು ಫೀಚರ್ ಅಪ್‌ಗ್ರೇಡ್‌ಗಳನ್ನು ಪಡೆಯಿತು, ಕಳೆದ 12 ತಿಂಗಳಲ್ಲಿ ಇನ್ನಷ್ಟು ಫೀಚರ್‌ಗಳ ಸೇರ್ಪಡೆಯಾಗಿದೆ. ಪ್ರಾಯಶಃ ಧ್ವನಿ ಆಧಾರಿತ ಸನ್‌ರೂಫ್ ಇದಕ್ಕೊಂದು ಜನಪ್ರಿಯ ಸೇರ್ಪಡೆಯಾಗಿದ್ದರೆ, ಇದರೊಂದಿಗೆ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು ಮುಂಭಾಗದ ಆರ್ಮ್‌ರೆಸ್ಟ್ ಕೂಡಾ ಈಗ ಲಭ್ಯವಿದೆ.
ಈ ಪಂಚ್‌ಗೆ ಟಾಟಾ 7-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, 7-ಇಂಚು ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳು, ABS ಮತ್ತು EBD, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆ್ಯಂಕರ್‌ಗಳನ್ನು ನೀಡಿದೆ.
ಪೈಪೋಟಿ ನೀಡುತ್ತಿದೆ ಹೊಸ ಪ್ರತಿಸ್ಪರ್ಧಿ
ಬಿಡುಗಡೆ ನಂತರ ಈ ಜುಲೈ ತನಕ, ಟಾಟಾ ಪಂಚ್‌ಗೆ ಯಾವುದೇ ನೇರ ಪ್ರತಿಸ್ಪರ್ಧಿ ಇರಲ್ಲಿಲ್ಲ. ಆದರೆ ನಂತರ ಹ್ಯುಂಡೈ ಮೈಕ್ರೋ-SUV ಸ್ಥಳದಲ್ಲಿ ಎರಡನೆಯದಾಗಿ ಎಕ್ಸ್‌ಟರ್ ಅನ್ನು ಬಿಡಿಗಡೆ ಮಾಡಿತು. ಎರಡೂ SUVಗಳೂ ಒಂದೇ ರೀತಿಯಾದ ಬೆಲೆಗಳು, ಗಾತ್ರಗಳು ಮತ್ತು ಬಾಕ್ಸ್ ಆಕಾರದ ಡಿಸೈನ್ ಲ್ಯಾಂಗ್ವೇಜ್‌ಗಳನ್ನು ಹೊಂದಿವೆ, ಆದರೂ ಅನೇಕ ವಿಭಿನ್ನತೆಗಳನ್ನೂ ಪಡೆದುಕೊಂಡಿವೆ. ಹೊಸ ಪರಿಚಯದೊಂದಿಗೆ ಹ್ಯುಂಡೈ ಎಕ್ಸ್‌ಟರ್ ಆಧುನಿಕ ನೋಟವನ್ನು ಹೊಂದಿದ್ದು ಅನೇಕ ದುಬಾರಿ ಫೀಚರ್‌ಗಳನ್ನೂ ಪಡೆದಿದೆ. ಆದಾಗ್ಯೂ, 5-ಸ್ಟಾರ್ ಗ್ಲೋಬಲ್ NCAP ಸುರಕ್ಷತಾ ರೇಟಿಂಗ್ ಅನ್ನು ಪಂಚ್ ಮಾತ್ರ ಉಳಿಸಿಕೊಂಡಿದೆ.
ಮಾರಾಟದ ಮೈಲುಗಲ್ಲು!
ತನ್ನ ಮೊದಲ ವರ್ಷದಲ್ಲಿ 1 ಲಕ್ಷ ಯೂನಿಟ್‌ಗಳಷ್ಟು ಮಾರಾಟವನ್ನು ಪೂರೈಸಿದ ಟಾಟಾ ಪಂಚ್, 2 ವರ್ಷ ಪೂರ್ಣಗೊಂಡಾಗ 2 ಲಕ್ಷ ಯೂನಿಟ್‌ಗಳಷ್ಟು ಉತ್ಪಾದನಾ ಮೈಲುಗಲ್ಲನ್ನು ಪೂರೈಸಿದೆ. ತನ್ನ SUV ಜನಪ್ರಿಯತೆ ಮತ್ತು ಕೈಗೆಟುಕುವ ಬೆಲೆಯಿಂದಾಗಿ ಪಂಚ್ ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.
6-ತಿಂಗಳಲ್ಲಿ 12,000 ಯೂನಿಟ್‌ಗಳ ಸರಾಸರಿ ಮಾರಾಟದೊಂದಿಗೆ ಟಾಟಾ ಪ್ರತಿ ತಿಂಗಳ ಭಾರತದ ಅತ್ಯಧಿಕ-ಮಾರಾಟಾವಾಗುವ ಕಾರುಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಇಂದಿಗೂ ಉಳಿಸಿಕೊಂಡಿದೆ.
ಹೊಸ ಅಪ್‌ಡೇಟ್‌ಗಳನ್ನು ನಿರೀಕ್ಷಿಸಬಹುದೇ?
ಪ್ರಸ್ತುತ ಟಾಟಾ ಪಂಚ್ EV ಅಭಿವೃದ್ಧಿಗೆ ಗಮನ ನೀಡುತ್ತಿದ್ದು, ಇದು ಟಿಗೋರ್ EV ಮತ್ತು ನೆಕ್ಸಾನ್ EV ನಡುವಿನ ಸ್ಥಾನ ಪಡೆದುಕೊಳ್ಳಬಹುದು. ಪಂಚ್‌ನ ಇಲೆಕ್ಟ್ರಿಕ್ ಆವೃತ್ತಿಯನ್ನು ಅನೇಕ ಬಾರಿ ಸ್ಪೈ ಮಾಡಲಾಗಿದ್ದು, ಇದು 350km ಕ್ಲೈಮ್ ಮಾಡಲಾದ ರೇಂಜ್‌ನೊಂದಿಗೆ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ನೀಡುವ ನಿರೀಕ್ಷೆ ಇದೆ. ಇದು ಟಿಯಾಗೋ ಅಥವಾ ಟಿಗೋರ್‌ನ ಇಲೆಕ್ಟ್ರಿಕ್ ಆವೃತ್ತಿಯಲ್ಲಿ ಕಾಣಬಹುದಾದ EV ವಿಶಿಷ್ಟ ಡಿಸೈನ್ ಬದಲಾವಣೆಗಳನ್ನು ಹೊಂದಿರುತ್ತದೆ. ಪಂಚ್ EV ಬಿಡುಗಡೆಗೆ ಸಿದ್ಧವಾಗಿದ್ದು 2024ರಲ್ಲಿ ಅಥವಾ ಅದಕ್ಕೂ ಮೊದಲೇ ಆಗಮಿಸಬಹುದು.
ಟಾಟಾ ತನ್ನ ಪಂಚ್ ಅನ್ನು ಹೊಸ ನೆಕ್ಸಾನ್ ಫೇಸ್‌ಲಿಫ್ಟ್‌ನ ಆಧುನಿಕ ಡಿಸೈನ್ ಲ್ಯಾಂಗ್ವೇಜ್ ಅನ್ನು ಹೋಲುವ ರೀತಿಯಲ್ಲೇ ನವೀಕರಣ ನೀಡಬಹುದು, ಆದರೆ ಈ ನವೀಕೃತ ಮೈಕ್ರೋ-SUVಯ ವಿವರಗಳ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಆದಾಗ್ಯೂ, ಈ ಸಣ್ಣ SUVಯ ಜನಪ್ರಿಯತೆಯೊಂದಿಗೆ ನಾವು ಮುಂಬರುವ ದಿನಗಳಲ್ಲಿ ದೊಡ್ಡ ಅಪ್‌ಡೇಟ್‌ಗಳನ್ನು ನೋಡಲಿದ್ದೇವೆ.
ಇನ್ನಷ್ಟು ಓದಿ : ಪಂಚ್ AMT